ಬೆಂಗಳೂರು: ಭಾರತದ ಧ್ವಜ ಬಿಡಿಸು ಎಂದಿದ್ದಕ್ಕೆ ಸಂದರ್ಶನದಿಂದ ಹೊರನಡೆದ ಟೆಕ್ಕಿ

ಕಂಪನಿಯೊಂದರಲ್ಲಿ ಕೆಲಸದ ಸಂದರ್ಶನಕ್ಕೆ ಹೋದ ಟೆಕ್ಕಿಗೆ ಸಂದರ್ಶಕರು ಸಿಎಸ್​ಎಸ್​ ಮುಖಾಂತರ ಭಾರತದ ಧ್ವಜ ಬಿಡಿಸು ಎಂದಿದ್ದಾರೆ. ಸಂದರ್ಶಕರ ಈ ವಿಚಿತ್ರ ಪ್ರಶ್ನೆಯಿಂದ ಬೇಸರಗೊಂಡ ಟೆಕ್ಕಿ ಸಂದರ್ಶನದಿಂದ ಹೊರ ನಡೆದಿದ್ದಾಳೆ. ಬೆಂಗಳೂರಿನಲ್ಲಿ ಘಟನೆ ನಡೆದಿದೆ.

ಬೆಂಗಳೂರು: ಭಾರತದ ಧ್ವಜ ಬಿಡಿಸು ಎಂದಿದ್ದಕ್ಕೆ ಸಂದರ್ಶನದಿಂದ ಹೊರನಡೆದ ಟೆಕ್ಕಿ
ರಾಷ್ಟ್ರಧ್ವಜ
Follow us
|

Updated on:Oct 14, 2024 | 9:41 AM

ಬೆಂಗಳೂರು, ಅಕ್ಟೋಬರ್​ 14: ಪ್ರೋಗ್ರಾಮಿಂಗ್​ ಲ್ಯಾಂಗವೇಜ್​ ಸಿಎಸ್​ಎಸ್ (CSS)​ ಮುಖಾಂತರ ರಾಷ್ಟ್ರಧ್ವಜ (India Flag) ಬಿಡಿಸು ಎಂದಿದಕ್ಕೆ ಟೆಕ್ಕಿ (Techie) ಕೆಲಸದ ಸಂದರ್ಶನದಿಂದ ಹೊರ ನಡೆದಿದ್ದಾಳೆ. ಈ ಕುರಿತು ಟೆಕ್ಕಿ ಸಾಮಾಜಿಕ ಮಾಧ್ಯಮ ರೆಡ್ಡಿಟ್​ನಲ್ಲಿ ಪೋಸ್ಟ್​​ ಹಾಕಿ, ಸಂದರ್ಶನ ನಡೆಸಿದ ಕಂಪನಿಯ ವಿರುದ್ಧ ಬೇಸರ ವ್ಯಕ್ತಪಡಿಸಿದ್ದಾಳೆ.

“ನಾನು ಇತ್ತೀಚಿಗೆ ನನ್ನ ಮನೆ ಬಳಿ ಇರುವ ಸಣ್ಣ ಕಂಪನಿಯಲ್ಲಿ ಕೆಲಸದ ಸಂದರ್ಶನಕ್ಕೆ ಹೋಗಿದ್ದೆ. ನನಗೆ ಜಾವಾಸ್ಕ್ರಿಪ್ಟ್, ಟೈಪ್ಸ್ಕ್ರಿಪ್ಟ್, ಹೆಚ್​ಟಿಎಮ್​ಎಲ್​, ಸಿಎಸ್​ಎಸ್​ನಲ್ಲಿ 10 ವರ್ಷದ ಅನುಭವಿದೆ. ಇಷ್ಟು ವರ್ಷ ಅನುಭವ ಹೊಂದಿರುವ ನನಗೆ ಸಂದರ್ಶಕರು ಲೊಜಿಕಲ್​ ಥಿಂಕಿಂಗ್​ ಅಥವಾ ಕೋಡಿಂಗ್​ಗೆ​ ಸಂಬಂಧಿಸಿದ ಪ್ರಶ್ನೆಗಳನ್ನು ಕೇಳಬಹುದಿತ್ತು. ಆದರೆ ನನಗೆ ರಾಷ್ಟ್ರಧ್ವಜ ಬಿಡಿಸಲು ಹೇಳಿದರು” ಎಂದು ಟೆಕ್ಕಿ ಹೇಳಿದ್ದಾಳೆ.

