ದುಬಾರಿ ಆನ್ಲೈನ್ ಆ್ಯಪ್​ಗಳಿಗೆ ಟಕ್ಕರ್ ಕೊಡಲು ಬರುತ್ತಿದೆ ಹೊಸ ಆ್ಯಪ್; ಸರ್ಕಾರದಿಂದಲೇ ಫುಡ್ ಆ್ಯಪ್​ಗೆ ಸಿದ್ಧತೆ

| Updated By: ಆಯೇಷಾ ಬಾನು

Updated on: Oct 14, 2024 | 8:07 AM

ಇಬ್ಬರ ಜಗಳದಲ್ಲಿ ಮೂರನೇಯವರಿಗೆ ಲಾಭ ಅನ್ನೊ ಹಾಗಾಯ್ತು ಆನ್ಲೈನ್ ಫುಡ್ ಡೆಲಿವರಿ ಆಪ್ ಪರಿಸ್ಥಿತಿ. ಇತ್ತ ಗ್ರಾಹಕರಿಂದ, ಅತ್ತ ಹೋಟೆಲ್ಗಳಿಂದ ಹಣ ಪೀಕಿ ಫುಡ್ ಡೆಲಿವರಿ ಆಪ್ಗಳು ಬಿಗ್ ಮಿಲೇನಿಯರ್ ಆಗ್ತಿದೆ. 20 ರೂಪಾಯಿಯ ಇಡ್ಲಿ ಮನೆ ಬಾಗಿಲಿಗೆ ತಂದುಕೊಡಲು 60 ರೂಪಾಯಿ ತೆರಬೇಕಾದ ಪರಿಸ್ಥಿತಿ ಉಂಟಾಗಿದೆ. ಇಂತಹ ಸ್ಥಿತಿ ಮಧ್ಯೆ ಗ್ರಾಹಕರಿಗೆ ಹಾಗೂ ಹೋಟೆಲ್ಗಳಿಗೆ ಸ್ವೀಟ್ ಸರ್ರವೀಸ್ ಕೊಡಲು ಕೇಂದ್ರ ಸರ್ಕಾರದ ಆಪ್ ಸೇವೆಗೆ ಸಿದ್ಧಗೊಂಡಿದೆ.

ದುಬಾರಿ ಆನ್ಲೈನ್ ಆ್ಯಪ್​ಗಳಿಗೆ ಟಕ್ಕರ್ ಕೊಡಲು ಬರುತ್ತಿದೆ ಹೊಸ ಆ್ಯಪ್; ಸರ್ಕಾರದಿಂದಲೇ ಫುಡ್ ಆ್ಯಪ್​ಗೆ ಸಿದ್ಧತೆ
ಸಾಂದರ್ಭಿಕ ಚಿತ್ರ
Follow us on

ಬೆಂಗಳೂರು, ಅ.14: ಸಿಲಿಕಾನ್ ಸಿಟಿ ಒಂದು ರೀತಿ ಕಾಸ್ಟ್ಲಿ ದುನಿಯಾ. ಇಲ್ಲಿ ಹೋಟೆಲ್​ನಲ್ಲಿ ಸಿಗುವ 30 ರೂಪಾಯಿ ಇಡ್ಲಿಗೆ ಆನ್ಲೈನ್​ನಲ್ಲಿ 60 ರೂಪಾಯಿ ಕೊಡಬೇಕು. ಜಸ್ಟ್ ಮನೆ ಬಾಗಿಲಿಗೆ ತಂದು ಕೊಡ್ತಾರೆ ಎಂಬ ಕಾರಣಕ್ಕೆ ಜನ ಕೂಡ ಒಂದು ಪ್ಲೇಟ್​ಗೆ ಡಬ್ಬಲ್ ಪ್ರೈಸ್ ಕೊಡೋದಕ್ಕೆ ರೆಡಿ ಇರ್ತಾರೆ. ಹೋಗ್ಲಿ ಈ ಹಣ ಹೋಟೆಲ್​ನವರಿಗೆ ಸಿಗುತ್ತಾ ಇಲ್ಲ. ಆದರೆ ಹೋಟೆಲ್ನಿಂದ ಗ್ರಾಹಕರಿಗೆ ತಂದು ಕೊಡಲು ಮಧ್ಯೆ ಕೆಲಸ ಮಾಡುವ ಫುಡ್ ಡೆಲಿವರಿ ಆಪ್​ಗಳು ಹಣ ಗಳಿಸುತ್ತಿದೆ. ಇತ್ತ ಗ್ರಾಹಕರಿಂದ, ಅತ್ತ ಹೋಟೆಲ್​ಗಳಿಂದ ಒನ್ ಟು ಡಬ್ಬಲ್ ಹಣ ಪೀಕಿ ಕೋಟಿ ಕೋಟಿ ಗಳಿಸುತ್ತಿವೆ. ಆದರೆ ಇನ್ಮುಂದೆ ಇವರ ಆಟ ನಡೆಯೋ ಹಾಗೆ ಕಾಣ್ತಿಲ್ಲ. ಯಾಕಂದ್ರೆ ಜನರಿಗೆ ಅನುಕೂಲವಾಗಲೆಂದೇ ಕೇಂದ್ರ ಸರ್ಕರವೇ ONDC ಸೇವೆ ಕೊಡೋದಕ್ಕೆ ಮುಂದಾಗಿದೆ.

