Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸಿಎಂ ಬೊಮ್ಮಾಯಿ ಮತ್ತೊಮ್ಮೆ ಸಿಟಿ ರೌಂಡ್ಸ್; ನೀರು ಹರಿದು ಬರಲು ಕೆಲ ಕಡೆ ರೈಲ್ವೆ ವೆಂಟ್ ಅಡ್ಡಿಯಾಗಿದೆ ಎಂದ ಸಿಎಂ

ಸಿಎಂ ಬೊಮ್ಮಾಯಿ ಇಂದು ಬೆಂಗಳೂರಿನಲ್ಲಿ ಸಿಟಿ ರೌಂಡ್ಸ್ ಕೈಗೊಂಡಿದ್ದಾರೆ. ಗುಂಡಿಮಯವಾಗಿರುವ ಹೆಣ್ಣೂರು ರಸ್ತೆಯಲ್ಲಿ ಸಂಚರಿಸುವಾಗ ಸಿಎಂ ಹೈರಾಣಾದ್ರು. ಸದ್ಯ ಹೆಣ್ಣೂರು ಬಂಡೆಯ ವಡ್ಡರಪಾಳ್ಯಕ್ಕೆ ಹಾದುಹೋಗುವ ರಾಜಕಾಲುವೆ, ಶಿರಡಿ ಸಾಯಿಬಾಬಾ ಲೇಔಟ್ನಲ್ಲಿ ಪರಿಶೀಲನೆ ನಡೆಸಿದ್ದಾರೆ.

ಸಿಎಂ ಬೊಮ್ಮಾಯಿ ಮತ್ತೊಮ್ಮೆ ಸಿಟಿ ರೌಂಡ್ಸ್; ನೀರು ಹರಿದು ಬರಲು ಕೆಲ ಕಡೆ ರೈಲ್ವೆ ವೆಂಟ್ ಅಡ್ಡಿಯಾಗಿದೆ ಎಂದ ಸಿಎಂ
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (ಸಂಗ್ರಹ ಚಿತ್ರ)
Follow us
TV9 Web
| Updated By: ಆಯೇಷಾ ಬಾನು

Updated on:Nov 24, 2021 | 12:26 PM

ಬೆಂಗಳೂರು: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಬೆಂಗಳೂರು ಸಿಟಿ ರೌಂಡ್ಸ್ ಕೈಗೊಂಡಿದ್ದಾರೆ. ನಗರದ ಮಳೆ ಹಾನಿ ಪ್ರದೇಶಗಳಿಗೆ ಭೇಟಿ ಕೊಟ್ಟು ಪರಿಶೀಲನೆ ನಡೆಸುತ್ತಿದ್ದಾರೆ. ಸದ್ಯ ಕೆ.ಆರ್.ಪುರಂನತ್ತ ಬೊಮ್ಮಾಯಿ ತೆರಳಿದ್ದು ಗುಂಡಿಮಯವಾಗಿರುವ ಹೆಣ್ಣೂರು ರಸ್ತೆಯಲ್ಲಿ ಹೋಗಲು ಸಿಎಂ ಹೈರಾಣಾಗಿದ್ದಾರೆ.

ಸಿಎಂ ಬೊಮ್ಮಾಯಿ ಇಂದು ಬೆಂಗಳೂರಿನಲ್ಲಿ ಸಿಟಿ ರೌಂಡ್ಸ್ ಕೈಗೊಂಡಿದ್ದಾರೆ. ಗುಂಡಿಮಯವಾಗಿರುವ ಹೆಣ್ಣೂರು ರಸ್ತೆಯಲ್ಲಿ ಸಂಚರಿಸುವಾಗ ಸಿಎಂ ಹೈರಾಣಾದ್ರು. ಸದ್ಯ ಹೆಣ್ಣೂರು ಬಂಡೆಯ ವಡ್ಡರಪಾಳ್ಯಕ್ಕೆ ಹಾದುಹೋಗುವ ರಾಜಕಾಲುವೆ, ಶಿರಡಿ ಸಾಯಿಬಾಬಾ ಲೇಔಟ್ನಲ್ಲಿ ಪರಿಶೀಲನೆ ನಡೆಸಿದ್ದಾರೆ. ಸಿಎಂಗೆ ಸ್ಥಳೀಯ ಶಾಸಕ ಬೈರತಿ ಬಸವರಾಜ ಸಾಥ್ ಕೊಟ್ಟಿದ್ದಾರೆ. ಮೊದಲಿಗೆ ಸಿಎಂ ಬೊಮ್ಮಾಯಿ ಸಾರ್ವಜನಿಕರ ಅಹವಾಲು ಸ್ವೀಕರಿಸಿದ್ರು. ಬಳಿಕ ರಾಜಕಾಲುವೆಯ ಮ್ಯಾಪ್ ಪರಿಶೀಲನೆ ನಡೆಸಿ ಅಧಿಕಾರಿಗಳಿಂದ ಮಾಹಿತಿ ಪಡೆದ್ರು. ನಗರದಲ್ಲಿ ಸುರಿದ ಮಳೆಯಿಂದಾಗಿ ರಾಜಕಾಲುವೆ ತುಂಬಿ ಪಕ್ಕದ ಲೇಔಟ್ಗಳಿಗೆ ನೀರು ನುಗ್ಗಿ ಸಾಕಷ್ಟು ಅನಾಹುತಗಳಾಗಿತ್ತು.

