AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

BMTC bus fire: ಬೆಂಗಳೂರಿನ ಸೌತ್ ಎಂಡ್ ಸರ್ಕಲ್ ಬಳಿ ಬಿಎಂಟಿಸಿ ಬಸ್ ಗೆ ಬೆಂಕಿ

ಬೆಂಗಳೂರಿನ ಜಯನಗರ ಸೌತ್ ಎಂಡ್ ಸರ್ಕಲ್ ಬಳಿ ಅಂತಹುದೆ ಮತ್ತೊಂದು ಘಟನೆ ನಡೆದಿದ್ದು, ಚಲಿಸುತಿದ್ದ ಬಸ್ ನಲ್ಲಿ ಬೆಂಕಿ ಕಾಣಿಸಿಕೊಂಡಿದೆ.

BMTC bus fire: ಬೆಂಗಳೂರಿನ ಸೌತ್ ಎಂಡ್ ಸರ್ಕಲ್ ಬಳಿ ಬಿಎಂಟಿಸಿ ಬಸ್ ಗೆ ಬೆಂಕಿ
BMTC bus fire: ಬೆಂಗಳೂರಿನ ಸೌತ್ ಎಂಡ್ ಸರ್ಕಲ್ ಬಳಿ ಬಿಎಂಟಿಸಿ ಬಸ್ ಗೆ ಬೆಂಕಿ
Follow us
TV9 Web
| Updated By: ಸಾಧು ಶ್ರೀನಾಥ್​

Updated on:Feb 01, 2022 | 2:48 PM

ಬೆಂಗಳೂರು:ಇತ್ತೀಚೆಗೆ ಮಕ್ಕಳ ಕೂಟ ಬಳಿ ಬಿಎಂಟಿಸಿ ಬಸ್ ಗೆ ಬೆಂಕಿ ತಗುಲಿತ್ತು. ಇದೀಗ ಬೆಂಗಳೂರಿನ ಜಯನಗರ ಸೌತ್ ಎಂಡ್ ಸರ್ಕಲ್ ಬಳಿ (south end circle) ಅಂತಹುದೆ ಮತ್ತೊಂದು ಘಟನೆ ನಡೆದಿದ್ದು, ಚಲಿಸುತಿದ್ದ ಬಸ್ ನಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಬಸ್ ಚಾಲಕ ತಕ್ಷಣ ಬಸ್ ನಿಲ್ಲಿಸಿ ಪ್ರಯಾಣಿಕರನ್ನು ಹೊರಕ್ಕೆ ಕಳಿಸಿದ್ದಾರೆ. ಘಟನೆಯಲ್ಲಿ ಯಾವುದೆ ಪ್ರಾಣಾಪಾಯ ಅಗಿಲ್ಲ. ಜಯನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಅಗ್ನಿಶಾಮಕ ಸಿಬ್ಬಂದಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ (BMTC bus fire).

ನಂದ ಟಾಕೀಸ್ ಬಳಿ ಇದ್ದಕ್ಕಿದಂತೆ ಬಸ್ ನಲ್ಲಿ ಬೆಂಕಿ 258 F ಮಾರ್ಗ ಸಂಖ್ಯೆಯ ಬಸ್​ ಮೆಜೆಸ್ಟಿಕ್ ನಿಂದ ಸೌತ್ ಎಂಡ್ ಸರ್ಕಲ್ ಮಾರ್ಗವಾಗಿ ಬನಶಂಕರಿ ಬಸ್ ನಿಲ್ದಾಣಕ್ಕೆ ತೆರಳುತ್ತಿತ್ತು. ನಂದ ಟಾಕೀಸ್ ಬಳಿ ಇದ್ದಕ್ಕಿದಂತೆ ಬಸ್ ನಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಬಸ್ 20 ಕ್ಕೂ ಹೆಚ್ಚು ಪ್ರಯಾಣಿಕರು ಇದ್ರು. ಯಾವುದೇ ಸಾವು ನೋವು ಸಂಭವಿಸಿಲ್ಲ. ಪ್ರಯಾಣಿಕರನ್ನು ಮತ್ತೊಂದು ಬಸ್ ನಲ್ಲಿ ಪ್ರಯಾಣ ಮಾಡುವುದಕ್ಕೆ ಅವಕಾಶ ಮಾಡಿಕೊಡಲಾಗಿದೆ.

