AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ದರ್ಶನ್ ಕೇಸ್​ ಬಳಿಕವೂ ನಿಲ್ಲದ ರಾಜಾತಿಥ್ಯ: ಜೈಲಿನಿಂದಲೇ ಜೀವ ಬೆದರಿಕೆ ಸಂದೇಶ ರವಾನೆ

ನಟ ದರ್ಶನ್ ರಾಜಾತಿಥ್ಯ ಕೇಸ್ ಬಳಿಕವೂ ಜೈಲ್ಲಿನಲ್ಲಿ ಮೊಬೈಲ್ ಹಾವಳಿ‌ ಕಡಿವಾಣ ಬಿದ್ದಿಲ್ಲ. ಜೈಲ್ಲಿನಿಂದಲ್ಲೇ ಇನ್ಸ್ಟಾಗ್ರಾಮ್ ಮೂಲಕ ಬೆದರಿಕೆ ಹಾಕಿರುವ ಗಂಭೀರ ಆರೋಪ ಕೇಳಿಬಂದಿದೆ. 2021 ರಲ್ಲಿ ರಾಜಧಾನಿಯನ್ನ ಬೆಚ್ಚಿ ಬೀಳಿಸಿದ್ದ ಜೋಸೆಫ್ ಅಲಿಯಾಸ್ ಬಬ್ಲಿ ಕೊಲೆ ಪ್ರಕರಣದ ಸಾಕ್ಷಿಗಳಿಗೆ ಇನ್ಸ್ಟಾಗ್ರಾಮ್ ಮೂಲಕ ವಾಯ್ಸ್ ಮೇಸೆಜ್ ಮಾಡಿ ಬೆದರಿಕೆವೊಡ್ಡಿದ್ದಾರೆ.

ದರ್ಶನ್ ಕೇಸ್​ ಬಳಿಕವೂ ನಿಲ್ಲದ ರಾಜಾತಿಥ್ಯ: ಜೈಲಿನಿಂದಲೇ ಜೀವ ಬೆದರಿಕೆ ಸಂದೇಶ ರವಾನೆ
ದರ್ಶನ್ ಕೇಸ್​ ಬಳಿಕವೂ ನಿಲ್ಲದ ರಾಜಾತಿಥ್ಯ: ಜೈಲಿನಿಂದಲೇ ಜೀವ ಬೆದರಿಕೆ ಸಂದೇಶ ರವಾನೆ
Shivaprasad B
| Edited By: |

Updated on: Oct 13, 2024 | 6:26 PM

Share

ಬೆಂಗಳೂರು, ಅಕ್ಟೋಬರ್​​ 13: ಪರಪ್ಪನ ಅಗ್ರಹಾರ ಜೈಲು ರೌಡಿಗಳ ಅಟ್ಟಹಾಸಕ್ಕೆ ಸ್ಕೆಚ್ ಹಾಕುವ ಅಡ್ಡೆಯಾಗಿದೆಯಾ? ದರ್ಶನ್ (Darshan) ರಾಜಾತಿಥ್ಯ ಪ್ರಕರಣದಲ್ಲಿ ಸಾಲು ಸಾಲಾಗಿ ಅಧಿಕಾರಿಗಳು ಸಸ್ಪೆಂಡ್ ಆದ್ರೂ ಪರಪ್ಪನ ಅಗ್ರಹಾರದಲ್ಲಿ ಮೊಬೈಲ್ ಬಳಕೆಗೆ ಬ್ರೇಕ್ ಹಾಕುವಲ್ಲಿ ವಿಫಲರಾದರಾ ಅನ್ನೋ ಮಾತು ಕೇಳಿಬರ್ತಿದೆ. ಸದ್ಯ ಪರಪ್ಪನ ಅಗ್ರಹಾರ ಮತ್ತೆ ಸುದ್ದಿಯಾಗುತ್ತಿರುವುದಕ್ಕೆ ಕಾರಣ, ಮತ್ತೆ ರೌಡಿಗಳ ಮೊಬೈಲ್ ಆಕ್ಟಿವ್ ಆಗಿದೆ ಎನ್ನಲಾಗುತ್ತಿದೆ.

