AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

12ರಿಂದ 17 ವರ್ಷದ ಮಕ್ಕಳಿಗೆ ಕೊವಾವ್ಯಾಕ್ಸ್ ಲಸಿಕೆ: ತುರ್ತು ಬಳಕೆಗೆ ಡಿಜಿಸಿಐ ಅನುಮತಿ

ಚೀನಾದಲ್ಲಿ ಮತ್ತೆ ಕೊರೊನಾ ಹರಡಿ, ಹಲವು ನಗರಗಳಿಗೆ ಲಾಕ್​ಡೌನ್ ನಿರ್ಬಂಧಗಳನ್ನು ವಿಧಿಸಿರುವ ಹಿನ್ನೆಲೆಯಲ್ಲಿ ಈ ನಿರ್ಧಾರ ಮಹತ್ವ ಪಡೆದುಕೊಂಡಿದೆ.

12ರಿಂದ 17 ವರ್ಷದ ಮಕ್ಕಳಿಗೆ ಕೊವಾವ್ಯಾಕ್ಸ್ ಲಸಿಕೆ: ತುರ್ತು ಬಳಕೆಗೆ ಡಿಜಿಸಿಐ ಅನುಮತಿ
ನೊವಾವ್ಯಾಕ್ಸ್ ಲಸಿಕೆ (ಸಂಗ್ರಹ ಚಿತ್ರ)
TV9 Web
| Edited By: |

Updated on: Mar 23, 2022 | 7:19 AM

Share

ದೆಹಲಿ: ಭಾರತದಲ್ಲಿ 12ರಿಂದ 17 ವರ್ಷದ ವಯೋಮಾನದ ಮಕ್ಕಳ ತುರ್ತು ಬಳಕೆಗೆ ಕೊವಾವ್ಯಾಕ್ಸ್ ಲಸಿಕೆ ನೀಡಲು ಭಾರತ ಔಷಧ ಮಹಾನಿಯಂತ್ರಕರು (Drugs Controller General of India – DGCI) ಅನುಮತಿ ನೀಡಿದ್ದಾರೆ. ಚೀನಾದಲ್ಲಿ ಮತ್ತೆ ಕೊರೊನಾ ಹರಡಿ, ಹಲವು ನಗರಗಳಿಗೆ ಲಾಕ್​ಡೌನ್ ನಿರ್ಬಂಧಗಳನ್ನು ವಿಧಿಸಿರುವ ಹಿನ್ನೆಲೆಯಲ್ಲಿ ಈ ನಿರ್ಧಾರ ಮಹತ್ವ ಪಡೆದುಕೊಂಡಿದೆ. ನೊವಾವ್ಯಾಕ್ಸ್​ ಕಂಪನಿಯ ಈ ಲಸಿಕೆಯನ್ನು ಭಾರತದಲ್ಲಿ ಸೆರಮ್ ಇನ್​ಸ್ಟಿಟ್ಯೂಟ್ ಆಫ್ ಇಂಡಿಯಾ ಕೊವಾವ್ಯಾಕ್ಸ್​ ಹೆಸರಿನಲ್ಲಿ ಉತ್ಪಾದಿಸಿ ಮಾರುಕಟ್ಟೆಗೆ ಬಿಡುಗಡೆ ಮಾಡುತ್ತಿದೆ.

ಕೊವಿಡ್-19 ಸೋಂಕಿನ ವಿರುದ್ಧ ತನ್ನ ಲಸಿಕೆ ಶೇ 80ರಷ್ಟು ಪರಿಣಾಮಕಾರಿ ಎಂದು ಕಳೆದ ವಾರ ನೊವಾವ್ಯಾಕ್ಸ್ ಹೇಳಿತ್ತು. ಭಾರತದ 2,247 ಹದಿಹರೆಯದ ಮಕ್ಕಳ ಮೇಲೆ ಕೊವಾವ್ಯಾಕ್ಸ್ ಲಸಿಕೆಯ ಪರೀಕ್ಷೆಗಳು ನಡೆದಿತ್ತು. ಈ ಮಕ್ಕಳೆಲ್ಲರೂ 12ರಿಂದ 17 ವರ್ಷ ವಯೋಮಾನದವರು. ಕ್ಲಿನಿಕಲ್ಸ್​ ಟ್ರಯಲ್ಸ್​ ವೇಳೆಯಲ್ಲಿ ಈ ಲಸಿಕೆ ಪಡೆದ ಮಕ್ಕಳ ದೇಹದಲ್ಲಿಯೂ ನಿರೀಕ್ಷಿತ ರೀತಿಯಲ್ಲಿ ಪ್ರತಿಕಾಯಗಳನ್ನು ಬಿಡುಗಡೆ ಮಾಡಿದೆ ಎಂದು ಕಂಪನಿ ಹೇಳಿದೆ.

