ಖಾಸಗಿ ಹಣಕಾಸು ಸಂಸ್ಥೆ ಮ್ಯಾನೇಜರೊಬ್ಬರ ಸುಟ್ಟ ದೇಹ ಬೆಂಗಳೂರು ಹೊರವಲಯದಲ್ಲಿ ಅಗ್ನಿಗಾಹುತಿಯಾದ ಕಾರಲ್ಲಿ ಪತ್ತೆ

ಹೆಗ್ಗನಹಳ್ಳಿ ಗ್ರಾಮದ ಹೊರಭಾಗದಲ್ಲಿ ದನ ಮೇಯಿಸುತ್ತಿದ್ದ ಕೆಲ ಜನ ಶನಿವಾರ ಮಧ್ಯಾಹ್ನ ಸುಮಾರು 3.30 ಕ್ಕೆ ನಿರ್ಜನ ಪ್ರದೇಶವೊಂದರಲ್ಲಿ ಹೊತ್ತಿ ಉರಿಯುತ್ತಿದ್ದ ಕಾರನ್ನು ಗಮನಿಸಿದಾಗಲೇ ಪ್ರಕರಣ ಬೆಳಕಿಗೆ ಬಂದಿದೆ.

ಖಾಸಗಿ ಹಣಕಾಸು ಸಂಸ್ಥೆ ಮ್ಯಾನೇಜರೊಬ್ಬರ ಸುಟ್ಟ ದೇಹ ಬೆಂಗಳೂರು ಹೊರವಲಯದಲ್ಲಿ ಅಗ್ನಿಗಾಹುತಿಯಾದ ಕಾರಲ್ಲಿ ಪತ್ತೆ
ಆರಿಫ್ ಬೆಂದುಹೋದ ದೇಹ ಅವರ ಕಾರಲ್ಲಿ ಸಿಕ್ಕಿತು
Follow us
TV9 Web
| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Aug 08, 2022 | 4:35 PM

ಬೆಂಗಳೂರು: ಸುಟ್ಟು ಕರಕಲಾದ (gutted) ಕಾರೊಂದರಲ್ಲಿ ವ್ಯಕ್ತಿಯೊಬ್ಬನ ಬೆಂದುಹೋದ ದೇಹ ಪೊಲೀಸರಿಗೆ ಶನಿವಾರ ಸಿಕ್ಕಿದೆ. ಮೃತ ವ್ಯಕ್ತಿ ಖಾಸಗಿ ಹಣಕಾಸು ಸಂಸ್ಥೆಯೊಂದರಲ್ಲಿ ಮ್ಯಾನೇಜರ್ (manager) ಆಗಿ ಕೆಲಸ ಮಾಡುತ್ತಿದ್ದನೆಂದು ಪೊಲೀಸರು ಮಾಹಿತಿ ನೀಡಿದ್ದು ಬೆಂಗಳೂರಿನ ಹೊರವಲಯದ ದೇವನಹಳ್ಳಿಗೆ ಹತ್ತಿರದ ಹೆಗ್ಗನಹಳ್ಳಿ ಕ್ರಾಸ್ (Hegganhalli Cross) ಬಳಿ ಕಾರು ಮತ್ತು ದೇಹ ಶನಿವಾರ ಸಿಕ್ಕಿವೆ ಎಂದು ತಿಳಿಸಿದ್ದಾರೆ.

ಮೃತ ವ್ಯಕ್ತಿಯನ್ನು ಯಲಹಂಕ ನ್ಯೂ ಟೌನ್ ನಿವಾಸಿ ಆರಿಫ್ ಪಾಶಾ ಎಂದು ಗುರುತಿಸಲಾಗಿದೆ. ಪಾಶಾ ಅವರ ತಂದೆತಾಯಿ ನೀಡಿದ ದೂರಿನ ಮೇರೆಗೆ ಪೊಲೀಸರು ಕೊಲೆ ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ. ಹೆಗ್ಗನಹಳ್ಳಿ ಗ್ರಾಮದ ಹೊರಭಾಗದಲ್ಲಿ ದನ ಮೇಯಿಸುತ್ತಿದ್ದ ಕೆಲ ಜನ ಶನಿವಾರ ಮಧ್ಯಾಹ್ನ ಸುಮಾರು 3.30 ಕ್ಕೆ ನಿರ್ಜನ ಪ್ರದೇಶವೊಂದರಲ್ಲಿ ಹೊತ್ತಿ ಉರಿಯುತ್ತಿದ್ದ ಕಾರನ್ನು ಗಮನಿಸಿದಾಗಲೇ ಪ್ರಕರಣ ಬೆಳಕಿಗೆ ಬಂದಿದೆ.

