ಬೆಂಗಳೂರು ಈದ್​ ಮಿಲಾದ್​: ಮೈಸೂರು ರಸ್ತೆಯಲ್ಲಿ ವಾಹನ ಸಂಚಾರ ನಿರ್ಬಂಧ

ಈದ್​ ಮಿಲಾದ್​ ಹಬ್ಬದ ಪ್ರಯುಕ್ತ ಬೆಂಗಳೂರಿನ ಮೈಸೂರು ರಸ್ತೆಯಲ್ಲಿ ವಾಹನ ಸಂಚಾರ ನಿರ್ಬಂಧಿಸಲಾಗಿದೆ. ಮೆಜೆಸ್ಟಿಕ್​, ಕೆಆರ್​ ಮಾರುಕಟ್ಟೆ ಕಡೆಗೆ ಹೋಗುವ ವಾಹನ ಸವಾರರು ಬದಲಿ ಮಾರ್ಗ ಅನುಸರಿಸಬೇಕಾಗಿ ಬೆಂಗಳೂರು ಸಂಚಾರಿ ಪೋಲಿಸರು ಸೂಚನೆ ನೀಡಿದ್ದಾರೆ.

ಬೆಂಗಳೂರು ಈದ್​ ಮಿಲಾದ್​: ಮೈಸೂರು ರಸ್ತೆಯಲ್ಲಿ ವಾಹನ ಸಂಚಾರ ನಿರ್ಬಂಧ
ಮೈಸೂರು ರಸ್ತೆ
Follow us
|

Updated on: Sep 16, 2024 | 8:39 AM

ಬೆಂಗಳೂರು, ಸೆಪ್ಟೆಂಬರ್​ 16: ಈದ್​ ಮಿಲಾದ್​​ (Eid Milad) ಹುಬ್ಬದ ಪ್ರಯುಕ್ತ ನೃಪತುಂಗ ರಸ್ತೆಯಲ್ಲಿನ ವಾಯ್​. ಎಮ್​.ಸಿ.ಎ. ಮೈದಾನಕ್ಕೆ ಅಲಂಕೃತ ವಾಹನ ಹಾಗೂ ಮೆರವಣಿಗೆಗಳು ಬರಲಿವೆ. ಹೀಗಾಗಿ ಜೆ.ಸಿ ರಸ್ತೆ, ಬಿವಿಕೆ ಆಯ್ಯಾಂಗರ್ ರಸ್ತೆ, ಅವಿನ್ಯೂ ರಸ್ತೆ, ಕಲಾಸಿಪಾಳ್ಯ ಮುಖ್ಯರಸ್ತೆ ಹಾಗೂ ಮೈಸೂರು ಮುಖ್ಯರಸ್ತೆಗಳಲ್ಲಿ ಹೆಚ್ಚು ವಾಹನ ಸಂಚಾರ ದಟ್ಟಣೆ ಉಂಟಾಗಲಿದೆ. ಈ ಹಿನ್ನೆಲೆಯಲ್ಲಿ ಮಧ್ಯಾಹ್ನ 12 ಗಂಟೆಯಿಂದ ಮೈಸೂರು ರಸ್ತೆಯಲ್ಲಿ ತಾತ್ಕಾಲಿಕವಾಗಿ ವಾಹನಗಳ ಸಂಚಾರವನ್ನು ನಿಷೇಧಿಸಲಾಗಿದೆ. ಬೆಂಗಳೂರು ಸಂಚಾರಿ ಪೊಲೀಸರು (Bengaluru Traffic Police) ಬದಲಿ ಮಾರ್ಗ ಸೂಚಿಸಿದ್ದಾರೆ.

