ಅಪಾಯ ಮಟ್ಟ ಮೀರಿ ಹರಿಯುತ್ತಿರುವ ಘಟಪ್ರಭಾ ನದಿ, ಮುಳುಗಡೆ ಹಂತದಲ್ಲಿ ಮುಧೋಳ-ಯಾದವಾಡ ಸೇತುವೆ
ಸೇತುವೆಯ ಮೇಲೆ ಸಂಚಾರ ಬಂದ್ ಮಾಡಿರುವುದರಿಂದ ಯಾದವಾಡ ಮತ್ತು ಸುತ್ತಮುತ್ತಲಿನ ಗ್ರಾಮಗಳಿಂದ ಮುಧೋಳದಲ್ಲಿರುವ ಶಾಲೆಗಳಿಗೆ ಬರುವ ಮಕ್ಕಳಿಗೆ ಬಹಳ ಸಮಸ್ಯೆಯಾಗುತ್ತಿದೆ. ಸೇತುವೆ ಎತ್ತರವನ್ನು ಹೆಚ್ಚಿಸಬೇಕೆಂದು ಸ್ಥಳೀಯರು ಅನೇಕ ದಿನಗಳಿಂದ ಸರ್ಕಾರಕ್ಕೆ ಮನವಿ ಮಾಡುತ್ತಿದ್ದಾರೆ. ಮುಧೋಳ, ಯಾದವಾಡ, ರಬಕವಿ-ಬನಹಟ್ಟಿ ಭಾಗದ ಸಾವಿರಾರು ಎಕರೆ ಜಮೀನು ಜಲಾವೃತಗೊಂಡಿದ್ದು ಅಪಾರ ಪ್ರಮಾಣದ ಬೆಳೆನಾಶ ಆಗಿದೆ.
ಬಾಗಲಕೋಟೆ, ಆಗಸ್ಟ್ 22: ಮಳೆಗಾಲದ ಸೀಸನ್ (Monsoon season) ಮೂರು ತಿಂಗಳು ಕಳೆಯುತ್ತಾ ಬಂದರೂ ಮಳೆಯ ಅಬ್ಬರ ಮಾತ್ರ ಕಡಿಮೆಯಾಗಿಲ್ಲ. ಮಹಾರಾಷ್ಟ್ರದ ಪಶ್ಚಿಮಘಟ್ಟ ಪ್ರದೇಶದಲ್ಲಿ ಮಳೆ ನಿರಂತರವಾಗಿ ಸುರಿಯುತ್ತಿರುವುದರಿಂದ ಬಾಗಲಕೋಟೆ ಜಿಲ್ಲೆಯಲ್ಲಿ ಹರಿಯುವ ಘಟಪ್ರಭಾ ನದಿಯಲ್ಲಿ ಪ್ರವಾಹದಂಥ ಸ್ಥಿತಿ ನಿರ್ಮಾಣವಾಗಿದೆ. ನಮ್ಮ ವರದಿಗಾರ ಮುಧೋಳ-ಯಾದವಾಡ ಸಂಪರ್ಕ ರಸ್ತೆಯಲ್ಲಿರುವ ಘಟಪ್ರಭಾ ಸೇತುವೆಯ ಬಳಿಯಿಂದ ವರದಿ ಮಾಡುತ್ತಿದ್ದಾರೆ. ಘಟಪ್ರಭಾ ನದಿ ಅಪಾಯಯಮಟ್ಟ ಮೀರಿ ಹರಿಯುತ್ತಿರುವುದರಿಂದ ಸೇತುವೆ ಮೇಲೆ ನೀರನ್ನು ನೋಡಬಹುದು. ರಸ್ತೆಯನ್ನು ಬಂದ್ ಮಾಡಲಾಗಿದ್ದರೂ ಬೈಕ್ ಸವಾರರು ಸೇತುವೆ ದಾಟುವ ದುಸ್ಸಾಹಸ ಮಾಡುತ್ತಿದ್ದಾರೆ.
ಇದನ್ನೂ ಓದಿ: ಮಹಾರಾಷ್ಟ್ರ ಮಳೆಯಿಂದ ಉತ್ತರ ಕರ್ನಾಟಕದಲ್ಲಿ ಪ್ರವಾಹ: ಬೆಳಗಾವಿ, ಬಾಗಲಕೋಟೆ, ಯಾದಗಿರಿಯಲ್ಲಿ ನೆರೆ ಹಾವಳಿ
ವಿಡಿಯೋ ಸುದ್ದಿಗಳಿಗಾಗಿ ಕ್ಲಿಕ್ ಮಾಡಿ