ಸಿಟಿ ರೌಂಡ್ಸ್ ವೇಳೆ ಕೊತ್ತನೂರು ನಿವಾಸಿಗಳು ಸಿಎಂ ಬೊಮ್ಮಾಯಿ ಬಳಿ ತಮ್ಮ ಸಮಸ್ಯೆ ತಿಳಿಸಿದ್ದಾರೆ. ಕಸದಿಂದಾಗಿ ಚರಂಡಿ ಬ್ಲಾಕ್ ಆಗಿ ಸಮಸ್ಯೆಯಾಗುತ್ತಿದೆ. ಹೀಗಾಗಿ ಮನೆಗಳಿಗೆ ನೀರು ನುಗ್ಗುತ್ತಿದೆ. ಶಾಶ್ವತ ಪರಿಹಾರ ಒದಗಿಸಿ ಎಂದು ಸಿಎಂಗೆ ಮನವಿ ಮಾಡಿಕೊಂಡಿದ್ದಾರೆ.

ಇನ್ನು ಮಳೆಯಿಂದ ಹೆಣ್ಣೂರಿನ ಗೆದ್ದಲಹಳ್ಳಿಯ ಮನೆಗಳು ಜಲಾವೃತಗೊಂಡಿವೆ. ಗೆದ್ದಲಹಳ್ಳಿಗೆ ಸಿಎಂ ಬೊಮ್ಮಾಯಿ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ. ಚರಂಡಿ ನೀರು ರಾಜಕಾಲುವೆ ಸೇರಲು ಸಂಪರ್ಕ ಇಲ್ಲ. ಹೀಗಾಗಿ ಮನೆಗಳಿಗೆ ಚರಂಡಿ ನೀರು ನುಗ್ಗಿದೆ ಎಂದು ಸಮಸ್ಯೆ ಬಗೆಹರಿಸುವುದಾಗಿ ಸಿಎಂ ಭರವಸೆ ಕೊಟ್ಟಿದ್ದಾರೆ.

ಬೈರತಿ ಬಸವರಾಜ ಉತ್ತಮ ಕೆಲಸ ಮಾಡಿದ್ದಾರೆ ಪರಿವೀಕ್ಷಣೆ ಬಳಿಕ ಸಿಎಂ ಮಾಧ್ಯಮಗಳ ಜೊತೆ ಮಾತನಾಡಿದ್ರು. ಈ ವೇಳೆ ಅವರು, ರಾಜಾಕಾಲುವೆ ಸಮಸ್ಯೆ ಮಳೆ ಹೆಚ್ಚಾದಾಗೆಲ್ಲ‌ ಆಗ್ತಿದೆ. ಬೈರತಿಯವ್ರು ಸಮಸ್ಯೆಗಳನ್ನು ನನ್ನ ಗಮನಕ್ಕೆ ತಂದಿದ್ದಾರೆ. ಯಲಹಂಕ ಕಣಿವೆ, ಹೆಬ್ಬಾಳ ಕಣಿವೆ, ಕೆಆರ್ ಪುರ ಕಣಿವೆವರೆಗೂ ಮಳೆ ನೀರು ಹರಿದು ಬರುತ್ತೆ. ಹಲವು ಬಡಾವಣೆಗಳಲ್ಲಿ ನೀರು ನುಗ್ಗಿ ಸಮಸ್ಯೆ ಆಗಿದೆ. ಹೆಬ್ಬಾಳ ಕಣಿವೆಯಿಂದ ನೀರು ಹರಿದು ಬರಲು ಕೆಲ ಕಡೆ ರೈಲ್ವೆ ವೆಂಟ್ ಅಡ್ಡಿಯಾಗಿದೆ. ಇನ್ನೊಂದು ರೈಲ್ವೆ ವೆಂಟ್ ನಿಂದಲೂ ಸಮಸ್ಯೆಯಾಗಿದೆ. ಈ ಎರಡೂ ವೆಂಟ್​ಗಳ ಬಗ್ಗೆ ರೈಲ್ವೆ ಇಲಾಖೆ ಜತೆ ಚರ್ಚಿಸಿ ಕ್ರಮ ಜರುಗಿಸುತ್ತೇನೆ. ಬೈರತಿ ಬಸವರಾಜ ಉತ್ತಮ ಕೆಲಸ ಮಾಡಿದ್ದಾರೆ. ಇಲ್ಲ ಅಂದ್ರೆ ನಾವೂ ಇಲ್ಲಿ ನಿಂತಿಕೊಳ್ಳೋಕು ಆಗ್ತಿರಲಿಲ್ಲ ಎಂದು ಬೈರತಿ ಬಸವರಾಜರನ್ನ ಹೊಗಳಿದ್ದಾರೆ.

