ಹೊಸ ಪಠ್ಯಕ್ಕೆ ವಿರೋಧ: ಸಿಎಂಗೆ ಪತ್ರ ಬರೆದಿದ್ದೇನೆ; ಅವಶ್ಯಕತೆ ಬಿದ್ದರೆ ಹೋರಾಟದ ಬಗ್ಗೆ ತೀರ್ಮಾನ ಮಾಡ್ತೀನಿ -ಹೆಚ್.ಡಿ. ದೇವೇಗೌಡ
ಬರಗೂರು ರಾಮಚಂದ್ರಪ್ಪ ಸಮಿತಿ ಪಠ್ಯ ಮುಂದುವರಿಸಬೇಕು ಅಂತ ಅನೇಕರು ಒತ್ತಾಯ ಮಾಡ್ತಿದ್ದಾರೆ. ಸಾಹಿತಿಗಳು, ವಕೀಲರು ಸೇರಿದಂತೆ ಅನೇಕರು ಹೊಸ ಪಠ್ಯಕ್ಕೆ ವಿರೋಧ ಮಾಡ್ತಿದ್ದಾರೆ. ಹೀಗಾಗಿ ನಾನು ಸಿಎಂಗೆ ಪತ್ರ ಬರೆದಿದ್ದೇನೆ. ಸಿಎಂ ಏನು ಉತ್ತರ ಕೊಡ್ತಾರೆ ಅಂತ ನೋಡೋಣ. ಅವಶ್ಯಕತೆ ಬಿದ್ದರೆ ಹೋರಾಟದ ಬಗ್ಗೆ ತೀರ್ಮಾನ ಮಾಡ್ತೀನಿ ಎಂದರು.
ಬೆಂಗಳೂರು: ಪಠ್ಯ ಪುಸ್ತಕ ಪರಿಷ್ಕರಣೆ(Text Book Revision) ವಿವಾದ ಹಿನ್ನೆಲೆ ಸಿಎಂ ಬಸವರಾಜ ಬೊಮ್ಮಾಯಿಗೆ(Basavaraj Bommai) ಹೆಚ್.ಡಿ.ದೇವೇಗೌಡ(HD DeveGowda) ಪತ್ರ ಬರೆದು ಪರಿಷ್ಕರಣೆಗೊಂಡ ಪುಸ್ತಕಗಳನ್ನ ಹಿಂಪಡೆಯುವಂತೆ ಮನವಿ ಮಾಡಿದ್ದರು. ಈ ವಿಚಾರಕ್ಕೆ ಸಂಬಂಧಿಸಿ ಬೆಂಗಳೂರಿನಲ್ಲಿ ಮಾಜಿ ಪ್ರಧಾನಿ ದೇವೇಗೌಡ ಮಾತನಾಡಿದ್ದಾರೆ. ಪತ್ರ ಬರೆಯಲು ಕಾರಣವೇನೆಂಬುದನ್ನು ತಿಳಿಸಿದ್ದಾರೆ.
ಬರಗೂರು ರಾಮಚಂದ್ರಪ್ಪ ಸಮಿತಿ ಪಠ್ಯ ಮುಂದುವರಿಸಬೇಕು ಅಂತ ಅನೇಕರು ಒತ್ತಾಯ ಮಾಡ್ತಿದ್ದಾರೆ. ಸಾಹಿತಿಗಳು, ವಕೀಲರು ಸೇರಿದಂತೆ ಅನೇಕರು ಹೊಸ ಪಠ್ಯಕ್ಕೆ ವಿರೋಧ ಮಾಡ್ತಿದ್ದಾರೆ. ಹೀಗಾಗಿ ನಾನು ಸಿಎಂಗೆ ಪತ್ರ ಬರೆದಿದ್ದೇನೆ. ಸಿಎಂ ಏನು ಉತ್ತರ ಕೊಡ್ತಾರೆ ಅಂತ ನೋಡೋಣ. ಅವಶ್ಯಕತೆ ಬಿದ್ದರೆ ಹೋರಾಟದ ಬಗ್ಗೆ ತೀರ್ಮಾನ ಮಾಡ್ತೀನಿ ಎಂದರು. ಇದನ್ನೂ ಓದಿ: Washington Sundar: 5 ವರ್ಷಗಳಲ್ಲಿ ಆಡಿದ್ದು ಕೇವಲ 4 ಪಂದ್ಯ: ಟೀಮ್ ಇಂಡಿಯಾಗೆ ಕಂಬ್ಯಾಕ್ ಮಾಡ್ತಾರಾ ಸುಂದರ್?
