ಪ್ರತಿಭಟನಾನಿರತ ಅಂಗನವಾಡಿ ಕಾರ್ಯಕರ್ತೆಯರ ಮೇಲೆ ಎಚ್ಡಿ ರೇವಣ್ಣ ಗರಂ ವಿಡಿಯೋ ವೈರಲ್; ಹಾಸನದಲ್ಲಿ ಶಾಸಕನ ವಿರುದ್ಧ ಧರಣಿಗೆ ನಿರ್ಧಾರ
ನಿಮ್ಮನ್ನು ಹೇಗೆ ಬಲಿ ಹಾಕಬೇಕು ಅಂತ ನನಗೆ ಗೊತ್ತಿದೆ. ಅಂಗನವಾಡಿ ಕೇಂದ್ರಗಳಲ್ಲಿ ಸರಿಯಾಗಿ ಆಹಾರ ಸಾಮಾಗ್ರಿಗಳನ್ನು ವಿತರಿಸದಿದ್ದರೆ ಗ್ರಾಮಸ್ಥರಿಂದ ದೂರು ಕೊಡಿಸಿ ಕೇಸ್ ದಾಖಲಿಸಿ.
ಹಾಸನ: ಪ್ರತಿಭಟನಾನಿರತ ಅಂಗನವಾಡಿ ಕಾರ್ಯಕರ್ತೆಯರ ಮೇಲೆ ಜೆಡಿಎಸ್ ಶಾಸಕ ಎಚ್ ಡಿ ರೇವಣ್ಣ (HD Revanna) ಗರಂ ಆಗಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ (Social Media) ವೈರಲ್ ಆಗಿದೆ. ಅಂಗನವಾಡಿ ಕಾರ್ಯಕರ್ತೆಯರು ಹೊಳೆನರಸೀಪುರ ಪಟ್ಟಣದ ಸಿಡಿಪಿಓ ಕಚೇರಿ ಎದುರು ಜುಲೈ13ಕ್ಕೆ ಪ್ರತಿಭಟನೆ ನಡೆಸಿದ್ದರು. ಮುಂಬಡ್ತಿ ಹಾಗೂ ವರ್ಗಾವಣೆಗೆ ಒತ್ತಾಯಿಸಿ ಸಿಡಿಪಿಓ ವಿರುದ್ಧ ಧರಣಿ ಮಾಡಿದ್ದರು. ಈ ವೇಳೆ ಮಾಜಿ ಸಚಿವ ಎಚ್ ಡಿ ರೇವಣ್ಣ ಪ್ರತಿಭಟನಾ ಸ್ಥಳಕ್ಕೆ ಬಂದು ಪ್ರತಿಭಟನಾ ನಿರತರ ಮೇಲೆ ಹರಿಹಾಯ್ದಿದ್ದಾರೆ.
ಯಾರದ್ದು ಹೇಳಿಕೆ ಮಾತು ಕೇಳಿ ಪ್ರತಿಭಟನೆ ನಡೆಸುತ್ತಿದ್ದಿರಾ? ನಿಮಗೆ ಏನು ಮಾಡಬೇಕು ಎಂದು ನನಗೆ ಗೊತ್ತಿದೆ ಎಂದು ಗರಂ ಆಗಿದ್ದ ರೇವಣ್ಣ, ಪ್ರತಿಭಟನೆ ಕುಳಿತಿರುವವರಿಗೆ ರಜೆ ಕೊಡಬೇಡಿ, ಆಬ್ಸೆಂಟ್ ಹಾಕಿ ಎಂದು ಅಧಿಕಾರಿಗೆ ಸೂಚಿಸಿದ್ದರು. ನಿಮ್ಮನ್ನು ಹೇಗೆ ಬಲಿ ಹಾಕಬೇಕು ಅಂತ ನನಗೆ ಗೊತ್ತಿದೆ. ಅಂಗನವಾಡಿ ಕೇಂದ್ರಗಳಲ್ಲಿ ಸರಿಯಾಗಿ ಆಹಾರ ಸಾಮಾಗ್ರಿಗಳನ್ನು ವಿತರಿಸದಿದ್ದರೆ ಗ್ರಾಮಸ್ಥರಿಂದ ದೂರು ಕೊಡಿಸಿ ಕೇಸ್ ದಾಖಲಿಸಿ. ಕೆಲವರನ್ನು ಕೆಲಸದಿಂದ ವಜಾ ಮಾಡಿ ಆಗ ಬುದ್ಧಿ ಕಲಿಯುತ್ತಾರೆ ಎಂದು ಹೇಳಿದ್ದಾರೆ.
ಅಧಿಕಾರಿ ಚೆನ್ನಾಗಿ ಕೆಲಸ ಮಾಡುತ್ತಿದ್ದಾರೆ ಎಂದು ಅಧಿಕಾರಿ ಪರವಾಗಿ ಮಾತನಾಡುತ್ತಾ ಪ್ರತಿಭಟನಾ ನಿರತರ ಮೇಲೆ ರೇವಣ್ಣ ಕೆಂಡಾಮಂಡಲರಾಗಿದ್ದರು. ನನ್ನ ಕ್ಷೇತ್ರದಲ್ಲಿ ನಿನ್ನಗೇನು ಕೆಲಸ? ನನ್ನ ಕ್ಷೇತ್ರದಲ್ಲಿ ಇದನ್ನೆಲ್ಲಾ ಇಟ್ಟುಕೊಳ್ಳಬೇಡಿ ಎಂದು ಕಾರ್ಮಿಕ ಮುಖಂಡರ ವಿರುದ್ಧವೂ ಸಿಟ್ಟಾಗಿದ್ದರು.
ಹೀಗೆ ಪ್ರತಿಭಟನೆಕಾರರ ವಿರುದ್ಧ ಹರಿಹಾಯ್ದಿದ್ದ ರೇವಣ್ಣ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಭಾರೀ ಆಕ್ರೋಶ ವ್ಯಕ್ತವಾಗಿದೆ. ಸಮಸ್ಯೆ ಹೇಳಿಕೊಳ್ಳಲು ಬಂದವರ ವಿರುದ್ಧವೇ ದುರ್ವರ್ತನೆ ತೋರಿದ ಶಾಸಕರ ನಡೆಗೆ ಜನರು ಅಸಮಧಾನಗೊಂಡಿದ್ದಾರೆ. ಇನ್ನು ರೇವಣ್ಣ ವರ್ತನೆ ಖಂಡಿಸಿ ಕಾರ್ಮಿಕ ಸಂಘಟನೆ ಸಿಐಟಿಯು ಜುಲೈ18. ರಂದು ಹಾಸನದಲ್ಲಿ ಪ್ರತಿಭಟನೆಗೆ ಕರೆ ನೀಡಿದೆ.
ಇದನ್ನೂ ಓದಿ: ರಾಜ್ಕುಮಾರ್, ರಜನಿಕಾಂತ್ಗೆ ಮೇಕಪ್ ಮಾಡಿದ್ದ ಕೇಶವಣ್ಣ ನಿಧನ; ಚಿತ್ರರಂಗದಲ್ಲಿ 53 ವರ್ಷ ಸೇವೆ
Published On - 8:27 am, Sat, 16 July 22