ಮುಂಬೈ-ಗುವಾಹಟಿ ಇಂಡಿಗೋ ವಿಮಾನದಲ್ಲಿ ಸಹ ಪ್ರಯಾಣಿಕನಿಂದ ಮಹಿಳೆಗೆ ಲೈಂಗಿಕ ಕಿರುಕುಳ

ಮುಂಬೈ-ಗುವಾಹಟಿ ಇಂಡಿಗೋ ವಿಮಾನದಲ್ಲಿ ಮಹಿಳೆಗೆ ಸಹ ಪ್ರಯಾಣಿಕನೊಬ್ಬ ಲೈಂಗಿಕ ಕಿರುಕುಳ ನೀಡಿರುವ ಘಟನೆ ಬೆಳಕಿಗೆ ಬಂದಿದೆ. ಆ ವ್ಯಕ್ತಿ ಸೀಟಿನ ಆರ್ಮ್​ರೆಸ್ಟ್​ ಅನ್ನು ಮೇಲಕ್ಕೆತ್ತಿ ಮಹಿಳಾ ಪ್ರಯಾಣಿಕರೊಬ್ಬರಿಗೆ ಕಿರುಕುಳ ನೀಡುತ್ತಿದ್ದ. ಎಫ್‌ಐಆರ್ ದಾಖಲಾಗಿದ್ದು, ವ್ಯಕ್ತಿಯನ್ನು ಗುವಾಹಟಿ ಪೊಲೀಸರಿಗೆ ಹಸ್ತಾಂತರಿಸಲಾಗಿದೆ ಎಂದು ಇಂಡಿಗೋ ತನ್ನ ಹೇಳಿಕೆಯಲ್ಲಿ ತಿಳಿಸಿದೆ. ಕಳೆದ 2 ತಿಂಗಳಲ್ಲಿ ಪ್ರಯಾಣಿಕರು ಇಂತಹ ಕೃತ್ಯಗಳಲ್ಲಿ ಭಾಗಿಯಾಗಿರುವುದು ಇದು ನಾಲ್ಕನೇ ಘಟನೆಯಾಗಿದೆ.

ಮುಂಬೈ-ಗುವಾಹಟಿ ಇಂಡಿಗೋ ವಿಮಾನದಲ್ಲಿ ಸಹ ಪ್ರಯಾಣಿಕನಿಂದ ಮಹಿಳೆಗೆ ಲೈಂಗಿಕ ಕಿರುಕುಳ
ಇಂಡಿಗೋ ವಿಮಾನ
Follow us
ನಯನಾ ರಾಜೀವ್
|

Updated on:Sep 11, 2023 | 12:49 PM

ಮುಂಬೈ-ಗುವಾಹಟಿ ಇಂಡಿಗೋ ವಿಮಾನ(IndiGO Flight)ದಲ್ಲಿ ಮಹಿಳೆಗೆ ಸಹ ಪ್ರಯಾಣಿಕನೊಬ್ಬ ಲೈಂಗಿಕ ಕಿರುಕುಳ ನೀಡಿರುವ ಘಟನೆ ಬೆಳಕಿಗೆ ಬಂದಿದೆ. ಆ ವ್ಯಕ್ತಿ ಸೀಟಿನ ಆರ್ಮ್​ರೆಸ್ಟ್​ ಅನ್ನು ಮೇಲಕ್ಕೆತ್ತಿ ಮಹಿಳಾ ಪ್ರಯಾಣಿಕರೊಬ್ಬರಿಗೆ ಕಿರುಕುಳ ನೀಡುತ್ತಿದ್ದ. ಎಫ್‌ಐಆರ್ ದಾಖಲಾಗಿದ್ದು, ವ್ಯಕ್ತಿಯನ್ನು ಗುವಾಹಟಿ ಪೊಲೀಸರಿಗೆ ಹಸ್ತಾಂತರಿಸಲಾಗಿದೆ ಎಂದು ಇಂಡಿಗೋ ತನ್ನ ಹೇಳಿಕೆಯಲ್ಲಿ ತಿಳಿಸಿದೆ. ಕಳೆದ 2 ತಿಂಗಳಲ್ಲಿ ಪ್ರಯಾಣಿಕರು ಇಂತಹ ಕೃತ್ಯಗಳಲ್ಲಿ ಭಾಗಿಯಾಗಿರುವುದು ಇದು ನಾಲ್ಕನೇ ಘಟನೆಯಾಗಿದೆ.

