ಮದುವೆಯಾಗುವ ಭರವಸೆ ಉಲ್ಲಂಘನೆ ವಂಚನೆಯಲ್ಲ: ಹೈಕೋರ್ಟ್ ಏಕಸದಸ್ಯ ಪೀಠ ಆದೇಶ

| Updated By: preethi shettigar

Updated on: Jan 24, 2022 | 8:07 PM

ಮದುವೆಯಾಗುವುದಾಗಿ ನಂಬಿಸಿ ವಂಚನೆ ಮಾಡಿದ್ದಾರೆ ಎಂದು ಯುವತಿ ಆರೋಪ ಮಾಡಿದ್ದಳು. ಸದ್ಯ ಮದುವೆಯ ಭರವಸೆ ಉಲ್ಲಂಘನೆ ವಂಚನೆಯಾಗುವುದಿಲ್ಲ ಎಂದು ಪ್ರಕರಣ ರದ್ದುಗೊಳಿಸಿ ನ್ಯಾಯಾಧೀಶರಾದ ಕೆ. ನಟರಾಜನ್ ರವರಿದ್ದ ಏಕಸದಸ್ಯ ಪೀಠ ಆದೇಶ ನೀಡಿದೆ.

ಮದುವೆಯಾಗುವ ಭರವಸೆ ಉಲ್ಲಂಘನೆ ವಂಚನೆಯಲ್ಲ: ಹೈಕೋರ್ಟ್ ಏಕಸದಸ್ಯ ಪೀಠ ಆದೇಶ
ಹೈಕೋರ್ಟ್
Follow us on

ಬೆಂಗಳೂರು: ಮದುವೆಯಾಗುವ ಭರವಸೆ ನೀಡಿ ಅದನ್ನು ಉಲ್ಲಂಘನೆ ಮಾಡಿದರೆ ವಂಚನೆಯಲ್ಲ(Fraud) ಎಂದು ಕೇಸ್ ರದ್ದುಗೊಳಿಸಿ ಹೈಕೋರ್ಟ್ (High court) ಏಕಸದಸ್ಯ ಪೀಠ ಆದೇಶ ನೀಡಿದೆ. ವೆಂಕಟೇಶ್ ಎಂಬಾತನ ವಿರುದ್ಧ ಯುವತಿ ನೀಡಿದ ದೂರು ರದ್ದುಗೊಳಿಸಿದ ಕರ್ನಾಟಕ ಹೈಕೋರ್ಟ್ ಆದೇಶ ನೀಡಿದೆ.​ ಯುವತಿಯನ್ನು ಪ್ರೀತಿಸಿ ನಂತರ ವೆಂಕಟೇಶ್​ ಎಂಬಾತ ವಿವಾಹವಾಗಿರಲಿಲ್ಲ. ಮನೆಯವರ ಒತ್ತಾಯದಂತೆ ಬೇರೆ ಯುವತಿಯೊಂದಿಗೆ ವಿವಾಹವಾಗಿದ್ದ (Marriage). ಹೀಗಾಗಿ ವೆಂಕಟೇಶ್ ಮತ್ತು ಆತನ ಕುಟುಂಬದವರ ವಿರುದ್ಧ ಯುವತಿ ದೂರು ನೀಡಿದ್ದಳು.

ಮದುವೆಯಾಗುವುದಾಗಿ ನಂಬಿಸಿ ವಂಚನೆ ಮಾಡಿದ್ದಾರೆ ಎಂದು ಯುವತಿ ಆರೋಪ ಮಾಡಿದ್ದಳು. ಸದ್ಯ ಮದುವೆಯ ಭರವಸೆ ಉಲ್ಲಂಘನೆ ವಂಚನೆಯಾಗುವುದಿಲ್ಲ ಎಂದು ಪ್ರಕರಣ ರದ್ದುಗೊಳಿಸಿ ನ್ಯಾಯಾಧೀಶರಾದ ಕೆ. ನಟರಾಜನ್ ರವರಿದ್ದ ಏಕಸದಸ್ಯ ಪೀಠ ಆದೇಶ ನೀಡಿದೆ.

