AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹಿಂದುಳಿದ ಸಮುದಾಯಗಳಿಗೆ ಶಕ್ತಿ ತುಂಬದಿದ್ರೆ ಅಲ್ಲೇ ಉಳಿತಾವೆ; ಸಿಎಂ ಸಿದ್ದರಾಮಯ್ಯ

ಬದಲಾವಣೆ ಪರ ಇದ್ದವರು ನಿಮ್ಮವರು, ವಿರೋಧ ಇದ್ದವರು ನಿಮ್ಮ ದ್ವೇಶಿಗಳು. ಅಧ್ಯಯನ ಕೇಂದ್ರ ಮಾಡೋಣ, ಹಾಸ್ಟೆಲ್​ಗೆ ಜಾಗ ಕೊಡೋಣ. ಸಮಾಜದಲ್ಲಿ ಬೇರೆಯವರೆಲ್ಲ ತಗೊಂಡಿದ್ದಾರೆ ನೀವು ತೆಗೆದುಕೊಳ್ಳಿ ಎಂದು ಬೆಂಗಳೂರು ನಗರದ ರವೀಂದ್ರ ಕಲಾಕ್ಷೇತ್ರದಲ್ಲಿ ನಡೆದ ವಿಶ್ವಕರ್ಮ ಜಯಂತಿ ಕಾರ್ಯಕ್ರಮದಲ್ಲಿ ಸಿಎಂ ಸಿದ್ದರಾಮಯ್ಯ ಹೇಳಿದರು.

ಹಿಂದುಳಿದ ಸಮುದಾಯಗಳಿಗೆ ಶಕ್ತಿ ತುಂಬದಿದ್ರೆ ಅಲ್ಲೇ ಉಳಿತಾವೆ; ಸಿಎಂ ಸಿದ್ದರಾಮಯ್ಯ
ಸಿಎಂ ಸಿದ್ದರಾಮಯ್ಯ
Anil Kalkere
| Updated By: ಕಿರಣ್ ಹನುಮಂತ್​ ಮಾದಾರ್|

Updated on: Sep 17, 2023 | 10:20 PM

Share

ಬೆಂಗಳೂರು, ಸೆ.17: ಹಿಂದುಳಿದ ಸಮುದಾಯಗಳಿಗೆ ಶಕ್ತಿ ತುಂಬದಿದ್ರೆ ಅಲ್ಲೇ ಉಳಿತಾವೆ ಎಂದು ಸಿಎಂ ಸಿದ್ದರಾಮಯ್ಯ (Siddaramaiah)ನವರು ಹೇಳಿದರು. ಬೆಂಗಳೂರು ನಗರದ ರವೀಂದ್ರ ಕಲಾಕ್ಷೇತ್ರದಲ್ಲಿ ನಡೆದ ವಿಶ್ವಕರ್ಮ ಜಯಂತಿ (Vishwakarma Jayanti) ಕಾರ್ಯಕ್ರಮದಲ್ಲಿ ಮಾತನಾಡಿದ ಸಿಎಂ ಸಿದ್ದರಾಮಯ್ಯ ‘ರಾಜ್ಯದಲ್ಲಿ ಸರ್ಕಾರದ ವತಿಯಿಂದ ವಿಶ್ವಕರ್ಮ ಜಯಂತಿಯನ್ನು ಆಚರಿಸುತ್ತಾ ಇದ್ದೇವೆ. ಈ ಸಮುದಾಯದ ಪ್ರಮುಖರು ಬರಲೇಬೇಕು ಎಂದು ಒತ್ತಾಯ ಮಾಡಿದರು. ಸರ್ಕಾರ ಆಯೋಜನೆ ಮಾಡುವ ಕಾರ್ಯಕ್ರಮಕ್ಕೆ ನಾನು ಬರಲು ಹಿಂದೇಟು ಹಾಕಲ್ಲ. ಬರೀ ಈ ಜನಾಂಗ ಆಚರಣೆ ಮಾಡಿಕೊಂಡರೆ ಸಾಲದು, ಸರ್ಕಾರ ಆಯೋಜನೆ ಮಾಡಿದ್ರೆ ಪ್ರಾಮುಖ್ಯತೆ ಬರುತ್ತೆ ಎಂದರು.