ONDC ಅಂದ್ರೆ ಓಪನ್ ನೆಟ್ವರ್ಕ್ ಫಾರ್ ಡಿಜಿಟಲ್ ಕಾಮರ್ಸ್ ಅನ್ನೊ ಈ ಆಪ್ ಇನ್ಮುಂದೆ ಫುಡ್ ಡೆಲಿವರಿ ಕ್ಷೇತ್ರಕ್ಕೆ ಕಾಲಿಡಲಿದೆ. ಕೇಂದ್ರ ಸರ್ಕಾರದ ಕೈಗಾರಿಕೆ ಮತ್ತು ಆಂತರಿಕ ವ್ಯಾಪಾರದ ಉತ್ತೇಜನ ಇಲಾಖೆಯಿಂದ ಭಾರತದಲ್ಲಿ ಈ ಸೇವೆ ಆರಂಭಗೊಂಡಿದೆ. ಹೋಟೆಲ್ ಮಾಲೀಕರು ಕೂಡ ಈ ಆಪ್ ಸರ್ವೀಸ್ ಜೊತೆ ಟೈ ಅಪ್ ಆಗಲು ಉತ್ಸುಹಕರಾಗಿದ್ದಾರೆ. ಈಗಾಗಲೇ ಟ್ರಯಲ್ ಅಂಡ್ ಎರರ್ ಹಾದಿಯಲ್ಲಿ ಸಾಕಷ್ಟು ಹೋಟೆಲ್​ಗಳಲ್ಲಿ ಸೇವೆ ಕೂಡ ಆರಂಭಗೊಂಡಿದೆ. ಮಾರ್ಜಿನಲ್ ರೇಟ್ನಲ್ಲಿ ಗ್ರಾಹಕರಿಗೆ ಸೇವೆ ಕೊಡಲು ಈ ONDC ಬರ್ತಿದೆ.

ಇದನ್ನೂ ಓದಿ: ಚಿಕ್ಕಬಳ್ಳಾಪುರದ ನಂದಿ ಗಿರಿಧಾಮದಲ್ಲಿ ಪ್ಯಾರಾಗ್ಲೈಡಿಂಗ್ ಆರಂಭ

ONDC ಮುಂದಿನ ಗೇಮ್ ಚೇಂಜರ್ ಅನ್ನಲಾಗ್ತಿದೆ. 30 ರೂಪಾಯಿ ಇಡ್ಲಿ ಉದಾಹರಣೆಗೆ 35 ರಿಂದ 40 ರೂಪಾಯಿಗೆ ಸಿಗುವಂತೆ ಈ ಸೇವೆ ಸಿಗಲಿದೆ. ಇದು ಗ್ರಾಹಕರ ಜೇಬಿಗೂ ಹಗುರವಾಗಲಿದ್ದು, ಹೋಟೆಲ್ಗಳು ಹೆಚ್ಚಿನ ದರ ತೆರುವುದಕ್ಕೆ ಬ್ರೇಕ್ ಹಾಕಲಿದೆ. ಒಟ್ನಲ್ಲಿ ಸ್ವಿಗ್ಗಿ, ಝೋಮೆಟೋ ಅಂತ ಫುಡ್ ಡೆಲಿವರಿ ಆಪ್ಗಳಿಗೆ ಟಕ್ಕರ್ ಕೊಡೋದಕ್ಕೆ ಕೇಂದ್ರ ಸಸ್ತಾ ಆಪ್ ಪರಿಚಯವಾಗಲಿದೆ.

ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