ಎರಡು ಔಷಧಿಗಳ ನಕಲಿ ಆವೃತ್ತಿ ಚಲಾವಣೆಯಲ್ಲಿರುವ ಬಗ್ಗೆ WHO ಎಚ್ಚರಿಕೆ; ಮಾರಾಟ ಮತ್ತು ವಿತರಣೆಯ ಮೇಲೆ ನಿಗಾ ಇಡಲು DCGI ಆದೇಶ

ಟಕೆಡಾ ಫಾರ್ಮಾಸ್ಯುಟಿಕಲ್ ಕಂಪನಿ ಲಿಮಿಟೆಡ್ ತಯಾರಿಸಿದ ಅಡ್ಸೆಟ್ರಿಸ್ ಇಂಜೆಕ್ಷನ್ 50 ಎಂಜಿ ಭಾರತ ಸೇರಿದಂತೆ ಇತರ ದೇಶಗಳಲ್ಲಿ ನಕಲಿಯಾಗಿ ಸಿಗುತ್ತಿವೆ ಎಂಬುದನ್ನು ಕಂಡುಕೊಂಡ ನಂತರ ವಿಶ್ವ ಆರೋಗ್ಯ ಸಂಸ್ಥೆ ಸುರಕ್ಷತಾ ಎಚ್ಚರಿಕೆಯನ್ನು ನೀಡಿದೆ.  ಈ ಉತ್ಪನ್ನಗಳು ರೋಗಿಗಳಿಗೆ ಸುಲಭವಾಗಿ ಸಿಕ್ಕಿಬಿಡುತ್ತವೆ. ಅನಿಯಂತ್ರಿತ ಪೂರೈಕೆ ಸರಪಳಿಗಳಲ್ಲಿ ಮುಖ್ಯವಾಗಿ ಆನ್‌ಲೈನ್‌ನಲ್ಲಿ ವಿತರಿಸಲ್ಪಡುತ್ತವೆ.

ಎರಡು ಔಷಧಿಗಳ ನಕಲಿ ಆವೃತ್ತಿ ಚಲಾವಣೆಯಲ್ಲಿರುವ ಬಗ್ಗೆ WHO ಎಚ್ಚರಿಕೆ; ಮಾರಾಟ ಮತ್ತು ವಿತರಣೆಯ ಮೇಲೆ ನಿಗಾ ಇಡಲು DCGI ಆದೇಶ
ಪ್ರಾತಿನಿಧಿಕ ಚಿತ್ರ
Follow us
ರಶ್ಮಿ ಕಲ್ಲಕಟ್ಟ
|

Updated on: Sep 11, 2023 | 1:16 PM

ದೆಹಲಿ ಸೆಪ್ಟೆಂಬರ್ 11: ಭಾರತದ ಡಿಜಿಸಿಐ (Drugs Controller General of India) ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿನ ಎಲ್ಲಾ ಡ್ರಗ್ ಕಂಟ್ರೋಲರ್‌ಗಳಿಗೆ ಡಿಫಿಟೆಲಿಯೊ (Defitelio) ಮತ್ತು ಟಕೆಡಾಸ್ ಕ್ಯಾನ್ಸರ್ ಡ್ರಗ್ ಅಡ್ಸೆಟ್ರಿಸ್ ಇಂಜೆಕ್ಷನ್ (Adcetris injection)ಎಂಬ ಎರಡು ಔಷಧಿಗಳ ನಕಲಿ ಆವೃತ್ತಿಗಳ ಮಾರಾಟ ಮತ್ತು ವಿತರಣೆಯ ಮೇಲೆ ನಿಗಾ ಇಡಲು ಆದೇಶಿಸಿದೆ. ವಿಶ್ವ ಆರೋಗ್ಯ ಸಂಸ್ಥೆ ಸೆಪ್ಟೆಂಬರ್ 5 ರಂದು ನೀಡಿದ ಎಚ್ಚರಿಕೆಗಳ ಹಿನ್ನೆಲೆಯಲ್ಲಿ ಡಿಸಿಜಿಐ ಈ ನಿರ್ದೇಶನ ನೀಡಿದೆ.

