AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

IRE vs NZ: ರಣ ರೋಚಕ ಪಂದ್ಯ: 361 ರನ್​​ಗಳ ಟಾರ್ಗೆಟ್ ಬೆನ್ನಟ್ಟಿ 1 ರನ್​ನಿಂದ ಸೋತ ಐರ್ಲೆಂಡ್

Ireland vs New Zealand, 3rd ODI: ಮಾರ್ಟಿನ್ ಗಪ್ಟಿಲ್ (Martin Guptill) ಶತಕದಿಂದ 50 ಓವರ್​​ಗಳಲ್ಲಿ ನ್ಯೂಜಿಲೆಂಡ್ 360 ರನ್ ಗಳಿಸಿದ್ದರೆ, ಟಾರ್ಗೆಟ್ ಬೆನ್ನಟ್ಟಿದ ಐರ್ಲೆಂಡ್ 359 ರನ್ ಗಳಿಸಿ 1 ರನ್​ಗಳ ಅಂತರದಲ್ಲಿ ಸೋಲು ಕಾಣಬೇಕಾಯಿತು.

IRE vs NZ: ರಣ ರೋಚಕ ಪಂದ್ಯ: 361 ರನ್​​ಗಳ ಟಾರ್ಗೆಟ್ ಬೆನ್ನಟ್ಟಿ 1 ರನ್​ನಿಂದ ಸೋತ ಐರ್ಲೆಂಡ್
IRE vs NZ 3rd ODI
TV9 Web
| Updated By: Vinay Bhat|

Updated on: Jul 16, 2022 | 7:30 AM

Share

ಐರಿಶ್ ನಾಡಿಗೆ ಪ್ರವಾಸ ಬೆಳೆಸಿರುವ ನ್ಯೂಜಿಲೆಂಡ್ ತಂಡ ಐರ್ಲೆಂಡ್ (Ireland vs New Zealand) ವಿರುದ್ಧ ಏಕದಿನ ಸರಣಿಯನ್ನು ಆಡಿ ಮುಗಿಸಿದೆ. 3-0 ಅಂತರದಿಂದ ಕಿವೀಸ್ ಪಡೆ ಸರಣಿ ಕ್ಲೀನ್​ಸ್ವೀಪ್ ಮಾಡಿದ ಸಾಧನೆ ಗೈದಿದೆ. ಮೊದಲ ಏಕದಿನ ಪಂದ್ಯದಲ್ಲಿ 1 ವಿಕೆಟ್​ಗಳಿಂದ ಗೆದ್ದರೆ, ದ್ವಿತೀಯ ಪಂದ್ಯದಲ್ಲಿ 3 ವಿಕೆಟ್​ಗಳ ಜಯ ಸಾಧಿಸಿತ್ತು. ಶುಕ್ರವಾರ ನಡೆದ ಅಂತಿಮ ಮೂರನೇ ಏಕದಿನದಲ್ಲಿ 1 ರನ್​ಗಳ ರೋಚಕ ಜಯ ಸಾಧಿಸಿತು. ನ್ಯೂಜಿಲೆಂಡ್ ತಂಡ ಈ ಎಲ್ಲ ಪಂದ್ಯ ಗೆದ್ದಿತಾದರೂ ದುರ್ಬಲ ತಂಡವಾಗಿ ಗುರಿತಿಸಿಕೊಂಡಿದ್ದ ಐರ್ಲೆಂಡ್ ಕಠಿಣ ಪೈಪೋಟಿ ನೀಡಿದ್ದು ಸುಳ್ಳಲ್ಲ. ಅದರಲ್ಲೂ ತೃತೀಯ ಏಕದಿನ (ODI Match) ಪಂದ್ಯದಲ್ಲಿ ಕಿವೀಸ್ ನೀಡಿದ್ದ ಬೆಟ್ಟದಂತಹ ಟಾರ್ಗೆಟ್ ಬೆನ್ನಟ್ಟಿ ಕೇವಲ 1 ರನ್​ಗಳಿಂದ ಸೋಲು ಕಾಣಬೇಕಾಯಿತು. ಮಾರ್ಟಿನ್ ಗಪ್ಟಿಲ್ (Martin Guptill) ಶತಕದಿಂದ 50 ಓವರ್​​ಗಳಲ್ಲಿ ನ್ಯೂಜಿಲೆಂಡ್ 360 ರನ್ ಗಳಿಸಿದ್ದರೆ, ಟಾರ್ಗೆಟ್ ಬೆನ್ನಟ್ಟಿದ ಐರ್ಲೆಂಡ್ 359 ರನ್ ಗಳಿಸಿ 1 ರನ್​ಗಳ ಅಂತರದಲ್ಲಿ ಸೋಲು ಕಾಣಬೇಕಾಯಿತು.