“ಸಂದರ್ಶನದಲ್ಲಿ ಸಂದರ್ಶಕರು ಮೊದಲಿಗೆ ಟೆಕ್ಕಿಗೆ ಸಿಎಸ್​ಎಸ್​ಗೆ ಸಂಬಂಧಿಸಿದ ಕೆಲವು ಪ್ರಶ್ನೆಗಳನ್ನು ಕೇಳಿದ್ದಾರೆ. ಬಳಿಕ ಸಿಎಸ್​ಎಸ್​ ಮುಖಾಂತರ ಭಾರತದ ಧ್ವಜ ಬಿಡಿಸುವಂತೆ ಹೇಳಿದ್ದಾರೆ. ಇದಕ್ಕೆ ಸಮ್ಮತಿಸಿದ ಟೆಕ್ಕಿ ಭಾರತದ ಧ್ವಜ ಬಿಡಿಸಿದ್ದಾರೆ. ನಂತರ ಸಂದರ್ಶಕರು ಅಶೋಕ ಚಕ್ರ ಬಿಡಿಸಲು ಹೇಳಿದ್ದಾರೆ. ಇದಕ್ಕೂ ಸಮ್ಮತಿಸಿದ ಟೆಕ್ಕಿ ಅಶೋಕ ಚಕ್ರ ಬಿಡಿಸಿದ್ದಾಳೆ. ನಂತರ ಸಂದರ್ಶಕರು ಅಶೋಕ ಚಕ್ರದೊಳಗೆ 24 ಗೆರೆಗಳನ್ನು ಹಾಕಿ ಎಂದು ಹೇಳಿದ್ದಾರೆ. ಈ ವೇಳೆ ತಾಳ್ಮೆ ಕಳೆದುಕೊಂಡ ಟೆಕ್ಕಿ ಇಂತಹ ಪ್ರಶ್ನೆಗಳನ್ನು ಏಕೆ ಕೇಳುತ್ತಿದ್ದೀರಿ ಎಂದು ಸಂದರ್ಶಕರಿಗೆ ಪ್ರಶ್ನಿಸಿದ್ದಾಳೆ. ಆಗ ಸಂದರ್ಶಕರು ನಿಮ್ಮ ಜ್ಞಾನವನ್ನು ಪರೀಕ್ಷಿಸಲು ಎಂದು ಉತ್ತರಿಸಿದ್ದಾರೆ.”

ಇದನ್ನೂ ಓದಿ: ನವೆಂಬರ್​ 1 ರಂದು ಐಟಿಬಿಟಿ ಕಂಪನಿಗಳು ಕನ್ನಡ ಬಾವುಟ ಹಾರಿಸುವುದು ಕಡ್ಡಾಯ: ಡಿಕೆ ಶಿವಕುಮಾರ್​

“ಸಾಮಾನ್ಯವಾಗಿ ಇಂತಹ ಪ್ರಶ್ನೆಗಳನ್ನು ಕಾಲೇಜಿನ ಪ್ರಾಯೋಗಿಕ ಪರೀಕ್ಷೆಗಳ ಸಮಯದಲ್ಲಿ ನನಗೆ ಕೇಳಿದ್ದರು. ಆದರೆ, ಸಂದರ್ಶನದಲ್ಲಿ ಇಂತಹ ಪ್ರಶ್ನೆಗಳನ್ನು ಕೇಳಿದ್ದು, ನಿಜವಾಗಿಯೂ ನನಗೆ ಕಿರಿಕಿರಿ ಉಂಟುಮಾಡಿತು. ಹೀಗಾಗಿ ನಾನು ಸಂದರ್ಶನದಿಂದ ಹೊರ ನಡೆದೆ” ಎಂದು ಟೆಕ್ಕಿ ರೆಡ್ಡಿಟ್​ನಲ್ಲಿ ಪೋಸ್ಟ್ ಹಾಕಿದ್ದಾಳೆ.

Interviewer asked me to make Indian flag using CSS and i am 10 years experience in frontend. byu/sabki-bajaungi indevelopersIndia

ಟೆಕ್ಕಿಯ ಪೋಸ್ಟ್​​ಗೆ ಹಲವರು ಪರ-ವಿರೋಧದ ಕಾಮೆಂಟ್​ ಮಾಡಿದ್ದಾರೆ. “ಇಂತಹ ಪ್ರಶ್ನೆಗಳನ್ನು ಆಗತಾನೆ ಕಾಲೇಜು ಮುಗಿಸಿಕೊಂಡು ಬಂದರಿವ ಫ್ರೆಶರ್‌ಗಳಿಗೆ ಕೇಳಬೇಕು. 10 ವರ್ಷಗಳ ಅನುಭವ ಹೊಂದಿರುವವರಿಗೆ ಇಂತಹ ಪ್ರಶ್ನೆಗಳನ್ನು ಕೇಳುವುದು ಅನಗತ್ಯವಾಗಿದೆ” ಎಂದು ಓರ್ವ ಕಾಮೆಂಟ್​ ಮಾಡಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Published On - 9:11 am, Mon, 14 October 24