ಟಕೆಡಾ ಫಾರ್ಮಾಸ್ಯುಟಿಕಲ್ ಕಂಪನಿ ಲಿಮಿಟೆಡ್ ತಯಾರಿಸಿದ ಅಡ್ಸೆಟ್ರಿಸ್ ಇಂಜೆಕ್ಷನ್ 50 ಎಂಜಿ ಭಾರತ ಸೇರಿದಂತೆ ಇತರ ದೇಶಗಳಲ್ಲಿ ನಕಲಿಯಾಗಿ ಸಿಗುತ್ತಿವೆ ಎಂಬುದನ್ನು ಕಂಡುಕೊಂಡ ನಂತರ ವಿಶ್ವ ಆರೋಗ್ಯ ಸಂಸ್ಥೆ ಸುರಕ್ಷತಾ ಎಚ್ಚರಿಕೆಯನ್ನು ನೀಡಿದೆ.  ಈ ಉತ್ಪನ್ನಗಳು ರೋಗಿಗಳಿಗೆ ಸುಲಭವಾಗಿ ಸಿಕ್ಕಿಬಿಡುತ್ತವೆ. ಅನಿಯಂತ್ರಿತ ಪೂರೈಕೆ ಸರಪಳಿಗಳಲ್ಲಿ ಮುಖ್ಯವಾಗಿ ಆನ್‌ಲೈನ್‌ನಲ್ಲಿ ವಿತರಿಸಲ್ಪಡುತ್ತವೆ. ಉತ್ಪನ್ನಗಳನ್ನು ನಿಯಂತ್ರಿತ ಮತ್ತು ಅಕ್ರಮ ಪೂರೈಕೆ ಸರಪಳಿಗಳಲ್ಲಿ ಇವು ಬೇಗನೆ ಲಭ್ಯವಾಗುತ್ತಿದ್ದು ಸುಮಾರು 8 ವಿಧದದಲ್ಲಿ ಇದೆ ಎಂದು WHO ವರದಿ ಮಾಡಿದೆ.

Adcetris Brentuximab Vedotin ಎಂಬುದು CD30-ನಿರ್ದೇಶಿತ  ಪ್ರತಿಕಾಯ ಔಷಧ ಸಂಯೋಜನೆಯಾಗಿದ್ದು, ಹಾಡ್ಗ್ಕಿನ್ಸ್ ಲಿಂಫೋಮಾ ಮತ್ತು ವ್ಯವಸ್ಥಿತ ಅನಾಪ್ಲಾಸ್ಟಿಕ್ ಲಾರ್ಜ್ ಸೆಲ್ ಲಿಂಫೋಮಾದ ಚಿಕಿತ್ಸೆಗಾಗಿ ಅನುಮೋದಿಸಲಾಗಿದೆ.

ಸೆಪ್ಟೆಂಬರ್ 6 ರಂದು ಡಿಸಿಜಿಐ ಮತ್ತೊಂದು ಸಲಹೆಯನ್ನು ನೀಡಿತ್ತು. ಅದೇನೆಂದರೆ ನಕಲಿ ಆಗಿ ಡೆಫಿಟೆಲಿಯೊ ಡಿಫಿಬ್ರೊಟೈಡ್ 80 ಎಂಜಿಎಂಎಲ್ ಸಾಂದ್ರೀಕರಣ ದ್ರಾವಣಕ್ಕಾಗಿ ಜೆಂಟಿಯಮ್ ಎಸ್‌ಆರ್‌ಎಲ್‌ನಿಂದ ತಯಾರಿಸಲ್ಪಟ್ಟಿದೆ. ಇದನ್ನು ಅಕ್ರಮವಾಗಿ ಸರಬರಾಜು ಮಾಡಲಾಗಿತ್ತು ಭಾರತದಲ್ಲಿ ಮತ್ತು ಟರ್ಕಿಯಲ್ಲಿ 2023 ಜುಲೈನಲ್ಲಿ ಪತ್ತೆಯಾಗಿತ್ತು ಎಂದು ಡಿಸಿಜಿಐ ಹೇಳಿದೆ.