ಗದಗ: ಮಾರಕಾಸ್ತ್ರಗಳಿಂದ ಕೊಚ್ಚಿ ಯುವಕನ ಕೊಲೆ ಪ್ರಕರಣ; ಹೈಕೋರ್ಟ್ ನ್ಯಾಯಾಧೀಶರ ನೇತೃತ್ವದಲ್ಲಿ ತನಿಖೆಗೆ ಒತ್ತಾಯಿಸಿ ಸಿಎಂ ಪತ್ರ

ಜನವರಿ 18ರಂದು ನರಗುಂದದಲ್ಲಿ ಮಾರಕಾಸ್ತ್ರಗಳಿಂದ ಕೊಚ್ಚಿ ಯುವಕ ಸಮೀರ್ ಶಹಾಪುರ ಕೊಲೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಹೈಕೋರ್ಟ್ ನ್ಯಾಯಮೂರ್ತಿ ನೇತೃತ್ವದಲ್ಲಿ ತನಿಖೆಗೆ ಒತ್ತಾಯಿಸಿ ಸಿಎಂ ಬೊಮ್ಮಾಯಿಗೆ ಪರಿಷತ್ ಸದಸ್ಯ ಸಲೀಂ ಅಹ್ಮದ್ ಪತ್ರ ಬರೆದಿದ್ದಾರೆ. ಗದಗ ಜಿಲ್ಲೆ ಶಾಂತಿಯ ನಾಡು, ಮಹಾತ್ಮರು, ಸೂಫಿ, ಸಂತರ ಹುಟ್ಟಿದ ನಾಡು. ಅಂಥ ನಾಡಲ್ಲಿ ಇಂಥ ಘಟನೆ ನಡೆದಿದ್ದು ಸರಿಯಲ್ಲ. ಸಾಮರಸ್ಯ ಹಾಳು ಮಾಡುವ ಕೆಲಸ ನಡೆದಿದೆ. ಹೀಗಾಗಿ ಹೈಕೋರ್ಟ್ ನ್ಯಾಯಾಧೀಶರ ನೇತೃತ್ವದಲ್ಲಿ ತನಿಖೆ ಮಾಡಬೇಕು ಎಂದು ಪತ್ರದ ಮೂಲಕ ಒತ್ತಾಯಿಸಿದ್ದಾರೆ.

ನರಗುಂದ ಪಟ್ಟಣದಲ್ಲಿ ಜನವರಿ 17 ರ ರಾತ್ರಿ ಬೈಕ್ ಮೇಲೆ ಹೋಗುವಾಗ ಏಕಾಏಕಿ ಮಾರಕಾಸ್ತ್ರಗಳಿಂದ ಹಲ್ಲೆ ಮಾಡಿ ಕೊಲೆ ಮಾಡಿದ್ದಾರೆ. ಸಮೀರ ಶಹಾಪೂರ (19) ಮತ್ತು ಶಮ್ಮಶಾದ್ ಖಾನ್ ಮೇಲೆ ಹಲ್ಲೆ ಮಾಡಿದ್ದಾರೆ. ಚಿಕಿತ್ಸೆ ಫಲಕಾರಿಯಾಗದೇ ಸಮೀರ್ ಶಹಾಪೂರ ಜನವರಿ 18 ರಂದು ಸಾವನ್ನಪ್ಪಿದ್ದು, ಶಮ್ಶಶಾದ ಸ್ಥಿತಿ ಗಂಭೀರವಾಗಿದೆ. ಹುಬ್ಬಳ್ಳಿ ಕಿಮ್ಸ್  ಆಸ್ಪತ್ರೆಯಲ್ಲಿ ಸಮೀರ್​ ಸದ್ಯ ಚಿಕಿತ್ಸೆ ಪಡೆಯುತ್ತಿದ್ದಾರೆ.

ಇದನ್ನೂ ಓದಿ:

ಕೆಆರ್​ಎಸ್ ಸುತ್ತಮುತ್ತ ಕಲ್ಲುಗಣಿಗಾರಿಕೆ: ಹೈಕೋರ್ಟ್​ನಲ್ಲಿ ಲೈಸೆನ್ಸ್ ಅಮಾನತು ಪ್ರಶ್ನಿಸಿದ 17 ಕ್ವಾರಿ ಮಾಲೀಕರು

ಮಹಿಳೆಯೊಂದಿಗೆ ಲೈಂಗಿಕ ಸಂಪರ್ಕದಲ್ಲಿದ್ದು, ಮದುವೆ ನಿರಾಕರಿಸಿ ಜೈಲು ಸೇರಿದ್ದವನನ್ನು ದೋಷಮುಕ್ತ ಗೊಳಿಸಿದ ಬಾಂಬೆ ಹೈಕೋರ್ಟ್​; ನ್ಯಾಯಾಧೀಶರು ಹೇಳಿದ್ದೇನು?

Published On - 7:53 pm, Mon, 24 January 22