AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕ್ಯಾಬ್​ನಲ್ಲಿ ಗೆಳೆಯನ ಜತೆ ಮಹಿಳೆ ‘ಪರ್ಸನಲ್’ ಮಾತು! ಮಾತಾಡೋದು ಕದ್ದು ಕೇಳಿ ಡ್ರೈವರ್ ಬ್ಲ್ಯಾಕ್ ಮೇಲ್

ನೀವು ದಿನಾ ಆಟೋ, ಕ್ಯಾಬ್​ನಲ್ಲೇ ಓಡಾಡುತ್ತೀರಾ? ಕ್ಯಾಬ್​ನಲ್ಲೇ ಕುಳಿತು ತಮ್ಮ ಪರ್ಸನಲ್ ವಿಷಯಗಳನ್ನ ಮಾತನಾಡುತ್ತೀರಾ? ಹಾಗಾದ್ರೆ ನೀವು ಕೊಂಚ ಹುಷಾರಾಗಿದ್ರೆ ಒಳ್ಳೆಯದು. ಇಲ್ಲ ಅಂದ್ರೆ ನಿಮ್ ನೆಮ್ಮದಿ ಹಾಳಾಗುವ ಜೊತೆ ಕಿಡಿಗೇಡಿಗಳು ನಿಮ್ಮನ್ನ ದೋಚುವುದು ಗ್ಯಾರಂಟಿ. ಯಾಕೆ ಅಂತ ಈ ಸ್ಟೋರಿ ಓದಿ.

ಕ್ಯಾಬ್​ನಲ್ಲಿ ಗೆಳೆಯನ ಜತೆ ಮಹಿಳೆ ‘ಪರ್ಸನಲ್’ ಮಾತು! ಮಾತಾಡೋದು ಕದ್ದು ಕೇಳಿ ಡ್ರೈವರ್ ಬ್ಲ್ಯಾಕ್ ಮೇಲ್
ಸಾಂದರ್ಭಿಕ ಚಿತ್ರ
Shivaprasad B
| Updated By: ರಮೇಶ್ ಬಿ. ಜವಳಗೇರಾ|

Updated on: Aug 02, 2023 | 7:33 AM

Share

ಬೆಂಗಳೂರು, (ಆಗಸ್ಟ್ 02): ಮೊಬೈಲ್.(Mobile). ಇದರಿಂದ ಎಷ್ಟು ಅನುಕೂಲ ಇದೆಯೋ ಅಷ್ಟೇ ಅನಾನುಕೂಲ, ಆಪತ್ತು ಇದ್ದೇ ಇದೆ. ಮೊಬೈಲ್​ನಲ್ಲಿ ಯಾರೊಂದಿಗೋ ಮಾತನಾಡುವ ನಮ್ಮ ಪರ್ಸನಲ್ ವಿಷಯಗಳು ಸಂಕಷ್ಟ ತಂದೊಡ್ಡುತ್ತಿವೆ. ನೆಮ್ಮದಿ ಹಾಳು ಮಾಡುತ್ತಿದೆ. ಹೌದು.. ಬೆಂಗಳೂರಿನಲೊಬ್ಬ(Bengaluru) ಕ್ಯಾಬ್ ಡ್ರೈವರ್,  ಮಹಿಳೆಯ(Woman) ಮಾತನ್ನ ಕದ್ದು ಕೇಳಿಸಿಕೊಂಡು ಸುಲಿಗೆ ಮಾಡಿರುವ ಪ್ರಕರಣ ಬೆಳಕಿಗೆ ಬಂದಿದೆ. ಬೆಂಗಳೂರಿನ ಹೆಸರುಘಟ್ಟ ನಿವಾಸಿಯಾಗಿರುವ ಕಿರಣ್ ಕುಮಾರ್, ಕ್ಯಾಬ್ ಓಡಿಸಿಕೊಂಡು ಜೀವನ ನಡೆಸುತ್ತಿದ್ದ. ಆದ್ರೆ, ಕ್ಯಾಬ್(Cab)​ ಬುಕ್ ಮಾಡಿದ್ದ ಮಹಿಳೆಯ ಪರ್ಸನಲ್​ ವಿಷಯಗಳನ್ನು ಕಿವಿಗೆ ಹಾಕಿಕೊಂಡು ಹಣಕ್ಕಾಗಿ ಪೀಕಿದ್ದಾನೆ. ಆದ್ರೆ, ಇದೀಗ ಕಿರಣ್ ಪೊಲೀಸ್ ಅತಿಥಿಯಾಗಿದ್ದಾನೆ.

