ಜೈಲಿನಲ್ಲಿ ದರ್ಶನ್​ಗೆ ರಾಜಾತಿಥ್ಯ ಕೇಸ್: ಮೊಬೈಲ್ ರವಾನೆ ಮಾಡ್ತಿದ್ದ ಕಿಂಗ್​ ಪಿನ್​​​ ಲಾಕ್

ಪರಪ್ಪನ ಅಗ್ರಹಾರ ಜೈಲಿನಲ್ಲಿ ದರ್ಶನ್​ಗೆ ರಾಜತಿಥ್ಯ ಕೇಸ್​​ಗೆ ಸಂಬಂಧಿಸಿದಂತೆ ಸೆಂಟ್ರಲ್ ಜೈಲ್​ನಲ್ಲಿ ಮೊಬೈಲ್​ ರವಾನೆ ಮಾಡುತ್ತಿದ್ದ ಕಿಂಗ್​ ಪಿನ್​ನನ್ನು ಪೊಲೀಸರು ಕೊನೆಗೂ ಲಾಕ್​ ಮಾಡಿದ್ದಾರೆ. ಇತ್ತೀಚೆಗೆ ಪತ್ತೆಯಾದ 26 ಮೊಬೈಲ್​ಗಳ ಜಾಡು ಹಿಡಿದ ಖಾಕಿ, ಕೆಜಿಎಫ್ ಮೂಲದ ವಿಜಯ್ ಎಂಬಾತನನ್ನು ಬಂಧಿಸಿದ್ದಾರೆ.

ಜೈಲಿನಲ್ಲಿ ದರ್ಶನ್​ಗೆ ರಾಜಾತಿಥ್ಯ ಕೇಸ್: ಮೊಬೈಲ್ ರವಾನೆ ಮಾಡ್ತಿದ್ದ ಕಿಂಗ್​ ಪಿನ್​​​ ಲಾಕ್
ಜೈಲಿನಲ್ಲಿ ದರ್ಶನ್​ಗೆ ರಾಜಾತಿಥ್ಯ ಕೇಸ್: ಮೊಬೈಲ್ ರವಾನೆ ಮಾಡ್ತಿದ್ದ ಕಿಂಗ್​ ಪಿನ್​​​ ಲಾಕ್
Follow us
| Updated By: ಗಂಗಾಧರ​ ಬ. ಸಾಬೋಜಿ

Updated on: Sep 20, 2024 | 3:18 PM

ಬೆಂಗಳೂರು, ಸೆಪ್ಟೆಂಬರ್​ 20: ಸೆಂಟ್ರಲ್ ಜೈಲ್ ಪರಪ್ಪನ ಅಗ್ರಹಾರದಲ್ಲಿ (Parappana Agrahara) ದರ್ಶನ್ ರಾಜಾತಿಥ್ಯ ಕೇಸ್​ ಬಳಿಕ ಸೆಂಟ್ರಲ್ ಜೈಲ್​ನಲ್ಲಿ 26 ಮೊಬೈಲ್​ಗಳು ಪತ್ತೆಯಾಗಿದ್ದವು. ಅವುಗಳ ಜಾಡು ಹಿಡಿದ ಹೊರಟ ಪೊಲೀಸರು  ಇದೀಗ ಕೊನೆಗೂ ಜೈಲ್​ನಲ್ಲಿ ಮೊಬೈಲ್​ ರವಾನೆ ಮಾಡುತ್ತಿದ್ದ ಖೈದಿಯನ್ನು ಲಾಕ್​ ಮಾಡಿದ್ದಾರೆ.

ಹೌದು. ಹ್ಯಾಂಡ್ರಾಯ್ಡ್ ಮೊಬೈಲ್​​ಗಳ ಅಂಗಡಿ ಜೈಲಲ್ಲಿ ಇಟ್ಟುಕೊಂಡು, 80 ರಿಂದ 90 ಸಾವಿರ ರೂಪಾಯಿಗೆ ಖೈದಿ ಮೊಬೈಲ್​ಗಳನ್ನ ಮಾರಾಟ ಮಾಡುತ್ತಿದ್ದ. ಕೆಜಿಎಫ್ ಮೂಲದ ವಿಜಯ್ ಎಂಬಾತನಿಂದ ಮೊಬೈಲ್​ ಮಾರಾಟ ಮಾಡುತ್ತಿದ್ದ.

