ಬಿಎಂಟಿಸಿಯಲ್ಲಿ ಇನ್ನೂ ಅನುಷ್ಠಾನಕ್ಕೆ ಬಾರದ ರಾಷ್ಟ್ರೀಯ ಸಾಮಾನ್ಯ ಮೊಬಿಲಿಟಿ ಕಾರ್ಡ್, ಏನಿದು?

ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ ರಾಷ್ಟ್ರೀಯ ಕಾಮನ್​ ಮೊಬಿಲಿಟಿ ಕಾರ್ಡ್ ಅನ್ನು ಅಳವಡಿಸಿಕೊಳ್ಳದೆ ಇರುವುದು ಬೇಸರದ ಸಂಗತಿಯಾಗಿದೆ. ಒಂದೇ ಕಾರ್ಡಿನಲ್ಲಿ ಹಲವು ಸೇವೆಗಳನ್ನು ಒದಗಿಸುವ ಈ ರಾಷ್ಟ್ರೀಯ ಕಾಮನ್​ ಮೊಬಿಲಿಟಿ ಕಾರ್ಡ್​​ ಅನುಷ್ಠಾನ ಬಗ್ಗೆ ಬಿಎಂಟಿಸಿ ಇನ್ನೂ ಚರ್ಚೆಯ ಹಂತದಲ್ಲಿದೆ.

ಬಿಎಂಟಿಸಿಯಲ್ಲಿ ಇನ್ನೂ ಅನುಷ್ಠಾನಕ್ಕೆ ಬಾರದ ರಾಷ್ಟ್ರೀಯ ಸಾಮಾನ್ಯ ಮೊಬಿಲಿಟಿ ಕಾರ್ಡ್, ಏನಿದು?
ಬಿಎಂಟಿಸಿ
Follow us
ವಿವೇಕ ಬಿರಾದಾರ
|

Updated on:Dec 08, 2023 | 7:37 AM

ಬೆಂಗಳೂರು ಡಿ.08: ಬೆಂಗಳೂರು ಮೆಟ್ರೊ ರೈಲು ನಿಗಮ ನಿಯಮಿತ (BMRCL) ರಾಷ್ಟ್ರೀಯ ಕಾಮನ್​ ಮೊಬಿಲಿಟಿ ಕಾರ್ಡ್ (NCMC) ಪರಿಚಯಿಸಿದೆ. ಆದರೆ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (BMTC) ಮಾತ್ರ ರಾಷ್ಟ್ರೀಯ ಕಾಮನ್​ ಮೊಬಿಲಿಟಿ ಕಾರ್ಡ್ ಅನ್ನು ಇನ್ನೂ ಅಳವಡಿಸಿಕೊಳ್ಳದೆ ಇರುವುದು ಬೇಸರದ ಸಂಗತಿಯಾಗಿದೆ. ಒಂದೇ ಕಾರ್ಡಿನಲ್ಲಿ ಹಲವು ಸೇವೆಗಳನ್ನು ಒದಗಿಸುವ ಈ ರಾಷ್ಟ್ರೀಯ ಕಾಮನ್​ ಮೊಬಿಲಿಟಿ ಕಾರ್ಡ್​​ ಅನುಷ್ಠಾನ ಬಗ್ಗೆ ಬಿಎಂಟಿಸಿ ಇನ್ನೂ ಚರ್ಚೆಯ ಹಂತದಲ್ಲಿದೆ.

ಬಿಎಂಟಿಸಿ ಮತ್ತು ಮೆಟ್ರೊವನ್ನು ಸಂಯೋಜಿಸಬೇಕು ಮತ್ತು ಪ್ರತಿಸ್ಪರ್ಧಿಗಳಾಗಬಾರದು, ಪರಸ್ಪರ ಪೂರಕವಾಗಿರಬೇಕು ಎಂಬ ಉದ್ದೇಶವೂ ಇದೆ. ಸದ್ಯ ನಮ್ಮ ಮೆಟ್ರೋವನ್ನು ವೈಟ್‌ಫೀಲ್ಡ್‌ವರೆಗೆ ವಿಸ್ತರಿಸಿರುವುದು ಬಿಎಂಟಿಸಿಗೆ ಪೂರಕವಾಗಿದೆ ಅಂತಲೂ ಭಾವಿಸಲಾಗಿದೆ.

