ದೇಶದಲ್ಲೇ ಮೊದಲ ಬಾರಿಗೆ ಬೆಂಗಳೂರಿನಲ್ಲಿ ಸಂಚಾರಕ್ಕೆ ಸಿದ್ದವಾದ ರ್‍ಯಾಪಿಡ್ ರಸ್ತೆ; ಸಿಎಂ ಬೊಮ್ಮಾಯಿ ಉದ್ಘಾಟನೆ
ಸಿ.ವಿ.ರಾಮನ್ನಗರ ಕ್ಷೇತ್ರದ ಹಳೇ ಮದ್ರಾಸ್ ರಸ್ತೆಯಲ್ಲಿ ನಿರ್ಮಿಸಲಾದ ಱಪಿಡ್ ರಸ್ತೆಯನ್ನು ಸಿಎಂ ಬಸವರಾಜ ಬೊಮ್ಮಾಯಿ(Basavaraj Bommai) ಅವರು ಇಂದು(ಡಿ.08) ಉದ್ಘಾಟಿಸಿದ್ದಾರೆ.
ಬೆಂಗಳೂರು: ಬೆಂಗಳೂರಿನ ರಸ್ತೆಗೆ ಬಿಬಿಎಂಪಿ ಆಧುನಿಕ ಟಚ್ ಕೊಟ್ಟಿದೆ. ವೈಟ್ ಟಾಪಿಂಗ್ ಬದಲು ರ್‍ಯಾಪಿಡ್ ರಸ್ತೆ(Rapid Roads) ನಿರ್ಮಾಣ ಮಾಡಲಾಗಿದೆ. ಸಿ.ವಿ.ರಾಮನ್ನಗರ ಕ್ಷೇತ್ರದ ಹಳೇ ಮದ್ರಾಸ್ ರಸ್ತೆಯಲ್ಲಿ ನಿರ್ಮಿಸಲಾದ ರ್‍ಯಾಪಿಡ್ ರಸ್ತೆಯನ್ನು ಸಿಎಂ ಬಸವರಾಜ ಬೊಮ್ಮಾಯಿ(Basavaraj Bommai) ಅವರು ಇಂದು(ಡಿ.08) ಉದ್ಘಾಟಿಸಿದ್ದಾರೆ. ಈಗಾಗಲೇ ಅಮೆರಿಕಾದಲ್ಲಿ ಱಪಿಡ್ ರಸ್ತೆ ಯಶಸ್ವಿಯಾಗಿದೆ.
ಇನ್ನು ಸಿಎಂ ಬಸವರಾಜ್ ಬೊಮ್ಮಾಯಿ ಅವರು ರಸ್ತೆ ಉದ್ಘಾಟನೆ ಬಳಿಕ ಮಾತನಾಡಿದ್ದಾರೆ. ಬೆಂಗಳೂರಿನ ರಸ್ತೆಗಳಲ್ಲಿ ಬಹಳಷ್ಟು ಸಮಸ್ಯೆ ಎದುರಿಸುತ್ತಿದ್ದೀವಿ. ವೈಟ್ ಟಾಪಿಂಗ್ ರಸ್ತೆಗಾಗಿ ಬಹಳಷ್ಟು ಟ್ರಾಫಿಕ್ ಆಗುತ್ತಿತ್ತು. ರಿಪೇರಿ ಇದ್ದಾಗಲೂ ಕೆಲಸ ಮಾಡುವುದು ದೊಡ್ಡ ಸವಾಲಾಗಿತ್ತು. ಹೊಸ ಟೆಕ್ನಾಲಜಿ ಮೂಲಕ ರ್‍ಯಾಪಿಡ್ ರೋಡ್ ಮಾಡಲಾಗಿದೆ. ಪ್ರಾಯೋಗಿಕವಾಗಿ 300 ಮೀಟರ್ ರಸ್ತೆ ರೆಡಿಯಾಗಿದೆ. 20 ಟನ್ ಮೇಲೆ ಇರುವ ವಾಹನಗಳನ್ನ ಸಂಚಾರ ಮಾಡಲು ಅವಕಾಶ ಇದೆ. ಈ ಬಗ್ಗೆಯೂ ಟೆಸ್ಟ್ ಆಗಿ ರಿಪೋರ್ಟ್ ಕೇಳಲಾಗಿದೆ. ತಾಂತ್ರಿಕ ಮಾಹಿತಿ ಕೊಡಲು ಸಹ ಕೇಳಲಾಗಿದೆ. ಹಣದ ಖರ್ಚು ಬಗ್ಗೆಯೂ ಗಮನ ಇರಬೇಕು. ಕ್ವಾಲಿಟಿ, ಹಣ, ಟ್ರಾಫಿಕ್ ಸಮಸ್ಯೆ ಇರಬಾರದೆಂದು ಸೂಚನೆ ಕೊಡಲಾಗಿದೆ ಎಂದರು.