ಈ ಪಂದ್ಯದಲ್ಲಿ ಟಾಸ್ ಗೆದ್ದ ನ್ಯೂಜಿಲೆಂಡ್ ತಂಡ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತು. ಓಪನರ್​ಗಳಾಗಿ ಕಣಕ್ಕಿಳಿದ ಮಾರ್ಟಿನ್ ಗಪ್ಟಿಲ್ ಹಾಗೂ ಫಿನ್ ಅಲೆನ್ ಬೊಂಬಾಟ್ ಆರಂಭ ನೀಡಿದರು. ಮೊದಲ ವಿಕೆಟ್​ಗೆ ಈ ಜೋಡಿ 78 ರನ್​ ಕಲೆಹಾಕಿತು. ಅಲೆನ್ 28 ಎಸೆತಗಳಲ್ಲಿ 33 ರನ್ ಗಳಿಸಿ ಔಟಾದರು. ಬಂದ ಬೆನ್ನಲ್ಲೇ ವಿಲ್ ಯಂಗ್ 3 ರನ್​​ಗೆ ಪೆವಿಲಿಯನ್ ಸೇರಿಕೊಂಡರೆ, ನಾಯಕ ಟಾಮ್ ಲಾಥಮ್ 30 ರನ್​ಗೆ ಬ್ಯಾಟ್ ಕೆಳಗಿಟ್ಟರು. ಈ ಸಂದರ್ಭ ಗಪ್ಟಿಲ್ ಜೊತೆಯಾದ ಹೆನ್ರಿ ನಿಕೋಲ್ಸ್ ಭರ್ಜರಿ ಜೊತೆಯಾಟ ಆಡಿದರು.

ಐರ್ಲೆಂಡ್ ಬೌಲರ್​ಗಳ ಬೆವರಿಳಿಸಿದ ಈ ಜೋಡಿ 96 ರನ್ ಕಲೆಹಾಕಿತು. ಆಕರ್ಷಕ ಬ್ಯಾಟಿಂಗ್ ನಡೆಸಿದ ಗಪ್ಟಿಲ್ ಶತಕ ಸಿಡಿಸಿ ಮಿಂಚಿದರು. 126 ಎಸೆತಗಳಲ್ಲಿ 15 ಫೋರ್, 2 ಸಿಕ್ಸರ್​​ನೊಂದಿಗೆ 115 ರನ್ ಚಚ್ಚಿದರು. ನಿಕೋಲ್ಸ್ 54 ಎಸೆತಗಳಲ್ಲಿ 5 ಫೋರ್, 3 ಸಿಕ್ಸರ್​​ನೊಂದಿಗೆ 79 ರನ್ ಸಿಡಿಸಿದರು. ಗ್ಲೆನ್ ಫಿಲಿಪ್ಸ್ 47 ಹಾಗೂ ಬ್ರೆಸ್ವೆಲ್ ಅಜೇಯ 21 ರನ್ ಗಳಿಸಿ ಅಂತಿಮ ಹಂತದಲ್ಲಿ ನೆರವಾದರು. ನ್ಯೂಜಿಲೆಂಡ್ 50 ಓವರ್​ಗಳಲ್ಲಿ 6 ವಿಕೆಟ್ ನಷ್ಟಕ್ಕೆ ಬರೋಬ್ಬರಿ 360 ರನ್ ಕಲೆಹಾಕಿತು.

ಇದನ್ನೂ ಓದಿ
Image
ICC T20 World Cup 2022: ವಿಶ್ವಕಪ್‌ಗೆ ಅರ್ಹತೆ ಪಡೆದ ಜಿಂಬಾಬ್ವೆ- ನೆದರ್ಲೆಂಡ್ಸ್; ಯುಎಸ್ಎ ಕನಸು ಭಗ್ನ!
Image
ENG vs SA: ದಕ್ಷಿಣ ಆಫ್ರಿಕಾ ವಿರುದ್ಧದ ಟಿ20 ಸರಣಿಗೆ ಇಂಗ್ಲೆಂಡ್‌ ತಂಡ ಪ್ರಕಟ; ಲೆಜೆಂಡರಿ ಸ್ಟಾರ್‌ಗೆ ವಿಶ್ರಾಂತಿ
Image
BCCI: ಗಂಗೂಲಿ-ಜೈ ಶಾ ಅಧಿಕಾರಾವಧಿ ಮತ್ತೆ ವಿಸ್ತರಣೆ? ಸುಪ್ರೀಂ ಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದ ಬಿಸಿಸಿಐ
Image
Cristiano Ronaldo: ಅಬ್ಬಬ್ಬಾ…! ರೊನಾಲ್ಡೊ ಒಂದು ಸಹಿಯಿಂದ ಗಳಿಸುವ ಆದಾಯ ಬರೋಬ್ಬರಿ 2400 ಕೋಟಿ..!

