Crime News: ಬೆಂಗಳೂರಿನಲ್ಲಿ ಕಳವಾದ ಕಾರು ಫಾಸ್ಟ್​ಟ್ಯಾಗ್ ಸಹಾಯದಿಂದ ಹುಬ್ಬಳ್ಳಿಯಲ್ಲಿ ಪತ್ತೆ!

| Updated By: ganapathi bhat

Updated on: Jan 04, 2022 | 3:20 PM

ಕಾರು ಪತ್ತೆಯಾದ್ರು ಕಳ್ಳನ ಸುಳಿವು ಮಾತ್ರ ಇನ್ನು ಪತ್ತೆಯಾಗಿಲ್ಲ. ಸಿಸಿಟಿವಿ ದೃಶ್ಯ ಆಧರಿಸಿ ಕಳ್ಳನ ಪತ್ತೆಗಾಗಿ ಶೋಧ ನಡೆಸಲಾಗುತ್ತಿದೆ. ಹೆಚ್ಎಸ್​ಆರ್ ಲೇಔಟ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.

Crime News: ಬೆಂಗಳೂರಿನಲ್ಲಿ ಕಳವಾದ ಕಾರು ಫಾಸ್ಟ್​ಟ್ಯಾಗ್ ಸಹಾಯದಿಂದ ಹುಬ್ಬಳ್ಳಿಯಲ್ಲಿ ಪತ್ತೆ!
ಪ್ರಾತಿನಿಧಿಕ ಚಿತ್ರ
Follow us on

ಬೆಂಗಳೂರು: ಕಳವಾದ ಕಾರ್ ಒಂದು ಫಾಸ್ಟ್ ಟ್ಯಾಗ್ ಸಹಾಯದಿಂದ ಪತ್ತೆಯಾಗಿದೆ. ಇಲ್ಲಿನ ಹೆಚ್ಎಸ್ಆರ್ ಲೇಔಟ್​​ನಲ್ಲಿ ಕಳವಾದ ಕಾರು ಹುಬ್ಬಳ್ಳಿ ರೈಲ್ವೆ ನಿಲ್ದಾಣದಲ್ಲಿ ಪತ್ತೆಯಾಗಿದೆ. ಹೆಚ್ಎಸ್​ಆರ್ ಲೇಔಟ್​ನ ಉದ್ಯಮಿ ಶ್ರೀನಿವಾಸರೆಡ್ಡಿ ಎಂಬವರ ಫಾರ್ಚೂನರ್ ಕಾರು ಕಳುವಾಗಿತ್ತು. ಡಿಸೆಂಬರ್ 28 ರಂದು ಹೆಚ್ಎಸ್ಆರ್ ಲೇಔಟ್​ನಲ್ಲಿ ಕಿಟಕಿ ಗ್ಲಾಸ್ ಒಡೆದು ಕಾರು ಕಳವು ಮಾಡಲಾಗಿತ್ತು. ಬೆಂಗಳೂರಲ್ಲಿ ಕದ್ದ ಕಾರು ಇದೀಗ ಹುಬ್ಬಳ್ಳಿ ರೈಲ್ವೆ ನಿಲ್ದಾಣದಲ್ಲಿ ಪತ್ತೆ ಆಗಿದೆ.

ಟೋಲ್ ಪಾಸ್ ಆಗುವ ವೇಳೆ ಕಾರಿನ ಮಾಲೀಕನಿಗೆ ಬಂದ ಮೆಸೇಜ್ ನಿಂದ ಕಾರು ಪತ್ತೆ ಆಗಿದೆ. ಸದ್ಯ ಪೊಲೀಸರು ಹುಬ್ಬಳ್ಳಿಯಿಂದ ಕಾರು ತಂದು ಮಾಲೀಕರಿಗೆ ಹಿಂದುರುಗಿಸಿದ್ದಾರೆ. ಕಾರು ಪತ್ತೆಯಾದ್ರು ಕಳ್ಳನ ಸುಳಿವು ಮಾತ್ರ ಇನ್ನು ಪತ್ತೆಯಾಗಿಲ್ಲ. ಸಿಸಿಟಿವಿ ದೃಶ್ಯ ಆಧರಿಸಿ ಕಳ್ಳನ ಪತ್ತೆಗಾಗಿ ಶೋಧ ನಡೆಸಲಾಗುತ್ತಿದೆ. ಹೆಚ್ಎಸ್​ಆರ್ ಲೇಔಟ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.

