ಬೇಧವಿಲ್ಲದ ತನಾರತಿ ಉತ್ಸವ ನೋಡಲು ಕಲಬುರಗಿಯಲ್ಲಿ ಮಾತ್ರ ಸಾಧ್ಯ; ಏನಿದರ ವಿಶೇಷತೆ?

ಕೋರಿಸಿದ್ದೇಶ್ವರ ಮಠದ ವಿಶೇಷ ಮಠದಲ್ಲಿ ನಡೆಯುವ ತನಾರತಿ ಉತ್ಸವ. ಪ್ರತಿವರ್ಷ ಕೋರಿಸಿದ್ದೇಶ್ವರ ಜಾತ್ರೆ ಸಡಗರ ಸಂಭ್ರಮದಿಂದ ನಡೆಯುತ್ತದೆ. ಆದರೆ ಈ ಬಾರಿ ಕೊರೊನಾದಿಂದಾಗಿ ಸರಳವಾಗಿ ತನಾರತಿ ಉತ್ಸವನ್ನು ಆಚರಿಸಲಾಗಿದೆ.

ಬೇಧವಿಲ್ಲದ ತನಾರತಿ ಉತ್ಸವ ನೋಡಲು ಕಲಬುರಗಿಯಲ್ಲಿ ಮಾತ್ರ ಸಾಧ್ಯ; ಏನಿದರ ವಿಶೇಷತೆ?
ತನಾರತಿ ಉತ್ಸವ
Follow us
TV9 Web
| Updated By: sandhya thejappa

Updated on: Feb 03, 2022 | 1:15 PM

ಕಲಬುರಗಿ: ಜ್ಞಾನದ ಬಲದಿಂದ ಅಜ್ಞಾನದ ಕೇಡು ನೋಡಯ್ಯ, ಜ್ಯೋತಿಯ ಬಲದಿಂದ ತಮಂದದ ಕೇಡು ನೋಡಯ್ಯ ಅಂತ ಬಸವಣ್ಣ (Basavanna) ಹೇಳಿದ್ದಾರೆ. ಬೆಳಕಿನಿಂದ ಬಾಹ್ಯ ಕತ್ತಲೆ, ಮನದ ಕತ್ತಲೆಯನ್ನು ದೂರ ಮಾಡಬಹುದು ಅನ್ನೋದು ಶರಣರ ಸದಾಶಯ. ಇಂತಹದೊಂದು ಬೆಳಕಿನ ಮೂಲಕ ತಮಂದ ಹೋಗಲಾಡಿಸುವ ಮಠವೊಂದು ಕಲಬುರಗಿ (Kalaburagi) ಜಿಲ್ಲೆಯ ಚಿತ್ತಾಪುರ ತಾಲೂಕಿನ ನಾಲವಾರದಲ್ಲಿದೆ. ಆ ಮಠದ ಹೆಸರು ಕೋರಿಸಿದ್ದೇಶ್ವರ ಮಠ (Kori Siddeshwara Mata). ಕೋರಿಸಿದ್ದೇಶ್ವರ ಮಠ ಬೆಳಕಿನ ಮಠ. ಕಷ್ಟದಲ್ಲಿದ್ದವರ ಬಾಳಿಗೆ ಬೆಳಕು ನೀಡುವ ಮಠ. ಆಜ್ಞಾನದಲ್ಲಿದ್ದವರಿಗೆ ಜ್ಞಾನದ ಬೆಳಕು, ಸಮಸ್ಯೆಯಿಂದ ಬಳಲುತ್ತಿರುವವರಿಗೆ ಸಮಾಧಾನದ ಬೆಳಕು ನೀಡುವ ಮಹಾಕ್ಷೇತ್ರ ಎನ್ನುವ ಗರಿಮೆಯನ್ನು ಪಡೆದುಕೊಂಡಿದೆ. ಆ ಕ್ಷೇತ್ರದಲ್ಲಿ ನಡೆಯುವ ತನಾರತಿ ಉತ್ಸವ ಹೆಚ್ಚು ಪ್ರಸಿದ್ಧಿಯನ್ನು ಪಡೆದಿದೆ.

