Chamarajanagar: ರಸ್ತೆ ತಡೆಗೋಡೆ ಮೇಲೆ ಕುಳಿತು ಕ್ಯಾಮೆರಾಗೆ ಪೋಸ್ ಕೊಟ್ಟ ಚಿರತೆ
ಬೆಂಗಳೂರು-ದಿಂಡಿಗಲ್ ರಾಷ್ಟ್ರೀಯ ಹೆದ್ದಾರಿಯ ಚಾಮರಾಜನಗರ ಗಡಿಭಾಗದ ದಿಂಬಂ ಘಟ್ಟದಲ್ಲಿ ಒಂದು ಚಿರತೆ ರಾತ್ರಿಯಿಂದ ಬೆಳಗ್ಗೆಯವರೆಗೆ ರಸ್ತೆ ತಡೆಗೋಡೆಯ ಮೇಲೆ ಕುಳಿತಿತ್ತು. ಆ್ಯಂಬುಲೆನ್ಸ್ ಚಾಲಕ ಈ ದೃಶ್ಯವನ್ನು ತನ್ನ ಮೊಬೈಲ್‌ನಲ್ಲಿ ಸೆರೆಹಿಡಿದಿದ್ದಾನೆ. ಚಿರತೆ ಹಾಯಾಗಿ ಓಡಾಡಿ ನಂತರ ತಡೆಗೋಡೆಯ ಮೇಲೆ ಕುಳಿತು ವಿಶ್ರಾಂತಿ ಪಡೆಯುತ್ತಿರುವ ದೃಶ್ಯಗಳು ಸೆರೆಯಾಗಿದೆ.
ಚಾಮರಾಜನಗರ, ಆಗಸ್ಟ್ 22: ರಸ್ತೆ ತಡೆಗೋಡೆ ಮೇಲೆ ಹಾಯಾಗಿ ಕುಳಿತು ಮೊಬೈಲ್ ಕ್ಯಾಮೆರಕ್ಕೆ ಚಿರತೆಯೊಂದು (Leopard) ಫೋಸ್ ನೀಡಿರುವಂತಹ ಘಟನೆ ಬೆಂಗಳೂರು ಟು ದಿಂಡಿಗಲ್ ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದಿದೆ. ಚಿರತೆ ರಾತ್ರಿಯಿಂದ ಬೆಳಗ್ಗೆವರೆಗೂ ರಸ್ತೆ ಬದಿಯ ತಡೆಗೋಡೆ ಬಿಟ್ಟು ತೆರಳಿಲ್ಲ. ಆ್ಯಂಬುಲೆನ್ಸ್ ಚಾಲಕನ ಮೊಬೈಲ್‌ನಲ್ಲಿ ವಿಡಿಯೋ ಸೆರೆ ಆಗಿದೆ.
ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.
Latest Videos