ಬದಲಿ ಮಾರ್ಗ

  • ಮೈಸೂರು ರಸ್ತೆ ಕಡೆಯಿಂದ ಮೆಜೆಸ್ಟಿಕ್‌ ಗೆ ಹೋಗುವ ವಾಹನಗಳು: ನಾಯಂಡಹಳ್ಳಿ ಜಂಕ್ಷನ್-ನಾಗರಭಾವಿ ಸರ್ಕಲ್- ಮದ್ದೂರಮ್ಮ ದೇವಸ್ಥಾನ- ಚಂದ್ರಲೇಔಟ್ ಜಂಕ್ಷನ್-ಆರ್.ಪಿಸಿ ಲೇಔಟ್ ಜಂಕ್ಷನ್-ವೇಸ್ಟ್ ಆಪ್ ಕಾರ್ಡ ರಸ್ತೆ-ವಿಜಯನಗರ ಮೆಟ್ರೋ ನಿಲ್ದಾಣ-ಟೋಲ್ ಗೇಟ್ ಜಂಕ್ಷನ್ ಪ್ರಸನ್ನ ಜಂಕ್ಷನ್ ಹುಣಸೇಮರ ಜಂಕ್ಷನ್- ಲೂಲು ಮಾಲ್- ಓಕಳಿಪುರಂ ಜಂಕ್ಷನ್-ಖೋಡೆ ಜಂಕ್ಷನ್ ಮೂಲಕ ಮೆಜೆಸ್ಟಿಕ್​ಗೆ ಹೋಗಬಹುದು.
  • ಮೈಸೂರು ರಸ್ತೆ ಕಡೆಯಿಂದ ಮಾರ್ಕೆಟ್​ ಕಡೆಗೆ ಹೋಗುವ ವಾಹನಗಳು: ನಾಯಂಡಹಳ್ಳಿ ಜಂಕ್ಷನ್- ನಾಗರಭಾವಿ ಸರ್ಕಲ್- ಮದ್ದೂರಮ್ಮ ದೇವಸ್ಥಾನ- ಚಂದ್ರಲೇಔಟ್ ಜಂಕ್ಷನ್-ಆರ್ ಪಿಸಿ ಲೇಔಟ್ ಜಂಕ್ಷನ್-ವೇಸ್ಟ್ ಆಪ್ ಕಾರ್ಡ ರಸ್ತೆ-ವಿಜಯನಗರ ಮೆಟ್ರೋ ನಿಲ್ದಾಣ-ಟೋಲ್ ಗೇಟ್ ಜಂಕ್ಷನ್- ಪ್ರಸನ್ನ ಜಂಕ್ಷನ್ ಹುಣಸೇಮರ ಜಂಕ್ಷನ್- ಅಂಗಳಾ ಪರಮೇಶ್ವರಿ ದೇವಸ್ಥಾನ- ಬಿನ್ನಿಮಿಲ್ ಜಂಕ್ಷನ್- ಗೂಡ್ಸ್‌ ಶೆಡ್ ರಸ್ತೆ-ರಾಯನ್ ರಸ್ತೆ ಶಾಂತಲ ವೃತ್ತ-ಖೋಡೆ ಜಂಕ್ಷನ್- ಲಕ್ಷ್ಮಣಪುರಿ ಬ್ರಿಡ್ಜ್- ಫ್ರೀಡಂ ಪಾರ್ಕ್ ಜಂಕ್ಷನ್ ಮಹಾರಾಣಿ ಬ್ರಿಡ್ಜ್ ಮೂಲಕ ಹೋಗಬಹುದು.
  • ಸ್ಥಬ್ಧ ಚಿತ್ರಗಳು ಮಾರ್ಕೆಟ್ ಸರ್ಕಲ್​ಗೆ ಬಂದಾಗ: ಎ.ಎಸ್ ಚಾರ್ ಸ್ಟ್ರೀಟ್ ಜಂಕ್ಷನ್​ನಲ್ಲಿ ವಾಹನಗಳು ಎಡ ತಿರುವು ಪಡೆದುಕೊಂಡು, (ಬಿವಿಕೆ ಅಯ್ಯಂಗಾರ್ ರಸ್ತೆ ಕಡೆಗೆ) ಹಾಗೂ ಜಿ.ಪಿ ಸ್ಪೀಟ್​ನಿಂದ ಎಸ್. ಆರ್ ರಸ್ತೆ ಮಾರ್ಗವಾಗಿ ಬರುವ ವಾಹಗಳು ಎಸ್.ಆರ್ ಸ್ಟ್ರೀಟ್ ರಸ್ತೆಗೆ ಬರದೆ, ಜಿಪಿ ಸ್ಟ್ರೀಟ್ ರಸ್ತೆಯಲ್ಲಿಯೇ ಮುಂದುವರೆದು ಬಿ.ವಿ.ಕೆ ಐಯ್ಯಾಂಗಾರ್ ರಸ್ತೆ ಮೂಲಕ ಮುಂದೆ ಹೋಗಲು ಅನುವು ಮಾಡಿಕೊಡಲಾಗಿದೆ.