ದೊಡ್ಡ ಟಾರ್ಗೆಟ್ ಬೆನ್ನಟ್ಟಿದ ಐರ್ಲೆಂಡ್ ತಂಡ ಆರಂಭದಲ್ಲೇ ನಾಯಕ ಆಂಡ್ರೆ ಬಲ್ಬಿರ್ನಿ (0) ವಿಕೆಟ್ ಕಳೆದುಕೊಂಡಿತು. ಆ್ಯಂಡಿ ಮೆಕ್​ಬ್ರಿನ್ 26 ರನ್​ಗೆ ಔಟಾದರು. ಈ ಸಂದರ್ಭ ಜೊತೆಯಾದ ಪೌಲ್ ಸ್ಟಿರ್​ಲಿಂಗ್​ ಮತ್ತು ಹ್ಯಾರಿ ಟೆಕ್ಟರ್ ಯಾರೂ ಊಹಿಸಲಾಗದ ರೀತಿಯಲ್ಲಿ ಜೊತೆಯಾಟ ಆಡಿದರು. ಕಿವೀಸ್ ಬೌಲರ್​ಗಳನ್ನು ಸಮರ್ಥವಾಗಿ ಎದುರಿಸಿದ ಇವರು 179 ರನ್​​ಗಳ ಕಾಣಿಕೆ ನೀಡಿದರು. ಮೈದಾನದ ಮೂಲೆ ಮೂಲೆಗೆ ಚೆಂಡನ್ನು ಅಟ್ಟಿ ತಂಡದ ಗೆಲುವಿನ ಆಸೆಯನ್ನು ಚಿಗುರಿಸಿದರು. ಇಬ್ಬರೂ ಶತಕ ಸಿಡಿಸಿ ಸಂಭ್ರಮಿಸಿದರು ಕೂಡ.

ಟೆಕ್ಟನ್ 106 ಎಸೆತಗಳಲ್ಲಿ 108 ರನ್ ಸಿಡಿಸಿದರೆ, ಪೌಲ್ ಸ್ಟಿರ್​ಲಿಂಗ್ 103 ಎಸೆತಗಳಲ್ಲಿ 120 ರನ್ ಚಚ್ಚಿದರು. ಇವರಿಬ್ಬರು ತಂಡ ಗೆಲುವು ಸಾಧಿಸಲು ಏನೋ ಮಾಡಬೇಕು ಅದನ್ನು ಮಾಡಿ ನಿರ್ಗಮಿಸಿದರು. ಆದರೆ, ನಂತರ ಬಂದ ಬ್ಯಾಟರ್​ಗಳು ಇಬ್ಬರ ಹಿಂದೆ ಒಬ್ಬರಂತೆ ಪೆವಿಲಿಯನ್ ಸೇರಿಕೊಂಡರು. ಕೊನೆಯ ಓವರ್​ನಲ್ಲಿ ಐರ್ಲೆಂಡ್ ಗೆಲುವಿಗೆ 10 ರನ್​ಗಳ ಅವಶ್ಯಕತೆಯಿತ್ತು. ಆದರೆ, ಅಂತಿಮವಾಗಿ 50 ಓವರ್​ನಲ್ಲಿ 9 ವಿಕೆಟ್ ಕಳೆದುಕೊಂಡು 359 ರನ್ ಗಳಿಸಲಷ್ಟೇ ಶಕ್ತವಾಗಿ 1 ರನ್​ಗಳಿಂದ ಸೋಲು ಕಾಣಬೇಕಾಯಿತು.

