AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Breaking: ಕಾಂಗ್ರೆಸ್ ಪಕ್ಷಕ್ಕೆ ಹಾರ್ದಿಕ್ ಪಟೇಲ್ ರಾಜೀನಾಮೆ

Hardik Patel: ಹಾರ್ದಿಕ್ ಪಟೇಲ್ ಬುಧವಾರ (ಮೇ 18) ಕಾಂಗ್ರೆಸ್ ಪಕ್ಷದ ಕಾರ್ಯಾಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.

Breaking: ಕಾಂಗ್ರೆಸ್ ಪಕ್ಷಕ್ಕೆ ಹಾರ್ದಿಕ್ ಪಟೇಲ್ ರಾಜೀನಾಮೆ
ಹಾರ್ದಿಕ್ ಪಟೇಲ್
Follow us
TV9 Web
| Updated By: Ghanashyam D M | ಡಿ.ಎಂ.ಘನಶ್ಯಾಮ

Updated on:May 18, 2022 | 11:07 AM

ಅಹಮದಾಬಾದ್: ಕಾಂಗ್ರೆಸ್ ಪಕ್ಷದಲ್ಲಿ ಹೊಸ ಭರವಸೆ ಮೂಡಿಸಿದ್ದ ಯುವ ನೇತಾರ ಹಾರ್ದಿಕ್ ಪಟೇಲ್ (Hardik Patel) ಬುಧವಾರ (ಮೇ 18) ಕಾಂಗ್ರೆಸ್ ಪಕ್ಷದ ಕಾರ್ಯಾಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ದೇಶದ ಗಮನ ಸೆಳೆದಿರುವ ಗುಜರಾತ್ ವಿಧಾನಸಭಾ ಚುನಾವಣೆಗೆ ಶೀಘ್ರದಲ್ಲಿಯೆ ದಿನಾಂಕ ಘೋಷಣೆಯಾಗಲಿದೆ. ಈ ಹಿನ್ನೆಲೆಯಲ್ಲಿ ಪಾಟಿದಾರ್ ಸಮುದಾಯದ ಹಿರಿಯ ನಾಯಕ ಹಾರ್ದಿಕ್ ಪಟೇಲ್ ನಡೆ ಮಹತ್ವ ಪಡೆದುಕೊಂಡಿದೆ.

ರಾಜಸ್ಥಾನದ ಉದಯಪುರದಲ್ಲಿ ನಡೆದ ಮೂರು ದಿನಗಳ ಚಿಂತನ ಸಭೆಯಲ್ಲಿಯೂ ಹಾರ್ದಿಕ್ ಪಟೇಲ್ ಪಾಲ್ಗೊಂಡಿರಲಿಲ್ಲ. ಮೇ 15ರಂದು ಪಾಟಿದಾರ್ ಸಮುದಾಯದ ಪ್ರಭಾವಿ ನಾಯಕ ನರೇಶ್ ಪಟೇಲ್ ಅವರಿಗೆ ರಾಜಕೀಯ ಸೇರ್ಪಡೆ ಕುರಿತು ಶೀಘ್ರ ನಿರ್ಧಾರ ತೆಗೆದುಕೊಳ್ಳುವಂತೆ ಹಾರ್ದಿಕ್ ಪಟೇಲ್ ವಿನಂತಿಸಿದ್ದರು.

ಪಾಟೀದಾರ್ ಸಮುದಾಯಕ್ಕೆ ಮೀಸಲಾತಿ ನೀಡಬೇಕೆಂದು ಹೋರಾಡುತ್ತಿದ್ದ ಅಲ್ಪೇಶ್ ಕಠಾರಿಯಾ ಮತ್ತು ದಿನೇಶ್ ಬಂಭಾನಿಯಾ ಅವರೊಂದಿಗೆ ಹಾರ್ದಿಕ್ ಪಟೇಲ್ ಮೇ 15ರಂದು ನರೇಶ್ ಪಟೇಲ್ ಅವರನ್ನು ಭೇಟಿಯಾಗಿದ್ದರು. ಹಾರ್ದಿಕ್ ಪಟೇಲ್ ಕಾಂಗ್ರೆಸ್ ತೊರೆಯಬಹುದು ಎಂಬ ಮಾತುಗಳು ಹಲವು ದಿನಗಳಿಂದ ಕೇಳಿ ಬರುತ್ತಿತ್ತು. ಗುಜರಾತ್​ನ ಕಾಂಗ್ರೆಸ್ ನಾಯಕರು ತಮಗೆ ಸಹರಿಸುತ್ತಿಲ್ಲ. ಯುವಜನರ ಸಂಘಟನೆಗೆ ನೆರವಾಗುತ್ತಿಲ್ಲ ಎಂದು ಹಾರ್ದಿಕ್ ಪಟೇಲ್ ಈ ಮೊದಲು ಸಾರ್ವಜನಿಕವಾಗಿ ದೂರಿದ್ದರು.

