AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ದರ್ಶನ್​​ಗೆ ರಾಜಾತಿಥ್ಯ: 7 ಜನರ ಸಸ್ಪೆಂಡ್ ಆದೇಶ ಬೆನ್ನಲ್ಲೇ ವೈರಲ್ ಆಯ್ತು ಅದೊಂದು ಆದೇಶ ಪತ್ರ

ಆಗಸ್ಟ್​ 14ರಂದು ಹೊರಡಿಸಲಾಗಿತ್ತು ಎನ್ನಲಾದ ಆದೇಶ ಪತ್ರದಲ್ಲಿ ಕಾರಾಗೃಹದ ಭದ್ರತಾ ವಿಭಾಗ, ಬ್ಯಾರಕ್​, ಸೆಲ್‌ಗಳಲ್ಲಿರುವ ರೌಡಿಶೀಟರ್ಸ್​​, ರಾಷ್ಟ್ರೀಯ-ಅಂತರ್‌ರಾಷ್ಟ್ರೀಯ ಉಗ್ರವಾದಿ ಬಂದಿಗಳು, ನಕ್ಸಲ್ ಬಂದಿಗಳು ಎಲ್ಲರ ಭದ್ರತೆಯನ್ನು ಪ್ರತಿದಿನ ಖುದ್ದು ಪರಿಶೀಲಿಸಬೇಕು. ಕಾರಾಗೃಹಗಳ ಡಿಜಿಪಿ ಮಾಲಿನಿ ಕೃಷ್ಣ ಮೂರ್ತಿಯಿಂದ ಪರಪ್ಪನ ಅಗ್ರಹಾರ ಮುಖ್ಯ ಅಧೀಕ್ಷಕ ಶೇಷಮೂರ್ತಿಗೆ ಬರೆದಿದ್ದ ಪತ್ರ ಇದೀಗ ವೈರಲ್​ ಆಗುತ್ತಿದೆ.

ದರ್ಶನ್​​ಗೆ ರಾಜಾತಿಥ್ಯ: 7 ಜನರ ಸಸ್ಪೆಂಡ್ ಆದೇಶ ಬೆನ್ನಲ್ಲೇ ವೈರಲ್ ಆಯ್ತು ಅದೊಂದು ಆದೇಶ ಪತ್ರ
ದರ್ಶನ್​​ಗೆ ರಾಜಾತಿಥ್ಯ: 7 ಜನರ ಸಸ್ಪೆಂಡ್ ಆದೇಶ ಬೆನ್ನಲ್ಲೆ ವೈರಲ್ ಆಯ್ತು ಅದೊಂದು ಆದೇಶ ಪತ್ರ
Jagadisha B
| Updated By: ಗಂಗಾಧರ​ ಬ. ಸಾಬೋಜಿ|

Updated on:Aug 26, 2024 | 4:33 PM

Share

ಬೆಂಗಳೂರು, ಆಗಸ್ಟ್​ 26: ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ಕೊಲೆ ಆರೋಪಿ ನಟ ದರ್ಶನ್ (Darshan) ಫೋಟೋಗಳು ವೈರಲ್ ಆಗುತ್ತಿದ್ದಂತೆ ರಾಜ್ಯದಲ್ಲಿ ದೊಡ್ಡ ಸಂಚಲನ ಎಬ್ಬಸಿದೆ. ಈ ವಿಚಾರವಾಗಿ ಏಳು ಅಧಿಕಾರಿಗಳನ್ನು ಅಮಾನತ್ತು ಮಾಡಲಾಗಿದೆ. ಅದರ ಬೆನ್ನಲ್ಲೇ ಇದೀಗ ಅದೊಂದು ಆದೇಶ ಪತ್ರ ವೈರಲ್ ಆಗುತ್ತಿದೆ. ಕಾರಾಗೃಹ ಡಿಜಿಪಿ ಮಾಲಿನಿ ಕೃಷ್ಣ ಮೂರ್ತಿ ಅವರು ಕಳೆದ 12 ದಿನಗಳ ಹಿಂದೆ ಪರಪ್ಪನ ಅಗ್ರಹಾರ ಮುಖ್ಯ ಅಧೀಕ್ಷಕ ಶೇಷಮೂರ್ತಿಗೆ ಬರೆದಿದ್ದ ಆದೇಶದ ಪತ್ರ ವೈರಲ್ ಆಗುತ್ತಿದೆ.

ಆಗಸ್ಟ್​ 14ರಂದು ಹೊರಡಿಸಲಾಗಿತ್ತು ಎನ್ನಲಾದ ಆದೇಶ ಪತ್ರದಲ್ಲಿ ಕಾರಾಗೃಹದ ಭದ್ರತಾ ವಿಭಾಗ, ಬ್ಯಾರಕ್​, ಸೆಲ್‌ಗಳಲ್ಲಿರುವ ರೌಡಿಶೀಟರ್ಸ್​​, ರಾಷ್ಟ್ರೀಯ-ಅಂತರ್‌ರಾಷ್ಟ್ರೀಯ ಉಗ್ರವಾದಿ ಬಂದಿಗಳು, ನಕ್ಸಲ್ ಬಂದಿಗಳು ಎಲ್ಲರ ಭದ್ರತೆಯನ್ನು ಪ್ರತಿದಿನ ಖುದ್ದು ಪರಿಶೀಲಿಸಬೇಕು.