ಮಕ್ಕಳಿಗೆ ನೀಡುವ ಉದ್ದೇಶದೊಂದಿಗೆ ಅಭಿವೃದ್ಧಿ ಪಡಿಸಿದ ಲಸಿಕೆಗಳ ಪೈಕಿ ಕೊವಾವ್ಯಾಕ್ಸ್​ ಸೇರಿ 4 ಲಸಿಕೆಗಳಿಗೆ ಅನುಮತಿ ಸಿಕ್ಕಿದೆ. 12 ವರ್ಷಕ್ಕೂ ಮೇಲ್ಪಟ್ಟ ಮಕ್ಕಳಿಗೆ ಲಸಿಕೆ ನೀಡಲು ಭಾರತ ಸರ್ಕಾರ ಅನುಮತಿ ನೀಡಿದೆ. ಬಯಲಾಜಿಕಲ್ ಇ ಕಂಪನಿಯ ಕೊರ್ಬಾವ್ಯಾಕ್ಸ್, ಝೈಡಸ್ ಕೆಡಿಲಿಯಾ ಕಂಪನಿಯ ಝೈಕೊವ್-ಡಿ ಮತ್ತು ಭಾರತ್ ಬಯೋಟೆಕ್​ನ ಕೊವ್ಯಾಕ್ಸಿನ್ ಲಸಿಕೆಗಳಿಗೆ ಈಗಾಗಲೇ ಅನುಮತಿ ಸಿಕ್ಕಿದೆ.

ಭಾರತದಲ್ಲಿ ಈವರೆಗೆ 15 ವರ್ಷ ದಾಟಿದ ಮಕ್ಕಳಿಗೆ ಮಾತ್ರ ಲಸಿಕೆ ನೀಡಲಾಗುತ್ತಿತ್ತು. ಕಳೆದ ವಾರವಷ್ಟೇ ಭಾರತದಲ್ಲಿ 12ರಿಂದ 14 ವರ್ಷದ ಮಕ್ಕಳಿಗೆ ಬಯಾಲಾಜಿಕಲ್ ಇ ಕಂಪನಿಯ ಕೊರ್ಬಾವ್ಯಾಕ್ಸ್ ಲಸಿಕೆ ನೀಡಲು ಅನುಮತಿ ನೀಡಲಾಗಿತ್ತು. ನೊವಾವ್ಯಾಕ್ಸ್​ನ ಕೊರೊನಾ ನಿರೋಧಕ ಲಸಿಕೆಯನ್ನು 18 ವರ್ಷ ದಾಟಿದ ಎಲ್ಲರಿಗೂ ನೀಡಬಹುದು ಎಂದು ಕಳೆದ ಡಿಸೆಂಬರ್​ನಲ್ಲಿ ಡಿಜಿಸಿಐ ಅನುಮತಿ ನೀಡಿತ್ತು.

ಇದನ್ನೂ ಓದಿ: ಚೀನಾದಲ್ಲಿ ಮತ್ತೆ ಹೆಚ್ಚಾಗಿದೆ ಕೊರೊನಾ ವೈರಸ್​; ಒಂದು ವರ್ಷದ ಬಳಿಕ ಒಂದೇ ದಿನ ಇಬ್ಬರು ಸೋಂಕಿನಿಂದ ಸಾವು

ಇದನ್ನೂ ಓದಿ: ಜಾಗತಿಕವಾಗಿ ಕೊರೊನಾ ಏರಿಕೆ; ಈ 5 ಅಂಶಗಳನ್ನು ಅನುಸರಿಸುವಂತೆ ಎಲ್ಲಾ ರಾಜ್ಯಗಳಿಗೆ ರಾಜೇಶ್ ಭೂಷಣ್ ಪತ್ರ

