AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬೆಂಗಳೂರು: ಮಕ್ಕಳನ್ನೇ ಕಾಡುತ್ತಿದೆ ಡೆಂಗ್ಯೂ, ಶಾಲಾ ಮಕ್ಕಳ ಮೇಲೆ ನಿಗಾ ಇಡಲು ಆರೋಗ್ಯ ಇಲಾಖೆ ಹೊಸ ಪ್ಲಾನ್

ಸಿಲಿಕಾನ್ ಸಿಟಿಯಲ್ಲಿ ಡೆಂಗ್ಯೂ ಅಬ್ಬರ‌ ಯಾಕೋ ನಿಲ್ಲುವಂತೆ ಕಾಣ್ತಿಲ್ಲ. ಅದರಲ್ಲೂ ಶಾಲಾ ಮಕ್ಕಳಿಗೆ ಡೆಂಗ್ಯೂ ಹೆಮ್ಮಾರಿಯಂತೆ ಕಾಡ್ತೀದೆ. ಜೊತೆಗೆ ಡೆಂಗ್ಯೂ ಜ್ವರ ಬಂದವರಲ್ಲಿ ಮತ್ತೆ ಪ್ರಕರಣ ಕಂಡು ಬರ್ತಿದ್ದು ಮಕ್ಕಳೇ ಈ ಬಾರಿ ಡೆಂಗ್ಯೂಗೆ ಟಾರ್ಗೆಟ್ ಆಗ್ತೀದ್ದಾರೆ. ಈ ಹಿನ್ನೆಲೆ ಆರೋಗ್ಯ ಇಲಾಖೆ ಶಾಲಾ ಮಕ್ಕಳ ಮೇಲೆ ಹದ್ದಿನ ಕಣ್ಣು ಇಟ್ಟಿದೆ. ಶಾಲಾ ಮಟ್ಟದಲ್ಲಿ ಈ ಡೆಂಗ್ಯೂ ತಡೆಗೆ ಹೆಚ್ಚು ಗಮನಹರಿಸೋದಕ್ಕೆ ಮುಂದಾಗಿದೆ.

ಬೆಂಗಳೂರು: ಮಕ್ಕಳನ್ನೇ ಕಾಡುತ್ತಿದೆ ಡೆಂಗ್ಯೂ, ಶಾಲಾ ಮಕ್ಕಳ ಮೇಲೆ ನಿಗಾ ಇಡಲು ಆರೋಗ್ಯ ಇಲಾಖೆ ಹೊಸ ಪ್ಲಾನ್
ಸಾಂದರ್ಭಿಕ ಚಿತ್ರ
Vinay Kashappanavar
| Updated By: ಆಯೇಷಾ ಬಾನು|

Updated on: Jul 23, 2024 | 8:02 AM

Share

ಬೆಂಗಳೂರು, ಜುಲೈ.23: ಸಿಲಿಕಾನ್ ಸಿಟಿಯಲ್ಲಿ ದಿನದಿಂದ ದಿನಕ್ಕೆ ಡೆಂಗ್ಯೂ (Dengue) ಆತಂಕ ಹೆಚ್ಚುತ್ತಲೇ ಇದೆ. ಇದುವರೆಗೂ ಬಿಬಿಎಂಪಿ (BBMP) ವ್ಯಾಪ್ತಿಯಲ್ಲಿ 6382 ಪ್ರಕರಣಗಳು ದಾಖಲಾಗಿವೆ. ಶೇ. 60% ರಷ್ಟು ರೋಗಿಗಳಲ್ಲಿ ಮಕ್ಕಳೇ ಹೆಚ್ಚಾಗಿದ್ದಾರೆ. ಈ ಬಾರಿ ಡೆಂಗ್ಯೂ ಅತಿ ಹೆಚ್ಚು ಮಕ್ಕಳನ್ನು ಬಾಧಿಸುತ್ತಿದೆ. ಅದರಲ್ಲೂ ಡೆಂಘೀ ಬಂದು ಹೋದ ಮಕ್ಕಳಲ್ಲಿ ಮತ್ತೆ ಈ ಡೆಂಗ್ಯೂ ಅಟ್ಯಾಕ್ ಮಾಡ್ತಿದೆ.‌ ಇದರಿಂದ ಮಕ್ಕಳು ಶಾಕ್‌ಗೆ ಒಳಗಾಗ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಶಾಲೆಗಳ ಮೇಲೆ ಹದ್ದಿನ ಕಣ್ಣು ಇಡಲು ಆರೋಗ್ಯ ಇಲಾಖೆ ಸೂಚನೆ ನೀಡಿದೆ.

ಶಾಲಾ ಮಕ್ಕಳಲ್ಲಿ ಡೆಂಗ್ಯೂ ಏರಿಕೆ ಹಿನ್ನಲೆ ಡೆಂಗ್ಯೂ ಪಾಸಿಟಿವ್ ಕಂಡು ಬಂದ ಶಾಲೆಗಳ ಮೇಲೆ ಹದ್ದಿನ ಕಣ್ಣಿಡಲು ಆರೋಗ್ಯ ಇಲಾಖೆ ಮುಂದಾಗಿದೆ. ಹೆಚ್ಚು ಪಾಟಿಸಿವ್ ಪ್ರಕರಣಗಳು ಕಂಡು ಬಂದ ಶಾಲೆ ಗುರುತಿಸಿ  ಆ ಶಾಲಾ ಮಕ್ಕಳಿಗೆ ಮಸ್ಕಿಟೋ ರಿಪ್ಲಿಕೆಂಟ್ ಉಚಿತವಾಗಿ ನೀಡಲು ಮುಂದಾಗಿದೆ. ಪಾಸಿಟಿವ್ ಕಂಡು ಬಂದ ಶಾಲೆ ಸುತ್ತಮುತ್ತ ಸೂಕ್ತ ಮುನ್ನೆಚ್ಚರಿಕೆಗೆ ಆರೋಗ್ಯ ಇಲಾಖೆ ಮುಂದಾಗಿದೆ.