ವೈಟ್‌ಫೀಲ್ಡ್‌ವರೆಗೆ ಮೆಟ್ರೋ ವಿಸ್ತರಣೆ ಬಹುದಿನಗಳ ಬೇಡಿಕೆ ಆಗಿತ್ತು. ಇದು ಈಡೇರುತ್ತಿದ್ದಂತೆ ಬಿಎಂಟಿಸಿ ಬಸ್​ ಫೀಡರ್ ಬಸ್ ಸೇವೆಗಳು ಆರಂಭವಾದವು. ಇದರಿಂದ ಬಿಎಂಟಿಸಿಗೆ ಒತ್ತಡ ಹೆಚ್ಚಾಯಿತು. ಫೀಡರ್ ಬಸ್‌ಗಳು ಮತ್ತು ವಿಸ್ತರಿತ ಮೆಟ್ರೋ ಸೇವೆಗಳ ಸಂಯೋಜನೆಯು ಬೆಂಗಳೂರಿನ ಸಂಚಾರ ದಟ್ಟಣೆ ತಕ್ಕಮಟ್ಟಿಗೆ ಕಡಿಮೆಯಾಗಿದೆ ಎಂದು ಬಿಎಂಆರ್‌ಸಿಎಲ್ ಎಂಡಿ ಅಂಜುಮ್ ಪರ್ವೇಜ್ ಹೇಳಿದರು.

ಇದನ್ನೂ ಓದಿ:  ಮೆಟ್ರೋನಲ್ಲಿ ಒನ್ ನೇಷನ್‌ ಒನ್ ಕಾರ್ಡ್‌ಗೆ BMRCL ಚಾಲನೆ, ಏನಿದು ಎನ್​ಸಿಎಂಸಿ ಕಾರ್ಡ್? ಇಲ್ಲಿದೆ ಮಾಹಿತಿ

ಮೆಟ್ರೋ ನಿಲ್ದಾಣಗಳಲ್ಲಿ ಬೈಕ್ ಟ್ಯಾಕ್ಸಿಗಳನ್ನು ಪರಿಚಯಿಸಲು ಯೋಜಿಸಿದ್ದೇವೆ. ಸಾರ್ವಜನಿಕರ ಪ್ರಯಾಣಕ್ಕೆ ತೊಂದರೆಯಾಗದಂತೆ ಬಹು-ಮಾದರಿ ಸಾರಿಗೆ ಸೇವೆಗಳನ್ನು ಬಳಸುವುದು ಪ್ರಾಥಮಿಕ ಉದ್ದೇಶವಾಗಿದೆ. ರಾಷ್ಟ್ರಕ್ಕೆ ಒಂದು ಪ್ರಯಾಣ ಕಾರ್ಡ್ ಹೊಂದಿರಬೇಕು. ಇದು ಕ್ರಮೇಣ ಇತರ ಕ್ಷೇತ್ರಗಳಿಗೂ ವಿಸ್ತರಣೆಯಾಗಬೇಕು. ಆಟೋ, ಕ್ಯಾಬ್‌, ಮೆಟ್ರೋ, ಬಸ್‌ಗಳ ಮೂಲಕ ತಡೆರಹಿತ ಪ್ರಯಾಣವನ್ನು ಸಾಧಿಸಬೇಕು ಎಂದು ಅಭಿಪ್ರಾಯಪಟ್ಟರು.

ಆದರೆ, ಬಿಎಂಟಿಸಿಯಲ್ಲಿ ಸ್ಮಾರ್ಟ್​ ಮೊಬಿಲಿಟಿ ಕಾರ್ಡ್​ಗಳ ಬಳಕೆ ಇನ್ನೂ ಚರ್ಚೆಯ ಹಂತದಲ್ಲಿದೆ. ಅದನ್ನು ನನಸಾಗಿಸುವಲ್ಲಿ ಬಸ್ ನಿಗಮ ಯಾವುದೇ ಮಹತ್ವದ ಕ್ರಮಗಳನ್ನು ಕೈಗೊಂಡಿಲ್ಲ ಎಂದು ಬಿಎಂಟಿಸಿ ಮೂಲಗಳು ತಿಳಿಸಿದೆ.

ಏನಿದು ನ್ಯಾಷನಲ್ ಕಾಮನ್ ಮೊಬಿಲಿಟಿ ಕಾರ್ಡ್ ?

ನ್ಯಾಷನಲ್ ಕಾಮನ್ ಮೊಬಿಲಿಟಿ ಕಾರ್ಡ್ ಅನ್ನು ನಮ್ಮ ಮೆಟ್ರೋ ಸೇರಿದಂತೆ ದೇಶದ ಎಲ್ಲ ಸಾರಿಗೆ ವ್ಯವಸ್ಥೆಗಳು ಹಾಗೂ ಚಿಲ್ಲರೆ ಅಂಗಡಿ, ಪೆಟ್ರೋಲ್ ಬಂಕ್‌ಗಳು, ಶಾಪಿಂಗ್ ಮಾಲ್‌ಗಳಲ್ಲಿ ಬಳಕೆ ಮಾಡಬಹುದಾಗಿದೆ.“ಒನ್ ನೇಷನ್ ಒನ್ ಕಾರ್ಡ್” ಉಪಕ್ರಮದ  ಭಾಗವಾಗಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Published On - 7:23 am, Fri, 8 December 23