ಸ್ಪರ್ಧಿಗಳ ವರ್ತನೆಗೆ, ಉಡಾಫೆತನಕ್ಕೆ ಬೇಸತ್ತ ಬಿಗ್ ಬಾಸ್
ಸ್ಪರ್ಧಿಗಳ ವರ್ತನೆಗೆ, ಉಡಾಫೆತನಕ್ಕೆ ಬೇಸತ್ತ ಬಿಗ್ ಬಾಸ್
ಅಯೋಧ್ಯೆ ಬಾಲರಾಮನ ದರ್ಶನಕ್ಕೆ ಸೈಕಲ್ ಏರಿ ಹೊರಟ ಕೋಲಾರ ಯುವಕರು
ಅಯೋಧ್ಯೆ ಬಾಲರಾಮನ ದರ್ಶನಕ್ಕೆ ಸೈಕಲ್ ಏರಿ ಹೊರಟ ಕೋಲಾರ ಯುವಕರು
ಚಿಕ್ಕಬಳ್ಳಾಪುರದ ನಂದಿ ಗಿರಿಧಾಮದಲ್ಲಿ ಪ್ಯಾರಾಗ್ಲೈಡಿಂಗ್ ಆರಂಭ
ಚಿಕ್ಕಬಳ್ಳಾಪುರದ ನಂದಿ ಗಿರಿಧಾಮದಲ್ಲಿ ಪ್ಯಾರಾಗ್ಲೈಡಿಂಗ್ ಆರಂಭ
ಭಾರತದ ವಿಶ್ವಕಪ್ ಹೀರೋಗೆ ಹುಟ್ಟುಹಬ್ಬದ ಶುಭಾಶಯಗಳು
ಭಾರತದ ವಿಶ್ವಕಪ್ ಹೀರೋಗೆ ಹುಟ್ಟುಹಬ್ಬದ ಶುಭಾಶಯಗಳು
Daily Devotional: ನಿಸ್ವಾರ್ಥ ಸೇವೆಯ ಫಲ ಹೇಗಿರುತ್ತದೆ? ಈ ವಿಡಿಯೋ ನೋಡಿ
Daily Devotional: ನಿಸ್ವಾರ್ಥ ಸೇವೆಯ ಫಲ ಹೇಗಿರುತ್ತದೆ? ಈ ವಿಡಿಯೋ ನೋಡಿ
ಈ ರಾಶಿಯವರಿಗೆ ಬಂಧುಗಳ ಸಂಪತ್ತು ಕಾರಣಾಂತರಗಳಿಂದ ನಿಮಗೆ ಸಿಗಬಹುದು
ಈ ರಾಶಿಯವರಿಗೆ ಬಂಧುಗಳ ಸಂಪತ್ತು ಕಾರಣಾಂತರಗಳಿಂದ ನಿಮಗೆ ಸಿಗಬಹುದು
ಮನೆ ಅಂಗಳಕ್ಕೆ ಎಂಟ್ರಿ ಕೊಟ್ಟ ಕರಿ ಚಿರತೆ; ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆ
ಮನೆ ಅಂಗಳಕ್ಕೆ ಎಂಟ್ರಿ ಕೊಟ್ಟ ಕರಿ ಚಿರತೆ; ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆ
ಸಿದ್ರಾಮಯ್ಯ ಕಾರು ಬರ್ತಿದ್ದಂತೆ ನುಗ್ಗಿಬಂದ ವ್ಯಕ್ತಿ; ವಶಕ್ಕೆ ಪಡೆದ ಪೊಲೀಸ್
ಸಿದ್ರಾಮಯ್ಯ ಕಾರು ಬರ್ತಿದ್ದಂತೆ ನುಗ್ಗಿಬಂದ ವ್ಯಕ್ತಿ; ವಶಕ್ಕೆ ಪಡೆದ ಪೊಲೀಸ್
ಹಂಸಾ, ಜಗದೀಶ್ ಬಗ್ಗೆ ನೇರವಾಗಿ ಮಾತಾಡಿದ ಧನರಾಜ್; ಕಿಚ್ಚ ಸುದೀಪ್​ಗೂ ಶಾಕ್
ಹಂಸಾ, ಜಗದೀಶ್ ಬಗ್ಗೆ ನೇರವಾಗಿ ಮಾತಾಡಿದ ಧನರಾಜ್; ಕಿಚ್ಚ ಸುದೀಪ್​ಗೂ ಶಾಕ್
ಎಡಿಜಿಪಿ ಚಂದ್ರಶೇಖರ್ ದಾಖಲಿಸಿದ ದೂರಿನ ಬಗ್ಗೆ ಕುಮಾರಸ್ವಾಮಿ ಖಡಕ್ ಮಾತು
ಎಡಿಜಿಪಿ ಚಂದ್ರಶೇಖರ್ ದಾಖಲಿಸಿದ ದೂರಿನ ಬಗ್ಗೆ ಕುಮಾರಸ್ವಾಮಿ ಖಡಕ್ ಮಾತು