ಡೆಂಗ್ಯೂ ಬಂದು ಹೋದ ಮಕ್ಕಳಿಗೆ ಮತ್ತೆ ಸೊಳ್ಳೆ ಕಚ್ಚಿ ಎರಡೆರಡು ಬಾರಿ ಪಾಸಿಟಿವ್ ಸಾಧ್ಯತೆ. ಹೀಗಾಗಿ ಶಾಲಾ ಮಕ್ಕಳಲ್ಲಿ ಡೆಂಘಿ ಪ್ರಮಾಣ ಕಡಿಮೆ ಮಾಡಲು ಆರೋಗ್ಯ ಇಲಾಖೆ ಹರಸಾಹಸ ಪಡ್ತೀದೆ. ಮಕ್ಕಳು ಫುಲ್ ಸ್ಲೀವ್ ಬಟ್ಟೆಗಳನ್ನ ಧರಿಸದ ಕಾರಣ, ಮತ್ತೆ ಸೊಳ್ಳೆಗಳು ಕಚ್ಚುವ ಸಾಧ್ಯತೆ ಹೆಚ್ಚಿರಲಿದೆ.‌ ಈ ಹಿನ್ನೆಲೆ ರಿಪೆಲೆಂಟ್ ವಿತರಣೆಗೆ ಮುಂದಾಗಿದ್ದು ಇದನ್ನ ಕೈ ಮತ್ತು ಕಾಲಿಗೆ ಹಚ್ಚುವುದರಿಂದ ಸೊಳ್ಳೆಗಳು ಕಚ್ಚುವುದಿಲ್ಲ ಇದರಿಂದ ಡೆಂಗ್ಯೂ ತಡೆಯಬಹುದಾಗಿದೆ.

ಇದನ್ನೂ ಓದಿ: Karnataka Rains: ಕರ್ನಾಟಕದಾದ್ಯಂತ ನಾಳೆಯಿಂದ ಕೊಂಚ ಕಡಿಮೆಯಾಗಲಿದೆ ಮಳೆಯ ಅಬ್ಬರ

ಇನ್ನು ಈ ರಿಪಲೆಂಟ್‌ಗಳನ್ನ ಮಕ್ಕಳ ಕೈಗೆ ಹಾಗೂ ಕಾಲುಗಳಿಗೆ ಹಚ್ಚುವುದರಿಂದ ಅದರ ಸ್ಮೆಲ್‌ಗೆ ಸೊಳ್ಳೆಗಳು ಹತ್ತಿರ ಬರೋದಿಲ್ಲ‌. ಹಾಗೂ ಅವುಗಳು‌ ಮಕ್ಕಳನ್ನ ಕಚ್ಚೋದಕ್ಕೆ ಸಾಧ್ಯವಾಗೋದಿಲ್ಲ. ಜೊತೆಗೆ ಮಕ್ಕಳಿಗೆ ಈ ರಿಪಲೆಂಟ್ ಯಾವುದೇ ರೀತಿಯ ಸೈಡ್‌ಎಫೆಕ್ಟ್ ಮಾಡೋದಿಲ್ಲ. ಈ ಹಿನ್ನೆಲೆ ಲೋಷನ್ ರೀತಿಯ ಹಾಗೂ ಸ್ಟಿಕರ್ ರೀತಿಯ ರಿಪಲೆಂಟ್‌ಗಳನ್ನು ಮಕ್ಕಳಿಗೆ ವಿತರಣೆ ಮಾಡೋದಕ್ಕೆ ಇಲಾಖೆ ಸಜ್ಜಾಗಿದ್ದು, ರಿಪಲೆಂಟ್‌ಗಳ ಜೊತೆ ಮಕ್ಕಳು ಮೈತುಂಬಾ ಬಟ್ಟೆ ಧರಿಸಬೇಕು. ಹೆಚ್ಚು ಹೊರಗೆ ಹೋಗದೆ ಮುಂಜಾಗೃತೆ ವಹಿಸಬೇಕು ಎಂದು ವೈದ್ಯರು ಸಲಹೆ ನೀಡಿದ್ದಾರೆ. ಜೊತೆಗೆ ಶಾಲೆಗಳಲ್ಲಿ ಕೂಡಾ ಮಕ್ಕಳ ಬಗ್ಗೆ ಡೆಂಗ್ಯೂ ಬಾರದಂತೆ ಮುಂಜಾಗೃತ ಕ್ರಮ ವಹಿಸಲಾಗ್ತಿದೆ.

ಒಟ್ನಲ್ಲಿ‌ ಮಕ್ಕಳನ್ನ ಬಾಧಿಸುತ್ತಿರುವ ಡೆಂಗ್ಯೂ ತಡೆಗೆ ಆರೋಗ್ಯ ಇಲಾಖೆ ಹರಸಾಹಸ ಪಡ್ತಿದ್ದು, ಮಕ್ಕಳ ಸುರಕ್ಷತೆಗೆ ಎಲ್ಲಾ ರೀತಿಯ ಮುಂಜಾಗೃತ ಕ್ರಮ ವಹಿಸಲಾಗಿದೆ. ಇದರ ಜೊತೆಗೆ ಮಕ್ಕಳ ಆರೋಗ್ಯದ ಬಗ್ಗೆ ಪೋಷಕರು ಕೂಡಾ ಕೊಂಚ ಗಮನಹಿಸಬೇಕಿದೆ.

ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