ಬೆಂಗಳೂರು, ಫೆ.07: ಪೋಷಕರೇ ಎಚ್ಚರ ಎಚ್ಚರ.. ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಮಕ್ಕಳ ಮಿಸ್ಸಿಂಗ್ (Children Missing) ಪ್ರಕರಣಗಳು ಹೆಚ್ಚಾಗುತ್ತಿವೆ. ರಾಜಧಾನಿಯಲ್ಲಿ ಮಕ್ಕಳು ಕಾಣೆಯಾಗುತ್ತಿರುವ ಪ್ರಕರಣಗಳು ವರ್ಷದಿಂದ ವರ್ಷಕ್ಕೆ ಏರಿಕೆಯಾಗುತ್ತಿವೆ. ಕೊರೊನಾ ಬಳಿಕ ಮಕ್ಕಳು ಚಿಕ್ಕಪುಟ್ಟ ಕಾರಣಗಳಿಗೂ ಮನೆ ಬಿಟ್ಟು ಹೋಗುತ್ತಿದ್ದಾರೆ. ತಂದೆ ಟಿವಿ ರಿಮೋಟ್ ನೀಡಿಲ್ಲ, ಶಾಲೆಯಲ್ಲಿ ಒಳ್ಳೆಯ ಮಾರ್ಕ್ಸ್ ಬಂದಿಲ್ಲ, ತಂದೆ-ತಾಯಿ ಜಗಳ ಕೌಟುಂಬಿಕ ಕಿರಿಕಿರಿಗೆ ಮಕ್ಕಳು ಮನೆ ಬಿಟ್ಟು ಹೋಗುವಂತಹ ನಿರ್ಧಾರಗಳನ್ನು ಮಾಡುತ್ತಿದ್ದಾರೆ. ಇದು ವರ್ಷದಿಂದ ವರ್ಷಕ್ಕೆ ಏರಿಕೆಯಾಗುತ್ತಿದೆ ಎಂದು ಚೈಲ್ಡ್ ರೈಟ್ ಸಂಸ್ಥೆ (Child Right Organization) ವರದಿ ಬಿಡುಗಡೆ ಮಾಡಿದೆ.
ಕಳೆದ ಒಂದು ವರ್ಷದಲ್ಲಿ ಮಕ್ಕಳು ಕಾಣೆಯಾಗುತ್ತಿರುವ ಪ್ರಕರಣಗಳು ಶೇ 34% ರಷ್ಟು ಏರಿಕೆಯಾಗಿದೆ. 2020ರಲ್ಲಿ ನಾಪತ್ತೆಯಾಗಿದ್ದ 421 ಗಂಡು, 1136 ಹೆಣ್ಣು ಮಕ್ಕಳ ಪೈಕಿ 21 ಗಂಡು, 37 ಹೆಣ್ಣು ಮಕ್ಕಳು ಇನ್ನೂ ಪತ್ತೆ ಮಾಡಲು ಸಾಧ್ಯವಾಗಿಲ್ಲ. 2021 ರಲ್ಲಿ 488 ಗಂಡು, 1630 ಹೆಣ್ಣುಮಕ್ಕಳ ಪೈಕಿ 28 ಗಂಡು, 64 ಹೆಣ್ಣು ಮಕ್ಕಳ ಪತ್ತೆ ಇನ್ನೂ ಆಗಿಲ್ಲ. 2022 ಹಾಗೂ 23 ರಲ್ಲಿ ನಾಪತ್ತೆಯಾಗಿರುವ 5,144 ಮಕ್ಕಳ ಪೈಕಿ 934 ಮಕ್ಕಳನ್ನ ಇನ್ನಷ್ಟೇ ಪತ್ತೆ ಹಚ್ಚಬೇಕಾಗಿದೆ. ಈ ಮೂಲಕ 347 ಗಂಡು ಹಾಗೂ 853 ಹೆಣ್ಣು ಮಕ್ಕಳು ಸೇರಿ ಒಟ್ಟು 1200 ನಾಪತ್ತೆ ಪ್ರಕರಣಗಳಲ್ಲಿ ಮಕ್ಕಳನ್ನು ಇನ್ನಷ್ಟೇ ಪತ್ತೆಹಚ್ಚಬೇಕಾಗಿದೆ.