ಇದನ್ನೂ ಓದಿ: ಮುಂಬೈ-ಗುವಾಹಟಿ ಇಂಡಿಗೋ ವಿಮಾನದಲ್ಲಿ ಸಹ ಪ್ರಯಾಣಿಕನಿಂದ ಮಹಿಳೆಗೆ ಲೈಂಗಿಕ ಕಿರುಕುಳ

ಡೆಫಿಟೆಲಿಯೊದ ನಿಜವಾದ ತಯಾರಕರು ಮೇಲೆ ಉಲ್ಲೇಖಿಸಲಾದ ಉತ್ಪನ್ನವು ಸುಳ್ಳು ಎಂದು ಖಚಿತಪಡಿಸಿದ್ದಾರೆ ಎಂದು ಅಧಿಕೃತ ಹೇಳಿಕೆ ತಿಳಿಸಿದೆ. ನಕಲಿ ಡೆಫಿಟೆಲಿಯೊ ಬಳಕೆಯು ರೋಗಿಗಳ ನಿಷ್ಪರಿಣಾಮಕಾರಿ ಚಿಕಿತ್ಸೆಗೆ ಕಾರಣವಾಗುತ್ತದೆ. ಇದು ಅಭಿದಮನಿಗೆ ಹಾನಿ ಮತ್ತು ಇತರ ಗಂಭೀರ ಅಪಾಯಗಳನ್ನು ಉಂಟುಮಾಡಬಹುದು. ಕೆಲವು ಸಂದರ್ಭಗಳಲ್ಲಿ ಜೀವಕ್ಕೆ ಅಪಾಯಕಾರಿಯಾಗಬಹುದು ಎಂದು ವಿಶ್ವಸಂಸ್ಥೆಯ ಯುಎನ್‌ನ ಆರೋಗ್ಯ ಸಂಸ್ಥೆ ಹೇಳಿದೆ.

