AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ದರ್ಶನ್​ಗೆ ರಾಜಾತಿಥ್ಯ ನೀಡಿದ್ದ ಪರಪ್ಪನ ಅಗ್ರಹಾರದ ಮೇಲೆ ಸಿಸಿಬಿ ದಾಳಿ; ವಿಲ್ಸನ್ ಗಾರ್ಡನ್ ನಾಗನ ಫೋನ್ ಸೇರಿ 18 ಮೊಬೈಲ್ ಸೀಜ್

ಕೊಲೆ ಆರೋಪಿ ದರ್ಶನ್ ಗೆ ಜೈಲಿನಲ್ಲಿ ದೊರಕಿದ್ದ ರಾಜಾತಿಥ್ಯ ಸಂಬಂಧದ ತನಿಖೆ ಚುರುಕುಗೊಂಡಿದೆ. ಒಂದು ಕಡೆ ಸಿಸಿಬಿ ಅಧಿಕಾರಿಗಳು ಪರಪ್ಪನ ಅಗ್ರಹಾರ ಜೈಲಿನ ಮೇಲೆ ಮತ್ತೊಮ್ಮೆ ದಾಳಿ ಮಾಡಿದ್ರೆ ಮತ್ತೊಂದು ಕಡೆ ಜೈಲು ಅಧಿಕಾರಿಗಳ ಮಾಡಿರೋ ನಿರ್ಲಕ್ಷ್ಯ ಬೆಳಕಿಗೆ ಬಂದಿದೆ. ದಾಳಿ ವೇಳೆ ನಾಗನ ಮೊಬೈಲ್ ಸೀಜ್ ಮಾಡಲಾಗಿದೆ.

ದರ್ಶನ್​ಗೆ ರಾಜಾತಿಥ್ಯ ನೀಡಿದ್ದ ಪರಪ್ಪನ ಅಗ್ರಹಾರದ ಮೇಲೆ ಸಿಸಿಬಿ ದಾಳಿ; ವಿಲ್ಸನ್ ಗಾರ್ಡನ್ ನಾಗನ ಫೋನ್ ಸೇರಿ 18 ಮೊಬೈಲ್ ಸೀಜ್
ದರ್ಶನ್​ಗೆ ರಾಜಾತಿಥ್ಯ ನೀಡಿದ್ದ ಪರಪ್ಪನ ಅಗ್ರಹಾರದ ಮೇಲೆ ಸಿಸಿಬಿ ದಾಳಿ
TV9 Web
| Edited By: |

Updated on:Sep 16, 2024 | 1:40 PM

Share

ಬೆಂಗಳೂರು, ಸೆ.16: ರೇಣುಕಾಸ್ವಾಮಿ ಕೊಲೆ (Murder) ಕೇಸ್​ನಲ್ಲಿ ಪರಪ್ಪನ ಅಗ್ರಹಾರ ಜೈಲು ಸೇರಿದ್ದ ದರ್ಶನ್​ಗೆ (Darshan Thoogudeepa) ರಾಜಾತಿಥ್ಯ ದೊಡ್ಡ ವಿವಾದಕ್ಕೆ ಕಾರಣವಾಗಿತ್ತು. ರೌಡಿಗಳ ಜೊತೆ ಸಿಟ್ಟಿಂಗ್ ಹಾಕಿ ಸಿಗರೇಟ್ ಸೇದುತ್ತಿದ್ದ ದರ್ಶನ್ ಫೋಟೋಗಳ ಜೈಲಿನ (Parappana Agrahara) ಕರ್ಮಕಾಂಡವನ್ನ ಹೊರತಂದಿತ್ತು. ಇದೇ ಪ್ರಕರಣ ಸಂಬಂಧ ಸಿಸಿಬಿ ಪೊಲೀಸರು ತನಿಖೆ ನಡೆಸುತ್ತಿದ್ದು, ಜೈಲಿನ ಮೇಲೆ ನಿನ್ನೆ ಮತ್ತೊಮ್ಮೆ ದಾಳಿ ನಡೆಸಿದ್ದಾರೆ. ಈ ದಾಳಿ ವೇಳೆ ವಿಲ್ಸನ್ ಗಾರ್ಡನ್ ನಾಗನ ಬಳಿ ಇದ್ದ ಮೊಬೈಲ್ ಸೇರಿದಂತೆ ಸುಮಾರು 18 ಮೊಬೈಲ್ ಸೀಜ್ ಆಗಿದೆ. ಇಷ್ಟಲ್ಲದೇ ಡ್ರಗ್ಸ್ ಮತ್ತು ಹಣ ಕೂಡ ಸಿಕ್ಕಿದೆ.

