ಸಿದ್ದರಾಮಯ್ಯ ಪತ್ನಿಗೆ ಬಂದ ಜಮೀನು ಸರ್ಕಾರಿ ಭೂಮಿ -ಹೆಚ್​ಡಿ ಕುಮಾರಸ್ವಾಮಿ

| Updated By: ಆಯೇಷಾ ಬಾನು

Updated on: Jul 13, 2024 | 1:23 PM

ಬೆಂಗಳೂರಿನ ಜೆಡಿಎಸ್ ಕಛೇರಿಯಲ್ಲಿ ಕೇಂದ್ರ ಸಚಿವ ಕುಮಾರಸ್ವಾಮಿ ಸುದ್ದಿಗೋಷ್ಠಿ ನಡೆಸಿದ್ದು ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ಹೊರ ಹಾಕಿದ್ದಾರೆ. ರಾಜ್ಯದ ಹಲವಾರು ರೀತಿಯ ಸರ್ಕಾರದ ಹಗರಣಗಳು ದೇಶಾದ್ಯಂತ ಚರ್ಚೆ ಆಗುತ್ತಿವೆ. ರಾಜ್ಯಕ್ಕೆ ಒಂದು ಒಳ್ಳೆಯ ಇತಿಹಾಸ ಇದೆ. ಆದರೆ ಅದು ಹಾಳಾಗುತ್ತಿದೆ ಎಂದರು.

ಬೆಂಗಳೂರು, ಜುಲೈ.13: ಬೆಂಗಳೂರಿನಲ್ಲಿ ಕೇಂದ್ರ ಸಚಿವ ಹೆಚ್​.ಡಿ.ಕುಮಾರಸ್ವಾಮಿ (HD Kumaraswamy) ಸುದ್ದಿಗೋಷ್ಠಿ ನಡೆಸಿದ್ದು ರಾಜ್ಯ ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ. ರಾಜ್ಯ ಸರ್ಕಾರದ ಹಗರಣಗಳು ದೇಶಾದ್ಯಂತ ಚರ್ಚೆ ಆಗುತ್ತಿವೆ. ನಾನು ಆಂಧ್ರ ಪ್ರವಾಸಕ್ಕೆ ಹೋಗಿದ್ದೆ, ಅಲ್ಲೂ ಕೂಡ ಚರ್ಚೆ ಆಗ್ತಿದೆ. ನಾನು 2ನೇ ಬಾರಿ CM ಆಗಿದ್ದಕ್ಕೆ ಸಹಿಸಿಕೊಳ್ತಿಲ್ಲ ಎಂದು ಹೇಳ್ತಿದ್ದಾರೆ ಎಂದು ಆಕ್ರೋಶ ಹೊರ ಹಾಕಿದರು. ಇದೇ ವೇಳೆ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ ಅಕ್ರಮ ಆರೋಪ ಸಂಬಂಧ ಮುಡಾ ನಿವೇಶನಗಳ​ ಹಂಚಿಕೆ ಕುರಿತ ನೀಲನಕ್ಷೆಯನ್ನು ಹೆಚ್​ಡಿ ಕುಮಾರಸ್ವಾಮಿ ಬಿಡುಗಡೆ ಮಾಡಿದರು.

ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದ ಅಧೀಕ್ಷಕ ಚಂದ್ರಶೇಖರ್ ಅವರದ್ದು ಆತ್ಮಹತ್ಯೆ ಅಲ್ಲ. ಅದು ಈ ಸರ್ಕಾರದ ಕೊಲೆ. ಯಾವಾಗ ವರ್ಗಾವಣೆ ಯಾವ ರೀತಿ ವ್ಯವಸ್ಥೆ ತಂದಿದ್ದೀರಾ? ನನಗೆ ಅನುಭವ ಆಗಿದೆ. ನಾನು ಇದ್ದ 14 ತಿಂಗಳು ನಾನು ಕೆಲಸ ಮಾಡೋಕೆ ಬಳಸಿಕೊಂಡಿಲ್ಲ. ಇಲಾಖೆಗೆ ಸಚಿವರು ಹೇಳಿದ್ದವರನ್ನ ಹಾಕಬೇಕು. ವರ್ಗಾವಣೆ ದಂದೆ ಬೀದಿಯಲ್ಲಿ ಇಟ್ಟಿದ್ದೀರಾ. ನಾಗಮೋಹನ್ ದಾಸ್ 40% ತನಿಖೆ ಮಾಡಿದ್ರಿ. ದಾಖಲೆ ಇಲ್ಲದೆ ಡಂಗೂರ ಹೊಡೆದ್ರಿ ಅಲ್ವ. ಸಾಕ್ಷಿ ಇಲ್ಲದೆ ಈಗ ಹುಡುಕುತ್ತಾ ಇದ್ದೀರಾ?

