ಜಗತ್ತೇ ಭಾರತದ ನಾಯಕತ್ವ ಕೊಂಡಾಡುತ್ತಿರುವಾಗ ಕಾಂಗ್ರೆಸ್ ನಾಯಕರಿಂದ ಮಾನಸಿಕ ದಾರಿದ್ರ್ಯ ಪ್ರದರ್ಶನ : ಕೇಂದ್ರ ಸಚಿವ ಪ್ರಲ್ಹಾದ ಜೋಶಿ ವಾಗ್ದಾಳಿ
ರಾಹುಲ್ ಗಾಂಧಿ ಹಾಗೂ ಜೈರಾಂ ರಮೇಶ್ ಈ ಫೋಟೋ ಟ್ವೀಟ್ ಮಾಡುವ ಮೂಲಕ ಭಾರತದ ವಿರುದ್ಧ ಅಪ್ರಪ್ರಚಾರ ಮಾಡಲು ಪ್ರಯತ್ನಿಸಿದ್ದಾರೆ. ಕಾಂಗ್ರೆಸ್ ನಾಯಕರಿಗೆ ಎಂತಹ ಮಾನಸಿಕ ದಾರಿದ್ರ್ಯ ಉಂಟಾಗಿದೆ ಎಂಬುದಕ್ಕೆ ಇದೇ ಸಾಕ್ಷಿ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿಯವರು ಕೈ ನಾಯಕರ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.
ಧಾರವಾಡ, ಸಪ್ಟೆಂಬರ್ 11 : ಇಡೀ ಜಗತ್ತು ಭಾರತದ ನೇತೃತ್ವವನ್ನು ಶ್ಲಾಘಿಸುತ್ತಿರುವಾಗ ಜಿ20 ಶೃಂಗಸಭೆ (G20) ನಡೆಯುತ್ತಿದ್ದ ಸ್ಥಳದ ಹೊರಭಾಗದಲ್ಲಿ ಮಳೆ ನೀರು ನಿಂತಿರುವ ಫೋಟೋ ಟ್ವೀಟ್ ಮಾಡಿ ರಾಹುಲ್ ಗಾಂಧಿ (Rahul Gandhi) ದೇಶದ ಬಗ್ಗೆ ಅಪಪ್ರಚಾರ ಮಾಡಲು ಯತ್ನಿಸಿದ್ದಾರೆ. ಇದು ಅವರ ಮಾನಸಿಕ ದಾರಿದ್ರ್ಯಕ್ಕೆ (mental stupidity) ಸಾಕ್ಷಿ ಅಂತ ಕೇಂದ್ರ ಸಚಿವ ಪ್ರಲ್ಹಾದ ಜೋಶಿ (Pralhad Joshi) ವಾಗ್ದಾಳಿ ನಡೆಸಿದ್ದಾರೆ.
ಧಾರವಾಡದಲ್ಲಿಂದು ಮಾತನಾಡಿದ ಅವರು, ಚೀನಾ, ರಷ್ಯಾದ ವಿದೇಶಾಂಗ ಸಚಿವರು ಸೇರಿದಂತೆ ಜಿ20ಯ ಎಲ್ಲಾ ರಾಷ್ಟ್ರಗಳ ಪ್ರಮುಖರು ಭಾರತದ ಎಲ್ಲಾ ಸಲಹೆಗಳನ್ನು ಮಾನ್ಯ ಮಾಡಿದ್ದಾರೆ. ಇದರೊಂದಿಗೆ ಜಿ20 ಶೃಂಗಸಭೆ ಅಚ್ಚುಕ್ಕಟ್ಟಾಗಿ ನಡೆದಿದೆ. ಹೀಗಿರುವಾಗ ಮೊಸರಲ್ಲಿ ಕಲ್ಲು ಹುಡುಕುವಂತೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹಾಗೂ ಜೈರಾಂ ರಮೇಶ್ ಅವರು ಜಿ20 ಶೃಂಗಸಭೆ ನಡೆಯುತ್ತಿದ್ದ ಪ್ರದೇಶದ ಹೊರಗೆ ಮಳೆಯಿಂದ ನಿಂತಿರುವ ನೀರಿನ ಫೋಟೋ ತೆಗೆದು ಟ್ವೀಟ್ ಮಾಡಿ ಸಣ್ಣತನ ತೋರಿದ್ದಾರೆ.
