ಬೆಂಗಳೂರು: ರಾಜ್ಯದಲ್ಲಿ ಸತತವಾಗಿ ಮಳೆಯಾಗುತ್ತಿದೆ. ಅದರಲ್ಲೂ ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ನಿನ್ನೆ (ಮೇ 17) ಮಳೆ (Rain) ಆರ್ಭಟ ಜೋರಾಗಿತ್ತು. ಭಾರೀ ಮಳೆಗೆ ನಗರದ ಜನ ಜೀವನ ಅಸ್ತವ್ಯಸ್ಥವಾಗಿದೆ. ಹಲವು ಕಡೆ ಮನೆಗಳಿಗೆ ನೀರು ನುಗ್ಗಿ ತೊಂದರೆಯಾಗಿದೆ. ಹೀಗಾಗಿ ನೀರು ನುಗ್ಗಿರುವ ಮನೆಗಳಿಗೆ 25 ಸಾವಿರ ರೂಪಾಯಿ ಪರಿಹಾರ ನೀಡುತ್ತೇವೆ ಎಂದು ರಾಜ್ಯದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavaraj Bommai) ಘೋಷಣೆ ಮಾಡಿದ್ದಾರೆ. ಮಾಧ್ಯಮದೊಂದಿಗೆ ಮಾತನಾಡಿದ ಸಿಎಂ, ನೀರು ನುಗ್ಗಿ ಸಮಸ್ಯೆಯಾದವರಿಗೆ ಊಟದ ವ್ಯವಸ್ಥೆ ಮಾಡುತ್ತೇವೆ. ಮನೆ ಕ್ಲೀನ್ ಮಾಡಿಸಿ ಕೊಡುವ ವ್ಯವಸ್ಥೆ ಮಾಡುತ್ತೇವೆ. ಕಾಲುವೆ ಪಕ್ಕದಲ್ಲಿ ಮನೆ ಕಟ್ಟಿಕೊಂಡಿದ್ದರಿಂದ ಈ ಅವಾಂತರ ಸೃಷ್ಟಿಯಾಗಿದೆ ಎಂದರು ತಿಳಿಸಿದರು.
ಈ ಅವಾಂತರಕ್ಕೆ ಏನು ಕಾರಣ ಎಂದು ಚರ್ಚಿಸುತ್ತೇವೆ. ಎಲ್ಲ ರಾಜಕಾಲುವೆಗಳನ್ನ ಮುಕ್ತಗೊಳಿಸುವ ಕಾಮಗಾರಿ 1 ವರ್ಷದಲ್ಲಿ ಎಲ್ಲವನ್ನೂ ಸರಿಪಡಿಸುವ ಕೆಲಸ ಮಾಡುತ್ತೇವೆ ಎಂದು ಸಿಎಂ ಭರವಸೆ ನೀಡಿದರು.
ಬೆಂಗಳೂರಿನಲ್ಲಿ ಮಳೆ ಜಾಸ್ತಿಯಾದಾಗ ತಗ್ಗು ಪ್ರದೇಶಗಳಿಗೆ ನೀರು ಬರುತ್ತದೆ. ಭೌಗೋಳಿಕವಾಗಿ ಜಾಗ ಹಾಗೇ ಇದೆ. ಹೊಸಕೆರೆಹಳ್ಳಿಯಲ್ಲಿ 10, 15 ಮನೆಗಳಿಗೆ ನೀರು ನುಗ್ಗಿದೆ. ಈ ಹಿಂದೆ ನಾನು ಬಂದಿದ್ದೆ, ಯಡಿಯೂರಪ್ಪನವರು ಬಂದಿದ್ದರು. ರಾಜಕಾಲುವೆ ನೀರನ್ನು ಹೊರಗಡೆಗೆ ತಿರುಗಿಸಬೇಕು ಅದೇ ಪರಿಹಾರ. ರಾಜಕಾಲುವೆ ಕೀಲೋಮೀಟರ್ ವ್ಯಾಪ್ತಿಯಲ್ಲಿ 400 ಕೀಲೋಮೀಟರ್ ಆಗಿದೆ. ಉಳಿದಿದ್ದು ಒಂದೇ ಹಂತದಲ್ಲಿ ಮಾಡುವ ಕೆಲಸ ನಾವೂ ಮಾಡುತ್ತೇವೆ. ಕೆಲವೊಂದು ಕಡೆ ರಾಜಕಾಲುವೆ ನೀರು ಒಂದೇ ಕಡೆ ನಿಲ್ಲುತ್ತದೆ. ತಗ್ಗುಪ್ರ ದೇಶಗಳಲ್ಲಿ ಹೆಚ್ಚು ಮುಂಜಾಗ್ರತೆ ತೆಗೆದುಕೊಳ್ಳುತ್ತಿದ್ದೇವೆ. ಕೆರೆ, ರಾಜಕಾಲುವೆ ಒತ್ತುವರಿದಾರರ ವಿರುದ್ಧ ಕ್ರಮ ಜರುಗಿಸುವ ಕೆಲಸವಾಗುತ್ತದೆ ಎಂದು ಹೇಳಿದರು.
ಸಿಎಂ ಸಿಟಿ ರೌಂಡ್:
ಮಳೆಯಿಂದ ಹಾನಿಯಾದ ಬೆಂಗಳೂರಿನ ಕೆಲ ಪ್ರದೇಶಗಳಿಗೆ ಸಿಎಂ ಭೇಟಿ ನೀಡಿದರು. ಹೊಸಕೆರೆಹಳ್ಳಿ ದತ್ತಾತ್ರೇಯ ಟೆಂಪಲ್ ಬಳಿ ಪರಿಶೀಲನೆ ನಡೆಸಿದ ಬೊಮ್ಮಾಯಿ, ಶಾಶ್ವತ ಪರಿಹಾರ ಕೊಡುತ್ತೇನೆ ಎಂದರು. ಈ ವೇಳೆ ಸಿಎಂಗೆ ಸಚಿವ ಅಶೋಕ್, ಸಿಟಿ ರವಿ ಸೇರಿ ಹಲವರು ಸಾಥ್ ನೀಡಿದರು.
ಸಿಎಂ ಮುಂದೆ ಕಣ್ಣೀರಿಟ್ಟ ಮಹಿಳೆ:
ಐಡಿಯಲ್ ಹೋಮ್ಸ್ ಲೇಔಟ್‌ನಲ್ಲಿ ಸಿಎಂ ಬೊಮ್ಮಾಯಿ ಭೇಟಿ ನೀಡಿದ ವೇಳೆ ಮಹಿಳೆ ಕಣ್ಣೀರಿಟ್ಟಿದ್ದಾರೆ. ಭಾರಿ ಮಳೆಯಿಂದ ನಮ್ಮ ಮನೆಗೆ ನೀರು ನುಗ್ಗಿದೆ. ನಮ್ಮ ಮನೆಗೆ ಭೇಟಿ ನೀಡಿ ಎಂದು ಕಣ್ಣೀರು ಹಾಕಿದರು. ಆಗ ಸಮಸ್ಯೆ ಬಗೆಹರಿಸುವುದಾಗಿ ಮಹಿಳೆಗೆ ಮುನಿರತ್ನ ಭರವಸೆ ನೀಡಿದರು.
ಪ್ರಮುಖ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 11:11 am, Wed, 18 May 22