ಬೆಂಗಳೂರು: ಬೆಂಗಳೂರಿನ ಚಾಮರಾಜಪೇಟೆ ಈದ್ಗಾ ಮೈದಾನವನ್ನು (Idgah Maidan) ಸರ್ಕಾರದ ಸ್ವತ್ತೆಂದು ಘೋಷಿಸಬೇಕು ಅಂತ ಚಾಮರಾಜಪೇಟೆ ನಾಗರಿಕರ ಒಕ್ಕೂಟ ರಾಜ್ಯ ಸರ್ಕಾರ (Karnataka Government) ಮತ್ತು ಬಿಬಿಎಂಪಿಗೆ (BBMP) ಡೆಡ್ಲೈನ್ ನೀಡಿದೆ. ಜು.31ರೊಳಗೆ ಈದ್ಗಾ ಮೈದಾನ ಸರ್ಕಾರದ ಸ್ವತ್ತೆಂದು ಘೋಷಿಸಬೇಕು. ಮೈದಾನಕ್ಕೆ ಜಯಚಾಮರಾಜೇಂದ್ರ ಒಡೆಯರ್ ಹೆಸರಿಡಬೇಕು. ಇಲ್ಲದಿದ್ದರೆ ನಾವೇ ಮರುನಾಮಕರಣ ಮಾಡುತ್ತೇವೆ ಎಂದು ನಾಗರಿಕರ ಒಕ್ಕೂಟ ಎಚ್ಚರಿಕೆ ನೀಡಿದೆ. ಈಗಾಗಲೇ ನಾಗರಿಕರ ಒಕ್ಕೂಟ ಸಂಸದ ಪಿ.ಸಿ ಮೋಹನ್ ಜೊತೆ ತೆರಳಿ ಬಿಬಿಎಂಪಿ ಆಯುಕ್ತರಿಗೆ ಮನವಿ ಸಲ್ಲಿಸಿದ್ದಾರೆ.
ನಾಗರೀಕರ ಒಕ್ಕೂಟ ನೀಡಿರುವ ಮನವಿಯಲ್ಲಿ ಏನಿದೆ?:
* ಚಾಮರಾಜಪೇಟೆ ಮೈದಾನ ಬಿಬಿಎಂಪಿ ಸ್ವತ್ತು ಎಂದು ಘೋಷಿಸಬೇಕು.
* ಮೈದಾನವನ್ನ ಆಟದ ಮೈದಾನವನ್ನಾಗಿಯೇ ಉಳಿಸಬೇಕು.
* ಚಾಮರಾಜಪೇಟೆ ಮೈದಾನಕ್ಕೆ ಜಯಚಾಮರಾಜೇಂದ್ರ ಒಡೆಯರ್ ಮೈದಾನ ಎಂದು ನಾಮಕರಣಕ ಮಾಡಬೇಕು.
* ಯಾವುದೇ ಕಾರಣಕ್ಕೂ ವಕ್ಫ್ ಬೋರ್ಡ್ಗೆ ವಹಿಸಬಾರದು.
* ಮೈದಾನ ವಿಚಾರವಾಗಿ ಕಾನೂನಾತ್ಮಕವಾಗಿ ಹೋರಾಡಲು ರಮಿತಿ ರಚಿಸಬೇಕು.
* ಚಾಮರಾಜಪೇಟೆ ಮೈದಾನದಲ್ಲಿ ಹಿಂದೂ ಹಬ್ಬಗಳ ಆಚರಣೆಗೆ ಅನುಮತಿ ನೀಡಬೇಕು.
ನಾಗರಿಕರ ಒಕ್ಕೂಟಕ್ಕೆ ಬೆದರಿಕೆ ಕರೆ:
ಮೈದಾನಕ್ಕಾಗಿ ಹೋರಾಟಕ್ಕೆ ಇಳಿದಿರುವ ನಾಗರಿಕರ ಒಕ್ಕೂಟಕ್ಕೆ ಬೆದರಿಕೆ ಕರೆ ಬರುತ್ತಿರುವ ಆರೋಪ ಕೇಳಿಬಂದಿದೆ. ಅಪರಿಚಿತ ವ್ಯಕ್ತಿಗಳಿಂದ ಬೆದರಿಕೆ ಕರೆ ಬರುತ್ತಿದ್ದು, ಈ ಬಗ್ಗೆ ಒಕ್ಕೂಟದ ಪ್ರ. ಕಾರ್ಯದರ್ಶಿ ರುಕ್ಮಾಂಗದ ಮಾಹಿತಿ ನೀಡಿದ್ದಾರೆ. ಬೆದರಿಕೆ ಕರೆ ಕುರಿತು ಸ್ಥಳೀಯ ಪೊಲೀಸರಿಗೆ ಮಾಹಿತಿ ನೀಡುತ್ತೇವೆ. ಯಾವುದಕ್ಕೂ ಹೆದರುವುದಿಲ್ಲ, ನಾವು ಧೈರ್ಯವಾಗಿ ಎದುರಿಸ್ತೇವೆ ಎಂದು ರುಕ್ಮಾಂಗದ ಹೇಳಿದ್ದಾರೆ.
Published On - 8:50 am, Sat, 16 July 22