PFI ಕಚೇರಿ ಮೇಲೆ ದಾಳಿ ಖಂಡಿಸಿ ಪ್ರತಿಭಟನೆ ಮಾಡಿದ 51 ಜನರ ವಿರುದ್ಧ ಕೇಸ್: 14 ಮುಖಂಡರನ್ನು ಬಂಧಿಸಿ ವಿಚಾರಣೆ

| Updated By: ಆಯೇಷಾ ಬಾನು

Updated on: Sep 24, 2022 | 1:41 PM

PFI ಕಚೇರಿಗಳ ಮೇಲೆ ದಾಳಿ ಖಂಡಿಸಿ ಪ್ರತಿಭಟನೆ ಮಾಡಿದ್ದವರ ವಿರುದ್ಧ ಕೇಸ್ ದಾಖಲಾಗಿದೆ. ಹುಬ್ಬಳ್ಳಿ ಕಮರಿಪೇಟೆ ಠಾಣೆ ಪಿಎಸ್​ಐ ದೂರಿನನ್ವಯ 51 ಜನರ ವಿರುದ್ಧ ಕೇಸ್ ದಾಖಲಾಗಿದೆ.

PFI ಕಚೇರಿ ಮೇಲೆ ದಾಳಿ ಖಂಡಿಸಿ ಪ್ರತಿಭಟನೆ ಮಾಡಿದ 51 ಜನರ ವಿರುದ್ಧ ಕೇಸ್: 14 ಮುಖಂಡರನ್ನು ಬಂಧಿಸಿ ವಿಚಾರಣೆ
ಪಿಎಫ್​ಐ ಸಂಘಟನೆಯ ಪ್ರತಿಭಟನೆ (ಸಂಗ್ರಹ ಚಿತ್ರ)
Follow us on

ಬೆಂಗಳೂರು: ರಾಷ್ಟ್ರೀಯ ತನಿಖಾ(NIA) ತಂಡ ದೇಶದ ಇತಿಹಾಸದಲ್ಲೇ ಕಂಡು ಕೇಳರಿಯದ ರೀತಿಯಲ್ಲಿ ‘ಆಪರೇಷನ್​ ಆಕ್ಟೋಪಸ್​’ ಸೀಕ್ರೆಟ್​ ಕೋಡ್​ನಲ್ಲಿ ಪಾಪುಲರ್ ಫ್ರಂಟ್ ಆಫ್ ಇಂಡಿಯಾ (ಪಿಎಫ್​ಐ) ಮೇಲೆ ದಾಳಿ ಮಾಡಿದೆ. ಹೊಂಚು ಹಾಕಿ ಸಂಚು ರೂಪಿಸ್ತಿದ್ದವರು ಕೇಂದ್ರ ಸರ್ಕಾರದ ಮಾಸ್ಟರ್ ಸ್ಟ್ರೋಕ್​ಗೆ ಪತರಗುಟ್ಟುತ್ತಿದ್ದಾರೆ. ಪಿಎಫ್​ಐ ನಾಯಕರ ಜನ್ಮ ಜಾಲಾಡ್ತಿರುವ ಎನ್​ಐಎ ಸ್ಫೋಟಕ ಮಾಹಿತಿಯನ್ನೇ ಕಲೆ ಹಾಕಿದೆ.

15 ರಾಜ್ಯಗಳಲ್ಲಿ ಏಕಕಾಲದಲ್ಲಿ ದಾಳಿ ಮಾಡಿದ್ದ ಎನ್‌ಐಎ, PFI ವಿರುದ್ಧದ ಇದುವರೆಗಿನ ಅತೀ ದೊಡ್ಡ ದಾಳಿ ಇದಾಗಿದೆ. ಸುಮಾರು 106 ಪಿಎಫ್​ಐ ಮುಖಂಡರನ್ನ ಬಂಧಿಸಲಾಗಿದೆ. ಇನ್ನು PFI ಕಚೇರಿಗಳ ಮೇಲೆ ದಾಳಿ ಖಂಡಿಸಿ ಪ್ರತಿಭಟನೆ ಮಾಡಿದ್ದವರ ವಿರುದ್ಧ ಕೇಸ್ ದಾಖಲಾಗಿದೆ. ಹುಬ್ಬಳ್ಳಿ ಕಮರಿಪೇಟೆ ಠಾಣೆ ಪಿಎಸ್​ಐ ದೂರಿನನ್ವಯ 51 ಜನರ ವಿರುದ್ಧ ಕೇಸ್ ದಾಖಲಾಗಿದೆ. 2 ದಿನಗಳ ಹಿಂದೆ ಪಿಎಫ್​ಐ ಕಾರ್ಯಕರ್ತರು PFI ಧ್ವಜ ಹಿಡಿದು ಕೌಲ್‌ಪೇಟೆ ಬಳಿ ಪ್ರತಿಭಟನೆ ಮಾಡಿದ್ರು. ಅನುಮತಿ ಪಡೆಯದೆ ಪ್ರತಿಭಟನೆ ಹಿನ್ನೆಲೆಹುಬ್ಬಳ್ಳಿಯ ಕಮರಿಪೇಟೆ ಠಾಣೆಯಲ್ಲಿ ಸೆಕ್ಷನ್​ 143, 145, 341,149 ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಇದನ್ನೂ ಓದಿ: Trending : 5 ವರ್ಷಗಳ ಹಿಂದೆ ನಾಪತ್ತೆಯಾದ ಈತನ ನೋಸ್​ರಿಂಗ್ ಶ್ವಾಸಕೋಶದಲ್ಲಿ ಪತ್ತೆ