ಮುಂಬೈ-ಗುವಾಹಟಿ ಇಂಡಿಗೋ ವಿಮಾನದಲ್ಲಿ ಇತ್ತೀಚಿನ ಘಟನೆ ಘಟನೆ ಇದಾಗಿದೆ. ವಿಮಾನ, 6E-5319 ಮುಂಬೈನಿಂದ ರಾತ್ರಿ 9 ಗಂಟೆಗೆ ಹೊರಟು 12.15 ಕ್ಕೆ ಗುವಾಹಟಿ ತಲುಪಿತು. ಮಹಿಳೆ ಮಲಗುವಾಗ ಆರ್ಮ್​ರೆಸ್ಟ್​ ಕೆಳಕ್ಕೆ ಇಳಿಸಿ ಮಲಗಿದ್ದಳು, ಆಕೆಗೆ ಎಚ್ಚರವಾಗುವಷ್ಟರಲ್ಲಿ ಆರ್ಮ್​ರೆಸ್ಟ್ ಮೇಲೆಕ್ಕೆತ್ತಿತ್ತು ಹಾಗೂ ಸಹ ಪ್ರಯಾಣಿಕ ಆಕೆಯ ಮೇಲೆ ಒರಗಿ ನಿದ್ರಿಸುತ್ತಿದ್ದ. ಆಗ ಮತ್ತೊಮ್ಮೆ ಅವರು ಹ್ಯಾಂಡ್​​ರೆಸ್ಟ್​ ಕೆಳಗಿಳಿಸಿದ್ದಾರೆ.

ವ್ಯಕ್ತಿ ತನ್ನ ಸ್ಪರ್ಶಿಸಿದ್ದರಿಂದ ಆಕೆ ಎಚ್ಚರಗೊಂಡಿದ್ದಾಳೆ. ಉದ್ದೇಶಪೂರ್ವಕವಾಗಿ ಮುಟ್ಟುತ್ತಿದ್ದಾನೋ ಅಥವಾ ಅಜಾಗರೂಕತೆಯಿಂದ ಮಾಡುತ್ತಿದ್ದಾನೋ ಎಂದು ಖಚಿತಪಡಿಸಿಕೊಳ್ಳಲು ನಿದ್ರಿಸುವಂತೆ ನಟಿಸಿದ್ದರು, ಸ್ವಲ್ಪ ಸಮಯದ ಬಳಿಕ ಆತ ಪ್ರಜ್ಞಾಪೂರ್ವಕವಾಗಿಯೇ ಆಕೆಯನ್ನು ಮುಟ್ಟುತ್ತಿರುವುದು ಗೊತ್ತಾಗಿದೆ.

ಮತ್ತಷ್ಟು ಓದಿ: ಬೆಂಗಳೂರು: ಗಗನಸಖಿ ಮೇಲೆ ಕೈ ಹಾಕಿ, ನಿನ್ನ ರೇಟ್ ಎಷ್ಟು, ಎಷ್ಟಕ್ಕೆ ಬರುತ್ತೀಯಾ? ಎಂದಿದ್ದ ವಿದೇಶಿ ಪ್ರಜೆಯ ಬಂಧನ

ಮತ್ತೊಮ್ಮೆ ಆಕೆಯನ್ನು ಸ್ಪರ್ಶಿಸಲು ಬಂದಾಗ ಆತನ ಕೈ ಹಿಡಿದು ಕಿರುಚಿಕೊಂಡಳು, ಸೀಟ್ ಲೈಟ್ ಆನ್ ಮಾಡಿ ಸಿಬ್ಬಂದಿಯನ್ನು ಕರೆದಿದ್ದಾರೆ. ಆಕೆ ಘಟನೆಯನ್ನು ವಿವರಿಸುತ್ತಿರುವಾಗ ಕ್ಷಮೆಯಾಚಿಸಿಲು ಪ್ರಾರಂಭಿಸಿದ್ದ, ಮಹಿಳೆ ಅತನ ವಿರುದ್ಧ ಲೈಂಗಿಕ ಕಿರುಕುಳ ದೂರು ದಾಖಲಿಸಿದ್ದಾರೆ. ಆತನನ್ನು ಗುವಾಹಟಿ ಪೊಲೀಸರಿಗೆ ಒಪ್ಪಿಸಲಾಯಿತು. ಇಂಡಿಗೋ ಪೊಲೀಸರೊಂದಿಗೆ ಸಹಕರಿಸುವುದಾಗಿ ಮತ್ತು ತನಿಖೆಯಲ್ಲಿ ಸಾಧ್ಯವಿರುವ ಎಲ್ಲ ನೆರವು ನೀಡುವುದಾಗಿ ಹೇಳಿದೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On - 12:48 pm, Mon, 11 September 23