ನಾಲವಾರದಲ್ಲಿರುವ ಕೋರಿಸಿದ್ದೇಶ್ವರ ಮಠ, ಕೇವಲ ಕಲ್ಯಾಣ ಕರ್ನಾಟಕ ಮಾತ್ರವಲ್ಲಾ, ಇಡೀ ರಾಜ್ಯದಲ್ಲಿಯೇ ತನ್ನದೆ ಆದ ವಿಶಿಷ್ಟತೆಗಳಿಂದ ಹೆಸರು ಮಾಡಿರುವ ಮಠ. ಕೇವಲ ರಾಜ್ಯ ಮಾತ್ರವಲ್ಲದೆ, ನೆರೆಯ ತೆಲಂಗಾಣ, ಆಂಧ್ರಪ್ರದೇಶ, ಮಹಾರಾಷ್ಟ್ರ, ಗೋವಾ, ಗುಜರಾತ್ ಸೇರಿದಂತೆ ದೇಶದ ವಿವಿಧ ಮೂಲಗಳಿಂದ ಮಠಕ್ಕೆ ಸಾವಿರಾರು ಭಕ್ತರು ಆಗಮಿಸುತ್ತಾರೆ. ವಿದೇಶಗಳಲ್ಲಿಯೂ ಕೂಡಾ ನಾಲವಾರ ಮಠದ ಭಕ್ತರಿದ್ದು, ನಾಲವಾರದ ಕೋರಿಸಿದ್ದೇಶ್ವರನನ್ನು ಪ್ರತಿನಿತ್ಯ ಮನದಲ್ಲಿ ಸ್ಮರಿಸುತ್ತಾರೆ.

ಕೋರಿಸಿದ್ದೇಶ್ವರ ಮಠದ ವಿಶೇಷ ತನಾರತಿ ಉತ್ಸವ: ಕೋರಿಸಿದ್ದೇಶ್ವರ ಮಠದ ವಿಶೇಷ ಮಠದಲ್ಲಿ ನಡೆಯುವ ತನಾರತಿ ಉತ್ಸವ. ಪ್ರತಿವರ್ಷ ಕೋರಿಸಿದ್ದೇಶ್ವರ ಜಾತ್ರೆ ಸಡಗರ ಸಂಭ್ರಮದಿಂದ ನಡೆಯುತ್ತದೆ. ಆದರೆ ಈ ಬಾರಿ ಕೊರೊನಾದಿಂದಾಗಿ ಸರಳವಾಗಿ ತನಾರತಿ ಉತ್ಸವನ್ನು ಆಚರಿಸಲಾಗಿದೆ. ಪ್ರತಿವರ್ಷ ಅವರಾತ್ರಿ ಅಮವಾಸೆಯಂದು ಪ್ರಾರಂಭವಾಗುವ ಕೋರಿಸಿದ್ದೇಶ್ವರ ಜಾತ್ರೆ ಎರಡು ದಿನಗಳ ಕಾಲ ನಡೆಯುತ್ತದೆ. ನಾಲವಾರದ ಕೋರಿಸಿದ್ದೇಶ್ವರ ಮಠದಲ್ಲಿ ವರ್ಷದಲ್ಲಿ ಮೂರು ಭಾರಿ ತನಾರತಿ ಉತ್ಸವ ನಡೆಯುತ್ತದೆ. ಅವರಾತ್ರಿ ಅಮವಾಸ್ಯೆ, ಅಕ್ಷತದಿಗೆ ಅಮವಾಸ್ಯೆ ಮತ್ತು ಮಣ್ಣೆತ್ತಿನ ಅಮವಾಸ್ಯೆಯ ದಿನ ಮಠದಲ್ಲಿ ತನಾರತಿ ಉತ್ಸವವನ್ನು ನಡೆಸಲಾಗುತ್ತದೆ. ಆದರೆ ಮೂರು ತನಾರಾಜತಿ ಉತ್ಸವದಲ್ಲಿ ಅತಿ ದೊಡ್ಡ ತನಾರತಿ ಉತ್ಸವ ನಡೆಯುವುದು ಜಾತ್ರೆಯ ಸಂದರ್ಭದಲ್ಲಿ.