‘ನಾನು ಶಿಸ್ತುಬದ್ಧವಾಗಿ ಆಡಲಿಲ್ಲ’; ಆಸೀಸ್ ಪ್ರವಾಸದ ಬಗ್ಗೆ ಕೊಹ್ಲಿ ಮಾತು
‘ನಾನು ಶಿಸ್ತುಬದ್ಧವಾಗಿ ಆಡಲಿಲ್ಲ’; ಆಸೀಸ್ ಪ್ರವಾಸದ ಬಗ್ಗೆ ಕೊಹ್ಲಿ ಮಾತು
ಚೈತ್ರಾ ಕುಂದಾಪುರ ಯಾವುದಕ್ಕೂ ಲಾಯಕ್ಕಿಲ್ಲ: ಸಾಕ್ಷಿ ಸಮೇತ ವಿವರಿಸಿದ ರಜತ್
ಚೈತ್ರಾ ಕುಂದಾಪುರ ಯಾವುದಕ್ಕೂ ಲಾಯಕ್ಕಿಲ್ಲ: ಸಾಕ್ಷಿ ಸಮೇತ ವಿವರಿಸಿದ ರಜತ್
ಪ್ರತಾಪ್​ ಸಿಂಹ ಬಕೆಟ್​​ ಹಿಡಿಯುವುದನ್ನು ನಿಲ್ಲಿಸಲಿ: ಬಿಜೆಪಿ ಮುಖಂಡ ಕಿಡಿ
ಪ್ರತಾಪ್​ ಸಿಂಹ ಬಕೆಟ್​​ ಹಿಡಿಯುವುದನ್ನು ನಿಲ್ಲಿಸಲಿ: ಬಿಜೆಪಿ ಮುಖಂಡ ಕಿಡಿ
ಕೊಹ್ಲಿ ಜೊತೆಗಿನ ಭುಜಬಲದ ಕಾಳಗದ ಬಗ್ಗೆ ಮೌನ ಮುರಿದ ಕೊನ್​ಸ್ಟಾಸ್
ಕೊಹ್ಲಿ ಜೊತೆಗಿನ ಭುಜಬಲದ ಕಾಳಗದ ಬಗ್ಗೆ ಮೌನ ಮುರಿದ ಕೊನ್​ಸ್ಟಾಸ್
'ಹರೇ ರಾಮ, ಹರೇ ಕೃಷ್ಣ' ಮಂತ್ರ ಜಪಿಸಿದ ಸಾಂತಾಕ್ಲಾಸ್
'ಹರೇ ರಾಮ, ಹರೇ ಕೃಷ್ಣ' ಮಂತ್ರ ಜಪಿಸಿದ ಸಾಂತಾಕ್ಲಾಸ್
ಆಧುನಿಕ ಗಾಂಧಿಗಳ ಕಟೌಟ್! ಕಾಂಗ್ರೆಸ್ ಅಧಿವೇಶನ ಬಗ್ಗೆ ಕುಮಾರಸ್ವಾಮಿ ವ್ಯಂಗ್ಯ
ಆಧುನಿಕ ಗಾಂಧಿಗಳ ಕಟೌಟ್! ಕಾಂಗ್ರೆಸ್ ಅಧಿವೇಶನ ಬಗ್ಗೆ ಕುಮಾರಸ್ವಾಮಿ ವ್ಯಂಗ್ಯ
ಉಗ್ರಂ ಮಂಜು ತಲೆ ಮೇಲೆ ಬಾಟಲಿ ಹೊಡೆದ ಮೋಕ್ಷಿತಾ
ಉಗ್ರಂ ಮಂಜು ತಲೆ ಮೇಲೆ ಬಾಟಲಿ ಹೊಡೆದ ಮೋಕ್ಷಿತಾ
ವಾಟ್ ಎ ಬಾಲ್... ಡೇಂಜರಸ್ ಟ್ರಾವಿಸ್ ಹೆಡ್ ಕ್ಲೀನ್ ಬೌಲ್ಡ್
ವಾಟ್ ಎ ಬಾಲ್... ಡೇಂಜರಸ್ ಟ್ರಾವಿಸ್ ಹೆಡ್ ಕ್ಲೀನ್ ಬೌಲ್ಡ್
ವೀರಸೌಧದಲ್ಲಿ ಗಾಂಧಿ ಪ್ರತಿಮೆ ಅನಾವರಣಗೊಳಿಸಿದ ಸಿದ್ದರಾಮಯ್ಯ, ಡಿಕೆಶಿ
ವೀರಸೌಧದಲ್ಲಿ ಗಾಂಧಿ ಪ್ರತಿಮೆ ಅನಾವರಣಗೊಳಿಸಿದ ಸಿದ್ದರಾಮಯ್ಯ, ಡಿಕೆಶಿ
ಹುತಾತ್ಮ ಯೋಧರ ಕುಟುಂಬಕ್ಕೆ ಸರ್ಕಾರದಿಂದ ಪರಿಹಾರ: ಸಿಎಂ
ಹುತಾತ್ಮ ಯೋಧರ ಕುಟುಂಬಕ್ಕೆ ಸರ್ಕಾರದಿಂದ ಪರಿಹಾರ: ಸಿಎಂ