ಬಾಗಲಕೋಟೆ: ಮೂರು ಜನ ಮೊಬೈಲ್ ಕಳ್ಳರ ಬಂಧನ
ಇಲ್ಲಿನ ಮುಧೋಳ ಪೊಲೀಸರ ಕಾರ್ಯಾಚರಣೆಯಲ್ಲಿ ಮೂರು ಜನ ಮೊಬೈಲ್ ಕಳ್ಳರ ಬಂಧನ ಮಾಡಲಾಗಿದೆ. ಮುಧೋಳದ ಬಸ್ ನಿಲ್ದಾಣದ ಬಳಿ ಮೂವರು ಆರೋಪಿಗಳನ್ನು ಮುಧೋಳ ಪೊಲೀಸರು ಬಂಧಿಸಿದ್ದಾರೆ. ಬಂಧಿತರಿಂದ 85 ಸಾವಿರ ಮೌಲ್ಯದ 8 ಮೊಬೈಲ್ ವಶಕ್ಕೆ ಪಡೆಯಲಾಗಿದೆ. ಹಾಗೂ ಕಳ್ಳತನಕ್ಕೆ ಬಳಸುತ್ತಿದ್ದ ಅಂದಾಜು ಎರಡು ಲಕ್ಷ ಮೌಲದ್ಯ ಕಾರು ವಶಕ್ಕೆ ಪಡೆಯಲಾಗಿದೆ. ಒಟ್ಟು ಎರಡು ಲಕ್ಷ ಎಂಭತ್ತೈದು ಸಾವಿರ ಮೌಲ್ಯದ ವಸ್ತುಗಳು ವಶಕ್ಕೆ ಪಡೆಯಲಾಗಿದೆ.

ಬಂಧಿತರು ಶಿವಮೊಗ್ಗ‌ ಜಿಲ್ಲೆಯ ಭದ್ರಾವತಿ ಮೂಲದವರು ಎಂದು ತಿಳಿದುಬಂದಿದೆ. ವೆಂಕಟೇಶ ವಡ್ಡರ್ (40), ಶ್ರೀಕಾಂತ ಸಣ್ಣ ತಿಮ್ಮಪ್ಪ (31), ದರ್ಶನ ಗುಜ್ಜರ (24) ಬಂಧಿತ ಆರೋಪಿಗಳು. ಮುಧೋಳ ಸಿಪಿಐ ಹೆಚ್.ಆರ್. ಪಾಟೀಲ್, ಅಪರಾಧ ವಿಭಾಗದ ಪಿ.ಎಸ್.ಐ ಕೆ.ಬಿ. ಮಾಂಗ ಹಾಗೂ ಪಿ.ಎಸ್.ಐ ದಿನೇಶ ಜವಳೆಕರ ನೇತೃತ್ವದ ತಂಡ ದಿಂದ ಕಾರ್ಯಾಚರಣೆ ನಡೆಸಲಾಗಿದೆ. ಮುಧೋಳ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.