ಇದನ್ನೂ ಓದಿ: ಎಣ್ಣೆ ಮತ್ತಿನಲ್ಲಿ ಮನೆಗೆ ಎಂಟ್ರಿ ಕೊಟ್ಟ ವ್ಯಕ್ತಿಯಿಂದ ಯುವಕನ ಮೇಲೆ ಗುಂಡಿನ ದಾಳಿ, ನಿವೃತ್ತ ಮಿಲಿಟರಿ ಅಧಿಕಾರಿ ಅರೆಸ್ಟ್
ಮಕ್ಕಳ ಮಿಸ್ಸಿಂಗ್ ಗೆ ಕೌಟುಂಬಿಕ ಒತ್ತಡವೇ ಕಾರಣ ಎಂದು ಚೈಲ್ಡ್ ರೈಟ್ ಸಂಸ್ಥೆ ತಿಳಿಸಿದೆ. ಫ್ಯಾಮಿಲಿ, ಅಕಾಡೆಮಿಕ್ ಪ್ರೆಶರ್ ತಾಳಲಾರದೇ ಮನೆ ಬಿಟ್ಟು ಹೋಗಲು ಮಕ್ಕಳು ನಿರ್ಧರಿಸುತ್ತಿದ್ದಾರೆ. ಕೋವಿಡ್ ನಂತರ ಅಕಾಡೆಮಿಕ್ ಪ್ರೆಶರ್ ನಿಂದ ಹೆದರಿ ಹೋಗಿರುವ ಮಕ್ಕಳು, ಮನೆಯಲ್ಲೂ ಅತ್ಯುತ್ತಮ ಮಾರ್ಕ್ಸ್ ಪಡೆಯುವಂತೆ ಒತ್ತಡ ಕೇಳಿ ಬರ್ತಿದೆ. ಮನೆಯಲ್ಲಿ ಮಕ್ಕಳ ಜೊತೆ ಸಮಯ ಕಳೆಯುವುದನ್ನು ಪೋಷಕರು ಕಡಿಮೆ ಮಾಡಿದ್ದಾರೆ. ಮನಸ್ಸಿನ ದುಗುಡ ಹೇಳಿಕೊಳ್ಳಲಾರದೆ ಮಕ್ಕಳಿಗೆ ಪ್ರೆಶರ್ ಹೆಚ್ಚಳವಾಗಿದೆ. ಇದರಿಂದ ತಪ್ಪಿಸಿಕೊಳ್ಳಲು ಮಕ್ಕಳು ಮನೆ ಬಿಟ್ಟು ಹೋಗುತ್ತಿದ್ದಾರೆ. ರಾಜಧಾನಿ ಬೆಂಗಳೂರಿನಲ್ಲಿ ಮಕ್ಕಳ ಮಿಸ್ಸಿಂಗ್ ಕೇಸ್ ದ್ವಿಗುಣವಾಗಿದೆ. ಮಿಸ್ಸಿಂಗ್ ಮಾತ್ರವಲ್ಲ ಮಕ್ಕಳ ಟ್ರೇಸಿಂಗ್ ಕೂಡ ಕಷ್ಟವಾಗಿದೆ. 100% ಟ್ರೇಸಿಂಗ್ ಪೈಕಿ ಕೇವಲ 85% ಮಕ್ಕಳು ಮಾತ್ರ ಪತ್ತೆಯಾಗಿದ್ದು ಇನ್ನುಳಿದ ಮಕ್ಕಳು ನಾಪತ್ತೆ. ಕಳೆದ ವರ್ಷ ಇದರ ಸಂಖ್ಯೆ ಕೂಡ ಶೇಕಾಡ 58% ಏರಿಕೆಯಾಗಿದೆ.
ಒಟ್ನಲ್ಲಿ ಮಕ್ಕಳು ಕಾಣೆಯಾಗುವ ಪ್ರಕರಣ ಏರಿಕೆಯಾಗ್ತೀದ್ದು. ಒಂದು ಸರಿ ಮನೆ ಬಿಟ್ಟು ಹೋಗುವ ಮಕ್ಕಳಿಗೆ ಅಭ್ಯಾಸವಾದ್ರೆ ಇದನ್ನ ಪದೇ ಪದೇ ಮಾಡ್ತಾನೇ ಇರ್ತಾರೆ. ಇದರಿಂದ ಅಪಾಯದ ಅರಿವು ಎದುರಾಗುವ ವರೆಗೂ ಈ ಪ್ರಯತ್ನ ಮಕ್ಕಳು ಮಾಡ್ತಾನೇ ಇದ್ದು ಈ ಅಭ್ಯಾಸ ತಪ್ಪಿಸುವ ಕಡೆ ಪೊಷಕರು ಗಮನ ಹರಿಸಬೇಕಿದೆ.
ಬೆಂಗಳೂರಿಗೆ ಸಂಬಂಧಿಸಿದ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