ಕಾವೇರಿ ಕಿಚ್ಚು: ಗಡಿ ಬಂದ್ ನಿರ್ಧಾರದಿಂದ ಹಿಂದೆ ಸರಿದ ಕನ್ನಡ ಪರ ಹೋರಾಟಗಾರ ವಾಟಾಳ್ ನಾಗರಾಜ್

ತಮಿಳುನಾಡಿಗೆ KRS​ ಡ್ಯಾಮ್​ನಿಂದ ನೀರು ಹರಿಸುತ್ತಿರುವ ವಿಚಾರವಾಗಿ ಅತ್ತಿಬೆಲೆ ಗಡಿ ಬಂದ್ ನಿರ್ಧಾರದಿಂದ ಕನ್ನಡ ಪರ ಹೋರಾಟಗಾರ ವಾಟಾಳ್​ ನಾಗರಾಜ್​ ಹಿಂದೆ ಸರಿದಿದ್ದು, ಬದಲಾಗಿ ಅ.10ರಂದು ಹೊಸಕೋಟೆ ರಾಷ್ಟ್ರೀಯ ಹೆದ್ದಾರಿ ಮದ್ರಾಸ್ ರೋಡ್ ಬಂದ್​ಗೆ ತೀರ್ಮಾನಿಸಲಾಗಿದೆ.

ಕಾವೇರಿ ಕಿಚ್ಚು: ಗಡಿ ಬಂದ್ ನಿರ್ಧಾರದಿಂದ ಹಿಂದೆ ಸರಿದ ಕನ್ನಡ ಪರ ಹೋರಾಟಗಾರ ವಾಟಾಳ್ ನಾಗರಾಜ್
ವಾಟಾಳ್ ನಾಗರಾಜ್
Follow us
Kiran Surya
| Updated By: ಗಂಗಾಧರ​ ಬ. ಸಾಬೋಜಿ

Updated on:Oct 08, 2023 | 7:10 PM

ಬೆಂಗಳೂರು, ಅಕ್ಟೋಬರ್​​ 08: ತಮಿಳುನಾಡಿಗೆ KRS​ ಡ್ಯಾಮ್​ನಿಂದ ನೀರು ಹರಿಸುತ್ತಿರುವ ವಿಚಾರವಾಗಿ ಅತ್ತಿಬೆಲೆ ಗಡಿ ಬಂದ್ ನಿರ್ಧಾರದಿಂದ ಕನ್ನಡ ಪರ ಹೋರಾಟಗಾರ ವಾಟಾಳ್​ ನಾಗರಾಜ್ (Vatal Nagaraj)​ ಹಿಂದೆ ಸರಿದಿದ್ದು, ಬದಲಾಗಿ ಅ.10ರಂದು ಹೊಸಕೋಟೆ ರಾಷ್ಟ್ರೀಯ ಹೆದ್ದಾರಿ ಮದ್ರಾಸ್ ರೋಡ್ ಬಂದ್​ಗೆ ತೀರ್ಮಾನಿಸಲಾಗಿದೆ. ವಾಟಾಳ್​ ನಾಗರಾಜ್ ನೇತೃತ್ವದಲ್ಲಿ ಇತ್ತೀಚೆಗೆ ಶ್ರೀರಂಗಪಟ್ಟಣ ತಾಲೂಕಿನ ಕೆಆರ್​ಎಸ್​ ಡ್ಯಾಂಗೆ ಮುತ್ತಿಗೆ ಹಾಕಲಾಗಿದ್ದರು.

ಸಿಎಂ ಸ್ಟಾಲಿನ್‌ ಭಾವಚಿತ್ರ ಹರಿದು, ಕಪ್ಪುಪಟ್ಟಿ ಪ್ರದರ್ಶನ ಮಾಡಲಾಗಿತ್ತು. KRS ಮುಖ್ಯದ್ವಾರದ ಬಳಿಯೇ ಬ್ಯಾರಿಕೇಡ್ ಹಾಕಿ ಜಲಾಶಯದ ಬಳಿ ಹೋರಾಟಗಾರರನ್ನು ಪೊಲೀಸರು ಅಡ್ಡಗಟ್ಟಿದ್ದರು. ವಾಟಾಳ್ ಸೇರಿ 50ಕ್ಕೂ ಹೆಚ್ಚು ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದರು.

ಅತ್ತಿಬೆಲೆ ಪಟಾಕಿ ದುರಂತದ ಹಿನ್ನೆಲೆಯಲ್ಲಿ ಮೃತಪಟ್ಟವರ ಆತ್ಮಕ್ಕೆ ಶಾಂತಿ ಸಿಗಲಿ. ಉನ್ನತ ‌ಮಟ್ಟದ ತನಿಖೆಗೆ  ವಾಟಾಳ್ ನಾಗರಾಜ್ ಆಗ್ರಹಿಸಿದ್ದಾರೆ.