ಇತ್ತೀಚೆಗೆ (ಜನವರಿ 21) ಮಕ್ಕಳ ಕೂಟ ಬಳಿ ಬಿಎಂಟಿಸಿ ಬಸ್ ನಡು ರಸ್ತೆಯಲ್ಲೇ ಧಗಧಗನೆ ಭಸ್ಮವಾಗಿತ್ತು: ಬಿಎಂಟಿಸಿ ಬಸ್ಸೊಂದು ನಡು ರಸ್ತೆಯಲ್ಲೇ ಧಗಧಗನೆ ಹೊತ್ತಿ ಉರಿದ ಘಟನೆ ನಡೆದಿತ್ತು. ಬೆಂಗಳೂರಿನ ಚಾಮರಾಜಪೇಟೆಯ ಮಕ್ಕಳಕೂಟ ಬಳಿ ಈ ಘಟನೆ ನಡೆದಿತ್ತು. ದೀಪಾಂಜಲಿನಗರ ಡಿಪೋಗೆ ಸೇರಿದ ಬಸ್ ಸುಟ್ಟು ಕರಕಲಾಗಿದೆ. K.R. ಮಾರ್ಕೆಟ್ ಕಡೆ ತೆರಳುತ್ತಿದ್ದ ಬಿಎಂಟಿಸಿ ಬಸ್‌ನಲ್ಲಿ ಮಕ್ಕಳ ಕೂಟ ಬಳಿ ಬೆಂಕಿ ಕಾಣಿಸಿಕೊಂಡಿತ್ತು. ಚಾಮರಾಜಪೇಟೆಯಲ್ಲಿ (makkala kuta, chamrajpet) ಬಿಎಂಟಿಸಿ ಬಸ್ ಹೊತ್ತಿ ಉರಿದ ಪ್ರಕರಣದಲ್ಲಿ ಯಾವುದೇ ಸಾವು ನೋವು ಅನಾಹುತವಾಗಿರಲಿಲ್ಲ. ಇಂಜಿನಲ್ಲಿ ಹೊಗೆ ಕಾಣಿಸಿಕೊಳ್ತಿದ್ದಂತೆ ಬಸ್ ನಿಂದ ಪ್ರಯಾಣಿಕರು ಲಘುಬಗೆಯಿಂದ ಕೆಳಗಿಳಿದು ಬಚಾವಾಗಿದ್ದರು.

ಚಲಿಸುವ ವೇಳೆ ಬಸ್ ನಲ್ಲಿ ಮೊದಲು ಹೊಗೆ ಕಾಣಿಸಿಕೊಂಡಿತ್ತು. ಡ್ರೈವರ್ ಕೂಡಲೇ ಹೊಗೆ, ಬೆಂಕಿ ಎಂದು ಕಿರುಚಿಕೊಂಡಿದ್ದರು. ಬಸ್ ನಿಂದ ಕೆಳಗಿಳಿದ ಡ್ರೈವರ್ ಹಾಗೂ ಕಂಡಕ್ಟರ್ ಕೂಡಲೇ ಪ್ರಯಾಣಿಕರನ್ನು ಕೆಳಗೆ ಇಳಿಯಲು ನೆರವಾಗಿದ್ದರು ನೋಡನೋಡುತ್ತಿದ್ದಂತೆ ಬಿಎಂಟಿಸಿ ಬಸ್ ಬೆಂಕಿಯಿಂದ ಹೊತ್ತಿ ಉರಿದಿತ್ತು.

ಇದನ್ನೂ ಓದಿ: ಮಡಿಕೇರಿ: ಚಾಲಕನ ನಿಯಂತ್ರಣ ತಪ್ಪಿ ಸೇತುವೆಯಿಂದ ಕೆಳಕ್ಕುರುಳಿದ ಕಾರು

ಇದನ್ನೂ ಓದಿ: ಅಂತ್ಯಸಂಸ್ಕಾರಕ್ಕೆ ಬಂದಿದ್ದವರು ಇಹಲೋಕ ತ್ಯಜಿಸಿದರು, ಕಾರಿಗೆ ಟ್ರ್ಯಾಕ್ಟರ್ ಡಿಕ್ಕಿಯಾಗಿ ಕಾರಿನಲ್ಲಿದ್ದ ಮೂವರ ಸಾವು

Published On - 1:50 pm, Tue, 1 February 22