ಬೆಂಗಳೂರು, (ಡಿಸೆಂಬರ್ 01): ಬೆಂಗಳೂರಿನಲ್ಲಿ ಖಾಸಗಿ ಶಾಲೆಗಳಿಗೆ ಬಾಂಬ್ ಬೆದರಿಕೆ ಇಮೇಲ್(Bomb Threat To Bengaluru Schools) ಬಂದಿರುವುದು ಪೋಷಕರಿಗೆ ಆತಂಕ ಹೆಚ್ಚಿಸಿದೆ. ಈ ರೀತಿ ಆಗಾಗಿ ಹುಸಿ ಬಾಂಬ್ ಬೆದರಿಕೆ ಕರೆಗಳು ಬಂದ ಉದಾಹರಣಗಳು ಇವೆ. ಆದ್ರೆ, ಈ ಬಾರಿ ಬರೋಬ್ಬರಿ 44 ಶಾಲೆಗಳಿಗೆ ಬಂದಿದೆ. ಮುಖ್ಯವಾಗಿ ಬೆದರಿಕೆ ಇಮೇಲ್ನಲ್ಲಿ ಉಗ್ರವಾದ ಪದಗಳ ಉಲ್ಲೇಖವಾಗಿದ್ದರಿಂದ ಆತಂಕಕ್ಕೆ ಕಾರಣವಾಗಿದೆ. ಈ ಹಿನ್ನೆಲೆಯಲ್ಲಿ ಪೊಲೀಸ್ ಇಲಾಖೆ ಇದನ್ನು ಗಂಭೀರವಾಗಿ ಪರಿಗಣಿಸಿದೆ. ಇನ್ನು ಸುರಕ್ಷತಾ ದೃಷ್ಟಿಯಿಂದ ಶಾಲಾ ಆಡಳಿತ ಮಂಡಳಿ ಮಕ್ಕಳನ್ನು ಮನೆಗೆ ಕಳುಹಿಸುತ್ತಿದೆ. ಕೆಲ ಶಾಲೆಗಳಿಗೆ ರಜೆ ಘೋಷಣೆ ಮಾಡಲಾಗಿದೆ. ಹಾಗಾದ್ರೆ, ಯಾವೆಲ್ಲಾ ಶಾಲೆಗಳಿಗೆ ಬಾಂಬ್ ಬೆದರಿಕೆ ಹಾಕಲಾಗಿದೆ ಎನ್ನುವ ಪಟ್ಟಿ ಇಲ್ಲಿದೆ.
ಮೊದಲು 15 ಶಾಲೆಗಳಿಗೆ ಬೆದರಿಕೆ ಇಮೇಲ್ ಬಂದಿದೆ. ಬಳಿಕ ಇನ್ನುಳಿದ ಆಡಳಿತ ಮಂಡಳಿಗಳು ತಮ್ಮ ತಮ್ಮ ಶಾಲೆಯ ಇಮೇಲ್ ಪರಿಶೀಲನೆ ಮಾಡಿದ ಬಳಿಕ 44 ಶಾಲೆಗಳಿಗೆ ಇಮೇಲ್ ಬೆದರಿಕೆ ಬಂದಿತ್ತಿ. ಇದೀಗ ಸಾಕಷ್ಟು ಶಾಲೆಗಳ ಆಡಳಿತ ಮಂಡಳಿ ಮೇಲ್ ಚೆಕ್ ಬಳಿಕ ಬಯಲಾಗುತ್ತಿದ್ದು, ಸಮಯ ಕಳೆದಂತೆ ಬೆದರಿಕೆ ಹಾಕಿದ ಶಾಲೆಗಳ ಸಂಖ್ಯೆ ಏರಿಕೆಯಾಗುತ್ತಲೇ ಇದೆ.
ಇದನ್ನೂ ಓದಿ: ಎಲ್ಲರೂ ಇಸ್ಲಾಂಗೆ ಮತಾಂತರವಾಗಿ, ಇಲ್ಲ ಎಲ್ಲರೂ ಸಾಯಲು ಸಿದ್ಧರಾಗಿ: ಇದು ಶಾಲೆಗಳಿಗೆ ಬಂದ ಬಾಂಬ್ ಬೆದರಿಕೆ
ಬೆಂಗಳೂರಿನ ದಕ್ಷಿಣ ವಲಯ – 1: 15 ಶಾಲೆಗಳಿಗೆ ಬೆದರಿಕೆ ಇಮೇಲ್
ಬೆಂಗಳೂರಿನ ದಕ್ಷಿಣ ವಲಯ – 2: 03 ಶಾಲೆಗಳು.
ಬೆಂಗಳೂರಿನ ದಕ್ಷಿಣ ವಲಯ – 3: 10 ಶಾಲೆಗಳು
ಬೆಂಗಳೂರಿನ ದಕ್ಷಿಣ ವಲಯ 4: 04 ಶಾಲೆಗಳು
ಅನೇಕಲ್ನ 05 ಶಾಲೆಗಳಿಗೆ ಸೇರಿದಂತೆ ಒಟ್ಟು 44 ಖಾಸಗಿ ಶಾಲೆಗಳ ಇಮೇಲ್ಗೆ ಬಾಂಬ್ ಬೆದರಿಕೆ ಬಂದಿದೆ.