ಹಿಂದುಳಿದ ಸಮುದಾಯಗಳಿಗೆ ಶಕ್ತಿ ತುಂಬದಿದ್ರೆ ಅಲ್ಲೇ ಉಳಿತಾವೆ

ಇನ್ನು ಇದೇ ವೇಳೆ ‘ಹಿಂದುಳಿದ ಸಮುದಾಯಗಳಿಗೆ ಶಕ್ತಿ ತುಂಬದಿದ್ರೆ ಅಲ್ಲೇ ಉಳಿತಾವೆ. ಕಾರ್ಯಕ್ರಮ ಸರ್ಕಾರ ಮಾಡಿದ್ರೆ ಜಾತಿ ನಮ್ಮ ಬಲಿಯೋಕೆ ಆಗಲ್ಲ. ನೀವೆಲ್ಲ ಕುಶಲಕರ್ಮಿಗಳು ಪರಿಣತಿ ಪಡ್ಕೊಂಡರು ಕೂಡ ಆರ್ಥಿಕವಾಗಿ, ಸಾಮಾಜಿಕವಾಗಿ ಶಕ್ತಿ ಇಲ್ಲ. ನಿಮ್ಮ ಪರವಾಗಿ ಧ್ವನಿ ಎತ್ತೋರು ಬೇಕು. ಅದಕ್ಕೆ ಆರ್ಥಿಕವಾಗಿ ನಿಮಗೆ ಶಕ್ತಿ ತುಂಬಲು ಅಂತಾನೆ ವಿಶ್ವಕರ್ಮ ಅಭಿವೃದ್ಧಿ ನಿಗಮ ಸ್ಥಾಪಿಸಿದೆ. ಗುತ್ತಿಗೆಯಲ್ಲಿ ನಿಮಗೆ ಮೀಸಲಾತಿ ಕೊಟ್ಟಿದ್ದೀವಿ. ಹಿಂದುಳಿದವರಿಗೆ 1 ಕೋಟಿವರೆಗೆ ಮೀಸಲಾತಿ ಕಲ್ಪಸಿದ್ದೇವೆ ಎಂದರು.

ಇದನ್ನೂ ಓದಿ:PM Vishwakarma: ಪಿಎಂ ವಿಶ್ವಕರ್ಮ ಯೋಜನೆ ಉದ್ಘಾಟನೆ; ಕುಶಲಕರ್ಮಿಗಳಿಗೆಂದಿರುವ ಈ ಸ್ಕೀಮ್ ಪಡೆಯುವುದು ಹೇಗೆ?

‘ಯಾವಾಗ ಸಾಮಾಜಿಕ ಶಕ್ತಿ ಬರುತ್ತೆ, ಆವಾಗ ಬದಲಾವಣೆ ಆಗುತ್ತೆ. ಯಾಕಂದರೆ ಆರ್ಥಿಕ ಶಕ್ತಿ, ಶಿಕ್ಷಣದ ಶಕ್ತಿ ಬರಬೇಕು. ಬದಲಾವಣೆ ಪರ ಇದ್ದವರು ನಿಮ್ಮವರು, ವಿರೋಧ ಇದ್ದವರು ನಿಮ್ಮ ದ್ವೇಶಿಗಳು. ಅಧ್ಯಯನ ಕೇಂದ್ರ ಮಾಡೋಣ, ಹಾಸ್ಟೆಲ್​ಗೆ ಜಾಗ ಕೊಡೋಣ. ಸಮಾಜದಲ್ಲಿ ಬೇರೆಯವರೆಲ್ಲ ತಗೊಂಡಿದ್ದಾರೆ ನೀವು ತೆಗೆದುಕೊಳ್ಳಿ. ಕರಕುಶಲ ಕರ್ಮಿಗಳ ಇಲಾಖೆ ಮಾಡ್ಬೇಕು ಅಂದಿದ್ದಾರೆ, ಅದಕ್ಕೂ ನೋಡೋಣ. ಯಾರಿಗೆ ಬದ್ಧತೆ ಇದೆ. ಅವ್ರನ್ನ ಮಾತ್ರ ಬೆಂಬಲಿಸಬೇಕು. ಅಧಿಕಾರ ಯಾರು ನಿಮ್ಮ ಪರ ಇದಾರೆ ಅವರ ಕೈಯಲ್ಲಿ ಇರಬೇಕು. ನಾನು ನಿಮ್ಮ ಪರವಾಗಿ ಇರ್ತೇನೆ ಯಾವಾಗಲೂ, ನಾನು ಅಧಿಕಾರದ ಹಿಂದೆ ಹೋಗಲ್ಲ ಎಂದರು.