ಉತ್ಪನ್ನ ಸುರಕ್ಷತಾ ಎಚ್ಚರಿಕೆಗಳನ್ನು ಅನುಸರಿಸಿ DCGI ವೈದ್ಯರು ಮತ್ತು ಆರೋಗ್ಯ ಕಾರ್ಯಕರ್ತರಿಗೆ ಎಚ್ಚರಿಕೆಯಿಂದ ಔಷಧಿಗಳನ್ನು ಶಿಫಾರಸು ಮಾಡಲು ಮತ್ತು ಯಾವುದೇ ಪ್ರತಿಕೂಲ ಔಷಧ ಪ್ರತಿಕ್ರಿಯೆಗಳ ಬಗ್ಗೆ ತಮ್ಮ ರೋಗಿಗಳಿಗೆ ಶಿಕ್ಷಣ ನೀಡಲು ಶಿಫಾರಸು ಮಾಡಿದೆ. DGCI ಸಹ ರಾಜ್ಯ ಮತ್ತು ಪ್ರಾದೇಶಿಕ ನಿಯಂತ್ರಕ ಕಚೇರಿಗಳಿಗೆ ಮಾರುಕಟ್ಟೆಯಲ್ಲಿ ಸೂಚಿಸಲಾದ ಔಷಧಿ ಉತ್ಪನ್ನಗಳ ಚಲನೆಯ ಮಾರಾಟದ ವಿತರಣೆ ಮತ್ತು ಸ್ಟಾಕ್ ಮೇಲೆ ಕಣ್ಣಿಡಲು ಕೇಳಿದೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಆದರೆ ಕಾಂಗ್ರೆಸ್ ಕಾರ್ಯಕರ್ತರ ಪಾನೀಯಗಳು ಯಾರಿಗಾಗಿ? ಕನ್ನಡಿಗರ ಪ್ರಶ್ನೆ
ಆದರೆ ಕಾಂಗ್ರೆಸ್ ಕಾರ್ಯಕರ್ತರ ಪಾನೀಯಗಳು ಯಾರಿಗಾಗಿ? ಕನ್ನಡಿಗರ ಪ್ರಶ್ನೆ
ಕಲಬುರಗಿಯ ಮುಖ್ಯರಸ್ತೆಯಲ್ಲಿ ಸಂಚಾರ ನಿಷೇಧಿಸಿ ಪೊಲೀಸ್ ಕಮೀಶನರ್ ಆದೇಶ
ಕಲಬುರಗಿಯ ಮುಖ್ಯರಸ್ತೆಯಲ್ಲಿ ಸಂಚಾರ ನಿಷೇಧಿಸಿ ಪೊಲೀಸ್ ಕಮೀಶನರ್ ಆದೇಶ
ಮೊದಲ ಓವರ್​ನಲ್ಲೇ ಸ್ಟಾರ್ಕ್ ಬೆಂಡೆತ್ತಿ ದಾಖಲೆ ಬರೆದ ಯಶಸ್ವಿ ಜೈಸ್ವಾಲ್
ಮೊದಲ ಓವರ್​ನಲ್ಲೇ ಸ್ಟಾರ್ಕ್ ಬೆಂಡೆತ್ತಿ ದಾಖಲೆ ಬರೆದ ಯಶಸ್ವಿ ಜೈಸ್ವಾಲ್
ಹತ್ಯೆ ಹಿಂದಿನ ಉದ್ದೇಶ ಇನ್ನೂ ಗೊತ್ತಾಗಿಲ್ಲವೆಂದ ಚಿಕ್ಕಬಳ್ಳಾಪುರ ಎಸ್​ಪಿ
ಹತ್ಯೆ ಹಿಂದಿನ ಉದ್ದೇಶ ಇನ್ನೂ ಗೊತ್ತಾಗಿಲ್ಲವೆಂದ ಚಿಕ್ಕಬಳ್ಳಾಪುರ ಎಸ್​ಪಿ
ಟೆಸ್ಟ್ ಸ್ಪೆಷಲಿಸ್ಟ್​​ನ ಔಟ್ ಮಾಡಿದ ಕನ್ನಡಿಗ ಪ್ರಸಿದ್ಧ್ ಕೃಷ್ಣ
ಟೆಸ್ಟ್ ಸ್ಪೆಷಲಿಸ್ಟ್​​ನ ಔಟ್ ಮಾಡಿದ ಕನ್ನಡಿಗ ಪ್ರಸಿದ್ಧ್ ಕೃಷ್ಣ
ದೇವಾಲಯಗಳಲ್ಲಿ ಮುಡಿ ಕೊಡುವುದರ ಹಿಂದಿನ ರಹಸ್ಯ ತಿಳಿಯಿರಿ
ದೇವಾಲಯಗಳಲ್ಲಿ ಮುಡಿ ಕೊಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily Horoscope: ಈ ರಾಶಿಯವರು ಇಂದು ಹೊಸ ವಾಹನ ಖರೀದಿಸುವರು
Daily Horoscope: ಈ ರಾಶಿಯವರು ಇಂದು ಹೊಸ ವಾಹನ ಖರೀದಿಸುವರು
ಆವೇಶ, ಆಕ್ರೋಶ... ಸ್ಯಾಮ್ ಕೊನ್​ಸ್ಟಾಸ್ ಮುಂದೆ ಘರ್ಜಿಸಿದ ವಿರಾಟ್ ಕೊಹ್ಲಿ
ಆವೇಶ, ಆಕ್ರೋಶ... ಸ್ಯಾಮ್ ಕೊನ್​ಸ್ಟಾಸ್ ಮುಂದೆ ಘರ್ಜಿಸಿದ ವಿರಾಟ್ ಕೊಹ್ಲಿ
ಜಸ್​ಪ್ರೀತ್ ಬುಮ್ರಾ ಖಡಕ್ ಲುಕ್​ಗೆ ಸ್ಯಾಮ್​ ಕೊನ್​ಸ್ಟಾಸ್ ಗಪ್ ಚುಪ್
ಜಸ್​ಪ್ರೀತ್ ಬುಮ್ರಾ ಖಡಕ್ ಲುಕ್​ಗೆ ಸ್ಯಾಮ್​ ಕೊನ್​ಸ್ಟಾಸ್ ಗಪ್ ಚುಪ್
ವೆಂಕಟೇಶ್ವರ ಸ್ವಾಮಿಗೆ 150 ಕೆಜಿ ಪುಳಿಯೋಗರೆಯಿಂದ ಅಲಂಕಾರ
ವೆಂಕಟೇಶ್ವರ ಸ್ವಾಮಿಗೆ 150 ಕೆಜಿ ಪುಳಿಯೋಗರೆಯಿಂದ ಅಲಂಕಾರ