ಇದನ್ನೂ ಓದಿ: ಮುಡಾ ಹಗರಣದಲ್ಲಿ ನೇರವಾಗಿ ಸಿಎಂ ಸಿದ್ದರಾಮಯ್ಯ ಭಾಗಿ: ಪ್ರಲ್ಹಾದ್ ಜೋಶಿ

ಕೆಂಪಣ್ಣ ಆಯೋಗ ವರದಿ ಏನು ಮಾಡಿದ್ರಿ? ನನ್ನ ಪ್ರಶ್ನೆ ಮಾಡೋಕೆ ಆಗಲ್ಲ. ನನ್ನನ್ನ ಕ್ಲರ್ಕ್ ಆಗಿ ಇಟ್ಟುಕೊಂಡಿದ್ರು ಅದಕ್ಕೆ ಕೇಳೋಕೆ ಆಗಲ್ಲ. ಜಯಚಂದ್ರ ನೈಸ್ ಹಗರಣ ವರದಿ ಕೊಟ್ರು ಏನ್ ಮಾಡಿದ್ರು? ವರದಿ ಕೊಟ್ಟ ಜಯಚಂದ್ರ ಕೊಲೆ ಬೆದರಿಕೆ ಹಾಕಿದ್ರು. ಮೂಡಾಗೆ ಬಂದ್ರೆ ದೇವರೇ ಕಾಪಾಡಬೇಕು. 62 ಕೋಟಿ ಕೊಡಬೇಕು ಅಂತ ಅಯ್ಯೂ ನನ್ನ ಜಮೀನು ಅಂತಾರೆ ಇದು ಪಿತ್ರಾರ್ಜಿತ ಆಸ್ತಿನಾ? ಎಲ್ಲ ದಾಖಲೆ ಇಟ್ಟುಕೊಂಡಿದ್ದೀನಿ. ಅವರ ಪತ್ನಿ ಖರೀದಿ ಮಾಡಿದ್ದು ಅಂತ ಪ್ಲಾನ್ ಸ್ಯಾಕ್ಷನ್ ಆಗಿರೋದು? ಇವರು ಭೂಮಿ ಖರೀದಿ ಮಾಡಿದ್ದು ಯಾವಾಗ? ಮುಡಾದವರು ಪಾರ್ಕ್ ,ಸೈಟ್ ಹಂಚಿಕೆ ಮಾಡಿದ ಮೇಲೆ ಖರೀದಿ ಮಾಡಿದ್ದಾರೆ.

1992ರಲ್ಲಿ ಮುಡಾ ಅಧಿಸೂಚನೆ, 1997ರಲ್ಲಿ ಅಂತಿಮ ನೋಟಿಫಿಕೇಷನ್ ಆಯ್ತು. ನಿಂಗ@ ಜವರಾಗೆ ಅಕೌಂಟ್ ಹಣ ಹಾಕದೆ, 3 ಎಕರೆ 16 ಗುಂಟೆಗೆ ಹಣ ಕೋರ್ಟ್‌ ನಲ್ಲಿ ಕಟ್ಟಿದ್ದಾರೆ. ನೀವು ಆಗ ಗೌರವಾನ್ವಿತ ಉಪಮುಖ್ಯಮಂತ್ರಿಗಳು. ಜವರಾ ಯಾವಾಗ ಸತ್ತ ಸ್ವಲ್ಪ ಹೇಳ್ತೀರಾ? ಸತ್ತವರ ಹೆಸರಿಗೆ ಖಾತೆ ಡಿನೋಟಿಫಿಕೇಷನ್ ಮಾಡೋಕೆ ಆಗುತ್ತಾ? ಅರ್ಜಿ ಕೊಟ್ಟವರು ಯಾರು? ನಾಲ್ಕು ವರ್ಷ ಯಾಕೆ ಸೈಲೆಂಟ್ ಆಗಿದ್ರು ಎಂದು ಹೆಚ್​ಡಿ ಕುಮಾರಸ್ವಾಮಿಯವರು ಸಿದ್ದರಾಮಯ್ಯ ವಿರುದ್ಧ ಗುಡುಗಿದ್ದಾರೆ.

ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