ಚೈತ್ರಾ ಕುಂದಾಪುರ ವಂಚನೆ ಪ್ರಕರಣದ ತನಿಖೆಯಲ್ಲಿ ಎಡವಿದ್ರಾ ಸಿಸಿಬಿ ಅಧಿಕಾರಿಗಳು?

ಸಿಸಿಬಿ ಅಧಿಕಾರಿಗಳು ಕಚೇರಿಯಲ್ಲಿ ಚೈತ್ರಾ ಮೇಲೆ ಸರಿಯಾದ ನಿಗಾ ಇಡದೆ ಆಕೆ ಕೇಳಿದಾಕ್ಷಣ ಸೋಪ್ ಕೊಟ್ಟು ಆಸ್ಪತ್ರೆ ಸೇರುವಂತೆ ಮಾಡಿದ್ದಾರೆ ಎನ್ನಲಾಗುತ್ತಿದೆ. ಈಗಾಗಲೇ ಪಿಟ್ಸ್ ಲಕ್ಷಣ ಇಲ್ಲ ಎಂದು ವೈದ್ಯರು ದೃಢ ಪಡಿಸಿದ್ದಾರೆ. ನೊರೆ ಬಂದಿರೋದು ಕೃತಕ ಎಂದಿದ್ದಾರೆ. ಹೀಗಿದ್ದರು ಆರೋಪಿ ಚೈತ್ರಾ ಕುಂದಾಪುರ 4 ದಿನ ಆಸ್ಪತ್ರೆಯಲ್ಲೇ ಕಳೆದಿದ್ದೇಕೆ?

ಚೈತ್ರಾ ಕುಂದಾಪುರ ವಂಚನೆ ಪ್ರಕರಣದ ತನಿಖೆಯಲ್ಲಿ ಎಡವಿದ್ರಾ ಸಿಸಿಬಿ ಅಧಿಕಾರಿಗಳು?
ಚೈತ್ರಾ ಕುಂದಾಪುರ
Follow us
ರಾಚಪ್ಪಾಜಿ ನಾಯ್ಕ್
| Updated By: ಆಯೇಷಾ ಬಾನು

Updated on: Sep 19, 2023 | 8:51 AM

ಬೆಂಗಳೂರು, ಸೆ.19: MLA ಟಿಕೆಟ್ ಕೊಡಿಸುವುದಾಗಿ 5 ಕೋಟಿ ಹಣ ಪಡೆದು ವಂಚನೆ ಮಾಡಿದ ಪ್ರಕರಣ ಸಂಬಂಧ ಚೈತ್ರಾ(Chaitra Kundapura) ಆ್ಯಂಡ್ ಗ್ಯಾಂಗ್ ಬಂಧನ ಪ್ರಕರಣದಲ್ಲಿ ಸಿಸಿಬಿ ಪೊಲೀಸರಿಗೆ(CCB Police) ಸಾಲು ಸಾಲು ವೈಫಲ್ಯವಾಗಿದೆ. ಇಡೀ ಪ್ರಕರಣ ತನಿಖೆಯಲ್ಲಿ ಸಾಕಷ್ಟು ಲೋಪ ಕಂಡಬಂದಿದೆ. ಸಿಸಿಬಿಗೆ ಕೇಸ್ ವರ್ಗಾವಣೆ ಆಗಿ 10 ದಿನವೇ ಕಳೆದೋಯ್ತು. ಮೂರನೇ ಆರೋಪಿ ಅಭಿನವ ಹಾಲಶ್ರೀ ಬಂಧನವಾಗಿಲ್ಲ. ಸಿಸಿಬಿ ಪೊಲೀಸರಿಗೆ ಇದುವರೆಗೆ ಹಾಲಶ್ರೀ ಸ್ವಾಮೀಜಿ ಸಂಬಂಧ ಸಣ್ಣ ಸುಳಿವು ಕೂಡ ಸಿಕ್ಕಿಲ್ಲ.

ಸಿಸಿಬಿ ತನಿಖಾಧಿಕಾರಿಗೆ ಇದ್ಯಾ ರಾಜಕೀಯ ಒತ್ತಡ?

ಸ್ವಾಮೀಜಿ ಬಂಧನ ತಡವಾದರೆ ನಿರೀಕ್ಷಣ ಜಾಮೀನು ಸಿಗೊ ಸಾಧ್ಯತೆ ಇದೆ. ಕೇವಲ ಸ್ವಾಮೀಜಿ ಮಾತ್ರ ಅಲ್ಲ ಚೈತ್ರಾ, ಚನ್ನಾ ನಾಯ್ಕ್ ವಿಚಾರದಲ್ಲೂ ನಿರ್ಲಕ್ಷ್ಯ ಎದ್ದು ಕಾಣುತ್ತಿದೆ. ಚನ್ನಾ ನಾಯ್ಕ್ ಬೆಂಗಳೂರಲ್ಲಿ ಇದ್ದರೂ ತನಿಖಾಧಿಕಾರಿಗಳು ಬಂಧಿಸದೆ ನಿರ್ಲಕ್ಷ್ಯ ತೋರಿದ್ದಾರೆ. ಪ್ರಕರಣದ ಐದನೇ ಆರೋಪಿಯಾಗಿರುವ ಚನ್ನಾ ನಾಯ್ಕ್ ಮಾಧ್ಯಮ ಮುಂದೆ ಬಂದ ನಂತರ ಅಲರ್ಟ್ ಆದ ತನಿಖಾತಂಡ ತರಾತುರಿಯಲ್ಲಿ ಮಾಧ್ಯಮದವರನ್ನ ಫಾಲೊ ಮಾಡಿ ಬಂಧಿಸಿದೆ. ಹೀಗಾಗಿ ಸಿಸಿಬಿ ತನಿಖಾಧಿಕಾರಿಗಳಿಗೆ ರಾಜಕೀಯ ಒತ್ತಡ ಇದೆಯಾ ಎಂಬ ಮಾತುಗಳು ಹೇಳೀ ಬರುತ್ತಿವೆ.

