ಮಹಿಳೆಯೊಂದಿಗೆ ಲೈಂಗಿಕ ಸಂಪರ್ಕದಲ್ಲಿದ್ದು, ಮದುವೆ ನಿರಾಕರಿಸಿ ಜೈಲು ಸೇರಿದ್ದವನನ್ನು ದೋಷಮುಕ್ತ ಗೊಳಿಸಿದ ಬಾಂಬೆ ಹೈಕೋರ್ಟ್​; ನ್ಯಾಯಾಧೀಶರು ಹೇಳಿದ್ದೇನು?

ಮಹಿಳೆಯೊಂದಿಗೆ ಲೈಂಗಿಕ ಸಂಪರ್ಕದಲ್ಲಿದ್ದು, ಮದುವೆ ನಿರಾಕರಿಸಿ ಜೈಲು ಸೇರಿದ್ದವನನ್ನು ದೋಷಮುಕ್ತ ಗೊಳಿಸಿದ ಬಾಂಬೆ ಹೈಕೋರ್ಟ್​; ನ್ಯಾಯಾಧೀಶರು ಹೇಳಿದ್ದೇನು?
ಬಾಂಬೆ ಹೈಕೋರ್ಟ್

ಈ ಮಹಿಳೆ 1996ರಲ್ಲಿ ಪೊಲೀಸರಿಗೆ ದೂರು ನೀಡಿದ್ದರು. ನನ್ನನ್ನು ಮದುವೆಯಾಗುತ್ತೇನೆ ಎಂದು ನಂಬಿಸಿದ. ಹೀಗೆ ನನ್ನೊಂದಿಗೆ ದೈಹಿಕ ಸಂಪರ್ಕವನ್ನೂ ಬೆಳೆಸಿದ. ಆದರೆ ನಂತರ ವಿವಾಹವಾಗಲು ಒಪ್ಪಲಿಲ್ಲ ಎಂದು ಆಕೆ ದೂರಿನಲ್ಲಿ ಹೇಳಿದ್ದಳು.

TV9kannada Web Team

| Edited By: Lakshmi Hegde

Dec 23, 2021 | 3:20 PM

ಮಹಿಳೆಯೊಬ್ಬಳನ್ನು ಮದುವೆಯಾಗಿ ನಂಬಿಸಿ, ಆಕೆಯೊಂದಿಗೆ ದೈಹಿಕ ಸಂಪರ್ಕ ಬೆಳೆಸಿ, ನಂತರ ಮದುವೆಯಾಗದೆ ವಂಚಿಸಿದ್ದ ಆರೋಪದಡಿ ಜೈಲು ಸೇರಿದ್ದ ವ್ಯಕ್ತಿಯನ್ನು 25ವರ್ಷಗಳ ನಂತರ ಬಿಡುಗಡೆ ಮಾಡಲಾಗಿದೆ. ಈತ ಮೂಲತಃ ಪಾಲ್ಘಾರ್​ನವನಾಗಿದ್ದು, ಬಾಂಬೆ ಹೈಕೋರ್ಟ್ ಈಗ ಆತನನ್ನು ದೋಷಮುಕ್ತಗೊಳಿಸಿದೆ.  ಕೇವಲ ಮದುವೆಯನ್ನು ನಿರಾಕರಿಸುವುದು ಐಪಿಸಿ ಸೆಕ್ಷನ್​ 417ರ ಪ್ರಕಾರ ಅಪರಾಧವಲ್ಲ. ಆತ ಮದುವೆಯಾಗುತ್ತೇನೆ ಎಂದು ಹೇಳಿದ್ದಕ್ಕೇ ಮಹಿಳೆ ದೈಹಿಕ ಸಂಬಂಧ ಬೆಳೆಸಲು ಒಪ್ಪಿಕೊಂಡರು ಎಂಬುದಕ್ಕೆ ಸಾಕ್ಷಿಯಿಲ್ಲ ಎಂದು ಬಾಂಬೆ ಹೈಕೋರ್ಟ್​ ತೀರ್ಪು ನೀಡುವಾಗ ಉಲ್ಲೇಖಿಸಿದೆ. 

