ಪಿಎಸ್ಐ ನೇಮಕ ಅಕ್ರಮ ಪ್ರಕರಣ: ಡಿವೈಎಸ್‌ಪಿ ಶಾಂತಕುಮಾರ್ ಬಂಧನ, ಎಡಿಜಿಪಿ ಅಮ್ರಿತ್ ಪಾಲ್‌ಗೂ ಕಾದಿದೆಯಾ ಕಂಟಕ?

ಪಿಎಸ್ಐ ನೇಮಕ ಅಕ್ರಮ ಪ್ರಕರಣ: ಡಿವೈಎಸ್‌ಪಿ ಶಾಂತಕುಮಾರ್ ಬಂಧನ, ಎಡಿಜಿಪಿ ಅಮ್ರಿತ್ ಪಾಲ್‌ಗೂ ಕಾದಿದೆಯಾ ಕಂಟಕ?
ಸಾಂದರ್ಭಿಕ ಚಿತ್ರ

ವಿಚಾರಣೆ ಬಳಿಕ ಡಿವೈಎಸ್‌ಪಿ ಶಾಂತಕುಮಾರ್​ರನ್ನ ಬಂಧಿಸಲಾಗಿದೆ. ಎರಡು ದಿನಗಳ ಹಿಂದೆ ನಾಲ್ವರು ನೇಮಕಾತಿ ವಿಭಾಗದ ಅಧಿಕಾರಿಗಳನ್ನ ಸಿಐಡಿ ಬಂಧಿಸಿತ್ತು.

TV9kannada Web Team

| Edited By: Ayesha Banu

May 12, 2022 | 7:12 PM

ಬೆಂಗಳೂರು: 545 ಪಿಎಸ್ಐ ಹುದ್ದೆಗಳಿಗೆ ನೇಮಕಾತಿಯಲ್ಲಿ ಅಕ್ರಮ ಪ್ರಕರಣಕ್ಕೆ(PSI Recruitment Scam) ಸಂಬಂಧಿಸಿ ಸಿಐಡಿ ಅಧಿಕಾರಿಗಳು ನೇಮಕಾತಿ ವಿಭಾಗದ ಡಿವೈಎಸ್‌ಪಿ ಶಾಂತಕುಮಾರ್ರನ್ನು ಬಂಧಿಸಿದ್ದಾರೆ. ವಿಚಾರಣೆ ಬಳಿಕ ಡಿವೈಎಸ್‌ಪಿ ಶಾಂತಕುಮಾರ್​ರನ್ನ ಬಂಧಿಸಲಾಗಿದೆ. ಎರಡು ದಿನಗಳ ಹಿಂದೆ ನಾಲ್ವರು ನೇಮಕಾತಿ ವಿಭಾಗದ ಅಧಿಕಾರಿಗಳನ್ನ ಸಿಐಡಿ ಬಂಧಿಸಿತ್ತು.

ಟಿವಿ9 ವರದಿ ಇಂಪ್ಯಾಕ್ಟ್‌, ಡಿವೈಎಸ್‌ಪಿ ಬಂಧನ ಪಿಎಸ್ಐ ಅಕ್ರಮ ನೇಮಕಾತಿ ಪ್ರಕರಣದಲ್ಲಿ ಡಿವೈಎಸ್ ಪಿ ಶಾಂತಕುಮಾರ್ ಕೈವಾಡ ಶಂಕೆ ಕುರಿತು ಟಿವಿ9 ವಿಸ್ತ್ರೃತ ವರದಿ ಬಿತ್ತರಿಸಿತ್ತು. 10 ವರ್ಷಗಳಿಗೂ ಹೆಚ್ಚು ವರ್ಷ ನೇಮಕಾತಿ ವಿಭಾಗದಲ್ಲಿ ಡಿವೈಎಸ್ಪಿಯಾಗಿ ಶಾಂತಕುಮಾರ್ ಕರ್ತವ್ಯ ನಿರ್ವಹಿಸಿದ್ದರು. ಪಿಎಸ್ಐ ಅಕ್ರಮ ಪ್ರಕರಣ ಹೊರಬರುತ್ತಲೇ ಇವರನ್ನು ಎತ್ತಂಗಡಿ ಮಾಡಲಾಗಿತ್ತು. ನೇಮಕಾತಿ ಹಗರಣದ ಮೊದಲನೇ ಕಿಂಗ್‌ಪಿನ್ ಶಾಂತಕುಮಾರ್ ಆಗಿದ್ದಾರೆ. ಇನ್ನು ಎಡಿಜಿಪಿ ಅಮ್ರಿತ್ ಪಾಲ್‌ಗೂ ಕಂಟಕ ಕಾದಿದೆ. ವಿಚಾರಣೆಗೆ ಕರೆದು ಪಾಲ್‌ನನ್ನು ವಶಕ್ಕೆ ಪಡೆಯುವ ಸಾಧ್ಯತೆ ಇದೆ. ಪಿಎಸ್​ಐ ನೇಮಕಾತಿ ಅಕ್ರಮದಲ್ಲಿ ​ಅಮ್ರಿತ್ ಪಾಲ್‌ 2 ನೇ ಕಿಂಗ್​ಪಿನ್.

ಪಿಎಸ್ಐ ಅಕ್ರಮದಲ್ಲಿ ಶಾಂತಕುಮಾರ್ ವಿರುದ್ಧ ಆರೋಪಗಳ ಸುರಿಮಳೆ ಪಿಎಸ್‌ಐ ನೇಮಕಾತಿಯಲ್ಲಿ ಅಕ್ರಮ ವಿಚಾರಕ್ಕೆ ಸಂಬಂಧಿಸಿ ಪಿಎಸ್‌ಐ ನೇಮಕಾತಿಯ ಅಕ್ರಮದ ಹಿಂದೆ ಕಿಲಾಡಿ ಜೋಡಿಗಳ ಕೈವಾಡ ವಿರುವ ಬಗ್ಗೆ ಆರೋಪ ಕೇಳಿ ಬಂದಿದೆ. ಪಿಎಸ್‌ಐ ನೇಮಕಾತಿಯಲ್ಲಿ ಕಿಲಾಡಿ ಜೋಡಿಗಳಾಗಿರುವ ಅಮೃತ್ ಪೌಲ್ ಮತ್ತು ಶಾಂತಕುಮಾರ್ ಕೋಟಿ ಕೋಟಿ ಹಣ ಪಡೆದು ಅಕ್ರಮದಲ್ಲಿ ನೇರವಾಗಿ ಭಾಗಿಯಾಗಿರುವ ಆರೋಪ ಕೇಳಿ ಬಂದಿದೆ. ಈ ಹಿಂದೆಯು ನೇಮಕಾತಿಯಲ್ಲಿ ಅಕ್ರಮವೆಸಗಿರುವ ಬಗ್ಗೆ ಇದೇ ಜೋಡಿ ಭಾಗಿಯಾಗಿರುವ ಆರೋಪ ಕೇಳಿ ಬಂದಿತ್ತು. ಇದರಿಂದ ಕೋಟಿ ಕೋಟಿ ಹಣ ಗಳಿಸಿರುವ ಆರೋಪ ಕೇಳಿಬಂದಿತ್ತು. ಡಿವೈಎಸ್‌ಪಿ ಶಾಂತಿಕುಮಾರ್, ಮಧ್ಯವರ್ತಿಗಳ ಮೂಲಕ ಅಭ್ಯರ್ಥಿಗಳ ಭೇಟಿ ಮಾಡುತ್ತಿದ್ದರು. ಅಭ್ಯರ್ಥಿಗಳೊಂದಿಗೆ ಡೀಲ್ ಮಾಡಿಕೊಳ್ಳುತ್ತಿದ್ದರು. ಬಳಿಕ ರೇಟ್ ಫಿಕ್ಸ್ ಮಾಡುತ್ತಿದ್ದರು.

ನಿವೃತ್ತ ಐಪಿಎಸ್ ಅಧಿಕಾರಿಗೆ ಆಪ್ತನಾಗಿದ್ದ ಡಿವೈಎಸ್​ಪಿ ಶಾಂತಕುಮಾರ್ ಯಾವುದೇ ಪಕ್ಷ ಆಡಳಿತದಲ್ಲಿದ್ದರು ನೇಮಕಾತಿ ವಿಭಾಗದಲ್ಲೇ ಮುಂದುವರಿಯುತ್ತಿದ್ದರು. ಶಾಂತಕುಮಾರ್ 1996 ರ ಬ್ಯಾಚ್ ನ CAR ಕಾನ್ಸ್ ಟೇಬಲ್. ಶಾಂತಕುಮಾರ್ 2006 ರಲ್ಲಿ ಆರ್​ಎಸ್​ಐ ಎಕ್ಸಾಂ ಬರೆದಿದ್ದರು. 2006ರಲ್ಲಿ ಸಿಎಆರ್​ಆರ್​ಎಸ್​ಐ ಆಗಿ ನೇಮಕವಾಗಿದ್ದರು. ಗುಲ್ಬರ್ಗದಲ್ಲಿ ಒಂದು ವರ್ಷ ಆರ್​ಎಸ್​ಐ ಟ್ರೈನಿಂಗ್ ಮುಗಿಸಿದ್ದರು. ಅದಾದ ಬಳಿಕ ಪ್ರೊಬೆಷನರಿ ಅವಧಿಯಲ್ಲಿ ತುಮಕೂರಿನಲ್ಲಿ ಇದ್ದರು. ಅಷ್ಟರಲ್ಲಾಗ್ಲೇ ಪಿಎಸ್​ಐ ನೇಮಕಾತಿ ವಿಭಾಗಕ್ಕೆ ಎಂಟ್ರಿ ಕೊಟ್ಟು 2007-08 ರಿಂದ ನೇಮಕಾತಿ ವಿಭಾಗದಲ್ಲೇ ಕರ್ತವ್ಯ ನಿರ್ವಹಿಸುತ್ತಿದ್ದರು. ನೇಮಕಾತಿಯ ಒಳಹೊರಗೆ ಏನಾಗುತ್ತೆ ಅನ್ನೋದನ್ನ ಅರಿತುಕೊಂಡಿದ್ದ ಶಾಂತಕುಮಾರ್, ಕಳೆದ 2 ವರ್ಷದ ಹಿಂದೆ ಇನ್ಸ್ ಪೆಕ್ಟರ್ ನಿಂದ ಡಿವೈಎಸ್ಪಿ ಆಗಿ ಪ್ರಮೋಷನ್ ಪಡೆದಿದ್ದರು. ಇಡೀ ನೇಮಕಾತಿ ವಿಭಾಗ ಶಾಂತಕುಮಾರ್ ಹಿಡಿತದಲ್ಲಿತ್ತು.

Follow us on

Related Stories

Most Read Stories

Click on your DTH Provider to Add TV9 Kannada