  • ಕೆ.ಆರ್ ರಸ್ತೆ ಕಡೆಯಿಂದ ಮಾರ್ಕೆಟ್ ವೃತ್ತದ ಕಡೆಗೆ ಬರುವ ಎಲ್ಲ ವಾಹನಗಳು: ಫೋ. ಶಿವಶಂಕರಪ್ಪ ವೃತ್ತ- ಎಲ್.ಬಿ.ಎಫ್. ರಸ್ತೆ – ಪೆಸಿ.ರಸ್ತೆ – ಚೌನ ಹಾಲ್ ಕಡೆ ಹೋಗಬೇಕು. ಹಾಗೂ ಎ.ವಿ. ರಸ್ತೆ ಮೂಲಕ ಕೆ.ಆರ್. ರಸ್ತೆಗೆ ಬರುವ ವಾಹನಗಳು ಎ.ವಿ. ರಸ್ತೆ ಮೂಲಕ ಮೀಂಟೋ ವೃತ್ತದ ಕಡೆಗೆ ಹೋಗಬೇಕು.
  • ಸ್ಥಬ್ದ ಚಿತ್ರಗಳು ಎಸ್.ಜೆ.ಪಿ ರಸ್ತೆಯಲ್ಲಿ ಬಂದಾಗ: ಮೈಸೂರು ರಸ್ತೆಯಿಂದ ಬರುವ ಸವಾರರು ಸಿಟಿ ಮಾರುಕಟ್ಟೆ ವೃತ್ತದಿಂದ ಕಲಾಸಿಪಾಳ್ಯ ಮುಖ್ಯರಸ್ತೆಯ ಕಡೆಗೆ ಬಲ ತಿರುವು ಪಡೆದುಕೊಂಡು ಕೆ.ಪಿ. ವಾಯಿಂಟ್- ಬಸಪ್ಪ ವೃತ್ತದಲ್ಲಿ ಎಡ ತಿರುವು ಪಡೆದುಕೊಂಡು ಎಲ್.ಬಿ.ಎಫ್ ರಸ್ತೆ ಮೂಲಕ ಜೆ.ಸಿ ರಸ್ತೆ ಟೌನ್‌ ಹಾಲ್‌ ಮುಖಾಂತರ ಮುಂದೆ ಹೋಗಬೇಕು.
  • ಮೆರವಣಿಗೆಯು ಮೈಸೂರು ರಸ್ತೆ ಸಿರ್ಸಿ ವೃತ್ತದ ಮೂಲಕ ಟೌನ್ ಹಾಲ್ ಕಡೆಗೆ ಹಾದು ಹೋಗುವಾಗ ಮೈಸೂರು ರಸ್ತೆ ಕಡೆಯಿಂದ ಬರುವ ವಾಹನಗಳು: ಬಿ.ಜಿ.ಎಸ್ ಪ್ರೈಓವರ್ ಆಪ್ ಯಾಂಪ್- ಬಿ.ಜಿ.ಎಸ್ ಆನ್ ಫೈಓವರ್ ವೆಟಿನರಿ ಜಂಕ್ಷನ್​ನಲ್ಲಿ ಎಡ ತಿರುವು ಪಡೆದುಕೊಂಡು ಗೂಡ್‌ಶೆಡ್ ರಸ್ತೆ- ಡಾ. ಟಿ.ಸಿ.ಎಂ ರಾಯನ್ ರಸ್ತೆ ಶಾಂತಲ ವೃತ್ತ ಮೂಲಕ ಮೆಜೆಸ್ಟಿಕ್​ಗೆ ಹೋಗಬಹುದಾಗಿದೆ.
  • ಮೆರವಣಿಗೆಯು ಮೈಸೂರು ರಸ್ತೆ ಸಿರ್ಸಿ ವೃತ್ತದ ಮೂಲಕ ಟೌನ್ ಹಾಲ್ ಕಡೆಗೆ ಹಾದು ಹೋಗುವಾಗ, ಮಾಗಡಿ ರಸ್ತೆ ಕಡೆಯಿಂದ ಬರುವ ವಾಹನಗಳು: ಸಿರ್ಸಿ ವೃತ್ತ ಚಾಮರಾಜಪೇಟೆ 7ನೇ ಅಡ್ಡರಸ್ತೆಯಲ್ಲಿ ಬಲ ತಿರುವು ಪಡೆದುಕೊಂಡಯ ಚಾಮರಾಜಪೇಟೆ 2, 3, 4 ಮತ್ತು 5ನೇ ಮುಖ್ಯರಸ್ತೆಯಲ್ಲಿ ಎಡತಿರುವು ಪಡೆದುಕೊಂಡಯ ಸಿಟಿ ಮಾರುಕಟ್ಟೆ ಹಾಗೂ ಇತರೆ ಕಡೆಗೆ ಸಂಚರಿಸಬಹುದಾಗಿದೆ.