ಇದು ಕಾಂಗ್ರೆಸ್ ಪಕ್ಷದ ಮಾನಸಿಕ ರೋಗ. ಇಂದು ಇಡೀ ಜಗತ್ತು ಭಾರತವನ್ನು ಹೊಗಳುತ್ತಿದೆ. ಆದರೆ ಕಾಂಗ್ರೆಸ್ ನಾಯಕರು ಮಾತ್ರ ದೇಶಕ್ಕೆ ಏನೇ ಒಳ್ಳೆದಾದರೂ ಸಹಿಸಲ್ಲ. ಭಾರತದ ಪ್ರಧಾನಮಂತ್ರಿ ನರೇಂದ್ರ ಮೋದಿಯವರನ್ನು ವಿರೋಧಿಸುವ ಭರದಲ್ಲಿ ಕಾಂಗ್ರೆಸ್ ನಾಯಕರು ದೇಶವನ್ನೇ ವಿರೋಧಿಸುತ್ತಿದ್ದಾರೆ ಎಂದು ಪ್ರಲ್ಹಾದ ಜೋಶಿಯವರು ಕಾಂಗ್ರೆಸ್ ನಾಯಕರ ನಡೆಯ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದರು.
ಜಿ20 ರಾಷ್ಟ್ರಗಳೆಂದರೆ ಜಗತ್ತಿನ ಶೇ. 75% ರಷ್ಟು ಜಿಡಿಪಿ, ಶೇ 60% ರಷ್ಟು ಭೂಭಾಗ ಹಾಗೂ ಶೇ 60% ರಷ್ಟು ಜನಸಂಖ್ಯೆ ಇರುವ ರಾಷ್ಟ್ರಗಳು. ಇಷ್ಟು ರಾಷ್ಟ್ರಗಳು ಭಾರತಕ್ಕೆ ಆಗಮಿಸಿ ಭಾಗವಹಿಸಿದ ಜಿ20 ಶೃಂಗಸಭೆಯಲ್ಲಿ ಅತ್ಯಂತ ಯಶಸ್ವಿಯಾಗಿ ನಡೆದಿದೆ. ಆದರೆ ಈ ಶೃಂಗಸಭೆಯ ಸಂಧರ್ಭದಲ್ಲಿ ಹೊರಗೆ ಮಳೆ ಬಂದ ಕಾರಣ ಕೇವಲ 5 ರಿಂದ 10 ನಿಮಿಷಗಳ ಕಾಲ ಹೊರಭಾಗದಲ್ಲಿ ನೀರು ನಿಂತಿತ್ತು.
ರಾಹುಲ್ ಗಾಂಧಿ ಹಾಗೂ ಜೈರಾಂ ರಮೇಶ್ ಈ ಫೋಟೋ ಟ್ವೀಟ್ ಮಾಡುವ ಮೂಲಕ ಭಾರತದ ವಿರುದ್ಧ ಅಪ್ರಪ್ರಚಾರ ಮಾಡಲು ಪ್ರಯತ್ನಿಸಿದ್ದಾರೆ. ಕಾಂಗ್ರೆಸ್ ನಾಯಕರಿಗೆ ಎಂತಹ ಮಾನಸಿಕ ದಾರಿದ್ರ್ಯ ಉಂಟಾಗಿದೆ ಎಂಬುದಕ್ಕೆ ಇದೇ ಸಾಕ್ಷಿ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿಯವರು ಕೈ ನಾಯಕರ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.