ಬರಗಾಲ ಘೋಷಣೆಗೆ ಷರತ್ತುಗಳು ಅಡ್ಡಿ: ನಿಯಮ ಸಡಿಲಿಕೆ ಮಾಡುವಂತೆ ಕೇಂದ್ರ ಸರ್ಕಾರಕ್ಕೆ ಸಿದ್ದರಾಮಯ್ಯ ಪತ್ರ

| Updated By: ಆಯೇಷಾ ಬಾನು

Updated on: Aug 13, 2023 | 2:43 PM

ಬರಪೀಡಿತ ಎಂದು ಘೋಷಣೆ ಮಾಡಲು ರಾಜ್ಯ ಸರ್ಕಾರ ಮುಂದಾಗಿದೆ. ಆದರೆ, ಬರಗಾಲ ಘೋಷಣೆಗೆ ಕೇಂದ್ರ ಸರ್ಕಾರದ ಷರತ್ತುಗಳು ಅಡ್ಡಿಯಾಗುತ್ತಿವೆ. ಆದ್ದರಿಂದ ಕೇಂದ್ರ ಸರ್ಕಾರ ಬರ ಘೋಷಣೆ ಸಂಬಂಧ ಸಿದ್ಧಪಡಿಸಿರುವ ನಿಯಮಾವಳಿಗಳನ್ನು ಸಡಿಲಿಕೆ ಮಾಡುವಂತೆ ಸಿದ್ದರಾಮಯ್ಯ ಮನವಿ ಮಾಡಿದ್ದಾರೆ.

ಬರಗಾಲ ಘೋಷಣೆಗೆ ಷರತ್ತುಗಳು ಅಡ್ಡಿ: ನಿಯಮ ಸಡಿಲಿಕೆ ಮಾಡುವಂತೆ ಕೇಂದ್ರ ಸರ್ಕಾರಕ್ಕೆ ಸಿದ್ದರಾಮಯ್ಯ ಪತ್ರ
ಸಿದ್ದರಾಮಯ್ಯ
Follow us on

ಬೆಂಗಳೂರು, ಆ.13: ಈ ವರ್ಷ ರಾಜ್ಯದಲ್ಲಿ ವಾಡಿಕೆಯಷ್ಟು ಮಳೆಯಾಗಿಲ್ಲ(Karnataka Rains). ಹೀಗಾಗಿ ಕೆಲವು ಕಡೆ ಬರದ ಪರಿಸ್ಥಿತಿ ಮುಂದುವರೆದಿದೆ. ರಾಜ್ಯದಲ್ಲಿ ಅಸಮಪರ್ಕ ಮುಂಗಾರು ಮಳೆ ಹಿನ್ನೆಲೆ ಕೇಂದ್ರ ಸರ್ಕಾರಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ(Siddaramaiah) ಪತ್ರ ಬರೆದಿದ್ದಾರೆ. ಕೆಲವು ಜಿಲ್ಲೆ ಮತ್ತು ತಾಲೂಕುಗಳಲ್ಲಿ ಬರದ ಛಾಯೆ ಆವರಿಸಿದ್ದು ಬರಪೀಡಿತ ಎಂದು ಘೋಷಣೆ ಮಾಡಲು ಕೇಂದ್ರ ಸರ್ಕಾರದ ನಿಯಮಾವಳಿ ಅಡ್ಡಿಯಾಗುತ್ತಿದೆ. ಹೀಗಾಗಿ ಬರ ಘೋಷಣೆಗೆ ಇರುವ ನಿಯಮಗಳನ್ನು ಸಡಿಲಿಕೆ ಮಾಡುವಂತೆ ಸಿಎಂ ಸಿದ್ದರಾಮಯ್ಯ ಅವರು ಕೇಂದ್ರ ಸರ್ಕಾರಕ್ಕೆ ಪತ್ರ ಬರೆದಿದ್ದಾರೆ. ಸಿಎಂ ಕಚೇರಿಯಿಂದ ಕೇಂದ್ರದ ಕೃಷಿ ಸಚಿವಾಲಯಕ್ಕೆ ಪತ್ರ ರವಾನೆಯಾಗಿದೆ.