ತನಾರತಿ ಉತ್ಸವಕ್ಕೆ ಭಕ್ತರ ದಂಡು

ಅವರಾತ್ರಿ ಅಮವಾಸ್ಯೆಯ ದಿನ ನಡೆಯುವ ತನಾರತಿ ಉತ್ಸವ, ಎಲ್ಲ ಉತ್ಸವಕ್ಕೂ ಹೆಚ್ಚು ಆಕರ್ಷಣೆಯನ್ನು ಹೊಂದಿರುತ್ತದೆ. ಅವರಾತ್ರಿ ಅಮವಾಸ್ಯೆಯ ದಿನ ಮಧ್ಯರಾತ್ರಿ ಪ್ರಾರಂಭವಾಗುವ ತನಾರತಿ ಉತ್ಸವ ಮಾರನೆಯ ದಿನದ ಮುಂಜಾನೆವರಗೆ ನಡೆಯುತ್ತದೆ. ತಲೆಯ ಮೇಲೆ ತನಾರತಿಗಳನ್ನು ಹೊತ್ತು, ಮಠದಲ್ಲಿರುವ ಕೋರಿಸಿದ್ದೇಶ್ವರರ ಕರ್ತು ಗದ್ದುಗೆಗೆ ಪ್ರದಕ್ಷಿಣೆ ಹಾಕುತ್ತಾರೆ.

ಏನಿದು ತನಾರತಿ ಉತ್ಸವ?: ಕೋರಿಸಿದ್ದೇಶ್ವರ ಮಠದಲ್ಲಿ ನಡೆಯುವ ತನಾರತಿ ಉತ್ಸವ ರಾಜ್ಯದ ಬೇರೆ ಮಠ ಮತ್ತು ಧಾರ್ಮಿಕ ಕೇಂದ್ರಗಳಲ್ಲಿ ಕಾಣ ಸಿಗದು. ಗೋದಿ ಕಣಕದಿಂದ ತಯಾರಾದ ತನಾರತಿಯಲ್ಲಿ ದೀಪಗಳನ್ನು ಹಚ್ಚಿ ಮಠದ ಸುತ್ತ ಪ್ರದಕ್ಷಿಣೆ ಹಾಕುವುದೇ ತನಾರತಿ ಉತ್ಸವ. ಕರ್ನಾಟಕ, ಮಹಾರಾಷ್ಟ್ರ, ಆಂಧ್ರಪ್ರದೇಶ, ತೆಲಂಗಾಣ ಸೇರಿದಂತೆ ದೇಶದ ವಿವಿಧ ಮೂಲೆಗಳಿಂದ ಸಾವಿರಾರು ಜನರು ತನಾರತಿ ಉತ್ಸವದಲ್ಲಿ ಭಾಗಿಯಾಗುತ್ತಾರೆ. ಒಂದಡೆ ಭಕ್ತರು ತನಾರತಿಗಳನ್ನು ತಲೆ ಮೇಲೆ ಇಟ್ಟುಕೊಂಡು ಪ್ರದಕ್ಷಿಣೆ ಹಾಕಿದ್ದರೆ, ಮ್ತತೊಂದಡೆ ಭಕ್ತರ ಜೊತೆಗೆ ಮಠದ ಪೀಠಾಧಿಪತಿಯಾಗಿರುವ ಡಾ. ಸಿದ್ದತೋಟೆಂದ್ರ ಶಿವಾಚಾರ್ಯರು ಕೂಡಾ ಭಕ್ತರ ಜೊತೆ ಹೆಜ್ಜೆ ಹಾಕುತ್ತಾರೆ.

ತನಾರತಿ ಉತ್ಸವದ ಉದ್ದೇಶ?: ತನಾರತಿ ಉತ್ಸವದ ಪ್ರಮುಖ ಉದ್ದೇಶ ಹರಕೆ ತೀರಿಸುವುದು. ಜನರು ತನಾರತಿ ಉತ್ಸವದಲ್ಲಿ ಭಾಗಿಯಾಗಿ ತಮ್ಮ ಹರಕೆಯನ್ನು ತೀರಿಸುತ್ತಾರೆ. ಕೋರಿಸಿದ್ದೇಶ್ವರ ಮಠಕ್ಕೆ ಬರುವ ಭಕ್ತರು, ಕೋರಿಸಿದ್ದೇಶ್ವರರಿಗೆ ತಮ್ಮ ಕಷ್ಟಗಳು ದೂರವಾದರೆ, ತಮ್ಮ ಕೆಲಸಗಳು ಆದರೆ, ತಮಗೆ ಬಂದಿರುವ ಸಮಸ್ಯೆಗಳು ದೂರವಾದರೆ ಮಠಕ್ಕೆ ಬಂದು ತನಾರತಿ ಸೇವೆಯನ್ನು ಮಾಡಿ ಹರಕೆ ತೀರಿಸುವದಾಗಿ ಬೇಡಿಕೊಂಡಿರುತ್ತಾರೆ.