ದಾವಣಗೆರೆ: ಹೊಲದಲ್ಲಿ ಮಹಿಳೆ ಮೇಲೆ ಯುವಕರಿಬ್ಬರಿಂದ ಅತ್ಯಾಚಾರ
ಹೊಲದಲ್ಲಿ ಮಹಿಳೆ ಮೇಲೆ ಯುವಕರಿಬ್ಬರಿಂದ ಅತ್ಯಾಚಾರ ಮಾಡಿದ ದುರ್ಘಟನೆ ದಾವಣಗೆರೆ ಗ್ರಾಮಾಂತರ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಅಮಲು ಬರಿಸುವ ಪದಾರ್ಥ ನೀಡಿ ಅತ್ಯಾಚಾರ ಮಾಡಲಾಗಿದೆ ಎಂಬ ಆರೋಪ ಕೇಳಿಬಂದಿದೆ. ಘಟನೆಯ ಬಳಿಕ ಆರೋಪಿಗಳು ತಲೆಮರೆಸಿಕೊಂಡಿದ್ದಾರೆ. ಅಸ್ವಸ್ಥ ಮಹಿಳೆಗೆ ದಾವಣಗೆರೆ ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ದಾವಣಗೆರೆ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.

ಚಿಕ್ಕಮಗಳೂರು: ಕಾಲೇಜಿನಲ್ಲಿ ಕೇಸರಿ ಶಲ್ಯ-ಸ್ಕಾರ್ಫ್ ವಿವಾದ; ಧರಣಿ ನಿರತ ವಿದ್ಯಾರ್ಥಿಗಳ ಮನವೊಲಿಸಿದ ಪ್ರಾಂಶುಪಾಲರು
ಕಾಲೇಜಿನಲ್ಲಿ ಕೇಸರಿ ಶಲ್ಯ- ಸ್ಕಾರ್ಫ್ ವಿವಾದ ಪ್ರಕರಣಕ್ಕೆ ಸಂಬಂಧಿಸಿ ಕೇಸರಿ ಶಾಲು ಧರಿಸಿ ಕಾಲೇಜಿನಲ್ಲಿ ಪ್ರತಿಭಟನೆ ನಡೆಸಲಾಗಿತ್ತು. ಘಟನೆಗೆ ಸಂಬಂಧಿಸಿ ಪ್ರಾಂಶುಪಾಲರು ಧರಣಿ ನಿರತ ವಿದ್ಯಾರ್ಥಿಗಳ ಮನವೊಲಿಸಿದ್ದಾರೆ. ಚಿಕ್ಕಮಗಳೂರು ಜಿಲ್ಲೆ ಕೊಪ್ಪ ತಾಲೂಕಿನ ಬಾಳಗಡಿ ಗ್ರಾಮದ ಪ್ರಥಮ ದರ್ಜೆ ಕಾಲೇಜಿನಲ್ಲಿ ಪ್ರತಿಭಟನೆ ನಡೆಸಲಾಗಿತ್ತು. ಈ ಸಂಬಂಧ ಜನವರಿ 10 ರಂದು ಪೋಷಕರ ಸಭೆ ನಡೆಸುವ ಭರವಸೆ ನೀಡಲಾಗಿದೆ. ಕಾಲೇಜಿಗೆ ರಜೆ ನೀಡಿ ಪೋಷಕರ ಸಭೆ ನಡೆಸಲು ನಿರ್ಧಾರ ಕೈಗೊಳ್ಳಲಾಗಿದೆ.

ಇದನ್ನೂ ಓದಿ: Crime News: ಹಿಟಾಚಿ ಹರಿದು ಮಗು ಮೃತ್ಯು, ಮನೆಗೆಲಸದ ಯುವತಿ ಅನುಮಾನಾಸ್ಪದ ಸಾವು, ಮೂವರು ದರೋಡೆಕೋರರ ಬಂಧನ

ಇದನ್ನೂ ಓದಿ: Crime News: ಪ್ರಿಯಕರನೊಂದಿಗೆ ಸೇರಿ ಅತ್ತೆ-ಮಾವನನ್ನೇ ಕೊಂದು, ಸುಟ್ಟು ಹಾಕಿದ ಸೊಸೆ

Published On - 3:20 pm, Tue, 4 January 22