ಡಿಸೆಂಬರ್ 29ರಂದು ನಿಧನರಾದ ದಿವಿನ್ ಫೆಬ್ರುವರಿ 22ರಂದು ಮದುವೆಯಾಗಲಿದ್ದರು
ಡಿಸೆಂಬರ್ 29ರಂದು ನಿಧನರಾದ ದಿವಿನ್ ಫೆಬ್ರುವರಿ 22ರಂದು ಮದುವೆಯಾಗಲಿದ್ದರು
ಬಿಗ್​ ಬಾಸ್ ಮನೆಗೆ ಬಂದ ಗೌತಮಿ ಜಾದವ್ ಪತಿ​; ಹೇಗಿತ್ತು ಮಂಜು ರಿಯಾಕ್ಷನ್?
ಬಿಗ್​ ಬಾಸ್ ಮನೆಗೆ ಬಂದ ಗೌತಮಿ ಜಾದವ್ ಪತಿ​; ಹೇಗಿತ್ತು ಮಂಜು ರಿಯಾಕ್ಷನ್?
ಭಾವುಕ ಜೀವಿ ಸಾರಾ ಮಹೇಶ್ ಗತಿಸಿದ ಚಿಂಟುಳನ್ನು ನೆನೆದು ಕಣ್ಣೀರಾಗುತ್ತಾರೆ!
ಭಾವುಕ ಜೀವಿ ಸಾರಾ ಮಹೇಶ್ ಗತಿಸಿದ ಚಿಂಟುಳನ್ನು ನೆನೆದು ಕಣ್ಣೀರಾಗುತ್ತಾರೆ!
ರಸ್ತೆ ತಡೆಗೋಡೆಯಿಲ್ಲದಿದ್ದರೆ ಬಸ್ಸು ಪ್ರಪಾತಕ್ಕೆ ಉರುಳುತಿತ್ತು!
ರಸ್ತೆ ತಡೆಗೋಡೆಯಿಲ್ಲದಿದ್ದರೆ ಬಸ್ಸು ಪ್ರಪಾತಕ್ಕೆ ಉರುಳುತಿತ್ತು!
ಕೆಪಿಸಿಸಿ ಅಧ್ಯಕ್ಷನನ್ನು ಬದಲಾಯಿಸುವುದು ಹೈಕಮಾಂಡ್​ಗೆ ಬಿಟ್ಟ ವಿಚಾರ: ಸಚಿವ
ಕೆಪಿಸಿಸಿ ಅಧ್ಯಕ್ಷನನ್ನು ಬದಲಾಯಿಸುವುದು ಹೈಕಮಾಂಡ್​ಗೆ ಬಿಟ್ಟ ವಿಚಾರ: ಸಚಿವ
ತಂದೆ ಮುಖ ನೋಡಿ ಅಳು ನಿಲ್ಲಿಸಲೇ ಇಲ್ಲ ಉಗ್ರಂ ಮಂಜು; ಎಮೋಷನಲ್ ಎಪಿಸೋಡ್
ತಂದೆ ಮುಖ ನೋಡಿ ಅಳು ನಿಲ್ಲಿಸಲೇ ಇಲ್ಲ ಉಗ್ರಂ ಮಂಜು; ಎಮೋಷನಲ್ ಎಪಿಸೋಡ್
ಪೊಲೀಸರ ಮೇಲೆ ಅಪಾರ ನಂಬಿಕೆಯಿದೆ, ಸಿಬಿಐ ತನಿಖೆ ಬೇಕಿಲ್ಲ: ಸಿದ್ದರಾಮಯ್ಯ
ಪೊಲೀಸರ ಮೇಲೆ ಅಪಾರ ನಂಬಿಕೆಯಿದೆ, ಸಿಬಿಐ ತನಿಖೆ ಬೇಕಿಲ್ಲ: ಸಿದ್ದರಾಮಯ್ಯ
ಸಂವಿಧಾನದ ಆಶಯಗಳಿಗೆ ಕಾಂಗ್ರೆಸ್​ನಿಂದ ಅಪಪ್ರಚಾರ: ಸಿಟಿ ರವಿ
ಸಂವಿಧಾನದ ಆಶಯಗಳಿಗೆ ಕಾಂಗ್ರೆಸ್​ನಿಂದ ಅಪಪ್ರಚಾರ: ಸಿಟಿ ರವಿ
ಯುವಕ ಯುವತಿಯರ ಜೊತೆ ಮಧ್ಯವಯಸ್ಕ ಮಹಿಳೆಯರೂ ಪಬ್​ಗೆ ಬಂದಿದ್ದರು
ಯುವಕ ಯುವತಿಯರ ಜೊತೆ ಮಧ್ಯವಯಸ್ಕ ಮಹಿಳೆಯರೂ ಪಬ್​ಗೆ ಬಂದಿದ್ದರು
ಹೊಸ ವರ್ಷಕ್ಕೆ ಸಿಹಿ ಸುದ್ದಿ ಕೊಟ್ಟ ಶಿವಣ್ಣ: ವಿಡಿಯೋ ನೋಡಿ
ಹೊಸ ವರ್ಷಕ್ಕೆ ಸಿಹಿ ಸುದ್ದಿ ಕೊಟ್ಟ ಶಿವಣ್ಣ: ವಿಡಿಯೋ ನೋಡಿ