Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪರಪ್ಪನ ಅಗ್ರಹಾರದಲ್ಲಿ ದರ್ಶನ್​ಗೆ​ ರಾಜಾತಿಥ್ಯ ಬೆನ್ನಲ್ಲೇ ಜೈಲು ಇಲಾಖೆಗೆ ಸರ್ಜರಿ, ಅಧಿಕಾರಿಗಳ ವರ್ಗ

ಕೊಲೆ ಪ್ರಕರಣದ ಆರೋಪಿ ನಟ ದರ್ಶನಗೆ ಬೆಂಗಳೂರು ಕೇಂದ್ರ ಕಾರಾಗೃಹ (ಪರಪ್ಪನ ಅಗ್ರಹಾರ)ದಲ್ಲಿ ರಾಜಾತಿಥ್ಯ ನೀಡಿದ ಫೋಟೋ ಬಹಿರಂಗಗೊಂಡ ಬೆನ್ನಲ್ಲೇ ರಾಜ್ಯ ಸರ್ಕಾರ ಕಾರಾಗೃಹ ಇಲಾಖೆಗೆ ಮೇಜರ್​ ಸರ್ಜರಿ ಮಾಡಿದೆ. 43 ಮಂದಿ ಅಧಿಕಾರಿಗಳನ್ನು ವರ್ಗಾವಣೆ ಮಾಡಿದೆ.

ಪರಪ್ಪನ ಅಗ್ರಹಾರದಲ್ಲಿ ದರ್ಶನ್​ಗೆ​ ರಾಜಾತಿಥ್ಯ ಬೆನ್ನಲ್ಲೇ ಜೈಲು ಇಲಾಖೆಗೆ ಸರ್ಜರಿ, ಅಧಿಕಾರಿಗಳ ವರ್ಗ
ವರ್ಗಾವಣೆ ಆದೇಶ, ಪರಪ್ಪನ ಅಗ್ರಹಾರ
Follow us
ಪ್ರಸನ್ನ ಗಾಂವ್ಕರ್​
| Updated By: ವಿವೇಕ ಬಿರಾದಾರ

Updated on: Sep 14, 2024 | 10:03 AM

ಬೆಂಗಳೂರು, ಸೆಪ್ಟೆಂಬರ್​ 14: ಚಿತ್ರದುರ್ಗ ರೇಣುಕಾಸ್ವಾಮಿ (Renukaswamy) ಕೊಲೆ ಪ್ರಕರಣದ ಆರೋಪಿ ನಟ ದರ್ಶನಗೆ (Darshan) ಬೆಂಗಳೂರು ಕೇಂದ್ರ ಕಾರಾಗೃಹ (ಪರಪ್ಪನ ಅಗ್ರಹಾರ)ದಲ್ಲಿ ರಾಜಾತಿಥ್ಯ ನೀಡಿದ ಫೋಟೋ ಬಹಿರಂಗಗೊಂಡಿತ್ತು. ಇದು ರಾಜ್ಯ ಸರ್ಕಾರ ತಲೆ ತಗ್ಗಿಸುವಂತೆ ಮಾಡಿದ್ದು, ವಿವಾದಕ್ಕೆ ಕಾರಣವಾಗಿತ್ತು. ವಿವಾದ ಬೆನ್ನಲ್ಲೇ ಕಾರಾಗೃಹ ಇಲಾಖೆಗೆ (Prisons and Correctional Services) ಸರ್ಕಾರ ಮೇಜರ್​ ಸರ್ಜರಿ ಮಾಡಿದೆ. ಜೈಲರ್​ ಸೇರಿಂದತೆ 43 ಮಂದಿಯನ್ನು ವರ್ಗಾವಣೆ ಮಾಡಲಾಗಿದೆ.

ವಿವಿಧ ಜೈಲ್​ಗಳ ಜೈಲರ್​ಗಳು, ಮುಖ್ಯ ವೀಕ್ಷಕರು, ವೀಕ್ಷಕರು, ವಾರ್ಡರ್​​ ಸೇರಿ 43 ಮಂದಿಯನ್ನು ರಾಜ್ಯ ಸರ್ಕಾರ ವರ್ಗಾವಣೆ ಮಾಡಿದೆ.

