Karnataka Dams Water Level: ಕೆಆರ್ಎಸ್ ಶೇ.96ರಷ್ಟು ಭರ್ತಿ, ರಾಜ್ಯದ ಉಳಿದ ಅಣೆಕಟ್ಟುಗಳ ಸದ್ಯದ ಸ್ಥಿತಿಗತಿ ಹೀಗಿದೆ
ಕರ್ನಾಟಕದ ಜಲಾಶಯಗಳ ಇಂದಿನ ನೀರಿನ ಮಟ್ಟ: ರಾಜ್ಯದ ವಿವಿಧ ಜಿಲ್ಲೆಗಳಲ್ಲಿರುವ ನದಿಗಳು ತುಂಬಿ ಹರಿಯುತ್ತಿದ್ದು, ಹೆಚ್ಚಿನ ಪ್ರಮಾಣದಲ್ಲಿ ಅಣೆಕಟ್ಟುಗಳಿಗೆ ನೀರು ಹರಿದು ಬರುತ್ತಿದೆ. ಕೆಆರ್ಎಸ್ ಶೇ.96ರಷ್ಟು ಭರ್ತಿಗೊಂಡಿದೆ. ಉಳಿದ ಅಣೆಕಟ್ಟುಗಳ ಸ್ಥಿತಿಗತಿ ಬಗ್ಗೆ ಮಾಹಿತಿ ಇಲ್ಲಿದೆ.
ಕರ್ನಾಟಕದಲ್ಲಿ ಮಳೆರಾಯನ ಆರ್ಭಟ ಹೆಚ್ಚಾಗುತ್ತಿದ್ದು, ಮುಂದಿನ ಎರಡು ದಿನಗಳ ಕಾಲ ವಿವಿಧ ಜಿಲ್ಲೆಗಳಲ್ಲಿ ಅತ್ಯಂತ ಭಾರೀ ಮಳೆಯಾಗಲಿದೆ. ಈ ನಡುವೆ ರಾಜ್ಯದ ವಿವಿಧ ಜಿಲ್ಲೆಗಳಲ್ಲಿರುವ ನದಿಗಳು ತುಂಬಿ ಹರಿಯುತ್ತಿದ್ದು, ಹೆಚ್ಚಿನ ಪ್ರಮಾಣದಲ್ಲಿ ಅಣೆಕಟ್ಟುಗಳಿಗೆ ನೀರು ಹರಿದು ಹೋಗುತ್ತಿದೆ. ಕೆಆರ್ಎಸ್ ಶೇ.96ರಷ್ಟು ಭರ್ತಿಗೊಂಡರೆ, ತುಂಗಾಭದ್ರಾ ಶೇ.90, ಕಬಿನಿ ಜಲಾಶಯದಲ್ಲಿ ಶೇ.94, ಮಲಪ್ರಭಾ ಶೇ. 49, ಘಟಪ್ರಭಾ ಶೇ. 45, ಲಿಂಗನಮಕ್ಕಿ ಶೇ.48, ಹಾರಂಗಿ ಶೇ. 80, ಆಲಮಟ್ಟಿ ಡ್ಯಾಂ ಶೇ.71ರಷ್ಟು ಭರ್ತಿಯಾಗಿವೆ. ಕರ್ನಾಟಕದ ಪ್ರಮುಖ ಜಲಾಶಯಗಳ ಇಂದಿನ ನೀರಿನ ಮಟ್ಟ (Karnataka Reservoir Water Level)ದ ಬಗ್ಗೆ ಮಾಹಿತಿ ಇಲ್ಲಿದೆ.
- ಕೆಆರ್ಎಸ್ ಜಲಾಶಯ (KRS Dam) ಗರಿಷ್ಠ ನೀರಿನ ಮಟ್ಟ- 38.04 ಮೀಟರ್, ಗರಿಷ್ಠ ಸಾಮರ್ಥ್ಯ- 49.45 ಟಿಎಂಸಿ, ಇಂದಿನ ನೀರಿನ ಮಟ್ಟ- 47.52 ಟಿಎಂಸಿ, ಇಂದಿನ ಒಳಹರಿವು- 72646 ಕ್ಯೂಸೆಕ್ಸ್, ಇಂದಿನ ಹೊರಹರಿವು-81930 ಕ್ಯೂಸೆಕ್ಸ್.