ಇದನ್ನೂ ಓದಿ: ದರ್ಶನ್ ಗೆ ರಾಜಾತಿಥ್ಯ; ಹಿರಿಯ ಅಧಿಕಾರಿಗಳೂ ಶಾಮೀಲಾಗಿದ್ದರೆ ಅವರ ವಿರುದ್ಧ ಕ್ರಮ: ಸಿದ್ದರಾಮಯ್ಯ

ಯಾವುದೇ ನಿಷೇಧಿತ ವಸ್ತುಗಳು ದೊರೆಯದಂತೆ ಹೆಚ್ಚಿನ ನಿಗಾವಹಿಸಬೇಕು. ಯಾವುದೇ ರೀತಿಯ ಅಹಿತಕರ ಘಟನೆ ನಡೆಯದಂತೆ ಕ್ರಮ ಕೈಗೊಳ್ಳಬೇಕು. ಕಾರಾಗೃಹಗಳ ಉಪಮಹಾನಿರೀಕ್ಷಕರಿಗೆ ಪ್ರತಿನಿತ್ಯ ವರದಿ ಸಲ್ಲಿಸಬೇಕು. ಈ ವಿಚಾರದಲ್ಲಿ ನಿರ್ಲಕ್ಷ್ಯ ಮತ್ತು ಬೇಜವಾಬ್ದಾರಿತನ ತೋರಿದಲ್ಲಿ ನಿಮ್ಮ ಕರ್ತವ್ಯಲೋಪವೆಂದು ಪರಿಗಣಿಸಲಾಗುವುದು. ಮುಖ್ಯ ಅಧೀಕ್ಷಕರಾದ ನಿಮ್ಮನ್ನೇ ನೇರ ಹೊಣೆಗಾರರನ್ನಾಗಿ ಮಾಡಲಾಗುವುದು ಎಂದು ಪತ್ರದಲ್ಲಿ ಉಲ್ಲೇಖಿಸಲಾಗಿದೆ.

ಇದನ್ನೂ ಓದಿ: ದರ್ಶನ ಮತ್ತು ಇತರರನ್ನು ಬೇರೆ ಕಾರಾಗೃಹಗಳಿಗೆ ಸ್ಥಳಾಂತರಿಸಿ; ಸಿದ್ದರಾಮಯ್ಯ ಸೂಚನೆ

ದರ್ಶನ್‌ಗೆ ಜೈಲಿನಲ್ಲಿ ಸಿಗರೇಟು ಮಾತ್ರವಲ್ಲ ಎಲ್ಲಾ ವಸ್ತುಗಳ ವ್ಯವಸ್ಥೆ ಆಗುತ್ತಿದೆ. ಮನೆ ಊಟ ಮಾತ್ರವಲ್ಲ, ಫೇಮಸ್ ಮಿಲ್ಟ್ರಿ ಹೋಟೆಲ್‌ ಬಿರಿಯಾನಿ ಕೂಡ ಸಪ್ಲೈ ಆಗುತ್ತಿದೆಯಂತೆ. ಬನಶಂಕರಿಯ ಫೇಮಸ್‌ ಶಿವಾಜಿ ಮಿಲ್ಟ್ರಿ ಹೋಟೆಲ್‌ನಿಂದಲೇ ಬಿರಿಯಾನಿ ಹೋಗುತ್ತಿದೆಯಂತೆ. ಊಟದ ಜೊತೆಗೆ ಬೇಕಾದಾಗ ಕಿಕ್ಕೇರಿಸಿಕೊಳ್ಳಲು ಎಣ್ಣಯೂ ಸಿಗುತ್ತಿದೆ. ಜೈಲಿನಲ್ಲಿರೋ ನಟೋರಿಯಸ್‌ಗಳ ಜೊತೆಗೆ ದರ್ಶನ್ ಎಣ್ಣೆ ಪಾರ್ಟಿ ಮಾಡ್ತಿದ್ದಾರಂತೆ. ದರ್ಶನ್ ಇರುವ ಹೈಸೆಕ್ಯೂರಿಟಿ ಬ್ಯಾರಕ್‌ನಲ್ಲೇ ನಿತ್ಯ ಆ ಪಾರ್ಟಿಗಳು ನಡೀತಿವೆಯಂತೆ. ಪಾರ್ಟಿಯಲ್ಲಿ ರೌಡಿಗಳಾದ ವಿಲ್ಸನ್ ಗಾರ್ಡನ್ ನಾಗ, ಬೇಕರಿ ರಘು ಇರ್ತಾರಂತೆ. ಜೊತೆಗೆ ದರ್ಶನ್ ಆಪ್ತ ನಾಗರಾಜ್ ಮತ್ತು ಪವನ್ ಕೂಡ ಭಾಗಿಯಾಗಿರುತ್ತಾರಂತೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 4:24 pm, Mon, 26 August 24