ವರ್ಗಾವಣೆಯಾದ ಅಧಿಕಾರಿಗಳು

  1. ಜೈಲ‌ರ್ ಶಂಭು ಷಣ್ಮುಖಪ್ಪ ವೆನ್ನಾಲ- ಕೇಂದ್ರ ಕಾರಾಗೃಹ ಬೆಂಗಳೂರು
  2. ಮುಖ್ಯ ವೀಕ್ಷಕಿ ಸುಮಿತ್ರಾ ಎಂ.ರಾಠೋಡ-ಕೇಂದ್ರ ಕಾರಾಗೃಹ ವಿಜಯಪುರ
  3. ಹೆಡ್ ವಾರ್ಡರ್ ಗಣಪತಿ- ಸಾಗರ ಉಪ ಕಾರಾಗೃಹ
  4. ಹೆಡ್ ವಾರ್ಡರ್ ಬಸವರಾಜ ಜಾಧವ-ಕೇಂದ್ರ ಕಾರಾಗೃಹ ಧಾರವಾಡ
  5. ಹೆಡ್ ವಾರ್ಡರ್ ಪ್ರಭು- ಕೇಂದ್ರ ಕಾರಾ ಗೃಹ ಕಲಬುರಗಿ
  6. ಮುಖ್ಯ ವೀಕ್ಷಕಿ ಶೈಲ ಸಿ.ಕೆ.- ಜಿಲ್ಲಾ ಕಾರಾಗೃಹ ದಾವಣಗೆರೆ
  7. ವೀಕ್ಷಕ- ಜಿ.ಜಿ.ಮಂಜುನಾಥ-ತಾಲೂಕು ಉಪ ಕಾರಾಗೃಹ ಹುಬ್ಬಳ್ಳಿ
  8. ವೀಕ್ಷಕ ಸಂತೋಷ್ ಕರಿಯಣ್ಣನವರ- ಜಿಲ್ಲಾ ಕಾರಾಗೃಹ ದಾವಣಗೆರೆ
  9. ವೀಕ್ಷಕ ಶಿವಾ ನಂದ ಧನಪಾಲ್ – ಕೇಂದ್ರ ಕಾರಾಗೃಹ ವಿಜಯಪುರ
  10. ವೀಕ್ಷಕ ಶಿವ ಲಮಾಣಿ- ಜಿಲ್ಲಾ ಕಾರಾಗೃಹ ಗದಗ
  11. ವೀಕ್ಷಕ ನೂರಲಿ ಹುಸೇನಸಾಬ ಮುಜಾವರ -ಕೇಂದ್ರ ಕಾರಾಗೃಹ ವಿಜಯಪುರ
  12. ವೀಕ್ಷಕ ಶಿವ ಕುಮಾರ್- ಕಲಬುರಗಿ
  13. ವೀಕ್ಷಕ ಮಂಜುನಾಥ ಕಟಗಿ-ಹಾವೇರಿ ಜಿಲ್ಲಾ ಕಾರಾಗೃಹಕ್ಕೆ ವರ್ಗಾವಣೆಯಾಗಿದ್ದಾರೆ. ಸರ್ಕಾರ ಒಟ್ಟು 43 ಮಂದಿ ಅಧಿಕಾರಿಗಳನ್ನು ರಾಜ್ಯ ವಿವಿಧಡೆ ವರ್ಗಾವಣೆ ಮಾಡಿದೆ

ಇದನ್ನೂ ಓದಿ: ಬೇರೆ ಜೈಲಿಗೆ ಶಿಫ್ಟ್​ ಮಾಡಿ ಅಂತ ಮನವಿ ಸಲ್ಲಿಸ್ತಾರಾ ಕೊಲೆ ಆರೋಪಿ ದರ್ಶನ್​?

ಬಳ್ಳಾರಿ ಜೈಲಿನಲ್ಲಿ ದರ್ಶನ್​

ಕೊಲೆ ಆರೋಪಿ ದರ್ಶನ್​ಗೆ​ ರಾಜಾತಿಥ್ಯ ನೀಡಿದಕ್ಕೆ ಪರಪ್ಪನ ಅಗ್ರಹಾರದ 9 ಮಂದಿ ಅಧಿಕಾರಿಗಳನ್ನು ರಾಜ್ಯ ಸರ್ಕಾರ ಅಮಾನತು ಮಾಡಿದೆ. ಬಳಿಕ, ಆರೋಪಿ ದರ್ಶನ್​ನನ್ನು ಬಳ್ಳಾರಿ ಕೇಂದ್ರ ಕಾರಾಗೃಹಕ್ಕೆ ಶಿಫ್ಟ್​ ಮಾಡಲಾಗಿದೆ. ರೇಣುಕಾಸ್ವಾಮಿ ಕೊಲೆ ಪ್ರಕರಣದ ಚಾರ್ಜ್​ಶೀಟ್​ ಸಲ್ಲಿಕೆಯಾಗಿದ್ದು, ಆರೋಪಿ ದರ್ಶನ್​ ಜಾಮೀನಿಗಾಗಿ ಕಾಯುತ್ತಿದ್ದಾರೆ. ಹಾಗೆ, ಬಳ್ಳಾರಿ ಜೈಲಿನಿಂದ ಬೆಳಗಾವಿ ಜೈಲಿಗೆ ಶಿಫ್ಟ್​ ಮಾಡುವಂತೆ ದರ್ಶನ್​ ಮನವಿ ಮಾಡಲಿದ್ದಾರೆ ಎಂದು ಮೂಲಗಳಿಂದ ಮಾಹಿತಿ ದೊರೆತಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