ಇನ್ನು ಇದೇ ವೇಳೆ ರಾಷ್ಟ್ರಪತಿ ಚುನಾವಣೆಗೆ NDA ಅಭ್ಯರ್ಥಿ ದ್ರೌಪದಿ ಮುರ್ಮು ಆಯ್ಕೆ ವಿಚಾರ ಸಂಬಂಧ ಪ್ರತಿಕ್ರಿಯಿಸಿದ್ದಾರೆ. ದ್ರೌಪದಿ ಮುರ್ಮು ಉತ್ತಮ ಅಭ್ಯರ್ಥಿ. ಎನ್.ಡಿ.ಎ ತಮ್ಮ ಅಭ್ಯರ್ಥಿ ಘೋಷಣೆ ಮಾಡಿದೆ. ಯಾವ ಯಾವ ಕಾರಣದಿಂದ ಅವರನ್ನು ಆಯ್ಕೆ ಮಾಡಿದ್ದಾರೆ ಅಂತ ನಾನು ವಿವರ ಕೊಡೋದಿಲ್ಲ. ಅನೇಕ ಹೆಸ್ರುಗಳು ಚರ್ಚೆ ಆದವು. ಉತ್ತಮ ಅಭ್ಯರ್ಥಿಯನ್ನ ಆಯ್ಕೆ ಮಾಡಿದ್ದಾರೆ. ಯಾವುದೇ ವಿವಾದ ಇಲ್ಲದ ಮಹಿಳೆ. ಶಾಸಕರಾಗಿ, ಸಚಿವರಾಗಿ, ರಾಜ್ಯಪಾಲರಾಗಿ ಉತ್ತಮ ಸೇವೆ ಸಲ್ಲಿಸಿದ್ದಾರೆ. ನವೀನ್ ಪಾಟ್ನಾಯಕ್ ಸಂಪುಟದಲ್ಲಿ ಸಚಿವರಾಗಿದ್ದಾರೆ. ಯಾವುದೇ ವಿವಾದ ಇಲ್ಲದ ಮಹಿಳೆ ಎಂದು NDA ಅಭ್ಯರ್ಥಿ ಆಯ್ಕೆ ಬಗ್ಗೆ ದೇವೇಗೌಡರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಪರಿಷ್ಕರಣೆಗೊಂಡ ಪುಸ್ತಕಗಳನ್ನ ಹಿಂಪಡೆಯುವಂತೆ ಸಿಎಂ ಬಸವರಾಜ ಬೊಮ್ಮಾಯಿಗೆ ಪತ್ರ ಬರೆದ ಹೆಚ್.ಡಿ.ದೇವೇಗೌಡ ಮರು ಪರಿಷ್ಕರಣೆಗೆ ನೇಮಿಸಿದ ಅಧ್ಯಕ್ಷರು ನಾಡಗೀತೆಗೆ ಅಪಮಾನ ಮಾಡಿದ್ದಾರೆ. ಇದು ರಾಷ್ಟ್ರಕವಿ ಕುವೆಂಪು ಅವರಿಗೆ ಮಾಡಿದ ಅವಮಾನ. ಸಂವಿಧಾನ ಶಿಲ್ಪಿ ಅಂಬೇಡ್ಕರ್ ಅವರನ್ನೂ ಹಂಗಿಸಿದ್ದಾರೆ. ಇಂತಹ ವ್ಯಕ್ತಿಯ ಅಧ್ಯಕ್ಷತೆಯಲ್ಲಿ ಪಠ್ಯ ಪುಸ್ತಕ ಪರಿಷ್ಕರಣೆ ಮಾಡಿದ್ದು ಸರಿಯಲ್ಲ. ಕುವೆಂಪು ಭಾವಚಿತ್ರ ಮತ್ತು ಬಸವಣ್ಣನವರ ಆಶಯವುಳ್ಳ ಭಾಗವನ್ನು ಕೈ ಬಿಡಲಾಗಿದೆ. ಸಿದ್ಧಗಂಗೆ ಮತ್ತು ಆದಿಚುಂಚನಗಿರಿ ಶ್ರೀಗಳ ಸೇವೆಯ ವಿವರಗಳನ್ನು ತೆಗೆಯಲಾಗಿದೆ. ಅಂಬೇಡ್ಕರ್ ಅವರಿಗೆ ‘ಸಂವಿಧಾನ ಶಿಲ್ಪಿ’ ಎಂದಿದ್ದ ವಿಶೇಷಣವನ್ನು ತೆಗೆಯಲಾಗಿದೆ. ಅಕ್ಕ, ಕನಕ, ಪುರಂದರ, ಶರೀಫ ಅವರಂತಹ ಮಹಾನ್ ದಾರ್ಶನಿಕ ಸಂತರ ಪಠ್ಯಗಳನ್ನೇ ತೆಗೆಯಲಾಗಿದೆ. ಕೆಂಪೇಗೌಡ, ಸುರಪುರ ನಾಯಕರ ವಿಷಯಗಳನ್ನು ಕಡಿತಗೊಳಿಸಲಾಗಿದೆ. ಡಾ.ಅಂಬೇಡ್ಕರ್ ಮತ್ತು ಕುವೆಂಪು ಅವರು ಸಾರಿದ ಸಾಮಾಜಿಕ ನ್ಯಾಯ, ಸಮಾನತೆ, ಜಾತ್ಯತೀತತೆ ಮತ್ತು ವಿಶ್ವಮಾನವತ್ವದ ಪರಿಕಲ್ಪನೆಗಳನ್ನು ಕಡೆಗಣಿಸಿರುವುದು ಮನ ಪರಿಷ್ಕರಣೆಯಲ್ಲಿ ಎದ್ದು ಕಾಣುತ್ತದೆ’ ಪಠ್ಯ ಪರಿಷ್ಕರಣೆಯಲ್ಲಿ ಇಂತಹ ಅನೇಕ ತಪ್ಪುಗಳು ಇವೆ.
ಕೂಡಲೇ ಇದನ್ನು ಹಿಂಪಡೆದು ಹಿಂದೆ ಇದ್ದ ಬರಗೂರು ರಾಮಚಂದ್ರಪ್ಪರವರ ನೇತೃತ್ವದ 27 ಸಮಿತಿಗಳು ಪರಿಷ್ಕರಿಸಿದ ಪಠ್ಯಪುಸ್ತಕಗಳನ್ನೇ ಈ ವರ್ಷ ಮುಂದುವರೆಸುವುದು ಸೂಕ್ತ. ತಮಗೆ ಕಳುಹಿಸುತ್ತಿರುವ “ವಿಶ್ವಮಾನವ ಕುವೆಂಪು ಹೋರಾಟ ಸಮಿತಿ”ಯ ಹಕ್ಕೊತ್ತಾಯ ಪತ್ರದ ಅಂಶಗಳನ್ನು ನಾನು ಕೂಡ ಬೆಂಬಲಿಸುತ್ತಾ, ಈ ವಿಷಯವಾಗಿ ಕೂಡಲೇ ಕ್ರಮ ಕೈಗೊಳ್ಳಬೇಕೆಂದು ಆಶಿಸುತ್ತೇನೆ’ ಎಂದು ಪತ್ರದ ಮೂಲಕ ಸಿಎಂ ಬೊಮ್ಮಾಯಿಗೆ ದೇವೇಗೌಡರು ಮನವಿ ಮಾಡಿದ್ದಾರೆ.
ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