ಬೆಂಗಳೂರು, ಡಿ.27: ಫಲಕಗಳಲ್ಲಿ ಕಡ್ಡಾಯ ಕನ್ನಡ ಬಳಕೆಗೆ ಆಗ್ರಹಿಸಿ ಇಂದು (ಡಿ.27) ಬೆಂಗಳೂರಿನಲ್ಲಿ ಕರವೇ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದರು. ಈ ಕುರಿತು ಕೋಲಾರ(Kolar)ದಲ್ಲಿ ಮಾತನಾಡಿದ ಸಿಎಂ ಸಿದ್ದರಾಮಯ್ಯ (Siddaramaiah)ನವರು ‘ನಾರಾಯಣಗೌಡ ಬಣದವರು ಕನ್ನಡ ನಾಮಫಲಕ ಹಾಕುವಂತೆ ಪ್ರತಿಭಟನೆ ಮಾಡುತ್ತಿದ್ದಾರೆ. ಈ ವೇಳೆ ಕಾನೂನು ಕೈಗೆ ತೆಗೆದುಕೊಂಡರೆ ಅಂಥವರ ವಿರುದ್ಧಕಠಿಣ ಕ್ರಮ ತೆಗೆದುಕೊಳ್ಳುವಂತೆ ಸೂಚನೆ ನೀಡಿದ್ದೇನೆ ಎಂದು ಹೇಳಿದ್ದಾರೆ.
ಇನ್ನು ಈ ಕುರಿತು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ್ ತಂಗಡಗಿ ಮಾತನಾಡಿ ‘ ಯಾವುದೇ ಹೋರಾಟಗಾರರು ಕಾನೂನು ಕೈಗೆತ್ತಿಕೊಳ್ಳುವುದು ಬೇಡ. ಪ್ರತಿಭಟನಾಕಾರರು ಮತ್ತೊಬ್ಬರಿಗೆ ತೊಂದರೆ ನೀಡಬಾರದು ಎಂದರು. ಕಡ್ಡಾಯ ಕನ್ನಡ ನಾಮ ಫಲಕ ಹಾಕಲು, ಕಾನೂನು ತರಲು ಅಧಿವೇಶನದಲ್ಲಿ ಬಿಲ್ ಪಾಸ್ ಮಾಡಿದ್ದೇವೆ. ಕನ್ನಡ ಪರ ಸಂಘಟನೆಗಳಂತೆ ನಮ್ಮ ಇಲಾಖೆ ಕೆಲಸ ಮಾಡಲಿದೆ. ಇಲ್ಲಿ ಬಂದವರಿಗೆ ಕನ್ನಡ ಕಲಿಸಬೇಕು. ಇದಕ್ಕೋಸ್ಕರ ಕಾನೂನು ಮಾಡಿದ್ರೆ ಪಾಲಿಸುತ್ತಾರೆ. ನೆಲ, ಜಲ, ಭಾಷೆ ವಿಚಾರದಲ್ಲಿ ಯಾವುದೇ ರಾಜಿ ಇಲ್ಲ. ಮಹಿಷಿ ವರದಿ ಜಾರಿಗೆ ಈಗಾಗಲೇ ಮೂರು ಸಭೆಗಳನ್ನು ನಡೆಸಿದ್ದೇವೆ ಎಂದು
ಬೆಂಗಳೂರಿನಲ್ಲಿ ಹೇಳಿದರು.
ಇದನ್ನೂ ಓದಿ:ರಾಜ್ಯದಲ್ಲಿ ನಡೆಯುವ ಕೇಂದ್ರ ಮತ್ತು ರಾಜ್ಯ ಸರ್ಕಾರದ ಕಾರ್ಯಕ್ರಮಗಳಲ್ಲಿ ಕನ್ನಡ ಬಳಕೆ ಕಡ್ಡಾಯ
ಪರಿಷತ್ ವಿಪಕ್ಷ ನಾಯಕ ಶ್ರೀನಿವಾಸ್ ಪೂಜಾರಿ ಮಾತನಾಡಿ ‘ಫಲಕಗಳಲ್ಲಿ ಕಡ್ಡಾಯ ಕನ್ನಡ ಬಳಕೆಗೆ ಕರವೇ ಜನಜಾಗೃತಿ ಮಾಡುತ್ತಿದ್ದು, ಯಾವುದೇ ಹಿಂಸಾತ್ಮಕ ಕೃತ್ಯಗಳಿಗೆ ಅವಕಾಶ ಕೊಡಬಾರದು. ಕರ್ನಾಟಕದಲ್ಲಿ ಕನ್ನಡವೇ ಸಾರ್ವಭೌಮ. ರಾಜ್ಯ ಸರ್ಕಾರ ಕನ್ನಡ ಫಲಕ ಹಾಕಿಸುವ ಕೆಲಸ ಮಾಡಬೇಕು ಎಂದರು.
ಬೆಂಗಳೂರಿನ ಮಾಲ್ ಆಫ್ ಏಷ್ಯಾ ಬಳಿ ಕರವೇ ಕಾರ್ಯಕರ್ತರು ಬೋರ್ಡ್ಗಳಲ್ಲಿ ಕನ್ನಡ ಬಳಕೆ ಆಗ್ರಹಿಸಿ ಪ್ರತಿಭಟನೆ ನಡೆಸಿದರು. ಈ ವೇಳೆ ಮಾಲ್ನ ಹಿಂಬದಿ ಗೇಟ್ನಿಂದ ಒಳಗೆ ನುಗ್ಗಲು ಪ್ರಯತ್ನಿಸಿದರು. ಈ ಹಿನ್ನಲೆ ಎಚ್ಚೆತ್ತ ಪೊಲೀಸರು ಕಾರ್ಯಕರ್ತರನ್ನ ವಶಕ್ಕೆ ಪಡೆದಿದ್ದಾರೆ.
ಈ ಕುರಿತು ಮಾತನಾಡಿದ ಮಾಲ್ ಆಫ್ ಏಷ್ಯಾ ಆಡಳಿತ ಮಂಡಳಿಯು ‘ನಾವು ಪಾಲಿಕೆ ಆದೇಶ ಕೊಟ್ಟಿರುವ ಹಾಗೇ ಫೆಬ್ರವರಿ 28ರೊಳಗೆ ಚೇಂಜ್ ಮಾಡುತ್ತೇವೆ. ಕಮಿಷನರ್ ಅವರ ಹತ್ತಿರ ಟೈಮ್ ತಗೊಂಡಿದ್ದೇವೆ.‘ ಅಷ್ಟರಲ್ಲಿ ಮಾಡಿಸುತ್ತೇವೆ ಎಂದು ಉಡಾಫೆ ಉತ್ತರ ನೀಡಿದ್ದಾರೆ.60% ರೂಲ್ಸ್ ನಂತೆ ಬೋರ್ಡ್ ಹಾಕುತ್ತೇವೆ. ಇಲ್ಲಿ ಕನ್ನಡದವರು ಇದ್ದೇವೆ, ಕನ್ನಡದವರಿಗೇ ಕೆಲಸ ಕೊಟ್ಟಿದ್ದೇವೆ. ನಮಗೆ ಮೇಲಗಡೆಯಿಂದ ಆದೇಶ ಬರಬೇಕಿತ್ತು. ಈಗ ಅನುಮತಿ ಕೊಟ್ಟಿದ್ದಾರೆ. ಆದಷ್ಟು ಬೇಗ ಹಾಕುತ್ತೇವೆ ಎಂದು ಆಡಳಿತ ಮಂಡಳಿ ಹೇಳಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