ಪರಪ್ಪನ ಅಗ್ರಹಾರ ಜೈಲಿನಲ್ಲಿ ಮತ್ತೆ ರೌಡಿಗಳ ಮೊಬೈಲ್ ಆಕ್ಟಿವ್ ಆಗಿದೆಯಾ?

ಯೆಸ್.. ನಟ ದರ್ಶನ್ ರಾಜಾತಿಥ್ಯ ಕೇಸ್ ಬಳಿಕವೂ ಜೈಲ್ಲಿನಲ್ಲಿ ಮೊಬೈಲ್ ಹಾವಳಿ‌ ಕಡಿವಾಣ ಬಿದ್ದಿಲ್ಲ. ಜೈಲ್ಲಿನಿಂದಲ್ಲೇ ಇನ್ಸ್ಟಾಗ್ರಾಮ್ ಮೂಲಕ ಬೆದರಿಕೆ ಹಾಕಿರುವ ಗಂಭೀರ ಆರೋಪ ಕೇಳಿಬಂದಿದೆ. 2021 ರಲ್ಲಿ ರಾಜಧಾನಿಯನ್ನ ಬೆಚ್ಚಿ ಬೀಳಿಸಿದ್ದ ಜೋಸೆಫ್ ಅಲಿಯಾಸ್ ಬಬ್ಲಿ ಕೊಲೆ ಪ್ರಕರಣದ ಸಾಕ್ಷಿಗಳಿಗೆ ಇನ್ಸ್ಟಾಗ್ರಾಮ್ ಮೂಲಕ ವಾಯ್ಸ್ ಮೇಸೆಜ್ ಮಾಡಿ ಬೆದರಿಕೆವೊಡ್ಡಿದ್ದಾರೆ. ಜೈಲ್ಲಿನಲ್ಲಿರುವ ಕೈದಿ ಸೋಮಶೇಖರ್ ಅಲಿಯಾಸ್ ಸೋಮ‌ ಎಂಬಾತ ಆರ್ಮುಗಂ ಬೆದರಿಕೆ ವೊಡ್ಡಿದ್ದಾನೆ ಎನ್ನಲಾಗಿದೆ. ಪ್ರಕರಣದ ಸಾಕ್ಷ್ಯ ಆಟೋ ಚಾಲಕ ಆಮುರ್ಗಂ ಗೆ ಇನ್ಸ್ಟಾಗ್ರಾಮ್ ಮೂಲಕ ಬೆದರಿಕೆ ಹಾಕಲಾಗಿದೆ ಎನ್ನಲಾಗಿದ್ದು ಸಿಸಿಬಿಯಲ್ಲಿ ಎಫ್ಐಆರ್ ದಾಖಲಾಗಿದೆ.

ರೌಡಿ ಕೊಲೆ ಕೇಸ್ ಐ ವಿಟ್ನಸ್​ಗೆ ಸಾಕ್ಷ್ಯ ಹೇಳದಂತೆ ಬೆದರಿಕೆ!