ಅರೇ ಇದೇನಿದು ಎರಡು ಬಸ್ ಒಂದೇ ನಂಬರ್ ಪ್ಲೇಟ್: ಆರ್​​ಟಿಓ ಅಧಿಕಾರಿಗಳೇ ಶಾಕ್!
ಅರೇ ಇದೇನಿದು ಎರಡು ಬಸ್ ಒಂದೇ ನಂಬರ್ ಪ್ಲೇಟ್: ಆರ್​​ಟಿಓ ಅಧಿಕಾರಿಗಳೇ ಶಾಕ್!
ಜೋರ್ಡಾನ್​​​ನಲ್ಲಿ ಮೋದಿಯನ್ನು ನೋಡಿ ಸಂಭ್ರಮಿಸಿದ ಭಾರತೀಯ ವಲಸಿಗರು
ಜೋರ್ಡಾನ್​​​ನಲ್ಲಿ ಮೋದಿಯನ್ನು ನೋಡಿ ಸಂಭ್ರಮಿಸಿದ ಭಾರತೀಯ ವಲಸಿಗರು
20 ದಿನದಲ್ಲೇ ದಾಂಪತ್ಯ ಜೀವನ ಅಂತ್ಯ: ಸಂಸಾರದಲ್ಲಿ ಹುಳಿ ಹಿಂಡಿದ ಪ್ರಿಯಕರ
20 ದಿನದಲ್ಲೇ ದಾಂಪತ್ಯ ಜೀವನ ಅಂತ್ಯ: ಸಂಸಾರದಲ್ಲಿ ಹುಳಿ ಹಿಂಡಿದ ಪ್ರಿಯಕರ
ಚಲಿಸುತ್ತಿದ್ದ ರೈಲಿನ ಚೈನ್ ಎಳೆದು ರಾದ್ಧಾಂತ: ಪ್ರಶ್ನಿಸಿದ್ದಕ್ಕೆ ಹಲ್ಲೆ
ಚಲಿಸುತ್ತಿದ್ದ ರೈಲಿನ ಚೈನ್ ಎಳೆದು ರಾದ್ಧಾಂತ: ಪ್ರಶ್ನಿಸಿದ್ದಕ್ಕೆ ಹಲ್ಲೆ
‘45’ ಚಿತ್ರದ ಟ್ರೇಲರ್ ರಿಲೀಸ್ ಕಾರ್ಯಕ್ರಮ: ಲೈವ್ ವಿಡಿಯೋ ಇಲ್ಲಿದೆ ನೋಡಿ..
‘45’ ಚಿತ್ರದ ಟ್ರೇಲರ್ ರಿಲೀಸ್ ಕಾರ್ಯಕ್ರಮ: ಲೈವ್ ವಿಡಿಯೋ ಇಲ್ಲಿದೆ ನೋಡಿ..
ಪ್ರಧಾನಿ ಮೋದಿಗೆ ಜೋರ್ಡಾನ್‌ನಲ್ಲಿ ಸಾಂಪ್ರದಾಯಿಕ ಸ್ವಾಗತ
ಪ್ರಧಾನಿ ಮೋದಿಗೆ ಜೋರ್ಡಾನ್‌ನಲ್ಲಿ ಸಾಂಪ್ರದಾಯಿಕ ಸ್ವಾಗತ
ಕಾಸರಗೋಡಿನಲ್ಲಿ ತೆಯ್ಯಂ ಪ್ರದರ್ಶನದ ವೇಳೆ ಏನಾಯ್ತು ನೋಡಿ!
ಕಾಸರಗೋಡಿನಲ್ಲಿ ತೆಯ್ಯಂ ಪ್ರದರ್ಶನದ ವೇಳೆ ಏನಾಯ್ತು ನೋಡಿ!
ಶಿವಶಂಕರಪ್ಪ ಕೈಲಾಸ ಶಿವಗಣಾರಾಧನೆಗೆ ಆಹ್ವಾನ ನೀಡಿದ ಕುಟುಂಬ: ಯಾವಾಗ, ಎಲ್ಲಿ?
ಶಿವಶಂಕರಪ್ಪ ಕೈಲಾಸ ಶಿವಗಣಾರಾಧನೆಗೆ ಆಹ್ವಾನ ನೀಡಿದ ಕುಟುಂಬ: ಯಾವಾಗ, ಎಲ್ಲಿ?
ಜೈಲಿನಲ್ಲಿ ದರ್ಶನ ಭೇಟಿ ಮಾಡಿದ ​ಅಲೋಕ್ ಕುಮಾರ್: ಏನು ವಿಚಾರಿಸಿದ್ರು?
ಜೈಲಿನಲ್ಲಿ ದರ್ಶನ ಭೇಟಿ ಮಾಡಿದ ​ಅಲೋಕ್ ಕುಮಾರ್: ಏನು ವಿಚಾರಿಸಿದ್ರು?
ಸೀಕ್ರೆಟ್ ರೂಮ್​​ನಲ್ಲೂ ನಡೆಯಿತು ಧ್ರುವಂತ್, ರಕ್ಷಿತಾ ಶೆಟ್ಟಿ ಜಗಳ
ಸೀಕ್ರೆಟ್ ರೂಮ್​​ನಲ್ಲೂ ನಡೆಯಿತು ಧ್ರುವಂತ್, ರಕ್ಷಿತಾ ಶೆಟ್ಟಿ ಜಗಳ