ಬೆಂಗಳೂರು: ನಕಲಿ ಮಾರ್ಕ್ಸ್ ಕಾರ್ಡ್ ದಂಧೆ ನಡೆಸ್ತಿದ್ದ ಇಬ್ಬರು ಆರೋಪಿಗಳನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಮುಖೇಶ್, ರೋಹಿ ಬಂಧಿತ ದಂಪತಿ. ಹಾಗೂ ಬಂಧಿತರ ಬಳಿ ಇದ್ದ 3 ವಿವಿಗಳಿಗೆ ಸೇರಿದ ಹಲವು ನಕಲಿ ಮಾರ್ಕ್ಸ್ ಕಾರ್ಡ್ ಪತ್ತೆಯಾಗಿದೆ.
ಪಂಜಾಬ್ ಮೂಲದ ಮುಖೇಶ್, ರೋಹಿ ಎಂಬ ಗಂಡ ಹೆಂಡತಿ ಸೇರಿಕೊಂಡು ಮಾರ್ಕ್ಸ್ ಕಾರ್ಡ್ ದಂಧೆ ನಡೆಸುತ್ತಿದ್ರು. ಕಳೆದ ಮೂವತ್ತು ವರ್ಷಗಳಿಂದ ಬೆಂಗಳೂರಿನಲ್ಲೆ ನೆಲೆಸಿದ್ರು. ಹಾಗೂ ಇವರು ಪೀಣ್ಯ ಬಳಿ ಜಗಜ್ಯೋತಿ ಎಜುಕೇಶನ್ ಇನ್ಸ್ಟಿಟ್ಯೂಟ್ ನಡೆಸುತಿದ್ರು. ಎಂಎ, ಎಂಬಿಎ, ಬಿಸಿಎ , ಬಿಟೆಕ್, ಬಿಬಿಎ , ಬಿಕಾಂ, ಬಿಎಸ್ಸಿ, ಸೇರಿ ಹಲವು ಡಿಗ್ರಿ ಮಾರ್ಕ್ಸ್ ಕಾರ್ಡ್ಗಳನ್ನು ಹಣಕ್ಕೆ ನೀಡುತಿದ್ರು. ಒಂದು ಡಿಗ್ರಿಗೆ ಅರವತ್ತರಿಂದ ಎಪತ್ತು ಸಾವಿರದ ವರೆಗೆ ಹಣ ಪಡೆಯುತಿದ್ರು.
ಸಿವಿ ರಾಮನ್ ಯುನಿವರ್ಸಿಟಿ, ರವೀಂದ್ರನಾಥ್ ಟ್ಯಾಗೋರ್ ಯುನಿವರ್ಸಿಟಿ. ಅಸೆಟ್ ಯುನಿವರ್ಸಿಟಿ ಸೇರಿದ ಮಾರ್ಕ್ ಕಾರ್ಡ್ಗಳನ್ನು ನೀಡುತ್ತಿದ್ದರು. ಐದು ನೂರಕ್ಕು ಹೆಚ್ಚು ಜನರಿಗೆ ಹಣಕ್ಕೆ ಮಾರ್ಕ್ಸ್ ಕಾರ್ಡ್ ನೀಡಿರುವ ಬಗ್ಗೆ ಮಾಹಿತಿ ಸಿಕ್ಕಿದ್ದು ಈ ಸಂಬಂಧ ಪೀಣ್ಯ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿದೆ. ಸದ್ಯ ಸಿಸಿಬಿ ಪೊಲೀಸರು ನಕಲಿ ಮಾರ್ಕ್ಸ್ ಕಾರ್ಡ್ ದಂಧೆ ನಡೆಸುತಿದ್ದ ದಂಪತಿಯನ್ನು ಅರೆಸ್ಟ್ ಮಾಡಿದ್ದಾರೆ.
ಇದನ್ನೂ ಓದಿ: ಅನುಪಮಾ ಪರಮೇಶ್ವರನ್ ನಕಲಿ ಮಾರ್ಕ್ಸ್ ಕಾರ್ಡ್ ವೈರಲ್; ಈ ಹಗರಣದ ಹಿಂದೆ ಯಾರೆಲ್ಲ ಇದ್ದಾರೆ?