ಇದನ್ನೂ ಓದಿ: ಇಂಗ್ಲೆಂಡ್ ಟೆಕ್ಕಿಗೆ ಕೋಟಿ ರೂ. ವಂಚನೆ ಪ್ರಕರಣ: ಆರೋಪಿ ಖಾತೆಯಲ್ಲಿ 84 ಲಕ್ಷ ರೂ. ಫ್ರೀಜ್ ಮಾಡಿದ ಪೊಲೀಸರು

ಕಳೆದ ನವೆಂಬರ್ 22ರಂದು ಮಹಿಳೆಯೊಬ್ಬರು ಇಂದಿರಾನಗರದಿಂದ ಬಾಣಸವಾಡಿವರೆಗೆ ಕ್ಯಾಬ್ ಬುಕ್ ಮಾಡಿದ್ದರು. ಈ ವೇಳೆ ಇದೇ ಕಿರಣ್​, ​ ಆ ಮಹಿಳೆಯನ್ನ ಪಿಕಪ್ ಮಾಡಿದ್ದ. ನಂತರ ಮಹಿಳೆ ಕ್ಯಾಬ್​ನಲ್ಲಿ ಕುಳಿತು ತಮ್ಮ ಗೆಳೆಯನ ಜೊತೆ ಫೋನ್​ನಲ್ಲಿ ವೈಯಕ್ತಿಕ ವಿಚಾರಗಳನ್ನ ಮಾತಾಡಿದ್ದಾರೆ. ಆದ್ರೆ, ಇತ್ತ ತನ್ನ ಪಾಡಿಗೆ ತಾನು ಕ್ಯಾಬ್ ಓಡಿಸುವುದು ಬಿಟ್ಟು ಕಿರಣ್ ಮಹಿಳೆ ಮಾತನಾಡಿದ್ದನ್ನು ಕಿವಿಗೆ ಹಾಕಿಕೊಂಡಿದ್ದಾನೆ.

ವಿಪರ್ಯಾಸ ಎಂಬಂತೆ ನವೆಂಬರ್ 22ರ ಬಳಿಕ ಮತ್ತೆ ಇವನ ಕ್ಯಾಬ್​ನಲ್ಲೇ ಆ ಮಹಿಳೆ 3 ಬಾರಿ ಓಡಾಡಿದ್ದಾರೆ. ಈ ವೇಳೆ ಕಿರಣ್ ಮಹಿಳೆಯನ್ನ ಪರಿಚಯ ಮಾಡಿಕೊಂಡಿದ್ದಾನೆ. ಕೆಲ ದಿನಗಳ ಬಳಿಕ ಆಕೆಗೆ ನಿಮ್ಮ ಕ್ಲಾಸ್​​ಮೇಟ್ ಅಂತ ಮೆಸೇಜ್ ಮಾಡಿದ್ದಾನೆ. ಬಾಲ್ಯ ಸ್ನೇಹಿತ ಎಂದು ಹತ್ತಿರವಾಗಿದ್ದಾನೆ. ಬಳಿಕ ತುಂಬಾ ಕಷ್ಟದಲ್ಲಿದ್ದೇನೆ ಸಹಾಯ ಮಾಡು ಎಂದು ಕೇಳಿದ್ದಾನೆ. ಕ್ಲಾಸ್​ಮೇಟ್ ಎಂದು ಕಷ್ಟಕ್ಕೆ ಮರುಗಿದ ಮಹಿಳೆ ಸುಮಾರು 22 ಲಕ್ಷ ರೂ. ಹಣ ನೀಡಿದ್ದಾಳೆ. ಕೆಲ ದಿನಗಳ ಬಳಿಕ ಹಣ ಪಡೆದಿದ್ದು ಫ್ರೆಂಡ್ ಅಲ್ಲ ಕ್ಯಾಬ್ ಡ್ರೈವರ್ ಎನ್ನುವುದು ಬಯಲಾಗಿದೆ.

