ಈ ವರ್ಷ ಮಾತ್ರ ಸಿಇಟಿ ಮತ್ತು ಕಾಮೆಡ್-ಕೆ ಪರೀಕ್ಷೆ, ಮುಂದಿನ ವರ್ಷದಿಂದ ಸಿಇಟಿ ಮಾತ್ರ: ಅಶ್ವಥ್ ನಾರಾಯಣ್

| Updated By: ವಿವೇಕ ಬಿರಾದಾರ

Updated on: Jun 22, 2022 | 3:57 PM

ಈ ವರ್ಷ ಮಾತ್ರ ಸಿಇಟಿ ಮತ್ತು ಕಾಮೆಡ್-ಕೆ ಪರೀಕ್ಷೆ ಇರಲಿದೆ. ಮುಂದಿನ ವರ್ಷದಿಂದ ಸಿಇಟಿ ಮಾತ್ರ ಇರುತ್ತದೆ. ಈ ಸಂಬಂಧ ಒಡಂಬಡಿಕೆ ಆಗಲಿದೆ ಎಂದು ಸಚಿವ ಡಾ. ಅಶ್ವಥ್ ನಾರಾಯಣ್ ಹೇಳಿದ್ದಾರೆ. 

ಈ ವರ್ಷ ಮಾತ್ರ ಸಿಇಟಿ ಮತ್ತು ಕಾಮೆಡ್-ಕೆ ಪರೀಕ್ಷೆ, ಮುಂದಿನ ವರ್ಷದಿಂದ ಸಿಇಟಿ ಮಾತ್ರ:  ಅಶ್ವಥ್ ನಾರಾಯಣ್
ಉನ್ನತ ಶಿಕ್ಷಣ ಸಚಿವ ಅಶ್ವಥ್ ನಾರಾಯಣ
Follow us on

ಬೆಂಗಳೂರು: ಈ ವರ್ಷ ಮಾತ್ರ ಸಿಇಟಿ (CET) ಮತ್ತು ಕಾಮೆಡ್-ಕೆ ಪರೀಕ್ಷೆ ಇರಲಿದೆ. ಮುಂದಿನ ವರ್ಷದಿಂದ ಸಿಇಟಿ ಮಾತ್ರ ಇರುತ್ತದೆ. ಈ ಸಂಬಂಧ ಒಡಂಬಡಿಕೆ ಆಗಲಿದೆ ಎಂದು ಸಚಿವ ಡಾ. ಅಶ್ವಥ್ ನಾರಾಯಣ್ (Ashwath Narayan) ಹೇಳಿದ್ದಾರೆ.  ಇಂಜಿನಿಯರಿಂಗ್ (Engineering) ವಿದ್ಯಾರ್ಥಿಗಳಿಗೆ (Students) ಶೇ 10 ರಷ್ಟು ಫೀಸ್ ಹೆಚ್ಚಳ ಕುರಿತು ಇಂಜಿನಿಯರಿಂಗ್ ಕಾಲೇಜುಗಳ ಜೊತೆ ಚರ್ಚೆಯಾಗಿದೆ. ವಿದ್ಯಾರ್ಥಿಗಳಿಂದ ಹೆಚ್ಚು ಫೀಸ್ ಸಂಗ್ರಹ ಮಾಡಬಾರದು. ನಿರ್ಧಿಷ್ಟ ಶುಲ್ಕ ಮಾತ್ರ ತೆಗೆದುಕೊಳ್ಳುವಂತೆ ಸೂಚಿಸಲಾಗಿದೆ. ಕೋರ್ಡಿನೇಷನ್ ಸಿಂಪಲ್ ಮಾಡುವ ಬಗ್ಗೆ ಚರ್ಚೆ ಮಾಡಲಾಗಿದೆ ಎಂದು ತಿಳಿಸಿದರು.