- ಆಲಮಟ್ಟಿ ಜಲಾಶಯ (Alamatti Dam) ಗರಿಷ್ಠ ಮಟ್ಟ- 519.60 ಮೀಟರ್, ಒಟ್ಟು ಸಾಮರ್ಥ್ಯ – 123.08 ಟಿಎಂಸಿ, ಇಂದಿನ ನೀರಿನ ಮಟ್ಟ- 87.61 ಟಿಎಂಸಿ, ಇಂದಿನ ಒಳಹರಿವು- 121029 ಕ್ಯೂಸೆಕ್ಸ್ಇಂದಿನ ಹೊರಹರಿವು- 125451 ಕ್ಯೂಸೆಕ್ಸ್.
- ಘಟಪ್ರಭಾ ಜಲಾಶಯ (Ghataprabha Dam) ಗರಿಷ್ಠ ಮಟ್ಟ- 662.94 ಮೀಟರ್, ಒಟ್ಟು ಸಾಮರ್ಥ್ಯ – 51.00 ಟಿಎಂಸಿ, ಇಂದಿನ ನೀರಿನ ಮಟ್ಟ- 22.93 ಟಿಎಂಸಿ, ಇಂದಿನ ಒಳಹರಿವು- 25726ಕ್ಯೂಸೆಕ್ಸ್, ಇಂದಿನ ಹೊರಹರಿವು- 119ಕ್ಯೂಸೆಕ್ಸ್.
- ತುಂಗಾಭದ್ರಾ ಜಲಾಶಯ (Tungabhadra Dam) ಗರಿಷ್ಠ ನೀರಿನ ಮಟ್ಟ- 497.71 ಮೀಟರ್, ಒಟ್ಟು ಸಾಮರ್ಥ್ಯ- 100.86 ಟಿಎಂಸಿ, ಇಂದಿನ ನೀರಿನ ಮಟ್ಟ- 95.58 ಟಿಎಂಸಿ, ಇಂದಿನ ಒಳಹರಿವು- 106132 ಕ್ಯೂಸೆಕ್ಸ್, ಇಂದಿನ ಹೊರಹರಿವು- 143441ಕ್ಯೂಸೆಕ್ಸ್.
- ಮಲಪ್ರಭಾ ಜಲಾಶಯ (Malaprabha Dam) ಗರಿಷ್ಠ ನೀರಿನ ಮಟ್ಟ- 633.80 ಮೀಟರ್, ಒಟ್ಟು ಸಾಮರ್ಥ್ಯ – 37.73 ಟಿಎಂಸಿ, ಇಂದಿನ ನೀರಿನ ಮಟ್ಟ- 18.66 ಟಿಎಂಸಿ, ಇಂದಿನ ಒಳಹರಿವು- 14939 ಕ್ಯೂಸೆಕ್ಸ್, ಇಂದಿನ ಹೊರಹರಿವು- 194 ಕ್ಯೂಸೆಕ್ಸ್.
- ಹಾರಂಗಿ ಜಲಾಶಯ (Harangi Dam) ಗರಿಷ್ಠ ಮಟ್ಟ-871.42 ಮೀಟರ್, ಒಟ್ಟು ಸಾಮರ್ಥ್ಯ – 8.50 ಟಿಎಂಸಿ, ಇಂದಿನ ನೀರಿನ ಮಟ್ಟ- 6.77 ಟಿಎಂಸಿ, ಇಂದಿನ ಒಳಹರಿವು- 13602 ಕ್ಯೂಸೆಕ್ಸ್, ಇಂದಿನ ಹೊರಹರಿವು-15520ಕ್ಯೂಸೆಕ್ಸ್.