ಇದರಿಂದ ಕೆರಳಿದ ಮಹಿಳೆ ಪ್ರಶ್ನೆ ಮಾಡಿದ್ದಾಳೆ. ಈ ವೇಳೆ ಕಿರಣ್, ಮಹಿಳೆಯನ್ನ ಬ್ಲ್ಯಾಕ್ ಮೇಲ್ ಮಾಡುವುದಕ್ಕೆ ಶುರು ಮಾಡಿದ್ದಾನೆ. ನಿನ್ನ ಹಾಗೂ ಗೆಳೆಯನ ವಿಷಯವನ್ನ ನಿನ್ನ ಗಂಡನಿಗೆ ಹೇಳುತ್ತೇನೆ. ನಿನ್ನ ಸಂಸಾರ ಹಾಳು ಮಾಡುತ್ತೇನೆ ಎಂದು ಬೆದರಿಸಿದ್ದಾನೆ. ವಿಷಯ ಯಾರಿಗೂ ಹೇಳಬಾರದು ಅಂದ್ರೆ ಹಣ ಕೊಡು ಅಂತ ಪೀಡಿಸಿದ್ದಾನೆ. ಇಷ್ಟಕ್ಕೆ ಬೆದರಿದ ಮಹಿಳೆ 750 ಗ್ರಾಂ ಚಿನ್ನಾಭರಣ ನೀಡಿದ್ದಾಳೆ. ಒಡೆವೆಯನ್ನೆಲ್ಲ ಅಡವಿಟ್ಟ ಕ್ಯಾಬ್ ಚಾಲಕ ಮೋಜು ಮಸ್ತಿ ಮಾಡುತ್ತ ಎಂಜಾಯ್ ಮಾಡಿದ್ದಾನೆ.

ಕೊನೆಗೆ ಕಿರಣ್​ನ ಕಾಟಕ್ಕೆ ಬೇಸತ್ತ ಮಹಿಳೆ ರಾಮಮೂರ್ತಿನಗರ ಪೊಲೀಸ್ ಠಾಣೆಯ ಮೆಟ್ಟಿಲೇರಿದ್ದು ದೂರು ದಾಖಲಿಸಿದ್ದಾಳೆ.. ಕೂಡಲೇ ಅಲರ್ಟ್ ಆದ ಪೊಲೀಸ್ರು, ಉಬರ್ ಕ್ಯಾಬ್ ಚಾಲಕ ಕಿರಣ್ ಕುಮಾರ್​ನನ್ನ ಬಂಧಿಸಿ, ಗಿರವಿ ಇಟ್ಟಿದ್ದ ಚಿನ್ನಾಭರಣವನ್ನೂ ವಶಕ್ಕೆ ಪಡೆದಿದ್ದಾರೆ.

ಏನೇ ಹೇಳಿ ಪರಿಚಯ ಇಲ್ಲದವರ ಮುಂದೆ ವೈಯಕ್ತಿಕ ವಿಷಯಗಳನ್ನ ಮಾತಾಡುವಾಗ ಕೊಂಚ ಎಚ್ಚರಿಕೆಯಿಂದ ಇದ್ರೆ ಒಳ್ಳೆಯದು.

ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