ಉದಯಪುರದಲ್ಲಿ ಕಾಂಗ್ರೆಸ್​ನ ಚಿಂತನ ಶಿಬಿರ ನಡೆಯುತ್ತಿದ್ದಾಗ ಹಾರ್ದಿಕ್ ಪಟೇಲ್ ಸುದ್ದಿವಾಹಿನಿಗಳಿಗೆ ಸರಣಿ ಸಂದರ್ಶನಗಳನ್ನು ಕೊಟ್ಟು ಸಾರ್ವಜನಿಕವಾಗಿಯೇ ಪಕ್ಷದ ನಾಯಕತ್ವದ ಬಗ್ಗೆ ಪ್ರಶ್ನೆಗಳನ್ನು ಕೇಳಿದ್ದರು. ರಾಜ್ಯ ಮತ್ತು ಕೇಂದ್ರದಲ್ಲಿ ಅಧಿಕಾರದಲ್ಲಿರುವ ಬಿಜೆಪಿ ಸರ್ಕಾರಗಳ ವಿರುದ್ಧ ಹೋರಾಟ ರೂಪಿಸಲು ಗುಜರಾತ್ ಕಾಂಗ್ರೆಸ್ ನಾಯಕರು ಅವಕಾಶ ನೀಡುತ್ತಿಲ್ಲ. ಇದರಿಂದ ನನಗೆ ಭ್ರಮನಿರಸನವಾಗಿದೆ ಎಂದು ದೂರಿದ್ದರು.

ಉದಯಪುರದ ಕಾಂಗ್ರೆಸ್ ಚಿಂತನ ಶಿಬಿರದಲ್ಲಿ ಪಾಲ್ಗೊಳ್ಳದಿರುವ ಕುರಿತು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ್ದ ಅವರು, ‘ನನಗೆ ಗುಜರಾತ್​ನಲ್ಲಿ ಪೂರ್ವ ನಿಗದಿತ ಕಾರ್ಯಕ್ರಮಗಳಿದ್ದವು’ ಎಂದಷ್ಟೇ ಹೇಳಿದ್ದರು.

(ಮತ್ತಷ್ಟು ಮಾಹಿತಿ ಶೀಘ್ರ ಅಪ್​ಡೇಟ್ ಅಗಲಿದೆ)

