ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ 15 ದಿನದಲ್ಲಿ 2 ಬಿಎಂಟಿಸಿ ಬಸ್ಗಳು (BMTC Bus) ಬೆಂಕಿಗಾಹುತಿಯಾಗಿವೆ. ಈ ಹಿನ್ನೆಲೆ ಬಿಎಂಟಿಸಿ ತನಿಖೆ ಮಾಡಲು ಟೆಕ್ನಿಕಲ್ ತಂಡವನ್ನು ಸಿದ್ಧಪಡಿಸಿದೆ. ಈ ಬಗ್ಗೆ ಮಾಹಿತಿ ನೀಡಿದ ಬಿಎಂಟಿಸಿ ಎಂಡಿ ಅನ್ಬುಕುಮಾರ್, ಬೆಂಗಳೂರಿನಲ್ಲಿ 5,500 ಬಸ್ ಸಂಚಾರ ಮಾಡುತ್ತಿವೆ. ಪ್ರಯಾಣಿಕರ ಆದ್ಯತೆ, ರಕ್ಷಣೆಯೇ ನಮ್ಮ ಹೊಣೆ. ಶಾರ್ಟ್ ಸರ್ಕ್ಯೂಟ್ನಿಂದ (Short Circuit) 2 ಬಸ್ಗಳಿಗೆ ಬೆಂಕಿ ತಗುಲಿದೆ. ಚಾಲಕರ ಸಮಯ ಪ್ರಜ್ಞೆಯಿಂದ ಯಾವುದೇ ಅಪಾಯವಾಗಿಲ್ಲ. ಇನ್ನು ಮುಂದೆ ವಿಜಿಲೆನ್ಸ್ ಟೀಮ್ ಪರಿಶೀಲನೆ ಮಾಡಲಿದೆ ಅಂತ ತಿಳಿಸಿದರು.
ಸೌತ್ ಎಂಡ್ ಸರ್ಕಲ್ನಲ್ಲಿ ಹೊತ್ತಿ ಉರಿದ ಬಸ್
ನಿನ್ನೆ (ಫೆ.02) ಜಯನಗರದ ಸೌತ್ ಎಂಡ್ ಸರ್ಕಲ್ನಲ್ಲಿ ಚಲಿಸುತ್ತಿದ್ದ ಬಸ್ನಲ್ಲಿ ಏಕಾಏಕಿ ಬೆಂಕಿ ಕಾಣಿಸಿಕೊಂಡು ಹೊತ್ತಿ ಉರಿದಿತ್ತು. ಕಿಡಿ ಕಾಣುತ್ತಿದ್ದಂತೆ ಸಮಯ ಪ್ರಜ್ಞೆ ಮೆರೆದ ಬಸ್ ಚಾಲಕ ಎಲ್ಲಾ ಪ್ರಯಾಣಿಕರನ್ನ ಬಸ್ನಿಂದ ಕೆಳಗೆ ಇಳಿಸಿದ್ದರು. ಹಾಗಾಗಿ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಪ್ರಯಾಣಿಕರನ್ನು ಮತ್ತೊಂದು ಬಸ್ನಲ್ಲಿ ಪ್ರಯಾಣ ಮಾಡುವುದಕ್ಕೆ ಅವಕಾಶ ಮಾಡಿಕೊಡಲಾಗಿತ್ತು. ಮೆಜೆಸ್ಟಿಕ್ನಿಂದ ಬನಶಂಕರಿ ನಿಲ್ದಾಣಕ್ಕೆ ತೆರಳುತ್ತಿದ್ದ ಬಸ್ ನಂದ ಟಾಕೀಸ್ ಬಳಿ ಇದ್ದಕ್ಕಿದ್ದಂತೆ ಹೊತ್ತಿ ಉರಿದಿತ್ತು. ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ಸಿಬ್ಬಂದಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾದರು.
ಧಗಧಗನೆ ಹೊತ್ತಿ ಉರಿದ ಬಿಎಂಟಿಸಿ ಬಸ್
ಚಾಮರಾಜಪೇಟೆಯ ಮಕ್ಕಳಕೂಟ ಬಳಿ ಬಿಎಂಟಿಸಿ ಬಸ್ ಜನವರಿ 21ಕ್ಕೆ ನಡು ರಸ್ತೆಯಲ್ಲೇ ಧಗಧಗನೆ ಹೊತ್ತಿ ಉರಿದಿತ್ತು. ಇದರಿಂದ ದೀಪಾಂಜಲಿನಗರ ಡಿಪೋಗೆ ಸೇರಿದ ಬಸ್ ಸುಟ್ಟು ಕರಕಲಾಗಿತ್ತು. ಕೆ.ಆರ್ ಮಾರ್ಕೆಟ್ ಕಡೆ ತೆರಳುತ್ತಿದ್ದ ಬಿಎಂಟಿಸಿ ಬಸ್ನಲ್ಲಿ ಮಕ್ಕಳಕೂಟ ಬಳಿ ಬೆಂಕಿ ಕಾಣಿಸಿಕೊಂಡಿತ್ತು. ಘಟನೆಯಲ್ಲಿ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಇಂಜಿನಲ್ಲಿ ಹೊಗೆ ಕಾಣಿಸಿಕೊಳ್ಳುತ್ತಿದ್ದಂತೆ ಬಸ್ನಿಂದ ಇಳಿದು ಪ್ರಯಾಣಿಕರು ಬಚಾವಾಗಿದ್ದರು.
ಚಲಿಸುವ ವೇಳೆ ಬಸ್ನಲ್ಲಿ ಮೊದಲು ಹೊಗೆ ಕಾಣಿಸಿಕೊಂಡಿದೆ. ಚಾಲಕ ಕೂಡಲೇ ಹೊಗೆ, ಬೆಂಕಿ ಎಂದು ಕಿರುಚಿದ್ದಾರೆ. ಈ ವೇಳೆ ಬಸ್ ನಿಂದ ಕೆಳಗಿಳಿದ ಡ್ರೈವರ್ ಹಾಗೂ ಕಂಡಕ್ಟರ್ ಕೂಡಲೇ ಪ್ರಯಾಣಿಕರನ್ನು ಕೆಳಗೆ ಇಳಿಯಲು ನೆರವಾಗಿದ್ದಾರೆ. ನೋಡನೋಡುತ್ತಿದ್ದಂತೆ ಬಿಎಂಟಿಸಿ ಬಸ್ ಬೆಂಕಿಯಿಂದ ಹೊತ್ತಿ ಉರಿದಿತ್ತು.
ಇದನ್ನೂ ಓದಿ
ಏಳು ಸಂಖ್ಯೆಯ ಕೋಟೆ! ಸಪ್ತ ಸಂಖ್ಯೆಗಳ ವಿಶೇಷತೆಯ ಸುತ್ತ ಒಂದು ಸುತ್ತು!
ಬೇಧವಿಲ್ಲದ ತನಾರತಿ ಉತ್ಸವ ನೋಡಲು ಕಲಬುರಗಿಯಲ್ಲಿ ಮಾತ್ರ ಸಾಧ್ಯ; ಏನಿದರ ವಿಶೇಷತೆ?
Published On - 4:35 pm, Thu, 3 February 22