ಬಬ್ಲಿ ಕೊಲೆ ಪ್ರಕರಣದಲ್ಲಿ ಆರ್ಮುಗಂ ಪ್ರತ್ಯಕ್ಷ ಸಾಕ್ಷಿ. ಸೆಪ್ಟೆಂಬರ್​ನಲ್ಲಿ ಸೋಮ ಹೆಸರಿನ ಐಡಿಯಿಂದ ಮೂರು ವಾಯ್ಸ್ ಮೇಸೆಜ್ ಕಳುಹಿಸಿ. ‘ಜೋಸೆಫ್ ಬಾಬು ಅಲಿಯಾಸ್ ಬಬ್ಲಿ ಕೊಲೆ ಕೇಸ್​ನಲ್ಲಿ ಯಾರೊಬ್ಬರು ಕೋರ್ಟ್​ನಲ್ಲಿ ಸಾಕ್ಷಿ ಹೇಳಬಾರದು ಎಂದು ಬೆದರಿಸಿದ್ದಾರೆ. ಬಬ್ಲಿ ಹೆಂಡತಿ, ಸುನೀಲ ಅಲಿಯಾಸ್ ಸೊಂಡಿಲಿ ಜಾರ್ಜ್, ನಾದನಿಗೂ ತಲುಪಿಸು ಎಂದು ಮೇಸೆಜ್ ಹಾಕಿದ್ದಾರೆ.

ಇದನ್ನೂ ಓದಿ: ಜೈಲಿನಲ್ಲಿ ದರ್ಶನ್​ಗೆ ರಾಜಾತಿಥ್ಯ ಕೇಸ್: ಮೊಬೈಲ್ ರವಾನೆ ಮಾಡ್ತಿದ್ದ ಕಿಂಗ್​ ಪಿನ್​​​ ಲಾಕ್

ಹೇಳಿದಂತೆ ಕೇಳದಿದ್ದರೆ ಎಲ್ಲರನ್ನೂ ಹೊಡೆದು ಹಾಕುತ್ತೇವೆ. ವಿವೇಕನಗರದಲಿ ನಡೆದ ರೌಡಿ ಮಿಲ್ಟ್ರಿ ಸತೀಶ್ ಹತ್ಯೆ ಬಗ್ಗೆಯೂ ಮಾತನಾಡಿದ್ದು, ಮಿಲ್ಟ್ರಿ ಸತೀಶನನ್ನು ಹೊಡೆಸಿದ್ದೇವೆ. ಆಟೋ ಓಡಿಸುವ ನಿನ್ನನ್ನು ಮುಗಿಸುತ್ತೇವೆ ಎಂದು ಬೆದರಿಕೆ ಹಾಕಿದ್ದಾರೆ. 2021 ರ ಜುಲೈ 19 ಕೋರಮಂಗಲ ಎಂಟನೇ ಬ್ಲಾಕ್ ಬ್ಯಾಂಕ್ ನಲ್ಲಿ ನಡೆದಿದ್ದ ಜೋಸೆಫ್ ಅಲಿಯಾಸ್ ಬಬ್ಲಿ ಭೀಕರ ಕೊಲೆ ನಡೆದಿತ್ತು. ಬಬ್ಲಿ ಪತ್ನಿ ಎದುರೇ ಹಳೇ ವೈಷಮ್ಯದ ಹಿನ್ನಲೆ ರೌಡಿ ಗ್ಯಾಂಗ್ ಮಾರಕಾಸ್ತ್ರಗಳಿಂದ ಮನಸೋಇಚ್ಚೆ ಮಾರಣಾಂತಿಕ ಹಲ್ಲೆ ನಡೆಸಿ ಹತ್ಯೆಗೈದಿದ್ದರು.