ಈ ಮಹಿಳೆ 1996ರಲ್ಲಿ ಪೊಲೀಸರಿಗೆ ದೂರು ನೀಡಿದ್ದರು. ನನ್ನನ್ನು ಮದುವೆಯಾಗುತ್ತೇನೆ ಎಂದು ನಂಬಿಸಿದ. ಹೀಗೆ ನನ್ನೊಂದಿಗೆ ದೈಹಿಕ ಸಂಪರ್ಕವನ್ನೂ ಬೆಳೆಸಿದ. ಆದರೆ 4 ವರ್ಷಗಳ ನಂತರ ಈಗ ವಿವಾಹವಾಗಲು ಒಪ್ಪುತ್ತಿಲ್ಲ ಎಂದು ಆಕೆ ದೂರಿನಲ್ಲಿ ಹೇಳಿದ್ದಳು. ನಂತರ ಪೊಲೀಸರು ಸೆಕ್ಷನ್​ 376 (ಅತ್ಯಾಚಾರ) ಮತ್ತು ಸೆಕ್ಷನ್​ 417 (ವಂಚನೆ)ರಡಿ ಆರೋಪಿ ವಿರುದ್ಧ ಪ್ರಕರಣ ದಾಖಲಿಸಿದ್ದರು. ಆದರೆ ಆರೋಪಿ ಇದೆಲ್ಲ ಸುಳ್ಳು ಎಂದೇ ಹೇಳುತ್ತಿದ್ದ.  ಮೊದಲು ಈ ಪ್ರಕರಣದ ವಿಚಾರಣೆ ಪಾಲ್ಘಾರ್​ ಹೆಚ್ಚುವರಿ ಸೆಷನ್ಸ್​ ಕೋರ್ಟ್​​ನಲ್ಲಿ ನಡೆಯಿತು. ಅಲ್ಲಿ ಆ ವ್ಯಕ್ತಿಗೆ ಜೈಲು ಶಿಕ್ಷೆ ಮತ್ತು ದಂಡ ವಿಧಿಸಲಾಯಿತು.

ನಂತರ ಪ್ರಕರಣ ಬಾಂಬೆ ಹೈಕೋರ್ಟ್​ ಮೆಟ್ಟಿಲೇರಿತು. ನ್ಯಾಯಮೂರ್ತಿ ಪ್ರಭು ದೇಸಾಯಿ ಇದರ ವಿಚಾರಣೆ ನಡೆಸಿದ್ದಾರೆ.  ಈ ಮಧ್ಯೆ ಮಹಿಳೆಯ ಸಹೋದರಿಯೂ ಕೋರ್ಟ್​ಗೆ ಬಂದು ಸಾಕ್ಷಿ ಹೇಳಿದ್ದಳು. ಇಬ್ಬರ ಮಧ್ಯೆ ಲವ್​ ಅಫೇರ್ ಇತ್ತು ಎಂದು ಹೇಳಿದ್ದರು. ಆದರೆ ಜಡ್ಜ್ ಪ್ರಭು ದೇಸಾಯಿ, ಮಹಿಳೆಯ ಬಳಿ ದಾಖಲೆ ಇದೆ. ಆದರೆ ಆ ಪುರುಷ ಪ್ರಾರಂಭದಿಂದಲೂ ಆಕೆಯನ್ನು ಮದುವೆಯಾಗಬಾರದು ಎಂಬ ಉದ್ದೇಶವನ್ನಿಟ್ಟುಕೊಂಡಿದ್ದ. ಹಾಗಿದ್ದಾಗ್ಯೂ ಲೈಂಗಿಕ ಸಂಪರ್ಕ ಬೆಳೆಸಿದ್ದ ಎಂಬುದಕ್ಕೆ ಅದರಲ್ಲಿ ಪುರಾವೆಗಳೇ ಇಲ್ಲ ಎಂದು ಹೇಳಿದ್ದಾರೆ. ಹಾಗೇ, ಸೆಷನ್ಸ್​ ಕೋರ್ಟ್ ನೀಡಿದ್ದ ತೀರ್ಪನ್ನು ರದ್ದುಗೊಳಿಸಿ, ಆರೋಪಿಯನ್ನು ದೋಷಮುಕ್ತಗೊಳಿಸಿದ್ದಾರೆ.

ಇದನ್ನೂ ಓದಿ: GAIL: ಗೇಲ್​ನಿಂದ ಪ್ರತಿ ಷೇರಿಗೆ ರೂ. 4ರ ಮಧ್ಯಂತರ ಲಾಭಾಂಶ ಘೋಷಣೆ

Follow us on

Related Stories

Most Read Stories

Click on your DTH Provider to Add TV9 Kannada