ಅವರಿಂದ ಮಾಹಿತಿ ಪಡೆದ ಬಳಿಕ ವಿಶ್ವನಾಥಪುರ ಪೊಲೀಸರು ಸ್ಥಳಕ್ಕೆ ಧಾವಿಸಿ ಕಾರಿನೊಳಗೆ ಪುರುಷನ ಸುಟ್ಟುಹೋದ ದೇಹವನ್ನು ಕಂಡಿದ್ದಾರೆ. ಕಾರಿನ ನೋಂದಣಿ ಸಂಖ್ಯೆಯ ಮೂಲಕ ಅದರ ಮತ್ತು ಪಾಶಾ ಗುರುತು ಶನಿವಾರ ತಡರಾತ್ರಿ ಲಭ್ಯವಾಗಿದೆ. ಪಾಶಾ ಪೋಷಕರ ಪೊಲೀಸರಿಗೆ ನೀಡಿರುವ ಮಾಹಿತಿ ಪ್ರಕಾರ ಅವರ ಮಗ ಮತ್ತು ಸೊಸೆಯ ನಡುವೆ ವಿರಸವೇರ್ಪಟ್ಟಿತ್ತು ಮತ್ತು ಕೆಲ ದಿನಗಳಿಂದ ಆಕೆ ತನ್ನ ತವರಿಗೆ ಹೋಗಿ ಅಲ್ಲೇ ವಾಸವಾಗಿದ್ದಾಳೆ.

‘ಪಾಶಾ ಅವರ ತಂದೆ-ತಾಯಿ ಹೇಳುವ ಪ್ರಕಾರ ಯಾರೋ ಅವರ ಮಗನನ್ನು ಕೊಂದು ಸಾಕ್ಷ್ಯವನ್ನು ನಾಶಮಾಡಲು ಅವರ ಕಾರಿನಲ್ಲಿಟ್ಟು ಬೆಂಕಿ ಹಚ್ಚಿದ್ದಾರೆ. ಅಪರಾಧ ನಡೆದ ಸ್ಥಳವನನ್ನು ನಾವು ಪರಿಶೀಲಿಸಿದ್ದೇವೆ ಮತ್ತು ವಿಧಿ ವಿಜ್ಞಾನ ತಜ್ಞರ ಮೂಲಕ ಒಂದಷ್ಟು ಪುರಾವೆಗಳನ್ನು ಕಲೆ ಹಾಕಿದ್ದೇವೆ. ತನಿಖೆ ಜಾರಿಯಲ್ಲಿದೆ,’ ಎಂದು ಪೊಲೀಸರು ತಿಳಿಸಿದ್ದಾರೆ.