ಸದ್ಯದ ಬೆಳವಣಿಗೆಗಳ ಗಮನಿಸುತ್ತಿದ್ದರೆ, ಪರಪ್ಪನ ಅಗ್ರಹಾರ ಜೈಲಿನಲ್ಲಿ ಮತ್ತೆ ಮೊಬೈಲ್​ಗಳು ರಿಂಗಣಿಸ್ತಿದ್ದು, ಜೈಲಿನಲ್ಲಿ ಆರೋಪಿಗಳನ್ನಿಡುವ ಮೂಲ ಉದ್ದೇಶಕ್ಕೆ ಕೊಳ್ಳಿ ಇಟ್ಟಂತಾಗಿದ್ದು, ಬಂದೀಖಾನೆ ಇಲಾಖೆ ಜೈಲಿನಲ್ಲಿ ಮೊಬೈಲ್ ಬಳಕೆಗೆ ಕಡಿವಾಣ ಹಾಕಿವಲ್ಲಿ ವಿಫಲರಾಗಿದ್ದಾರೆ ಅನ್ನೋ ಗಂಭೀರ ಪ್ರಶ್ನೆ ಉದ್ಭವಿಸಿದೆ. ಪರಪ್ಪನ ಜೈಲಿನಿಂದಲೇ ಧಮ್ಕಿ ಹಾಕಿರುವ ಬಗ್ಗೆ ಆರ್ಮುಗಂನಿಂದ ಸಿಸಿಬಿಗೆ ದೂರು ನೀಡಿದ್ದು, ಸಿಸಿಬಿಯಲ್ಲಿ ಎಫ್ ಐ ಆರ್ ದಾಖಲಿಸಿ ತನಿಖೆ ನಡೆಸ್ತಿದ್ದಾರೆ.

ಇದನ್ನೂ ಓದಿ: ದರ್ಶನ್​​ಗೆ ರಾಜಾತಿಥ್ಯ: 7 ಜನರ ಸಸ್ಪೆಂಡ್ ಆದೇಶ ಬೆನ್ನಲ್ಲೇ ವೈರಲ್ ಆಯ್ತು ಅದೊಂದು ಆದೇಶ ಪತ್ರ

ನಟ ದರ್ಶನ್ ರಾಜಾಥಿತ್ಯ ಕೇಸ್ ನಲ್ಲಿ ಅಧಿಕಾರಿಗಳು ಸಸ್ಪೆಂಡ್ ಆದ್ರೂ ಮತ್ತೆ ರೌಡಿಗಳ ಮೊಬೈಲ್ ಆಕ್ಟಿವ್ ಆಗಿರೋದು ಕಳವಳಕಾರಿ ಸಂಗತಿಯಾಗಿದೆ. ಇಲಾಖೆ ಹತ್ತಾರು ಕೋಟಿ ರೂ. ಹಣ ವ್ಯಯಿಸಿ ಜಾಮರ್ ವ್ಯವಸ್ಥೆ ಮಾಡಿದ್ರು ನಿಷ್ಪ್ರಯೋಜಕವಾಗಿರೋದು ದುರಂತವೇ ಸರಿ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