ಇದನ್ನೂ ಓದಿ: ಶಿವಮೊಗ್ಗ ಈದ್‌ ಮಿಲಾದ್‌ ಮೆರವಣಿಗೆಯಲ್ಲಿ ತಲ್ವಾರ್‌, ಚೂರಿ ಝಳಪಿಸಿದ ವಿಡಿಯೋ ಹರಿಬಿಟ್ಟ ಬಿಜೆಪಿ

ಮಧ್ಯಾಹ್ನ 1-00 ಗಂಟೆಯಿಂದ ರಾತ್ರಿ 10-00 ಗಂಟೆಯ ವರೆಗೆ ಕೆಳಕಂಡ ರಸ್ತೆಗಳಲ್ಲಿ, ಭಾರಿ ವಾಹನಗಳ ಸಂಚಾರವನ್ನು ನಿಷೇಧಿಸಲಾಗಿದೆ.

  • ಕೆಂಗೇರಿ ಸಂಚಾರ ಪೊಲೀಸ್ ಠಾಣಾ ಸರಹದ್ದಿನ ದೊಡ್ಡಬೆಲೆ ಜಂಕ್ಷನ್ ನಿಂದ ಬರುವ ಧಾರಿ ವಾಹನಗಳು ಬೆಂಗಳೂರು ನಗರ ಪ್ರವೇಶಿಸುವುದನ್ನು ನಿಷೇಧಿಸಲಾಗಿದೆ.
  • ನೈಸ್ ರಸ್ತೆಯ ಹೊಸಕೆರೆ ಹಳ್ಳಿ ಟೋಲ್ ನಾಯಂಡಹಳ್ಳಿ ಜಂಕ್ಷನ್ ಮುಖಾಂತರ ಬೆಂಗಳೂರು ನಗರಕ್ಕೆ ಪ್ರವೇಶಿಸುವ ವಾಹನಗಳನ್ನು ನಿಷೇಧಿಸಲಾಗಿದೆ.
  • ಔಟರ್​ ರಿಂಗ್ ರಸ್ತೆಯ ನಾಗರಭಾವಿ ಸರ್ಕಲ್ ನಿಂದ ಗಾಯಂಡಹಳ್ಳಿ ಜಂಕ್ಷನ್ ಮುಖಾಂತರ ಬೆಂಗಳೂರು ನಗರಕ್ಕೆ ಪ್ರವೇಶಿಸುವ ವಾಹನಗಳನ್ನು ನಿಷೇಧಿಸಲಾಗಿದೆ.
  • ಮಾಗಡಿ ಮುಖ್ಯರಸ್ತೆಯ ಮುಖಾಂತರ ಹುಣಸೇಮರ ಜಂಕ್ಷನ್ ಯಿಂದ ಸಿರ್ಸಿ ಪ್ರಸ್ತದ ಕಡೆಗೆ ಬರುವ ವಾಹನಗಳನ್ನು ನಿಷೇಧಿಸಲಾಗಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