ರಾಜ್ಯದಲ್ಲಿ ಮುಂಗಾರು ಮಳೆ ಕೈಗೊಟ್ಟಿದ್ದು ರೈತರು ಕಂಗಾಲಾಗಿದ್ದಾರೆ. ಹೀಗಾಗಿ ಬರಪೀಡಿತ ಎಂದು ಘೋಷಣೆ ಮಾಡಲು ರಾಜ್ಯ ಸರ್ಕಾರ ಮುಂದಾಗಿದೆ. ಆದರೆ, ಬರಗಾಲ ಘೋಷಣೆಗೆ ಕೇಂದ್ರ ಸರ್ಕಾರದ ಷರತ್ತುಗಳು ಅಡ್ಡಿಯಾಗುತ್ತಿವೆ. ಆದ್ದರಿಂದ ಕೇಂದ್ರ ಸರ್ಕಾರ ಬರ ಘೋಷಣೆ ಸಂಬಂಧ ಸಿದ್ಧಪಡಿಸಿರುವ ನಿಯಮಾವಳಿಗಳನ್ನು ಸಡಿಲಿಕೆ ಮಾಡುವಂತೆ ಸಿದ್ದರಾಮಯ್ಯ ಮನವಿ ಮಾಡಿದ್ದಾರೆ. ಸದ್ಯದ ನಿಯಮಗಳ ಪ್ರಕಾರ ಕೇಂದ್ರದ ನಿಯಾಮಾವಳಿ ಪಾಲನೆ ಮಾಡುವುದು ಕಡ್ಡಾಯ. ಆದರೆ ಕಡ್ಡಾಯ, ಕಟ್ಟುನಿಟ್ಟಿನ ನಿಯಮಾವಳಿ ಪಾಲಿಸಿದರೆ ಬರ ಘೋಷಣೆ ತಾಲೂಕುಗಳಿಗೆ ಅನ್ಯಾಯ ಆಗಲಿದೆ. ಹೀಗಾಗಿ ಕೇಂದ್ರ ಸರ್ಕಾರಕ್ಕೆ ಪತ್ರ ಬರೆದು ಮನವಿ ಸಲ್ಲಿಸಿದ್ದಾರೆ.

ಇದನ್ನೂ ಓದಿ: ನನಗೆ ಅನ್ಯಾಯ ಮಾಡಿದವರಿಗೆ ಬಣಜಿಗ ಸಮುದಾಯ ಉತ್ತರ ಕೊಟ್ಟಿದೆ: ಬಿಜೆಪಿ ವಿರುದ್ಧ ಜಗದೀಶ್ ಶೆಟ್ಟರ್ ವಾಗ್ದಾಳಿ

ರೈತರು ಬಿತ್ತನೆ ಮಾಡಿಲ್ಲವೆಂದು ಪ್ರಮಾಣ ಪತ್ರ ಸಲ್ಲಿಸಬೇಕು. ಈ ನಿಯಮಾವಳಿಯೇ ಸರ್ಕಾರಕ್ಕೆ ತಲೆನೋವು ತಂದಿಟ್ಟಿದೆ. ಶೇ 33% ಬೆಳೆಹಾನಿಗೆ ಪರಿಹಾರದ ಅವಕಾಶವಿದೆ. ಆದರೆ ಬರಕ್ಕೆ ಶೇ 50 % ಹಾನಿ ಆಗಬೇಕು. ಬರ ಘೋಷಣೆಗೆ ಕನಿಷ್ಟ ಶೇ 60% ಮಳೆ‌ ಕೊರತೆ ಬೇಕು. ಕನಿಷ್ಟ ಮೂರು ವಾರಗಳು ಕಡಿಮೆ ಇರದಂತೆ ಮಳೆ ಆಗಿರಬಾರದು. ಮಳೆ‌ ಕೊರತೆ ಪ್ರಮಾಣ 60% ರಿಂದ 30% ಕ್ಕೆ ಇಳಿಸಬೇಕು ಎಂದು ಪತ್ರದಲ್ಲಿ ಸಿಎಂ ಸಿದ್ದರಾಮಯ್ಯ ಮನವಿ ಮಾಡಿದ್ದಾರೆ. ಈ ಕನಿಷ್ಟ ಮಾನದಂಡದ ಅಡಿ ನಿಯಮಾವಳಿಗೆ ತಿದ್ದಪಡಿಗೆ ಅನುಮತಿಸುವಂತೆ ಮನವಿ ಸಲ್ಲಿಸಿದ್ದಾರೆ. ಕೇಂದ್ರದ ಕೃಷಿ ಇಲಾಖೆ ಅನುಮತಿಸಿದರೆ ಮಾತ್ರ ರಾಜ್ಯದ 100ಕ್ಕೂ ಹೆಚ್ಚು ತಾಲೂಕುಗಳಲ್ಲಿ ಬರಗಾಲ ಘೋಷಣೆ ಸಾಧ್ಯ. ಬರ ಘೋಷಣೆ ಅಡಿ ಪರಿಹಾರ ಮತ್ತು ರಿಯಾಯಿತಿ ಪಡೆಯಲು ಸರ್ಕಾರಕ್ಕೆ ಅವಕಾಶ ಸಿಗಲಿದೆ.

ಬೆಂಗಳೂರಿಗೆ ಸಂಬಂಧಿಸಿದ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