ತ್ಯಾಜ್ಯದ ರಾಶಿ: ಭಕ್ತರ ಮೇಲೆ ಸಿಟ್ಟಾದ ವೈದ್ಯನಾಥ ದೈವ
ತ್ಯಾಜ್ಯದ ರಾಶಿ: ಭಕ್ತರ ಮೇಲೆ ಸಿಟ್ಟಾದ ವೈದ್ಯನಾಥ ದೈವ
ನಿನ್ನ ರೌಡಿಸಂ ನನ್ನ ಹತ್ರ ಬೇಡ: ರಜತ್​ಗೆ ಖಡಕ್ ಆವಾಜ್ ಹಾಕಿದ ಚೈತ್ರಾ
ನಿನ್ನ ರೌಡಿಸಂ ನನ್ನ ಹತ್ರ ಬೇಡ: ರಜತ್​ಗೆ ಖಡಕ್ ಆವಾಜ್ ಹಾಕಿದ ಚೈತ್ರಾ
ಐತಿಹಾಸಿಕ ಶತಕ ಸಿಡಿಸಿದ ಮಗನನ್ನು ತಬ್ಬಿ ಕಣ್ಣೀರಿಟ್ಟ ನಿತೀಶ್ ಅಪ್ಪ-ಅಮ್ಮ
ಐತಿಹಾಸಿಕ ಶತಕ ಸಿಡಿಸಿದ ಮಗನನ್ನು ತಬ್ಬಿ ಕಣ್ಣೀರಿಟ್ಟ ನಿತೀಶ್ ಅಪ್ಪ-ಅಮ್ಮ
70 ಅಡಿ ಸೇತುವೆ ಮೇಲಿಂದ ಗಂಗಾ ನದಿಗೆ ಹಾರಿದ ಯುವತಿ; ವಿಡಿಯೋ ಇಲ್ಲಿದೆ
70 ಅಡಿ ಸೇತುವೆ ಮೇಲಿಂದ ಗಂಗಾ ನದಿಗೆ ಹಾರಿದ ಯುವತಿ; ವಿಡಿಯೋ ಇಲ್ಲಿದೆ
ಮೋಸ ಮಾಡಿದವರಿಗೆ ಕರ್ಮವಾಗಿ ಕಾಡಲು ಬಂದ ಸುದೀಪ್
ಮೋಸ ಮಾಡಿದವರಿಗೆ ಕರ್ಮವಾಗಿ ಕಾಡಲು ಬಂದ ಸುದೀಪ್
ಹಿಮಾವೃತ ರಸ್ತೆಯಿಂದ ಜಾರಿ ಪ್ರಪಾತಕ್ಕೆ ಬಿದ್ದ ಟ್ರಕ್
ಹಿಮಾವೃತ ರಸ್ತೆಯಿಂದ ಜಾರಿ ಪ್ರಪಾತಕ್ಕೆ ಬಿದ್ದ ಟ್ರಕ್
ಹಾಸನ ಸರ್ಕಾರಿ ಶಾಲೆಯಲ್ಲಿ ಶಿಕ್ಷಕರ ಕೊರತೆ: ವಿದ್ಯಾರ್ಥಿಯ ವಿಡಿಯೋ ವೈರಲ್
ಹಾಸನ ಸರ್ಕಾರಿ ಶಾಲೆಯಲ್ಲಿ ಶಿಕ್ಷಕರ ಕೊರತೆ: ವಿದ್ಯಾರ್ಥಿಯ ವಿಡಿಯೋ ವೈರಲ್
ಗೋಕರ್ಣ, ಮುರುಡೇಶ್ವರಕ್ಕೆ ಪ್ರವಾಸಿಗರ ದಂಡು: ಹೊನ್ನಾವರದಲ್ಲಿ ಟ್ರಾಫಿಕ್ ಜಾಂ
ಗೋಕರ್ಣ, ಮುರುಡೇಶ್ವರಕ್ಕೆ ಪ್ರವಾಸಿಗರ ದಂಡು: ಹೊನ್ನಾವರದಲ್ಲಿ ಟ್ರಾಫಿಕ್ ಜಾಂ
‘ಡೆವಿಲ್’ ಶೂಟಿಂಗ್ ಆರಂಭದ ಬಗ್ಗೆ ಮಾಹಿತಿ ನೀಡಿದ ದರ್ಶನ್ ಸಹೋದರ ದಿನಕರ್
‘ಡೆವಿಲ್’ ಶೂಟಿಂಗ್ ಆರಂಭದ ಬಗ್ಗೆ ಮಾಹಿತಿ ನೀಡಿದ ದರ್ಶನ್ ಸಹೋದರ ದಿನಕರ್
ಚಿನ್ನ ವಂಚನೆ ಕೇಸ್​ನಲ್ಲಿ ಹೆಸರು: ಡಿಕೆ ಸುರೇಶ್ ಹೇಳಿದ್ದೇನು ನೋಡಿ
ಚಿನ್ನ ವಂಚನೆ ಕೇಸ್​ನಲ್ಲಿ ಹೆಸರು: ಡಿಕೆ ಸುರೇಶ್ ಹೇಳಿದ್ದೇನು ನೋಡಿ