ಬೇಧವಿಲ್ಲದ ತನಾರತಿ ಉತ್ಸವ: ಮಠದಲ್ಲಿ ಯಾವುದೇ ಬೇಧಬಾವವಿಲ್ಲದೆ ಎಲ್ಲರನ್ನು ಸಮಾನರಾಗಿ ಕಾಣಲಾಗುತ್ತದೆ. ಜಾತಿ-ಧರ್ಮಗಳನ್ನು ಮೀರಿ, ಭಾಷೆಯ ಗಡಿಗಳನ್ನು ದಾಟಿ, ಹೆಣ್ಣು- ಗಂಡುಗಳೆಂಬ ಭೇದಭಾವವನ್ನು ಬಿಟ್ಟು, ಎಲ್ಲರನ್ನು ಸಮಾನರಾಗಿ ಕಾಣಲಾಗುತ್ತದೆ. ಯಾರು ಬೇಕಾದರು ತನಾರತಿ ಉತ್ಸವದಲ್ಲಿ ಭಾಗಿಯಾಗಿ ತಮ್ಮ ಹರಕೆ ತೀರಿಸಬಹುದು.

ಕೋರಿಸಿದ್ದೇಶ್ವರ ಮಠದಲ್ಲಿ ನಡೆಯುವ ತನಾರತಿ ಉತ್ಸವಕ್ಕೆ ಪ್ರತಿವರ್ಷ ಸಾವಿರಾರು ಜನರು ಭಾಗಿಯಾಗುತ್ತಿದ್ದರು. ಆದರೆ ಈ ಬಾರಿ ಕೊರೊನಾದಿಂದಾಗಿ ಮಠದಲ್ಲಿ ಸರಳವಾಗಿ ಆಚರಿಸಲಾಗಿದೆ. ಮಠದಲ್ಲಿ ಅನೇಕ ವರ್ಷಗಳಿಂದ ತನಾರತಿ ಉತ್ಸವ ನಡೆದುಕೊಂಡು ಬಂದಿದೆ. ಜನರು ತನಾರತಿ ಹೊತ್ತು ತಮ್ಮ ಹರಕೆ ತೀರಿಸುತ್ತಾರೆ ಅಂತ ಪೀಠಾಧಿಪತಿ ಡಾ.ಸಿದ್ದತೋಟೆಂದ್ರ ಮಹಾ ಶಿವಾಚಾರ್ಯ ಸ್ವಾಮೀಜಿ ತಿಳಿಸಿದರು.

ವರದಿ: ಸಂಜಯ್ ಚಿಕ್ಕಮಠ

ಇದನ್ನೂ ಓದಿ

ಗಾಲ್ವಾನ್‌ ಸಂಘರ್ಷದಲ್ಲಿ ಚೀನಾಕ್ಕೆ ಅಪಾರ ನಷ್ಟವಾಗಿತ್ತು, ಬೀಜಿಂಗ್ ಜಗತ್ತಿಗೆ ಹೇಳಿದ್ದು ಕಟ್ಟುಕತೆ: ಆಸ್ಟ್ರೇಲಿಯಾದ ಪತ್ರಿಕಾ ವರದಿ

ವಿಶಾಖಪಟ್ಟಣಂ: ಚೂಪಾದ ಕೊಕ್ಕಿನಿಂದ ಮೀನುಗಾರನನ್ನು ಚುಚ್ಚಿ ಕೊಂದ ಬ್ಲ್ಯಾಕ್​ ಮರ್ಲಿನ್​ ಮೀನು