ಬೆಂಗಳೂರು: ಖಾಸಗಿ ಕಂಪನಿಯಲ್ಲಿ ಮಹಿಳಾ ಟೆಕ್ಕಿಗೆ ಲೈಂಗಿಕ ಕಿರುಕುಳ ಆರೋಪ; ಹಿರಿಯ ಸಹದ್ಯೋಗಿ ವಿರುದ್ಧ FIR ದಾಖಲು

ಎಂ.ಜಿ ರಸ್ತೆ ಸಮೀಪದ ಮೇಗ್ರಾಥ್ ರಸ್ತೆಯಲ್ಲಿರುವ ವಿದೇಶಿ ಮೂಲದ ಲಿಬ್ರೆ ವೈರ್ ಲೆಸ್ ಟೆಕ್ನಾಲಜೀಸ್ ಪ್ರೇವೈಟ್ ಲಿಮಿಟೆಡ್ ಕಂಪನಿಯಲ್ಲಿ ಉದ್ಯೋಗಿಯಾಗಿರುವ ಆರೋಪಿ ಪ್ರೇಮ್ ಚಂದರ್, ಕೆಲಸದ ವೇಳೆ ಮಹಿಳಾ ಟೆಕ್ಕಿ ಜೊತೆಗೆ ಅಸಭ್ಯವಾಗಿ ವರ್ತನೆ ಮಾಡುತ್ತಿದ್ದನಂತೆ. ಈ ಹಿನ್ನಲೆ ಆತನ ಮೇಲೆ ಸಂತ್ರಸ್ಥ ಯುವತಿ ಠಾಣೆಗೆ ದೂರು ನೀಡಿದ್ದಾರೆ.

ಬೆಂಗಳೂರು: ಖಾಸಗಿ ಕಂಪನಿಯಲ್ಲಿ ಮಹಿಳಾ ಟೆಕ್ಕಿಗೆ ಲೈಂಗಿಕ ಕಿರುಕುಳ ಆರೋಪ; ಹಿರಿಯ ಸಹದ್ಯೋಗಿ ವಿರುದ್ಧ FIR ದಾಖಲು
ಆರೋಪಿ
Follow us
Shivaprasad
| Updated By: ಕಿರಣ್ ಹನುಮಂತ್​ ಮಾದಾರ್

Updated on: Sep 17, 2023 | 5:25 PM

ಬೆಂಗಳೂರು, ಸೆ.17: ವಿದೇಶಿ ಮೂಲದ ಕಂಪನಿಯಲ್ಲಿ ಮಹಿಳಾ ಟೆಕ್ಕಿಗೆ ಲೈಂಗಿಕ ಕಿರುಕುಳ ಆರೋಪ ಹಿನ್ನಲೆ ಕಂಪನಿಯ ಹಿರಿಯ ಸಹದ್ಯೋಗಿ ವಿರುದ್ಧ ಹಲಸೂರು ಪೊಲೀಸ್ ಠಾಣೆಯಲ್ಲಿ ಎಫ್​ಐಆರ್​(FIR) ದಾಖಲು ಮಾಡಲಾಗಿದೆ. ಹೌದು, ಎಂ.ಜಿ ರಸ್ತೆ ಸಮೀಪದ ಮೇಗ್ರಾಥ್ ರಸ್ತೆಯಲ್ಲಿರುವ ವಿದೇಶಿ ಮೂಲದ ಲಿಬ್ರೆ ವೈರ್ ಲೆಸ್ ಟೆಕ್ನಾಲಜೀಸ್ ಪ್ರೇವೈಟ್ ಲಿಮಿಟೆಡ್ ಕಂಪನಿಯಲ್ಲಿ ಉದ್ಯೋಗಿಯಾಗಿರುವ ಆರೋಪಿ ಪ್ರೇಮ್ ಚಂದರ್, ಕೆಲಸದ ವೇಳೆ ಮಹಿಳಾ ಟೆಕ್ಕಿ ಜೊತೆಗೆ ಅಸಭ್ಯವಾಗಿ ವರ್ತನೆ ಮಾಡುತ್ತಿದ್ದನಂತೆ. ಪ್ರೇಮ್ ಚಂದರ್ ವರ್ತನೆಗೆ ಬೇಸತ್ತ ಸಂತ್ರಸ್ಥ ಯುವತಿ ಠಾಣೆಗೆ ದೂರು ನೀಡಿದ್ದಾರೆ. ಈ ಕುರಿತು ಹಲಸೂರು ಠಾಣೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.

