ಸ್ಮಶಾನ ಕಾರ್ಮಿಕರನ್ನು ಸತ್ಯಹರಿಶ್ಚಂದ್ರ ಬಳಗವೆಂದು ಹೊಸ ಹೆಸರು ನಾಮಕರಣ ಮಾಡಿದ ಸಿಎಂ ಬೊಮ್ಮಾಯಿ
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಸ್ಮಶಾನ ಕಾರ್ಮಿಕರ ಜೊತೆ ಇಂದು (ಜ.11) ಉಪಹಾರ ಸೇವಿಸಿದರು. ಈ ವೇಳೆ ಸ್ಮಶಾನ ಕಾರ್ಮಿಕರಿಗೆ ಸತ್ಯಹರಿಶ್ಚಂದ್ರ ಬಳಗವೆಂದು ಹೊಸ ಹೆಸರು ನಾಮಕರಣ ಮಾಡಿದರು.
ಬೆಂಗಳೂರು: ಸ್ಮಶಾನ ಕಾರ್ಮಿಕರಿಗೆ ( graveyard workers) ಸತ್ಯಹರಿಶ್ಚಂದ್ರ ಬಳಗದವರು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavaraj Bommai) ಅವರು ಹೊಸ ಹೆಸರು ನಾಮಕರಣ ಮಾಡಿದ್ದಾರೆ. ಇಂದು(ಜನವರಿ 11) ಸಿಎಂ ಅಧಿಕೃತ ನಿವಾಸ ರೇಸ್ ವ್ಯೂ ಕಾಟೇಜ್ ನಲ್ಲಿ ಸ್ಮಶಾನ ಕಾರ್ಮಿಕರ ಜತೆಗೆ ಬಸವರಾಜ ಬೊಮ್ಮಾಯಿ ಉಪಾಹಾರ ಸೇವಿಸಿದರು. ಈ ವೇಳೆ ಸ್ಮಶಾನ ಕಾರ್ಮಿಕರಿಗೆ ಸತ್ಯಹರಿಶ್ಚಂದ್ರ ಬಳಗದವರು ಎಂದು ನಾಮಕರಣ ಮಾಡಿದರು.
ಸಿಎಂ ಅಧಿಕೃತ ನಿವಾಸ ರೇಸ್ ವ್ಯೂ ಕಾಟೇಜ್ ನಲ್ಲಿ ಸ್ಮಶಾನ ಕಾರ್ಮಿಕರ ಜತೆಗೆ ಉಪಾಹಾರ ಸೇವಿಸುವ ಮುನ್ನ ಸುದ್ದಿಗಾರರೊಂದಿಗೆ ಮಾತನಾಡಿದ ಬಸವರಾಜ ಬೊಮ್ಮಾಯಿ, ಸತ್ತ ನಂತರ ಮುಕ್ತಿ ಕೊಡಿಸುವಂತಹ ಮಹತ್ತರ ಕಾರ್ಯವನ್ನು ಈ ಕೆಲಸಗಾರರು ನಿಭಾಯಿಸುತ್ತಿದ್ದು, ಸಮಾಜದ ಕಟ್ಟಕಡೆಯ ವ್ಯಕ್ತಿಗಳು ಹೌದು. ಇನ್ಮುಂದೆ ಸ್ಮಶಾನ ಕಾರ್ಮಿಕರನ್ನು “ಸತ್ಯಹರಿಶ್ಚಂದ್ರ ಬಳಗದವರು” ಎಂದು ಸಂಬೋಧಿಸಬೇಕೆಂದು ಆದೇಶ ಹೊರಡಿಸಲು ಸೂಚನೆ ನೀಡುತ್ತೇನೆ ಎಂದು ಹೇಳಿದರು.
ಘನತೆ-ಗೌರವದ ಬದುಕು ಕಟ್ಟಿಕೊಡಲೆಂದು ಅವರ ಸೇವೆ ಕಾಯಂಗೊಳಿಸಲು ತೀರ್ಮಾನಿಸಲಾಗಿದ್ದು, ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ 117 ಸ್ಮಶಾನ ಕಾರ್ಮಿಕರ ಸೇವೆ ಕಾಯಂ ಮಾಡಲಾಗಿದ್ದು, ಉಳಿದ 30 ಸಿಬ್ಬಂದಿ ಕುಟುಂಬಕ್ಕೆ ಅನುಕಂಪದ ಉದ್ಯೋಗ ನೀಡಲಾಗುವುದು. ರಾಜ್ಯದ ಉಳಿದೆಡೆ 300 ಸ್ಮಶಾನ ಕಾರ್ಮಿಕರಿದ್ದು, ಅವರನ್ನು ಹಂತ ಹಂತವಾಗಿ ಕಾಯಂ ಮಾಡಲಾಗುವುದು ಎಂದು ತಿಳಿಸಿದರು.
ಇನ್ಮುಂದೆ ಸ್ಮಶಾನ ಕಾರ್ಮಿಕರನ್ನು “ಸತ್ಯಹರಿಶ್ಚಂದ್ರ ಬಳಗದವರು” ಎಂದು ಸಂಬೋಧಿಸಬೇಕೆಂದು ಆದೇಶ ಹೊರಡಿಸಲು ಸೂಚನೆ ನೀಡುತ್ತೇನೆ.” ಮುಖ್ಯಮಂತ್ರಿ: @BSBommai 2/2
— CM of Karnataka (@CMofKarnataka) January 11, 2023
ರಾಜ್ಯದ 11,113 ಪೌರ ಕಾರ್ಮಿಕರನ್ನು ನೌಕರರು ಎಂದು ಪರಿಗಣಿಸಿದ್ದು, ಉಳಿದ 40 ಸಾವಿರ ಪೌರ ಕಾರ್ಮಿಕರನ್ನು ಎರಡು ಹಂತಗಳಲ್ಲಿ ಕಾಯಂ ಮಾಡಲಾಗುವುದು ಎಂಬ ಭರವಸೆ ನೀಡಿದರು.
ಇನ್ನು ಈ ಬಗ್ಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಟ್ವೀಟ್ ಮಾಡಿದ್ದು, ಇನ್ಮುಂದೆ ಸ್ಮಶಾನ ಕಾರ್ಮಿಕರನ್ನು “ಸತ್ಯಹರಿಶ್ಚಂದ್ರ ಬಳಗದವರು” ಎಂದು ಸಂಬೋಧಿಸಬೇಕೆಂದು ಆದೇಶ ಹೊರಡಿಸಲು ಸೂಚನೆ ನೀಡುತ್ತೇನೆ ಎಂದಿದ್ದಾರೆ.
ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