ಬೆಂಗಳೂರು, ಜನವರಿ 04: ಬಸ್ ಪ್ರಯಾಣ ದರದಲ್ಲಿ ಶೇ.15ರಷ್ಟು ಏರಿಕೆ ಮಾಡಿರೋದು ಜನರ ಆಕ್ರೋಶಕ್ಕೆ ಕಾರಣವಾಗಿದೆ. ಮೆಜೆಸ್ಟಿಕ್ನ ಕೆಂಪೇಗೌಡ ಬಸ್ ನಿಲ್ದಾಣದಲ್ಲಿ ಬೆಲೆ ಏರಿಕೆ ಖಂಡಿಸಿ ಸರ್ಕಾರದ ವಿರುದ್ಧ ಬಿಜೆಪಿ (BJP) ನಾಯಕರು ಪ್ರತಿಭಟನೆ ಕೂಡ ಮಾಡಿದ್ದಾರೆ. ಇದೀಗ ಆರ್. ಅಶೋಕ್ ಅವಧಿಯಲ್ಲಿ ಟಿಕೆಟ್ ದರ ಏರಿಕೆ ಪಟ್ಟಿಯನ್ನು ಬಿಡುಗಡೆ ಮಾಡುವ ಮೂಲಕ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಟಾಂಗ್ ಕೊಟ್ಟಿದ್ದಾರೆ.
ಸಾರಿಗೆ ನಿಗಮಗಳ ಶೇ.15ರಷ್ಟು ಬಸ್ ಟಿಕೆಟ್ ದರ ಏರಿಕೆ ಸಂಬಂಧ ಸರ್ಕಾರದ ವಿರುದ್ದ ಬಿಜೆಪಿ ಸಾಕಷ್ಟು ವಿರೋಧ ವ್ಯಕ್ತಪಡಿಸಿದ್ದರು. ಮೆಜೆಸ್ಟಿಕ್ ಬಸ್ ನಿಲ್ದಾಣದಲ್ಲಿ ಪ್ರಯಾಣಿಕರಿಗೆ ಹೂ ನೀಡಿ ಪ್ರತಿಭಟನೆ ಕೂಡ ಮಾಡಿದ್ದರು. ಇದರ ಬೆನ್ನಲ್ಲೇ ಬಿಜೆಪಿ ಸರ್ಕಾರ ಇದ್ದಾಗ ವಿಪಕ್ಷ ನಾಯಕ ಆರ್. ಅಶೋಕ್ ಅವಧಿಯಲ್ಲಿ ಯಾವ್ಯಾವ ವರ್ಷದಲ್ಲಿ ಎಷ್ಟೆಷ್ಟು ದರ ಏರಿಕೆ ಎಂದು ಪಟ್ಟಿ ರಿಲೀಸ್ ಮಾಡಿದೆ.
ದಿನಾಂಕ ಬಸ್ ದರ ಹೆಚ್ಚಳ
ಹೊಸ ವರ್ಷದ ಆರಂಭದಲ್ಲಿ ಬಸ್ ಪ್ರಯಾಣಿಕರಿಗೆ ಬಿಸಿ ಮುಟ್ಟಿಸಿರುವ ಸರ್ಕಾರ, ನಾಲ್ಕು ನಿಗಮಗಳ ಬಸ್ ಪ್ರಯಾಣ ದರ ಏರಿಕೆ ಮಾಡುವ ಮೂಲಕ ಜನರ ಜೇಬಿಗೆ ಕತ್ತರಿ ಹಾಕೋಕೆ ಹೊರಟಿದೆ. ಶಕ್ತಿ ಯೋಜನೆ ಮೂಲಕ ಮಹಿಳೆಯರಿಗೆ ಫ್ರೀ ಬಸ್ ಪ್ರಯಾಣದ ಭಾಗ್ಯ ನೀಡಿದ್ದ ಸರ್ಕಾರ, ಇದೀಗ ಪರ-ವಿರೋಧದ ಮಧ್ಯೆ ಟಿಕೆಟ್ ದರವನ್ನ ಶೇಕಡ 15 ರಷ್ಟು ಏರಿಕೆ ಮಾಡಿ ಆದೇಶ ಹೊರಡಿಸಿದೆ. KSRTC, BMTC ಸೇರಿದಂತೆ ನಾಲ್ಕು ನಿಗಮಗಳ ಟಿಕೆಟ್ ದರ ಏರಿಕೆಯಾಗಿದ್ದು, ಇಂದು ಮಧ್ಯರಾತ್ರಿಯಿಂದಲೇ ನೂತನ ದರ ಜಾರಿ ಮಾಡೋಕೆ ಸಾರಿಗೆ ಇಲಾಖೆ ಸಜ್ಜಾಗಿದೆ.
ಬಸ್ ದರಯೇರಿಕೆಯ ನಿರ್ಧಾರದ ವಿರುದ್ಧ ವಿಪಕ್ಷಗಳು, ಸಾರ್ವಜನಿಕರಿಂದ ವಿರೋಧ ಕೇಳಿಬಂದಿದ್ರೂ ಕೂಡ ಇದೀಗ ಸರ್ಕಾರ ಕೊನೆಗೂ ಬಸ್ ಪ್ರಯಾಣ ದರಕ್ಕೆ ಸರ್ಜರಿ ಮಾಡಿಬಿಟ್ಟಿದೆ. ಸದ್ಯ ಒಂದೆಡೆ ಮಹಿಳೆಯರಿಗೆ ಫ್ರೀ ಬಸ್ ಅಂತಾ ಖುಷಿಪಟ್ಟಿದ್ದ ರಾಜ್ಯದ ಜನರು ಇದೀಗ ಹೊಸ ಟಿಕೆಟ್ ದರ ಕೊಟ್ಟು ಸಾರಿಗೆ ಬಸ್ ಹತ್ತುವ ಸ್ಥಿತಿ ಎದುರಾಗಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 9:23 pm, Sat, 4 January 25