ಬೆಂಗಳೂರಿನಲ್ಲಿ ಡ್ರಗ್ ​ಪೆಡ್ಲರ್​ನ್ನು​ ಬಂಧಿಸಿದ ಪೊಲೀಸರು

ಬೆಂಗಳೂರು: ಪ್ಯಾಸೆಂಜರ್ ಆಟೋದಲ್ಲಿ ಗಾಂಜಾ ಸಾಗಿಸಿ ಮಾರಾಟ ಮಾಡಲು ಯತ್ನಿಸದ ಡ್ರಗ್ ​ಪೆಡ್ಲರ್​ನ್ನು​ ವಿವೇಕನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ. ಪ್ರವೀಣ್​ ಬಂಧಿತ ಆರೋಪಿ. ಇತ ಒಡಿಶಾ ಮೂಲದ ವ್ಯಕ್ತಿಯಿಂದ ಗಾಂಜಾ ತರಿಸಿಕೊಂಡು ಮಾರಾಟ ಮಾಡುತ್ತಿದ್ದ ಖಚಿತ ಮಾಹಿತಿ ಆಧರಿಸಿ ವಿವೇಕನಗರ ಠಾಣೆ ಪೊಲೀಸರು ದಾಳಿ ನಡೆಸಿದ್ದರು. ಈ ವೇಳೆ ಪೊಲೀಸರಿಂದ 12 ಲಕ್ಷ ಮೌಲ್ಯದ 20 ಕೆ.ಜಿ 280 ಗ್ರಾಂ ಗಾಂಜಾ ಜಪ್ತಿ ಮಾಡಲಾಗಿದೆ. ಎನ್​ಡಿಪಿಎಸ್ ಆ್ಯಕ್ಟ್​​​ ಅಡಿ ಎಫ್​ಐಆರ್​ ದಾಖಲು ಮಾಡಿದ್ದಾರೆ.

ಇದನ್ನೂ ಓದಿ:ಹಾಸನ: ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ ಆರೋಪ; ಮುಖ್ಯ ಶಿಕ್ಷಕನಿಗೆ ಹಿಗ್ಗಾಮುಗ್ಗಾ ಥಳಿಸಿದ ಗ್ರಾಮಸ್ಥರು

ಚಿರತೆ ದಾಳಿಗೆ ಮೂರು ಮೇಕೆ, ಒಂದು ಕರು ಬಲಿ

ಮೈಸೂರು: ಹೆಚ್​.ಡಿ.ಕೋಟೆ ತಾಲೂಕಿನ ನೇರಳೆ ಗಣೇಶನ ಗುಡಿಯ ಸುಣಕಲ್ ಮಂಟಿ ಗ್ರಾಮದಲ್ಲಿ ಚಿರತೆ ದಾಳಿಗೆ ಮೂರು ಮೇಕೆ, ಒಂದು ಕರು ಬಲಿಯಾಗಿದೆ. ಹೌದು, ರೈತ ವೆಂಕಟೇಶ್ ಸೇರಿದಂತೆ ಗ್ರಾಮದ ಹಲವು ರೈತರ ಮೇಕೆ ಮತ್ತು ಕರು ಬಲಿ ಪಡೆದುಕೊಂಡಿದ್ದು ಈ ಹಿನ್ನಲೆ ಅರಣ್ಯ ಇಲಾಖೆ ಸಿಬ್ಬಂದಿಯವರು ಚಿರತೆ ಸೆರೆಗೆ ಬೋನು ಇರಿಸಿದ್ದಾರೆ. ಜೊತೆಗೆ ಸಂಜೆ ನಂತರ ಎಚ್ಚರಿಕೆಯಿಂದ ಓಡಾಡುವಂತೆ ಗ್ರಾಮಸ್ಥರಿಗೆ ಮನವಿ ಮಾಡಿದ್ದಾರೆ. ಇನ್ನು ಈ ಘಟನೆ ಕುರಿತು ಗ್ರಾಮಸ್ಥರೆಲ್ಲರೂ ಭಯಭೀತರಾಗಿದ್ದು, ಕೂಡಲೇ ಚಿರತೆಯನ್ನು ಬಂಧಿಸುವಂತೆ ಅರಣ್ಯ ಇಲಾಖೆಗೆ ಒತ್ತಾಯಿಸಿದ್ದಾರೆ.

ಮತ್ತಷ್ಟು ರಾಜ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