ಇದನ್ನು ಓದಿ: ನಕ್ಸಲ್ ನಿಗ್ರಹ ಪಡೆಯನ್ನ ಹಿಂಪಡೆಯುವ ಮಾತೇ ಇಲ್ಲ: ಗೃಹ ಸಚಿವ ಆರಗ ಜ್ಞಾನೇಂದ್ರ

ಈವರೆಗೂ ಸರ್ಕಾರಿ ಸೀಟುಗಳಿಗೆ ಮಾತ್ರ ಸಿಇಟಿ ನಡೆಯುತ್ತಿತ್ತು. ಖಾಸಗಿ ಸೀಟುಗಳಿಗೆ ಕಾಮಿಡ್​​-ಕೆ ಮಾಡಲಾಗುತ್ತಿತ್ತು. ಇದೀಗ ಸಿಇಟಿ ಮತ್ತು ಕಾಮೆಡ್ ಕೆ ಎರಡನ್ನೂ ಒಟ್ಟಿಗೆ ನಡೆಸಲು ಸಮ್ಮತಿ ನೀಡಿದ್ದಾರೆ. ಹಾಗಾಗಿ ಹೇಗೆ ಪರೀಕ್ಷೆ ನಡೆಸಬೇಕು ಅಂತ ಚರ್ಚೆ ಮಾಡಿದ್ದೇವೆ.  ಈ ವರ್ಷ ಸೇರುವ ವಿದ್ಯಾರ್ಥಿಗಳಿಗೆ ಶೇ.10ರಷ್ಟು ಫೀಸ್ ಹೆಚ್ಚಿಸಲು ನಿರ್ಧಾರ.  ಶೇ 45 ರಷ್ಟು ಲೋಯರ್ ಫೀಸ್, ಶೇ 30 ರಷ್ಟು ಹೈಯರ್ ಫೀಸ್, ಶೇ 25 ರಷ್ಟು ಮ್ಯಾನೇಜ್ಮೆಂಟ್ ಸೀಟ್​​ಗೆ ಹೋಗಲಿದೆ ಎಂದರು.

ಇದನ್ನು ಓದಿ: ಗಂಡ ಸಾವನ್ನಪ್ಪಿ 2 ವರ್ಷದ ನಂತರ ಆತನ ಮಗುವಿಗೆ ಜನ್ಮ ನೀಡಿದ ಮಹಿಳೆ!

ಬೇಸ್ ವಿವಿ ನಮ್ಮ ಕಾಲದ್ದು ಅಂತ ಸಿದ್ದರಾಮಯ್ಯ ಹೇಳಿಕೆ ವಿಚಾರವಾಗಿ ಮಾತನಾಡಿದ ಅವರು ಬಾಬಾ ಸಾಹೇಬ್ ಅಂಬೇಡ್ಕರ್ ಅವರಿಗೆ ಗೌರವ ಸಲ್ಲಿಸೋ ಕೆಲಸ ಪ್ರಧಾನಿ ಮೋದಿ ಅವರು ಮಾಡಿದ್ದಾರೆ. ಅವರು ಪ್ರಾರಂಭ ಮಾಡಿದ್ದರು, ನಾವು ಮುಕ್ತಾಯ ಮಾಡಿದ್ದೇವೆ. ನಮ್ಮ ಸರ್ಕಾರ ಎಲ್ಲಾ ಪೇಮೆಂಟ್ ಮಾಡಿದೆ. ವಿಶ್ವವಿದ್ಯಾಲಯ ಅಪ್ರೂವಲ್ ತಂದಿದ್ದು ನಾವು. ಅಡಿಗಲ್ಲು ಹಾಕಿದ ಮಾತ್ರಕ್ಕೆ ಎಲ್ಲವು ಅವರು ಮಾಡಿದ್ದಲ್ಲ. ನಿರ್ಮಾಣ, ನಿರ್ವಹಣೆ ಮಾಡಿದ್ದು ನಾವು. ಅವರ ಕಾಲದಲ್ಲಿ ವಿದ್ಯಾರ್ಥಿಗಳು ಸೇರಿರಲಿಲ್ಲ. ಇಂದು ನಾ ಮುಂದು, ತಾ ಮುಂದು ಅಂತ ಮುಂದೆ ಬರ್ತಿದ್ದಾರೆ.

ರಾಜದ್ಯ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ. ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.