Published On - 10:46 am, Wed, 18 May 22

VIDEO: ವಿವಾದಕ್ಕೀಡಾದ ಶುಭ್​​ಮನ್ ಗಿಲ್ ರನೌಟ್
VIDEO: ವಿವಾದಕ್ಕೀಡಾದ ಶುಭ್​​ಮನ್ ಗಿಲ್ ರನೌಟ್
Daily Devotional: ಪೂಜೆ ಸಮಯದಲ್ಲಿ ಯಾವ ಬಣ್ಣದ ಬಟ್ಟೆ ಧರಿಸಬೇಕು?
Daily Devotional: ಪೂಜೆ ಸಮಯದಲ್ಲಿ ಯಾವ ಬಣ್ಣದ ಬಟ್ಟೆ ಧರಿಸಬೇಕು?
horoscope: ಈ ರಾಶಿಯವರಿಗೆ ಇಂದು ಆಕಸ್ಮಿಕ ಧನಯೋಗ, ವೃತ್ತಿಯಲ್ಲಿ ಯಶಸ್ಸು
horoscope: ಈ ರಾಶಿಯವರಿಗೆ ಇಂದು ಆಕಸ್ಮಿಕ ಧನಯೋಗ, ವೃತ್ತಿಯಲ್ಲಿ ಯಶಸ್ಸು
6ಕ್ಕೆ ಆರೂ ವಿಷಯದಲ್ಲಿ ಫೇಲಾದ ಮಗನಿಗೆ ಕೇಕ್‌ ತಿನ್ನಿಸಿ ಧೈರ್ಯ ತುಂಬಿದ ಅಪ್ಪ
6ಕ್ಕೆ ಆರೂ ವಿಷಯದಲ್ಲಿ ಫೇಲಾದ ಮಗನಿಗೆ ಕೇಕ್‌ ತಿನ್ನಿಸಿ ಧೈರ್ಯ ತುಂಬಿದ ಅಪ್ಪ
ತಾಯಿಯ ಜೊತೆಯಲ್ಲೇ ಸನ್ಮಾನ; ಇದು ಚೈತ್ರಾ ಕುಂದಾಪುರ ಪಾಲಿನ ಹೆಮ್ಮೆಯ ಕ್ಷಣ
ತಾಯಿಯ ಜೊತೆಯಲ್ಲೇ ಸನ್ಮಾನ; ಇದು ಚೈತ್ರಾ ಕುಂದಾಪುರ ಪಾಲಿನ ಹೆಮ್ಮೆಯ ಕ್ಷಣ
ಬಿಜೆಪಿಯಿಂದ ಉಚ್ಚಾಟಿತ ಯತ್ನಾಳ್ ತನ್ನ ಅಸ್ತಿತ್ವ ಉಳಿಸಿಕೊಳ್ಳಬೇಕಿದೆ: ಸಚಿವ
ಬಿಜೆಪಿಯಿಂದ ಉಚ್ಚಾಟಿತ ಯತ್ನಾಳ್ ತನ್ನ ಅಸ್ತಿತ್ವ ಉಳಿಸಿಕೊಳ್ಳಬೇಕಿದೆ: ಸಚಿವ
ರಸ್ತೆಯಲ್ಲಿ ನಿಲ್ಲಿಸಿದ್ದ ಸ್ಕೂಟಿಯನ್ನೇ ತಳ್ಳಿಕೊಂಡು ಹೋದ ಗೂಳಿ!
ರಸ್ತೆಯಲ್ಲಿ ನಿಲ್ಲಿಸಿದ್ದ ಸ್ಕೂಟಿಯನ್ನೇ ತಳ್ಳಿಕೊಂಡು ಹೋದ ಗೂಳಿ!
ಕ್ಯಾನ್ಸರ್​ಗೀಡಾಗಿದ್ದ ಚಿರಂತ್ ಬಲಗೈ ಮೂಳೆ ಆಪರೇಷನ್ ಮೂಲಕ ತೆಗೆಯಲಾಗಿದೆ!
ಕ್ಯಾನ್ಸರ್​ಗೀಡಾಗಿದ್ದ ಚಿರಂತ್ ಬಲಗೈ ಮೂಳೆ ಆಪರೇಷನ್ ಮೂಲಕ ತೆಗೆಯಲಾಗಿದೆ!
‘ಕಲಾಮಾಧ್ಯಮ’ ಯಶಸ್ಸು ಕಂಡಿದ್ದು ರಾತ್ರೋರಾತ್ರಿ ಅಲ್ಲ; ಪರಮ್ ಕಷ್ಟದ ಹಾದಿ
‘ಕಲಾಮಾಧ್ಯಮ’ ಯಶಸ್ಸು ಕಂಡಿದ್ದು ರಾತ್ರೋರಾತ್ರಿ ಅಲ್ಲ; ಪರಮ್ ಕಷ್ಟದ ಹಾದಿ
ಶಿವಾನಂದ ಪಾಟೀಲ್ ರಾಜೀನಾಮೆ ಅಂಗೀಕರಿಸಲು ಬರಲ್ಲ: ಯುಟಿ ಖಾದರ್
ಶಿವಾನಂದ ಪಾಟೀಲ್ ರಾಜೀನಾಮೆ ಅಂಗೀಕರಿಸಲು ಬರಲ್ಲ: ಯುಟಿ ಖಾದರ್