ಇದನ್ನೂ ಓದಿ: ಚೈತ್ರಾ ಕುಂದಾಪುರ ವಿರುದ್ಧ ಮತ್ತೊಂದು ವಂಚನೆ ಆರೋಪ: ಉಡುಪಿಯಲ್ಲಿ ಎಫ್​ಐಆರ್ ದಾಖಲು

ವಿಚಾರಣೆಯಿಂದ ಚೈತ್ರ ತಪ್ಪಿಸಿಕೊಳ್ಳಲು ಸಿಸಿಬಿ ಅಧಿಕಾರಿಗಳೇ ಕಾರಣನಾ?

ಸಿಸಿಬಿ ಅಧಿಕಾರಿಗಳು ಕಚೇರಿಯಲ್ಲಿ ಚೈತ್ರಾ ಮೇಲೆ ಸರಿಯಾದ ನಿಗಾ ಇಡದೆ ಆಕೆ ಕೇಳಿದಾಕ್ಷಣ ಸೋಪ್ ಕೊಟ್ಟು ಆಸ್ಪತ್ರೆ ಸೇರುವಂತೆ ಮಾಡಿದ್ದಾರೆ ಎನ್ನಲಾಗುತ್ತಿದೆ. ಈಗಾಗಲೇ ಪಿಟ್ಸ್ ಲಕ್ಷಣ ಇಲ್ಲ ಎಂದು ವೈದ್ಯರು ದೃಢ ಪಡಿಸಿದ್ದಾರೆ. ನೊರೆ ಬಂದಿರೋದು ಕೃತಕ ಎಂದಿದ್ದಾರೆ. ಹೀಗಿದ್ದರು ಆರೋಪಿ ಚೈತ್ರಾ ಕುಂದಾಪುರ 4 ದಿನ ಆಸ್ಪತ್ರೆಯಲ್ಲೇ ಕಳೆದಿದ್ದೇಕೆ? ಬೆಳಗ್ಗೆ ಸಿಸಿಬಿ ಕಚೇರಿಗೆ, ಸಂಜೆ ಮಹಿಳಾ ಸಾಂತ್ವನ ಕೇಂದ್ರಕ್ಕೆ. ಕೋರ್ಟ್ ಕಸ್ಟಡಿಗೆ ನೀಡಿದ್ರು ಕೂಡ ಸಿಸಿಬಿ ಸಮಯ ವ್ಯರ್ಥ ಮಾಡಿಕೊಳ್ತಿದೆ?

ಇದೆಲ್ಲದರ ನಡುವೆ ಚೈತ್ರಾ ಕುಂದಾಪುರ ರಾಜಾರೋಷವಾಗಿ ಮಾಧ್ಯಮದ ಮುಂದೆ ಹೇಳಿಕೆ ಕೊಟ್ಟಿದ್ದರು. ಪ್ರಕರಣ ಡೈವರ್ಟ್ ಮಾಡಲು ಇಂದಿರಾ ಕ್ಯಾಂಟಿನ್ ಹೆಸರು ಬಳಕೆ ಮಾಡಿದ್ದರು. ಓಡಾಡುವ ಸ್ಥಿತಿಯಲ್ಲಿದ್ರು ಸಿಸಿಬಿ ಯಾವುದೇ ಹೇಳಿಕೆ ದಾಖಲು ಮಾಡಿಲ್ಲ. ಚೈತ್ರಾಳಿಂದ ಸಮರ್ಪಕ ಉತ್ತರ ಪಡೆಯುವಲ್ಲಿ ಸಿಸಿಬಿ ವಿಫಲವಾಗಿದೆ? ಪ್ರಕರಣದಲ್ಲಿ ಮತ್ತಷ್ಟು ಪ್ರಭಾವಿಗಳ ಹೆಸರು ಕೇಳಿ ಬಂದಿದೆ. ಆದರು ಅವರಿಂದ ಮಾಹಿತಿ ಪಡೆಯಲು ನಿರ್ಲಕ್ಷ್ಯವಹಿಸಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಹೀಗಾಗಿ ಚೈತ್ರಾ ಕುಂದಾಪುರ ಪ್ರಕರಣದ ತನಿಖೆಯನ್ನು ಸಿಸಿಬಿ ಸರಿಯಾದ ರೀತಿಯಲ್ಲಿ ನಡೆಸುತ್ತಿಲ್ಲ ಎನ್ನಲಾಗುತ್ತಿದೆ.

ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