ಇದನ್ನೂ ಓದಿ: ಕೇಂದ್ರ ಬರ ಅಧ್ಯಯನ ತಂಡದಿಂದ ನೆಲಮಂಗಲದಲ್ಲಿ ಪರಿಶೀಲನೆ: ರೈತರೊಂದಿಗೆ ಚರ್ಚಿಸಿ ಮಾಹಿತಿ ಪಡೆದುಕೊಂಡ ಅಧಿಕಾರಿಗಳು

ಕಳೆದ ಹಲವು ದಿನಗಳಿಂದಲೂ ಕೂಡ ತಮಿಳುನಾಡಿಗೆ ನೀರು ಹರಿಸುವುದನ್ನ ವಿರೋಧಿಸಿ ರಾಜ್ಯ ಸರ್ಕಾರದ ವಿರುದ್ದ ಅನ್ನದಾತರು ನಿರಂತರವಾಗಿ ಪ್ರತಿಭಟನೆ ನಡೆಸುತ್ತಿದ್ದಾರೆ. ಮಂಡ್ಯದ ವಿಶ್ವೇಶ್ವರಯ್ಯ ಪ್ರತಿಮೆ ಮುಂಭಾಗ ಮಂಡ್ಯ ಜಿಲ್ಲಾ ರೈತ ಹಿತರಕ್ಷಣಾ ಸಮಿತಿ ಕಾರ್ಯಕರ್ತರು ಧರಣಿ ಸತ್ಯಾಗ್ರಹ ಮಾಡಿದ್ದರು. ಹೋರಾಟಕ್ಕೆ ಹಲವು ಸಂಘಟನೆಗಳು, ಚಿತ್ರನಟಿಯರು ಕೂಡ ಸಾಥ್ ನೀಡಿದ್ದರು.

ಹಿತರಕ್ಷಣಾ ಸಮಿತಿ ಹೋರಾಟಕ್ಕೆ ಬೆಂಬಲ ಸೂಚಿಸಿ ಇವತ್ತು ನಟಿ ಹರ್ಷಿಕಾ ಪೂಣಚ್ಚ ಕೂಡ ಭಾಗಿಯಾಗಿದ್ದರು. ಅಲ್ಲದೆ ಖಳನಟ ಮೈಕೋ ನಾಗರಾಜ್ ಕೂಡ ಹೋರಾಟಕ್ಕೆ ಸಾಥ್ ನೀಡಿದ್ದರು.

ಇದನ್ನೂ ಓದಿ: ಕಾವೇರಿ ಕಿಚ್ಚು: ಕೆಆರ್​ಎಸ್​ ಡ್ಯಾಂ ಮುತ್ತಿಗೆಗೆ ಯತ್ನ; ವಾಟಾಳ್ ಸೇರಿ 50ಕ್ಕೂ ಹೆಚ್ಚು ಕಾರ್ಯಕರ್ತರು ಪೊಲೀಸರ ವಶಕ್ಕೆ

ಇದೇ ವೇಳೆ ಮಾತನಾಡಿದ ನಟಿ ಹರ್ಷಿಕಾ, ಕಾವೇರಿ ನಮ್ಮವರು ನಿಜ. ನಮ್ಮ ತಾಯಿ ಎಂಬುದು ಸತ್ಯ. ನಮ್ಮ ಕಾವೇರಿಗಾರಿ ಎಲ್ಲರೂ ಹೋರಾಟ ಮಾಡಬೇಕಿದೆ. ಚಿತ್ರತಂಡ ಕೂಡ ಈಗಾಗಲೇ ಕಾವೇರಿ ಪರ ನಿಂತಿದೆ. ಮುಂದೆ ಸಹಾ ನಿಲ್ಲುತ್ತದೆ ಎಂದು ಹೇಳಿದ್ದರು.

ಕಾವೇರಿ ವಿಚಾರವಾಗಿ ಹಲವು ಸಂಘಟನೆಗಳು ಕೂಡ ಹೋರಾಟ ನಡೆಸುತ್ತಿದ್ದು, ಜಯಕರ್ನಾಟಕ ಸಂಘಟನೆ ಸಹಾ ಪ್ರತಿಭಟನೆ ನಡೆಸಿತು. ಅದರಲ್ಲೂ ಲೋಕಸಭಾ ಚುನಾವಣೆ ಸಂಬಂಧ ಖಾಸಗಿ ಕಲ್ಯಾಣ ಮಂಟಪದಲ್ಲಿ ಸಚಿವರಾದ ಸುಧಾಕರ್, ಚಲುವರಾಯಸ್ವಾಮಿ ನೇತೃತ್ವದಲ್ಲಿ ಕಾಂಗ್ರೆಸ್ ನಡೆಸುತ್ತಿದ್ದ ಸಭೆಗೆ ಮುತ್ತಿಗೆ ಹಾಕಲು ಸಹಾ ಯತ್ನ ನಡೆಸಿತ್ತು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 7:06 pm, Sun, 8 October 23