Bengaluru News:ನಿಗಮ ಮಂಡಳಿ ಕೊಡಿಸುವುದಾಗಿ ಪ್ರಿಯಾಂಕ್ ಖರ್ಗೆ ಹೆಸರಿನ ಮೇಲೆ ಹಣ ವಸೂಲಿ, ಆರೋಪಿ ಅರೆಸ್ಟ್

|

Updated on: May 31, 2023 | 9:19 AM

ವ್ಯಕ್ತಿಯೋರ್ವ ಸಚಿವ ಪ್ರಿಯಾಂಕ್ ಖರ್ಗೆಯವರ ಪಿಎ ಎಂದು ಹೇಳಿಕೊಂಡು ನಿಗಮ ಮಂಡಳಿಯ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನ ಕೊಡಿಸ್ತೀನಿ ಎಂದು ನಂಬಿಸಿ ಜನರ ಬಳಿಯಿಂದ ಹಣ ಪೀಕುತ್ತಿದ್ದ. ಈ ಬಗ್ಗೆ ದೂರು ದಾಖಲಾಗಿದೆ.

Bengaluru News:ನಿಗಮ ಮಂಡಳಿ ಕೊಡಿಸುವುದಾಗಿ ಪ್ರಿಯಾಂಕ್ ಖರ್ಗೆ ಹೆಸರಿನ ಮೇಲೆ ಹಣ ವಸೂಲಿ, ಆರೋಪಿ ಅರೆಸ್ಟ್
ಸದಾಶಿವನಗರ ಪೊಲೀಸ್ ಠಾಣೆ
Follow us on

ಬೆಂಗಳೂರು: ಕಾಂಗ್ರೆಸ್ ಸಚಿವ ಪ್ರಿಯಾಂಕ್ ಖರ್ಗೆ(Priyank kharge) ಅವರ ಹೆಸರು ಹೇಳಿಕೊಂಡು ಜನರಿಗೆ ಕೆಲಸ ಕೊಡಿಸುವುದಾಗಿ ನಂಬಿಸಿ ಹಣ ಪೀಸುತ್ತಿದ್ದ ವ್ಯಕ್ತಿಯನ್ನು ಬಂಧಿಸಲಾಗಿದೆ(job aspirants). ಪ್ರಿಯಾಂಕ್ ಖರ್ಗೆಯವರ ಆಪ್ತ ಸಹಾಯಕ ಕೇಶವ್ ಮೂರ್ತಿಯವರು ಸದಾಶಿವನಗರ ಪೊಲೀಸ್ ಠಾಣೆಯಲ್ಲಿ(sadashivanagar police station) ದೂರು ದಾಖಲಿಸಿದ್ದರು. ದೂರು ಆಧರಿಸಿ ಆರೋಪಿ ರಘುನಾಥ್​​ನನ್ನು ಸದಾಶಿವನಗರ ಪೊಲೀಸರು ಬಂಧಿಸಿದ್ದಾರೆ. ಆರೋಪಿ ಅನೇಕರ ಬಳಿ ಸುಳ್ಳು ಆಸೆ ತೋರಿಸಿ ಹಣ ಪಡೆದಿರುವ ಬಗ್ಗೆ ಮಾಹಿತಿ ಸಿಕ್ಕಿದೆ.