ನನ್ನ ಎರಡನೇ ದೇವರಾಜ್ ಅರಸು ಅಂತಾರೆ

ನನ್ನನ್ನು ಎರಡನೇ ದೇವರಾಜ ಅರಸು ಅಂತಾರೆ. ಆದರೆ, ನಾನು ಸಿದ್ದರಾಮಯ್ಯನೇ, ಅರಸು ಅರಸುನೇ. ನಾವು ಕೂಡ ಸಮಾಜದಲ್ಲಿ ಹುಟ್ಟಿದ ಮೇಲೆ ಸಮಾಜದ ಋಣ ತೀರಿಸಬೇಕು. ಎಲ್ಲಾ ಮಕ್ಕಳು ಕೂಡ ವಿಶ್ವ ಮಾನವರಗೆ ಹುಟ್ಟುತ್ತಾರೆ. ಆ ಮೇಲೆ ಸಮಾಜದ ಪ್ರಭಾವದಿಂದ ಸಾಯೋವಾಗ ಅಲ್ಪ ಮಾನವರಾಗುತ್ತಾರೆ ಎಂದು ಕುವೆಂಪು ಹೇಳಿದ್ದಾರೆ. ಇವತ್ತು ಧರ್ಮ, ಜಾತಿಗಳ ನಡುವೆ ದ್ವೇಶ ಹುಟ್ಟು ಹಾಕುತ್ತಾರೆ. ಬಸವಣ್ಣ ಹೇಳಿದ್ದಾರೆ ದಯೆಯೇ ಧರ್ಮದ ಮೂಲವಯ್ಯವೆಂದು, ಅದಿಲ್ಲದೆ ಹೋದ್ರೆ, ಅದು ಧರ್ಮ ಹೇಗೆ ಆಗುತ್ತೆ? ಎಲ್ಲದಕ್ಕಿಂತ ಮನುಷ್ಯ ಧರ್ಮ ಮುಖ್ಯ. ನಮ್ಮ ಜೀವನ ಸಾರ್ಥಕ ಆಗ್ಬೇಕು ಅಂದರೆ ಸಮಾಜದ ಋಣ ತೀರಿಸಬೇಕು ಎಂದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಮುಂಬೈ-ಪುಣೆ ಎಕ್ಸ್‌ಪ್ರೆಸ್‌ವೇಯಲ್ಲಿ ಟ್ರಕ್ ಪಲ್ಟಿ, ಓರ್ವ ಸಾವು
ಮುಂಬೈ-ಪುಣೆ ಎಕ್ಸ್‌ಪ್ರೆಸ್‌ವೇಯಲ್ಲಿ ಟ್ರಕ್ ಪಲ್ಟಿ, ಓರ್ವ ಸಾವು
ವಿಜಯ್ ದೇವರಕೊಂಡ ‘ಕಿಂಗ್ಡಮ್’ ಸಿನಿಮಾ ಟ್ರೈಲರ್ ಬಿಡುಗಡೆ: LIVE
ವಿಜಯ್ ದೇವರಕೊಂಡ ‘ಕಿಂಗ್ಡಮ್’ ಸಿನಿಮಾ ಟ್ರೈಲರ್ ಬಿಡುಗಡೆ: LIVE
ಡಿಸಿಎಂ ಹೇಳಿದ್ದನ್ನು ಗಂಭೀರ ಮುಖಮುದ್ರೆಯೊಂದಿಗೆ ಕೇಳಿಸಿಕೊಂಡ ಸಿಎಂ
ಡಿಸಿಎಂ ಹೇಳಿದ್ದನ್ನು ಗಂಭೀರ ಮುಖಮುದ್ರೆಯೊಂದಿಗೆ ಕೇಳಿಸಿಕೊಂಡ ಸಿಎಂ