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಇಂದಿರಾನಗರದ ಹಳೇ ಮದ್ರಾಸ್ ರಸ್ತೆಯಲ್ಲಿ ನಿರ್ಮಿಸಿರುವ ಪ್ರಾಯೋಗಿಕ ರ್‍ಯಾಪಿಡ್ ರಸ್ತೆ (Rapid Road) ಯನ್ನು ಮುಖ್ಯಮಂತ್ರಿ ಶ್ರೀ ಬಸವರಾಜ ಬೊಮ್ಮಾಯಿ ಅವರು ಇಂದು ಉದ್ಘಾಟಿಸಿದರು.#RapidRoad #BBMPcares @CMofKarnataka @BSBommai @BBMPAdmn @KarnatakaVarthe pic.twitter.com/daDZqiWohp
— Tushar Giri Nath IAS (@BBMPCOMM) December 8, 2022
ಇದನ್ನೂ ಓದಿ: ಬೆಂಗಳೂರಿನಲ್ಲಿ ಶರವೇಗ ಕಾಮಗಾರಿಗಾಗಿ ರ್‍ಯಾಪಿಡ್ ರೋಡ್ಸ್ ನಿರ್ಮಾಣಕ್ಕೆ ಮುಂದಾದ ಬಿಬಿಎಂಪಿ
ದೇಶದಲ್ಲಿ ಇದೇ ಮೊದಲು ಬಾರಿಗೆ ನಮ್ಮ ಬೆಂಗಳೂರಿನಲ್ಲಿ ರ್‍ಯಾಪಿಡ್ ರಸ್ತೆ ಪರಿಚಯವಾಗಿದೆ. ಇದು ಕೇವಲ ಹತ್ತು ದಿನಗಳಲ್ಲಿ ರಸ್ತೆ ಕಂಪ್ಲೀಟ್ ಆಗಿ ಜನರಿಗೆ ಸೇವೆ ಕೊಡಲು ತಯಾರಾಗಿದೆ. ನಗರದ ಹಳೆ ಮದ್ರಾಸ್ ರಸ್ತೆಯ ಬಿನ್ನಮಂಗಲ ವೃತ್ತದಿಂದ ಸುಮಾರು 500 ಮೀಟರ್ ತನಕ ಪ್ರಾಯೋಗಿಕವಾಗಿ ಱಪಿಡ್ ರಸ್ತೆಯನ್ನು ಕೇವಲ ಹದಿನೈದು ದಿನಗಳ ಒಳಗೆ ರಸ್ತೆ ಕಾಮಗಾರಿ ನಡೆಸಿ ಮುಗಿಸಿದ್ದಾರೆ. ಇನ್ನೂ ಱಪಿಡ್ ರಸ್ತೆ (ಫ್ರೀಕಾಸ್ಟ್ ಪೋಸ್ಟ್ ಟೆನ್ಷನಿಂಗ್ ಕಾಂಕ್ರೀಟ್ ಪೇವ್ಮೆಂಟ್) ಫ್ರೀಕಾಸ್ಟ್ ಪ್ಯಾನೆಲ್ ನಿಂದ ನಿರ್ಮಿಸಲಾಗುತ್ತದೆ.
ಮೊದಲಿಗೆ ರಸ್ತೆಯನ್ನು ಸಮತಟ್ಟಾಗಿ ಮಾಡಿಕೊಂಡು ಅದರ ಮೇಲೆ ಫ್ರೀಕಾಸ್ಟ್ ಪ್ಯಾನಲ್ ಗಳನ್ನು ಅಳವಡಿಸಲಾಗುತ್ತದೆ ಪ್ರತಿ ಪ್ಯಾನಲ್ ನಲ್ಲಿ 4 ರಂಧ್ರಗಳಿದ್ದು ವಾಹನಗಳು ಸಂಚಾರ ಮಾಡುವಾಗ ಅಲುಗಾಡದಂತೆ ನೀಡುತ್ತವೆ ಹಾಗೆ ಒಂದು ಫ್ರೀಕಾಸ್ಟ್ ಪ್ಯಾನಲ್ 5 ಅಡಿ ಅಗಲ 20 ಅಡಿ ಉದ್ದ 7 ಇಂಚು ದಪ್ಪವಿದ್ದು ಪ್ರತಿ 45 ಮೀಟರ್ ಗೂ ಱಪಿಡ್ ಹಾರ್ಡನಿಂಗ್ ಕಾಂಕ್ರೀಟ್ ಹಾಕಲಾಗುತ್ತದೆ.
ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ
Published On - 12:09 pm, Thu, 8 December 22