ಇದನ್ನೂ ಓದಿ: ದರ್ಶನ್​ಗೆ ರಾಜಾತಿಥ್ಯ ನೀಡಿದ್ದ ಪರಪ್ಪನ ಅಗ್ರಹಾರದ ಮೇಲೆ ಸಿಸಿಬಿ ದಾಳಿ; ವಿಲ್ಸನ್ ಗಾರ್ಡನ್ ನಾಗನ ಫೋನ್ ಸೇರಿ 18 ಮೊಬೈಲ್ ಸೀಜ್

ಮರ್ಡರ್ ಕೇಸ್​ನಲ್ಲಿ ಜೈಲಲ್ಲಿರುವ ಖೈದಿ ವಿಜಯ್​​, ಜೈಲಾಧಿಕಾರಿಗಳ ಸಹಾಯದಿಂದಲೇ ಮೊಬೈಲ್​ಗಳನ್ನು ಮಾರಾಟ ಮಾಡುತ್ತಿದ್ದ. ರೌಡಿ ಶೀಟರ್​ಗಳು ಸಾವಿರಾರು ಹಣ ಕೊಟ್ಟು ಖರೀದಿ ಮಾಡುತ್ತಿದ್ದರು ಎನ್ನಲಾಗಿದೆ. ಕೆಲ ಜೈಲು ಸಿಬ್ಬಂದಿಯೇ ಮೊಬೈಲ್​ಗಳನ್ನ ಒಳಗೆ ರವಾನೆ ಮಾಡುತ್ತಿದ್ದ ಬಗ್ಗೆ ಕೂಡ ಮಾಹಿತಿ ಇದೆ. ಇನ್ನು ನಿನ್ನೆ ಮತ್ತೆ ಜೈಲಾಧಿಕಾರಿಗಳಿಂದ ಜೈಲಿನ ಒಳಗೆ ರೇಡ್ ಮಾಡಿ ಪರಿಶೀಲನೆ ಮಾಡಲಾಗಿದೆ.

ಪರಪ್ಪನ ಅಗ್ರಹಾರ ಜೈಲಿನಲ್ಲಿ ರಾಜಾತಿಥ್ಯ ಪಡೆದ ಕಾರಣದಿಂದಲೇ ದರ್ಶನ್ ಆ್ಯಂಡ್ ಗ್ಯಾಂಗ್ ಬೇರೆ ಬೇರೆ ಜೈಲುಗಳಿಗೆ ಶಿಫ್ಟ್ ಮಾಡಲಾಗಿದೆ. ಆದರೆ ವಿಲ್ಸನ್ ಗಾರ್ಡನ್ ನಾಗ ಸೇರಿ ರೌಡಿಗಳು ಸ್ಥಳಾಂತರವಾಗಿರಲಿಲ್ಲ. ರೌಡಿಗಳ ಸ್ಥಳಾಂತರಕ್ಕೆ ಕೋರ್ಟ್ ಒಪ್ಪಿಗೆ ಸಿಕ್ಕಿದೆ. ಅದಕ್ಕೂ ಮುನ್ನ ನಿನ್ನೆ ವಿಲ್ಸನ್ ಗಾರ್ಡನ್ ನಾಗ ಮತ್ತು ವೇಲುಗೆ 3 ದಿನ ಪೊಲೀಸ್​ ಕಸ್ಟಡಿ ನೀಡಿ ಬೆಂಗಳೂರಿನ 9ನೇ ಅಪರ ಮುಖ್ಯ ನ್ಯಾಯಾಧೀಶರ ಆದೇಶ ಹೊರಡಿಸಿದೆ.

ಇದನ್ನೂ ಓದಿ: ಜೈಲಿನಲ್ಲಿ ರಾಜಾತಿಥ್ಯ ಕೇಸ್​: ವಿಲ್ಸನ್ ಗಾರ್ಡನ್ ನಾಗ, ವೇಲುಗೆ 3 ದಿನ ಪೊಲೀಸ್​ ಕಸ್ಟಡಿ, ದರ್ಶನ್​​ಗೆ ಸಂಕಷ್ಟ ಎದುರಾಗುತ್ತಾ?

ಇನ್ನು ಇತ್ತೀಚೆಗೆ ದಾಳಿ ವೇಳೆ 1.3 ಲಕ್ಷ ಮೌಲ್ಯದ ಸ್ಯಾಮ್‌ಸಂಗ್ ಫೋನ್​ಗಳು, 7 ಎಲೆಕ್ಟ್ರಿಕ್ ಸ್ಟವ್‌ಗಳು, 5 ಚಾಕುಗಳು, 3 ಮೊಬೈಲ್ ಫೋನ್ ಚಾರ್ಜರ್‌ಗಳು, 2 ಪೆನ್ ಡ್ರೈವ್‌ಗಳು, 36,000 ರೂಪಾಯಿ ನಗದು, ಸಿಗರೇಟ್, ಬೀಡಿ ಮತ್ತು ಬೆಂಕಿಕಡ್ಡಿ ಬಾಕ್ಸ್‌ಗಳು ಸೇರಿದಂತೆ 15 ಮೊಬೈಲ್ ಫೋನ್‌ಗಳು ಕೂಡ ಪತ್ತೆಯಾಗಿದ್ದವು. ಅಧಿಕಾರಿಗಳು ಮತ್ತೊಮ್ಮೆ ಪರಿಶೀಲಿಸಿದಾಗ ಮತ್ತೆ ಕೆಲ ಮೊಬೈಲ್​ಗಳು ಪತ್ತೆ ಆಗಿದ್ದವು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.