ವಿಲ್ಸನ್ ಗಾರ್ಡನ್ ನಾಗ ಜೈಲಿನಲ್ಲೇ ಕೂತ ಹೊರಗಡೆಯ ವ್ಯಕ್ತಿಗಳ ಧಮ್ಕಿ ಹಾಕಿ ಹಣ ವಸೂಲಿ ಮಾಡ್ತಿದ್ದ ಆರೋಪ ಇತ್ತು. ಹೀಗಾಗಿ ಸಿಸಿಬಿ ಅಧಿಕಾರಿಗಳು ಜೈಲಿನ ಮೇಲೆ ದಾಳಿ ನಡೆಸಿ ಆತನ ಮೊಬೈಲ್ ಸೀಜ್ ಮಾಡಿದ್ದಾರೆ. ಈಗಾಗಲೇ ದರ್ಶನ್ ಜೊತೆ ನಾಗ ಕ್ಲೋಸ್ ಆಗಿ ಇದ್ದಿದ್ದು ಜಗಜ್ಜಾಹಿರವಾಗಿತ್ತು. ಇದರ ಬೆನ್ನಲ್ಲೆ ಆತನ ಮೇಲೆ ಕಣ್ಣಿಟ್ಟಿದ್ದ ಸಿಸಿಬಿ ಟೀಂ, ಆತನ ಮೊಬೈಲ್ ಸೀಜ್ ಮಾಡಿ ಮತ್ತೆ ಈ ರೀತಿ ಚಟುವಟಿಕೆಯಲ್ಲಿ ಭಾಗಿಯಾಗದಂತೆ ವಾರ್ನ್ ಮಾಡಿದ್ದಾರೆ.

ದಾಳಿ ವೇಳೆ 1.3 ಲಕ್ಷ ಮೌಲ್ಯದ ಸ್ಯಾಮ್‌ಸಂಗ್ ಫೋನ್​ಗಳು, ಏಳು ಎಲೆಕ್ಟ್ರಿಕ್ ಸ್ಟವ್‌ಗಳು, ಐದು ಚಾಕುಗಳು, ಮೂರು ಮೊಬೈಲ್ ಫೋನ್ ಚಾರ್ಜರ್‌ಗಳು, ಎರಡು ಪೆನ್ ಡ್ರೈವ್‌ಗಳು, 36,000 ರೂಪಾಯಿ ನಗದು, ಸಿಗರೇಟ್, ಬೀಡಿ ಮತ್ತು ಬೆಂಕಿಕಡ್ಡಿ ಬಾಕ್ಸ್‌ಗಳು ಸೇರಿದಂತೆ 15 ಮೊಬೈಲ್ ಫೋನ್‌ಗಳು ಪತ್ತೆಯಾಗಿವೆ.

ಇದನ್ನೂ ಓದಿ: ಪರಪ್ಪನ ಅಗ್ರಹಾರದಲ್ಲಿ ದರ್ಶನ್​ಗೆ​ ರಾಜಾತಿಥ್ಯ ಬೆನ್ನಲ್ಲೇ ಜೈಲು ಇಲಾಖೆಗೆ ಸರ್ಜರಿ, ಅಧಿಕಾರಿಗಳ ವರ್ಗ

ಇನ್ನು ಮತ್ತೊಂದು ಕಡೆ ರಾಜಾತಿಥ್ಯ ನೀಡಿದ ಸಂಬಂಧ ಜೈಲಿನ ಅಧಿಕಾರಿಗಳು ವಿಚಾರಣೆ ಎದುರಿಸಿದ್ದಾರೆ. ಆದರೆ ವಿಚಾರಣೆ ವೇಳೆ ಜೈಲಿನ ಅಧಿಕಾರಿಗಳು ಸಮರ್ಪಕ ಮಾಹಿತಿ ನೀಡ್ತಿಲ್ಲ. ದರ್ಶನ್ ಬ್ಯಾರಕ್ ಬಳಿ ನಿಯೋಜನೆ ಮಾಡಲಾಗಿದ್ದ ಸಿಬ್ಬಂದಿ ಮಾಹಿತಿ ನೀಡಿ ಎಂದು ಎರಡ್ಮೂರು ಬಾರಿ ಕೇಳಿದ್ರೂ ಮಾಹಿತಿ ನೀಡಿಲ್ಲ. ಯಾಕೆಂದ್ರೆ ಜೈಲು ಅಧಿಕಾರಿಗಳು ಸಿಬ್ಬಂದಿ ನಿಯೋಜನೆಯ ಡೈರಿ ಮೆಂಟೈನ್ ಮಾಡದೆ ನಿರ್ಲಕ್ಷ್ಯ ತೋರಿದ್ದಾರೆ ಎಂಬುದು ಬೆಳಕಿಗೆ ಬಂದಿದೆ. ಒಂದು ವೇಳೆ ಈ ಮಾಹಿತಿ ಸಿಕ್ಕಿದ್ರೆ ದರ್ಶನ್ ಗೆ ರಾಜಾತಿಥ್ಯ ನೀಡಲು ಸಹಾಯ ಮಾಡಿದ್ದ ಸಿಬ್ಬಂದಿ ಯಾರೆಂಬುದು ಗೊತ್ತಾಗಲಿದೆ. ಒಟ್ನಲ್ಲಿ ದರ್ಶನ್ ಬಳ್ಳಾರಿ ಜೈಲಿಗೆ ಶಿಫ್ಟ್ ಆದ್ರೂ ರಾಜಾತಿಥ್ಯ ಕೇಸ್ ತನಿಖೆ ಮುಂದುವರಿದಿದ್ದು, ಯಾರ ಪಾತ್ರ ಏನು ಅನ್ನೋದು ಕೆಲವೇ ದಿನಗಳಲ್ಲಿ ಬಯಲಾಗಲಿದೆ.

ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

Published On - 1:38 pm, Mon, 16 September 24