ಮುಂದಿನ ಮುಖ್ಯಮಂತ್ರಿ ಡಿಕೆ ಶಿವಕುಮಾರ್​​ಗೆ ಜೈ: ಮತ್ತೆ ಮೊಳಗಿತು ಘೋಷಣೆ
ಮುಂದಿನ ಮುಖ್ಯಮಂತ್ರಿ ಡಿಕೆ ಶಿವಕುಮಾರ್​​ಗೆ ಜೈ: ಮತ್ತೆ ಮೊಳಗಿತು ಘೋಷಣೆ
ಲೋಕಸಭಾ ಚುನಾವಣೆಯಲ್ಲಿ ಮತಗಳ್ಳತನ ನಡೆದಿರುವುದು ಸತ್ಯ: ಸತೀಶ್ ಜಾರಕಿಹೊಳಿ
ಲೋಕಸಭಾ ಚುನಾವಣೆಯಲ್ಲಿ ಮತಗಳ್ಳತನ ನಡೆದಿರುವುದು ಸತ್ಯ: ಸತೀಶ್ ಜಾರಕಿಹೊಳಿ
ಮಾಲ್ಡೀವ್ಸ್​ನ​ ಸ್ವಾತಂತ್ರ್ಯ ದಿನಾಚರಣೆಯಲ್ಲಿ ಪಾಲ್ಗೊಂಡ ಪ್ರಧಾನಿ ಮೋದಿ
ಮಾಲ್ಡೀವ್ಸ್​ನ​ ಸ್ವಾತಂತ್ರ್ಯ ದಿನಾಚರಣೆಯಲ್ಲಿ ಪಾಲ್ಗೊಂಡ ಪ್ರಧಾನಿ ಮೋದಿ
‘ಸು ಫ್ರಮ್ ಸೋ’ ಅರ್ಥ ಏನು? ಕತೆಯ ಒಳಗುಟ್ಟಗಳೇನು?
‘ಸು ಫ್ರಮ್ ಸೋ’ ಅರ್ಥ ಏನು? ಕತೆಯ ಒಳಗುಟ್ಟಗಳೇನು?
ಮಂತ್ರಿಯಾಗುವ ಆಸೆಯನ್ನು ಪದೇಪದೆ ಹೇಳಿಕೊಳ್ಳುತ್ತಿರುವ ಅರಸೀಕೆರೆ ಶಾಸಕ
ಮಂತ್ರಿಯಾಗುವ ಆಸೆಯನ್ನು ಪದೇಪದೆ ಹೇಳಿಕೊಳ್ಳುತ್ತಿರುವ ಅರಸೀಕೆರೆ ಶಾಸಕ
ನೆಲಮಂಗಲ: ಗನ್​ ತೋರಿಸಿ ಹೆದರಿಸಿ, ಚಿನ್ನದ ದೋಚಿದ ಆರೋಪಿಗಳು, ವಿಡಿಯೋ ವೈರಲ್
ನೆಲಮಂಗಲ: ಗನ್​ ತೋರಿಸಿ ಹೆದರಿಸಿ, ಚಿನ್ನದ ದೋಚಿದ ಆರೋಪಿಗಳು, ವಿಡಿಯೋ ವೈರಲ್
ಸಿದ್ದರಾಮಯ್ಯ ಪಕ್ಕದಲ್ಲಿ ನಿಂತಿದ್ದ ಶಿವಕುಮಾರ್ ಮುಖದಲ್ಲಿ ಅನ್ಯಮನಸ್ಕತೆ
ಸಿದ್ದರಾಮಯ್ಯ ಪಕ್ಕದಲ್ಲಿ ನಿಂತಿದ್ದ ಶಿವಕುಮಾರ್ ಮುಖದಲ್ಲಿ ಅನ್ಯಮನಸ್ಕತೆ