ಬೆಂಗಳೂರು ಪೊಲೀಸರಿಂದ ಪಿಎಫ್​ಐ ವಿರುದ್ಧ ತನಿಖೆ

ಇನ್ನು ಮತ್ತೊಂದು ಕಡೆ ಕೆ.ಜಿ. ಹಳ್ಳಿ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಪ್ರಕರಣಕ್ಕೆ ಪೂರ್ವ ವಿಭಾಗ ಹಾಗೂ ಸಿಸಿಬಿ ಪೊಲೀಸರು ಜಂಟಿ ಕಾರ್ಯಚರಣೆ ನಡೆಸಿದ್ದು 19 ಜನರ ವಿರುದ್ಧ ಪ್ರಕರಣ ದಾಖಲು ಮಾಡಿದ್ದಾರೆ. 19 ಆರೋಪಿಗಳ ಪೈಕಿ ಇದುವರೆಗೂ 15 ಜನರ ಬಂಧನ ವಾಗಿದೆ. ಪ್ರಕರಣದ ತನಿಖೆಯಲ್ಲಿ ಮಹತ್ವದ ವಿಚಾರಗಳು ಬೆಳಕಿಗೆ ಬಂದಿವೆ.

ಅಷ್ಟೂ ಜನ ಆರೋಪಿಗಳು ಪಿಎಫ್ ಐ ಕಚೇರಿಗಳಿಗೆ ಹಾಗೂ ಪಿಎಫ್ ಐ ಹಿರಿಯ ನಾಯಕರುಗಳಿಗೆ ನೇರ ಲಿಂಕ್ ಇರುವುದು ಪತ್ತೆಯಾಗಿದೆ. ಕಚೇರಿಯಲ್ಲಿ ಕೆಲಸ ಮಾಡುವವರು ಕರ್ನಾಟಕದಾದ್ಯಂತ ನೆಟ್ ವರ್ಕ್ ಹೊಂದಿರೋದು ಪತ್ತೆಯಾಗಿದೆ. ಬೃಹತ್ ಪ್ರಮಾಣದಲ್ಲಿ ಮುಸ್ಲೀಂ ಯುವಕರನ್ನ ಸೆಳೆದು ಸಮಾಜ ಘಾತುಕ ಚಟುವಟಿಕೆಗಳಿಗೆ ಪ್ರಚೋದನೆ ಮಾಡಿ ಸಮಾಜದಲ್ಲಿ ಧರ್ಮ ಧರ್ಮಗಳ ನಡುವೆ ಗಲಭೆ ಸೃಷ್ಠಿಸಲು ಯತ್ನಿಸಿರುವುದು ಬಹಿರಂಗವಾಗಿದೆ. ದೇಶದ ಒಳಗೆ ಕ್ರೂರ ಕೃತ್ಯಗಳನ್ನು ನಡೆಸುವುದು, ದೇಶದ ವಿರುದ್ಧ ಸಮರ ಸಾರುವುದು. ಅನ್ಲೈನ್ ನಲ್ಲಿ ಹಾಗೂ ನೇರವಾಗಿ ಪ್ರಚೋದನೆ ನೀಡುವುದು. ಪ್ರಚೋದನಕಾರಿ ವಿಡಿಯೋ ಮಾಡುವುದು.