ನಿಧಿ ಸಂಗ್ರಹ ಮಾಡೋದೇ ಈ ಅಜ್ಜನ ಕಾಯಕ; ಸರ್ಕಾರಕ್ಕೆ ನೀಡಿಲ್ಲ ಎಂದ ತೋಟಯ್ಯ
ನಿಧಿ ಸಂಗ್ರಹ ಮಾಡೋದೇ ಈ ಅಜ್ಜನ ಕಾಯಕ; ಸರ್ಕಾರಕ್ಕೆ ನೀಡಿಲ್ಲ ಎಂದ ತೋಟಯ್ಯ
ಕಾಡ್ಗಿಚ್ಚಿನಿಂದ ನಾಶವಾಯ್ತು ನಂದಾ ದೇವಿ ಅರಣ್ಯದ ಅಪರೂಪದ ಸಸ್ಯ ಸಂಪತ್ತು
ಕಾಡ್ಗಿಚ್ಚಿನಿಂದ ನಾಶವಾಯ್ತು ನಂದಾ ದೇವಿ ಅರಣ್ಯದ ಅಪರೂಪದ ಸಸ್ಯ ಸಂಪತ್ತು
ತಮಿಳುನಾಡಿನ ಮಧುರೈನಲ್ಲಿ ಜಲ್ಲಿಕಟ್ಟು ಸ್ಪರ್ಧೆ ಆರಂಭ
ತಮಿಳುನಾಡಿನ ಮಧುರೈನಲ್ಲಿ ಜಲ್ಲಿಕಟ್ಟು ಸ್ಪರ್ಧೆ ಆರಂಭ
ಸಾವಿನಿಂದ ಕೂದಲೆಳೆ ಅಂತರದಲ್ಲಿ ಪಾರಾದ ಕ್ರಿಕೆಟಿಗ
ಸಾವಿನಿಂದ ಕೂದಲೆಳೆ ಅಂತರದಲ್ಲಿ ಪಾರಾದ ಕ್ರಿಕೆಟಿಗ
ವೈಭವ್ ಸೂರ್ಯವಂಶಿ ವಿಕೆಟ್ ಹಾರಿಸಿದ ಕೊಹ್ಲಿಯ ಅಪ್ಪಟ ಅಭಿಮಾನಿ
ವೈಭವ್ ಸೂರ್ಯವಂಶಿ ವಿಕೆಟ್ ಹಾರಿಸಿದ ಕೊಹ್ಲಿಯ ಅಪ್ಪಟ ಅಭಿಮಾನಿ
ಬಿಗ್ ಬಾಸ್ ಫಿನಾಲೆ: ಗಿಲ್ಲಿ ಗೆಲ್ಲಲಿ ಎಂದು ವಿಶೇಷ ಪೂಜೆ ಮಾಡಿಸಿದ ಫ್ಯಾನ್ಸ್
ಬಿಗ್ ಬಾಸ್ ಫಿನಾಲೆ: ಗಿಲ್ಲಿ ಗೆಲ್ಲಲಿ ಎಂದು ವಿಶೇಷ ಪೂಜೆ ಮಾಡಿಸಿದ ಫ್ಯಾನ್ಸ್
ಗವಿಗಂಗಾಧರೇಶ್ವರ ಸನ್ನಿಧಿಯಲ್ಲಿ ವಿಸ್ಮಯ: ಶಿವಲಿಂಗಕ್ಕೆ ಸೂರ್ಯರಶ್ಮಿ ಸ್ಪರ್ಶ
ಗವಿಗಂಗಾಧರೇಶ್ವರ ಸನ್ನಿಧಿಯಲ್ಲಿ ವಿಸ್ಮಯ: ಶಿವಲಿಂಗಕ್ಕೆ ಸೂರ್ಯರಶ್ಮಿ ಸ್ಪರ್ಶ
ತರಕಾರಿ ಮಾರಿದ ಹಣದಲ್ಲಿ ಬೆಳ್ಳಿ ಬಾಗಿಲು ಮಾಡಿಸಿದ್ದ ದಾನಜ್ಜಿ ಭೀಕರ ಹತ್ಯೆ
ತರಕಾರಿ ಮಾರಿದ ಹಣದಲ್ಲಿ ಬೆಳ್ಳಿ ಬಾಗಿಲು ಮಾಡಿಸಿದ್ದ ದಾನಜ್ಜಿ ಭೀಕರ ಹತ್ಯೆ
ಮೊದಲ ಪಂದ್ಯದಲ್ಲೇ 5 ವಿಕೆಟ್ ಉರುಳಿಸಿದ ಹೆನಿಲ್ ಪಟೇಲ್
ಮೊದಲ ಪಂದ್ಯದಲ್ಲೇ 5 ವಿಕೆಟ್ ಉರುಳಿಸಿದ ಹೆನಿಲ್ ಪಟೇಲ್
ಶ್ರೀರಾಮನಿಗೆ ಮುಸ್ಲಿಂ ಶಾಸಕ ಪೂಜೆ , ಹಿಂದೂ ಧರ್ಮದ ಬಗ್ಗೆ ಹೇಳಿದ್ದಿಷ್ಟು
ಶ್ರೀರಾಮನಿಗೆ ಮುಸ್ಲಿಂ ಶಾಸಕ ಪೂಜೆ , ಹಿಂದೂ ಧರ್ಮದ ಬಗ್ಗೆ ಹೇಳಿದ್ದಿಷ್ಟು