ರಘುನಾಥ್ ಎಂಬ ವ್ಯಕ್ತಿಯೋರ್ವ ಸಚಿವ ಪ್ರಿಯಾಂಕ್ ಖರ್ಗೆಯವರ ಪಿಎ ಎಂದು ಹೇಳಿಕೊಂಡು ನಿಗಮ ಮಂಡಳಿಯ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನ ಕೊಡಿಸ್ತೀನಿ ಎಂದು ನಂಬಿಸಿ ಜನರ ಬಳಿಯಿಂದ ಹಣ ಪೀಕುತ್ತಿದ್ದ. ಹುದ್ದೆ ಬೇಕೆಂದರೆ 9980823165 ಈ ನಂಬರ್​ಗೆ ಗೂಗಲ್ ಪೇ ಮಾಡಿ. ಹಣ ಹಾಕಿದರೆ ಅಧ್ಯಕ್ಷ ಸ್ಥಾನ ಫಿಕ್ಸ್ ಎಂದು ಹೇಳಿ ಗೂಗಲ್ ಪೇ ಮಾಡಿಸಿಕೊಳ್ತಿದ್ದ. ಇನ್ನು ಈತ ಸಚಿವರ ಬಳಿ 10 ವರ್ಷದಿಂದ ಆಪ್ತ ಸಹಾಯಕನಾಗಿದ್ದೇನೆ ಎಂದು ಪರಿಚಯ ಮಾಡಿಕೊಂಡು ದುಡ್ಡು ಸುಲಿಗೆ ಮಾಡ್ತಿದ್ದ. ಹೇಳುವಷ್ಟು ಹಣ ನೀಡದಿದ್ದರೆ ನಿಗಮ ಮಂಡಳಿಯಲ್ಲಿ ಮರ್ಯಾದಿನೇ ಇರಲ್ಲಾ, ನಿಗಮ ಮಂಡಳಿಯಲ್ಲಿ ಸೂಕ್ತ ಸ್ಥಾನ ಮಾನ ಸಿಗೋದಿಲ್ಲ ಅದಕ್ಕೆ ಹಣ ನೀಡಬೇಕೆಂದು ಬೆದರಿಕೆ ಹಾಕುತ್ತಿದ್ದ. ಅಲ್ಲದೆ 6361231868 ಮೊಬೈಲ್ ಸಂಖ್ಯೆಯಿಂದ ಕೆಲ ಮುಖಂಡರಿಗೆ ಕರೆ ಕೂಡ ಮಾಡಿದ್ದ. ಈ ಬಗ್ಗೆ ಮಾಹಿತಿ ತಿಳಿದ ಕಾಂಗ್ರೆಸ್​ನ ಗೀತಾ ಶಿವರಾಮ್ ಸೇರಿದಂತೆ ಹಲವು ಕಾಂಗ್ರೆಸ್ ಮುಖಂಡರು ಪ್ರಿಯಾಂಕ್ ಖರ್ಗೆಯವರ ಆಪ್ತ ಸಹಾಯಕ ಕೇಶವ್ ಮೂರ್ತಿಯವರಿಗೆ ವಿಚಾರ ಮುಟ್ಟಿಸಿದ್ದರು. ಬಳಿಕ ಸದಾಶಿವನಗರ ಪೊಲೀಸ್ ಠಾಣೆಯಲ್ಲಿ ಕೇಶವ್ ಮೂರ್ತಿ ದೂರು ದಾಖಲಿಸಿದ್ದರು. ಸದ್ಯ ಈಗ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.

ಇದನ್ನೂ ಓದಿ: Belagavi News: ಸಚಿವಗಿರಿ ಮಿಸ್, ನನಗೆ ತಾಳ್ಮೆ ದೂರದೃಷ್ಟಿ ಇದೆ ಎಂದ ಶಾಸಕ ಲಕ್ಷ್ಮಣ್​ ಸವದಿ

ಕರ್ನಾಟಕದಾದ್ಯಂತ ಲೋಕಾಯುಕ್ತ ದಾಳಿ: ಸರ್ಕಾರಿ ಅಧಿಕಾರಿಗಳ ಮನೆ, ಕಚೇರಿಯಲ್ಲಿ ದಾಖಲೆ ಪರಿಶೀಲನೆ

ತುಮಕೂರು/ಹಾವೇರಿ: ಅತ್ತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇಂದು(ಮೇ 31) ಬೆಳ್ಳಂಬೆಳಗ್ಗೆ ಎನ್​ಐಎ ಅಧಿಕಾರಿಗಳು ದಾಳಿ ಮಾಡಿದ್ದರೆ, ಮತ್ತೊಂದೆಡೆ ರಾಜ್ಯದ ವಿವಿದೆಡೆ ಲೋಕಾಯುಕ್ತ ಅಧಿಕಾರಿಗಳು ದಾಳಿ(Karnataka Lokayukta raid) ಮಾಡಿದ್ದಾರೆ. ಬೆಂಗಳೂರು, ತುಮಕೂರು(Tumakuru) ಹಾಗೂ ಹಾವೇರಿ(Haveri) ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಲೋಕಾಯುಕ್ತ ದಾಳಿ ಅಧಿಕಾರಿಗಳು, ಸರ್ಕಾರಿ ಅಧಿಕಾರಿಗಳ ನಿವಾಸ ಹಾಗೂ ಕಚೇರಿಗಳ ಮೇಲೆ ಮಾಡಿದ್ದಾರೆ. ಸರ್ಕಾರಿ ಅಧಿಕಾರಿಗಳು ಆದಾಯ ಮೀರಿ ಅಧಿಕ ಆಸ್ತಿ ಗಳಿಸಿದ ಆರೋಪದ ಮೇಲೆ ದಾಳಿ ನಡೆದಿದ್ದು, ಆದಾಯದ ಮೂಲ, ಆಸ್ತಿ ಪತ್ರಗಳು, ಬ್ಯಾಂಕ್ ವಿವರಗಳ ಬಗ್ಗೆ ಲೋಕಾಯುಕ್ತರ ಅಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದಾರೆ.

ಬೆಂಗಳೂರಿಗೆ ಸಂಬಂಧಿಸಿದ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

Published On - 8:52 am, Wed, 31 May 23