- ಲಿಂಗನಮಕ್ಕಿ ಜಲಾಶಯ (Linganamakki Dam) ಗರಿಷ್ಠ ಮಟ್ಟ- 554.4 ಮೀಟರ್, ಒಟ್ಟು ಸಾಮರ್ಥ್ಯ – 151.75 ಟಿಎಂಸಿ, ಇಂದಿನ ನೀರಿನ ಮಟ್ಟ- 72.61 ಟಿಎಂಸಿ, ಇಂದಿನ ಒಳಹರಿವು- 56012 ಕ್ಯೂಸೆಕ್ಸ್ಇಂದಿನ ಹೊರಹರಿವು- 1697 ಕ್ಯೂಸೆಕ್ಸ್.
- ಭದ್ರಾ ಜಲಾಶಯ (Bhadra Dam) ಗರಿಷ್ಠ ನೀರಿನ ಮಟ್ಟ- 657.73 ಮೀಟರ್, ಒಟ್ಟು ಸಾಮರ್ಥ್ಯ – 71.54 ಟಿಎಂಸಿ, ಇಂದಿನ ನೀರಿನ ಮಟ್ಟ- 69.22 ಟಿಎಂಸಿ, ಇಂದಿನ ಒಳಹರಿವು- 47236 ಕ್ಯೂಸೆಕ್ಸ್, ಇಂದಿನ ಹೊರಹರಿವು- 33255 ಕ್ಯೂಸೆಕ್ಸ್.
- ಕಬಿನಿ ಜಲಾಶಯ (Kabini Dam) ಗರಿಷ್ಠ ನೀರಿನ ಮಟ್ಟ- 696.13 ಮೀಟರ್, ಒಟ್ಟು ಸಾಮರ್ಥ್ಯ – 19.09 ಟಿಎಂಸಿ, ಇಂದಿನ ನೀರಿನ ಮಟ್ಟ- 18.28 ಟಿಎಂಸಿ, ಇಂದಿನ ಒಳಹರಿವು- 33455 ಕ್ಯೂಸೆಕ್ಸ್, ಇಂದಿನ ಹೊರಹರಿವು- 30458 ಕ್ಯೂಸೆಕ್ಸ್.
- ಹೇಮಾವತಿ ಜಲಾಶಯ (Hemavathi Dam) ಗರಿಷ್ಠ ಮಟ್ಟ- 890.58 ಮೀಟರ್, ಒಟ್ಟು ಸಾಮರ್ಥ್ಯ – 37.10 ಟಿಎಂಸಿ, ಇಂದಿನ ನೀರಿನ ಮಟ್ಟ- 35.56 ಟಿಎಂಸಿ, ಇಂದಿನ ಒಳಹರಿವು-41420 ಕ್ಯೂಸೆಕ್ಸ್, ಇಂದಿನ ಹೊರಹರಿವು- 40250ಕ್ಯೂಸೆಕ್ಸ್.
- ಸೂಪಾ ಜಲಾಶಯ (Supa Dam) ಗರಿಷ್ಠ ನೀರಿನ ಮಟ್ಟ- 564.00 ಮೀಟರ್, ಒಟ್ಟು ಸಾಮರ್ಥ್ಯ- 145.33 ಟಿಎಂಸಿ, ಇಂದಿನ ನೀರಿನ ಮಟ್ಟ- 52.74 ಟಿಎಂಸಿ, ಇಂದಿನ ಒಳಹರಿವು- 44637 ಕ್ಯೂಸೆಕ್ಸ್ಇಂದಿನ ಹೊರಹರಿವು- 0 ಕ್ಯೂಸೆಕ್ಸ್.
- ವರಾಹಿ ಜಲಾಶಯ (Varahi Dam) ಗರಿಷ್ಠ ಮಟ್ಟ- 594.36 ಮೀಟರ್, ಒಟ್ಟು ಸಾಮರ್ಥ್ಯ – 31.10 ಟಿಎಂಸಿ, ಇಂದಿನ ನೀರಿನ ಮಟ್ಟ- 11.38 ಟಿಎಂಸಿ, ಇಂದಿನ ಒಳಹರಿವು- 8794ಕ್ಯೂಸೆಕ್ಸ್, ಇಂದಿನ ಹೊರಹರಿವು- 0 ಕ್ಯೂಸೆಕ್.