ವಿವಿಧ ರೀತಿಯಲ್ಲಿ ಯುವಸಮುದಾಯವನ್ನ ದೇಶದ ವಿರುದ್ಧ ಎತ್ತಿ ಕಟ್ಟಿ ದುಷ್ಕ್ರತ್ಯಗಳನ್ನ ಎಸಗುವುದು. ಪಿಎಫ್ ಐ ರಾಜ್ಯದ ಹಲವೆಡೆ ಟ್ರೈನಿಂಗ್ ಕ್ಯಾಂಪ್ ಗಳನ್ನ ಆಯೋಜನೆ ಮಾಡುವುದು. ಟ್ರೈನಿಂಗ್ ಕ್ಯಾಂಪ್ ನಲ್ಲಿ ಮಾರಕಾಸ್ತ್ರಗಳನ್ನ ಬಳಸುವ ಬಗ್ಗೆ ತರಬೇತಿ. ನಂತರ ಹಿಂದೂ ಧರ್ಮದಲ್ಲಿ ಗುರುತಿಸಿ ಕೊಂಡಿರುವ ಲೀಡರ್ ಗಳನ್ನು ಟಾರ್ಗೆಟ್ ಮಾಡಿ ಹತ್ಯೆ ಮಾಡುವುದು. ಈ ಮೂಲಕ ಭಾರತದಲ್ಲಿ ಅಶಾಂತಿ ಹಾಗೂ ಭಯೋತ್ಪಾದನೆ ರೀತಿಯಲ್ಲಿ ಭೀತಿ ಸೃಷ್ಠಿ ಮಾಡುವುದು. ಹೀಗೆ ಅನೇಕ ಕೃತ್ಯಗಳಿಗೆ ಟ್ರೈನಿಂಗ್ ನೀಡಲಾಗುತ್ತಿತ್ತು ಎಂಬ ಬಗ್ಗೆ ಮಾಹಿತಿ ಸಿಕ್ಕಿದೆ. ಇನ್ನು ಕೆಲ ರಾಜಕಾರಣಿಗಳ ಮೇಲೆ ಅಟ್ಯಾಕ್ ಮಾಡಲು ಸಹ ಟ್ರೈನಿಂಗ್ ನೀಡಲಾಗುತ್ತಿತ್ತು. ಇದನ್ನೂ ಓದಿ: Viral Video : ‘ನಮ್ಮ ಗ್ರಾಮಭಾರತದ ಅವಸ್ಥೆ’ ವಿದ್ಯುತ್ ಬದಲಾಗಿ ಎತ್ತುಗಳ ಬಳಕೆ

ಎನ್​ಐಎ ದಾಳಿಯ ಹಿಂದೆ ಕರಾಟೆ ಕ್ಲಾಸ್

ಕರಾಟೆ ಕ್ಲಾಸ್ ನಲ್ಲಿ ಪಿಎಫ್ ಐ ರಣತಂತ್ರ ನಡೆದಿತ್ತು ಎಂದು ಕೇಸ್ ದಾಖಲಾಗಿತ್ತು. ಕರಾಟೆ ಕ್ಲಾಸ್ ನೆಪದಲ್ಲಿ ಪಿಎಫ್ ಐ ಸದಸ್ಯರಿಗೆ ಉಗ್ರ ಚಟುವಟಿಕೆಯ ತಯಾರಿ ನೀಡಲಾಗ್ತಾ ಇತ್ತು. ತೆಲಂಗಾಣದ ಆಟೋನಗರ್ ನಲ್ಲಿ ಅಬ್ದುಲ್ ಖಾದರ್ ಎಂಬಾತ ಕರಾಟೆ ಕ್ಲಾಸ್ ನಡೆಸುತ್ತಿದ್ದ. ಇಲ್ಲಿ ಪಿಎಫ್ ಐ ತನ್ನ ಸದಸ್ಯರಿಗೆ ಉಗ್ರ ಚಟುವಟಿಕೆ ಮಾಡುವುದರ ಬಗ್ಗೆ ತರಬೇತಿ ನೀಡ್ತಾ ಇತ್ತು. ಈ ಬಗ್ಗೆ ಹೈದರಾಬಾದ್ ಎನ್​ಐಎನಲ್ಲಿ ಪ್ರಕರಣ ದಾಖಲಾಗಿತ್ತು. ಅಬ್ದುಲ್ ಖಾದರ್ ಎಂಬಾತ ಸೇರಿ 27 ಜನರ ಮೇಲೆ ಎಫ್​ಐಆರ್ ದಾಖಲಾಗಿತ್ತು. ಇದರಲ್ಲಿ ಹಲವರನ್ನು ಎನ್​ಐಎ ಅಧಿಕಾರಿಗಳು ಬಂಧಿಸಿದ್ದಾರೆ. ಕರಾಟೆ ಕ್ಲಾಸ್ ನಲ್ಲಿದ್ದವರ ವಿಚಾರಣೆ ವೇಳೆ ಸ್ಪೋಟಕ ರಹಸ್ಯ ಬಯಲಾಗಿತ್ತು.

ದೇಶಾದ್ಯಂತ ಇದೇ ರೀತಿಯ ಸಂಚನ್ನ ಮಾಡುತ್ತಿರುವ ಬಗ್ಗೆ ಆರೋಪಿಗಳು ಮಾಹಿತಿ ಬಿಚ್ಚಿಟ್ಟಿದ್ದರು. ಈ ಹಿಂದೆ ಎನ್​ಐಎ ಬಳಿ ಇದ್ದ ಮಾಹಿತಿ ಹಾಗೂ ಪ್ರಕರಣಗಳಿಗೆ ಇದೆಲ್ಲವೂ ಲಿಂಕ್ ಅಗಿದೆ. ಎಲ್ಲಾ ಪ್ರಕರಣಗಳ ಉದ್ದ ಅಗಲ ನೋಡಿದಾಗ ದೇಶವ್ಯಾಪಿ ಪ್ಲಾನಿಂಗ್ ಮತ್ತು ಫಂಡಿಂಗ್ ಬಯಲಾಗಿದೆ.

ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

Published On - 12:16 pm, Sat, 24 September 22