Follow Us
ಬಾಗೇಪಲ್ಲಿ ಕಾರು ಚಾಲಕನ ಹತ್ಯೆ ಮಾಡಿದ ಆರೋಪಿಗೆ ಪೊಲೀಸರ ತೀವ್ರ ಶೋಧ
ಬಾಗೇಪಲ್ಲಿ ಕಾರು ಚಾಲಕನ ಹತ್ಯೆ ಮಾಡಿದ ಆರೋಪಿಗೆ ಪೊಲೀಸರ ತೀವ್ರ ಶೋಧ
ಬಾಲ್ಯದಲ್ಲೇ ನಟಿಸುವ ಆಸೆಯಿತ್ತು, ಅಪ್ಪ ಬೇಡ ಅಂದಿದ್ರು: ಮೋನಿಷಾ ವಿಜಯ್
ಬಾಲ್ಯದಲ್ಲೇ ನಟಿಸುವ ಆಸೆಯಿತ್ತು, ಅಪ್ಪ ಬೇಡ ಅಂದಿದ್ರು: ಮೋನಿಷಾ ವಿಜಯ್
ಬೆಂಗಳೂರಿಗೆ ಬಂದ ಇಡಿ ನಿರ್ದೇಶಕ ರಾಹುಲ್ ನವೀನ್
ಬೆಂಗಳೂರಿಗೆ ಬಂದ ಇಡಿ ನಿರ್ದೇಶಕ ರಾಹುಲ್ ನವೀನ್
ಜಗ್ಗು ಮಮ್ಮಿಯ ವ್ಯಂಗ್ಯ ಮಾಡಿದ ತಾಂಡವ್​​ಗೆ ಸುದೀಪ್ ತರಾಟೆ: ವಿಡಿಯೋ
ಜಗ್ಗು ಮಮ್ಮಿಯ ವ್ಯಂಗ್ಯ ಮಾಡಿದ ತಾಂಡವ್​​ಗೆ ಸುದೀಪ್ ತರಾಟೆ: ವಿಡಿಯೋ
ಭಾರತ ಮಂಟಪದಲ್ಲಿ ಬ್ರಿಕ್ಸ್ ನಾಯಕರೊಂದಿಗೆ ಸಸಿ ನೆಟ್ಟ ಪ್ರಧಾನಿ ಮೋದಿ
ಭಾರತ ಮಂಟಪದಲ್ಲಿ ಬ್ರಿಕ್ಸ್ ನಾಯಕರೊಂದಿಗೆ ಸಸಿ ನೆಟ್ಟ ಪ್ರಧಾನಿ ಮೋದಿ
ಥಣಿಸಂದ್ರದ ರಿಸರ್ಚ್ ಸೆಂಟರ್‌ಗೆ ಸಚಿವ ರಾಮಲಿಂಗಾರೆಡ್ಡಿ ದಿಢೀರ್ ಭೇಟಿ
ಥಣಿಸಂದ್ರದ ರಿಸರ್ಚ್ ಸೆಂಟರ್‌ಗೆ ಸಚಿವ ರಾಮಲಿಂಗಾರೆಡ್ಡಿ ದಿಢೀರ್ ಭೇಟಿ
ಚಾಮರಾಜನಗರವನ್ನು 'ಕಾಡುಗಳ್ಳ ಮುಕ್ತ' ಮಾಡಲು ಸರ್ಕಾರದ ಬಿಗ್ ಪ್ಲಾನ್
ಚಾಮರಾಜನಗರವನ್ನು 'ಕಾಡುಗಳ್ಳ ಮುಕ್ತ' ಮಾಡಲು ಸರ್ಕಾರದ ಬಿಗ್ ಪ್ಲಾನ್
ಬ್ರಿಕ್ಸ್​ ವೇದಿಕೆಯಲ್ಲಿ ಗಮನಸೆಳೆದ ರಾಮೇಶ್ವರಂ ದೇವಾಲಯದ ಸ್ಕ್ರೀನ್
ಬ್ರಿಕ್ಸ್​ ವೇದಿಕೆಯಲ್ಲಿ ಗಮನಸೆಳೆದ ರಾಮೇಶ್ವರಂ ದೇವಾಲಯದ ಸ್ಕ್ರೀನ್
ಇನ್ಸ್‌ಪೆಕ್ಟರ್ ಧನಂಜಯ್‌ಗೆ ಮಾಜಿ ಸಂಸದ ಪ್ರತಾಪ್ ಸಿಂಹ ಎಚ್ಚರಿಕೆ
ಇನ್ಸ್‌ಪೆಕ್ಟರ್ ಧನಂಜಯ್‌ಗೆ ಮಾಜಿ ಸಂಸದ ಪ್ರತಾಪ್ ಸಿಂಹ ಎಚ್ಚರಿಕೆ
ಹುಬ್ಬಳ್ಳಿ ಈದ್ಗಾ ಮೈದಾನದಲ್ಲಿ ಐದನೇ ವರ್ಷದ ಗಣೇಶೋತ್ಸವಕ್ಕೆ ಸಿದ್ಧತೆ
ಹುಬ್ಬಳ್ಳಿ ಈದ್ಗಾ ಮೈದಾನದಲ್ಲಿ ಐದನೇ ವರ್ಷದ ಗಣೇಶೋತ್ಸವಕ್ಕೆ ಸಿದ್ಧತೆ