ಏಕಾಏಕಿ ಒತ್ತುವರಿ ತೆರವು ಮಾಡುವುದಕ್ಕೆ ಆಗುವುದಿಲ್ಲ. ಬಡವರಿಗೆ ಪರ್ಯಾಯ ವ್ಯವಸ್ಥೆ ಕಲ್ಪಿಸಿ ತೆರವು ಮಾಡಬೇಕು. ಹಂತ ಹಂತವಾಗಿ ಒತ್ತುವರಿ ತೆರವು ಕಾರ್ಯ ನಡೆಯುತ್ತೆ. ತೆರವು ಕಾರ್ಯಾಚರಣೆ ಶಾಶ್ವತ ಪರಿಹಾರ ಆಗಲೇಬೇಕು. ನಾವು ಈ ಬಗ್ಗೆ ಶೀಘ್ರವೇ ಕ್ರಮ ತೆಗೆದುಕೊಳ್ಳುತ್ತೇವೆ. ತಪ್ಪಿತಸ್ಥರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳುತ್ತೇವೆ. ಬಡವರಿಗೆ ಬದುಕಿದೆ, ಅವರಿಗೆ ಸಮಯಾವಕಾಶ ಕೊಟ್ಟು ಪರ್ಯಾಯ ವ್ಯವಸ್ಥೆ ಕಲ್ಪಿಸಿ ನಂತರ ಕ್ರಮಕೈಗೊಳ್ಳುತ್ತೇವೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.

ಸಿಎಂ ಸಿಟಿ ರೌಂಡ್ಸ್ ಬಳಿಕ ಗೌರವ್ ಗುಪ್ತಾ ಬಿಬಿಎಂಪಿ ಕೇಂದ್ರ ಕಚೇರಿ ಬಳಿ ಆಗಮಿಸಿದ್ದಾರೆ. ಮಳೆ ಹಾನಿ ಪರಿಶೀಲನೆ ವೇಳೆ ಬಂದು ಸಿಎಂಗೆ ಮಾಹಿತಿ ನೀಡದೆ, ಎಲ್ಲಾ ಮುಗಿದ ನಂತರ ಗೌರವ ಗುಪ್ತಾ ಬಂದಿದ್ದಾರೆ.

ಇನ್ನು ಮತ್ತೊಂದೆಡೆ ಅಕಾಲಿಕ ಮಳೆಯಿಂದ ಬೆಳೆ ಮತ್ತು ಆಸ್ತಿ ಹಾನಿಗೆ ಪರಿಹಾರ ನೀಡಲು ಶೀಘ್ರ ಕ್ರಮ ಕೈಗೊಳ್ಳುವ ವಿಚಾರಕ್ಕೆ ಸಂಬಂಧಿಸಿ ತಾಲೂಕು ಮಟ್ಟದ ಅಧಿಕಾರಿಗಳ ಜೊತೆ ಇಂದು ಕಂದಾಯ ಸಚಿವ ಆರ್. ಅಶೋಕ್ ಸಭೆ ನಡೆಸಲಿದ್ದಾರೆ.

ಮಧ್ಯಾಹ್ನ 12 ಗಂಟೆಗೆ ಹಾಸನ ಜಿಲ್ಲೆಯ ಅರಕಲಗೂಡು ತಾಲೂಕು ಅಧಿಕಾರಿಗಳು, ಮಧ್ಯಾಹ್ನ 3 ಗಂಟೆಗೆ ಮಂಡ್ಯ ಜಿಲ್ಲೆಯ ನಾಗಮಂಗಲ ತಾಲೂಕು ಅಧಿಕಾರಿಗಳು ಮತ್ತು ಸಂಜೆ 4 ಗಂಟೆಗೆ ತುಮಕೂರು ಜಿಲ್ಲೆಯ ಕುಣಿಗಲ್ ತಾಲೂಕು ಅಧಿಕಾರಿಗಳ ಜೊತೆ ಆರ್. ಅಶೋಕ್ ಸಭೆ ನಡೆಸಲಿದ್ದಾರೆ.

ಇದನ್ನೂ ಓದಿ: ರಾಜಕೀಯಕ್ಕಾಗಿ ಮಳೆಹಾನಿ ಪ್ರದೇಶಗಳಿಗೆ ಸಿಎಂ ಭೇಟಿ: ಕಾಂಗ್ರೆಸ್ ನಾಯಕ ಡಿಕೆ ಶಿವಕುಮಾರ್ ಆರೋಪ

Published On - 11:37 am, Wed, 24 November 21