AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸಂಡೇ ಪಾರ್ಟಿ: ನಮ್ಮವರಿಗೆ 10ಕೆ.ಜಿ ಚಿಕನ್ ಕೊಡಪ್ಪ.. ಹಿಂಗ್ ಹೋಗಿ ಹಂಗ್ ಬರ್ತಿನಿ ಅಂತೇಳಿ ಎಸ್ಕೇಪ್

ಬಾಗಲಗುಂಟೆ ಪೊಲೀಸ್ ಠಾಣೆ ವ್ಯಾಪ್ತಿಯ ಟಿ.ದಾಸರಹಳ್ಳಿಯ ಶೆಟ್ಟಿಹಳ್ಳಿಯಲ್ಲಿ ವರಣ್ ಚಿಕನ್ ಅಂಗಡಿಗೆ ಬಂದ ಮೂವರು ಬರೋಬ್ಬರಿ 10 ಕೆಜಿ ಚಿಕನ್ ಖರೀದಿಸಿ ಹಣ ನೀಡದೆ ಪರಾರಿಯಾಗಿದ್ದಾರೆ. ವಂಚಸಿರುವ ಮೂವರ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.

ಸಂಡೇ ಪಾರ್ಟಿ: ನಮ್ಮವರಿಗೆ 10ಕೆ.ಜಿ ಚಿಕನ್ ಕೊಡಪ್ಪ.. ಹಿಂಗ್ ಹೋಗಿ ಹಂಗ್ ಬರ್ತಿನಿ ಅಂತೇಳಿ ಎಸ್ಕೇಪ್
ಸಿಸಿಟಿವಿ ದೃಶ್ಯಗಳು
ಬಿ ಮೂರ್ತಿ, ನೆಲಮಂಗಲ
| Edited By: |

Updated on:Aug 13, 2023 | 2:54 PM

Share

ನೆಲಮಂಗಲ, ಆ. 13: ಭಾನುವಾರದ ಬಾಡೂಟಕ್ಕೆ ಹಣ ಇಲ್ಲ ಚಿಕನ್(Chicken) ತರೋದು ಹೇಗೆ ಎಂದು ತಲೆ ಕೆಡಿಸಿಕೊಂಡು ಚಿಕನ್ ತಿನ್ನೋದೆ ಬೇಡ ಎಂದು ಸುಮ್ಮನಾಗಿರುವುದುಂಟು. ಆದ್ರೆ ನೆಲಮಂಗಲದಲ್ಲೊಂದು ಪ್ರಸಂಗ ನಡೆದಿದೆ. ಹಣವೇ ಕೊಡದೆ 10 ಕೆಜಿ ಚಿಕನ್ ತೆಗೆದುಕೊಂಡು ಮೂವರು ಎಸ್ಕೇಪ್ ಆಗಿದ್ದಾರೆ. 10 ಕೆಜಿ ಚಿಕನ್ ಲಾಸ್ ಆಗಿದಕ್ಕೆ ಅಂಗಡಿ ಮಾಲೀಕ ತಲೆ ಮೇಲೆ ಕೈ ಹೊತ್ತು ಕೂತುವಂತಾಗಿದೆ.

ಬಾಗಲಗುಂಟೆ ಪೊಲೀಸ್ ಠಾಣೆ ವ್ಯಾಪ್ತಿಯ ಟಿ.ದಾಸರಹಳ್ಳಿಯ ಶೆಟ್ಟಿಹಳ್ಳಿಯಲ್ಲಿ ವರಣ್ ಚಿಕನ್ ಅಂಗಡಿಗೆ ಬಂದ ಮೂವರು ಬರೋಬ್ಬರಿ 10 ಕೆಜಿ ಚಿಕನ್ ಖರೀದಿಸಿ ಹಣ ನೀಡದೆ ಪರಾರಿಯಾಗಿದ್ದಾರೆ. ನಮ್ ಕೆಲಸಗಾರಿಗೆ 10kg ಚಿಕನ್ ಕೊಡಪ್ಪ ಅಂತ ವ್ಯಕ್ತಿಯೋರ್ವ ಚಿಕನ್ ಅಂಗಡಿಯಲ್ಲಿ ಫುಲ್ ಬಿಲ್ಡಪ್ ಮಾಡಿದ್ದಾನೆ. ಇದನ್ನು ನಂಬಿದ ಚಿಕನ್ ಅಂಗಡಿ ಮಾಲೀಕ ಅನಿಲ್ ಕುಮಾರ್ ಫುಲ್ ಖುಷಿಯಲ್ಲೇ ಇವತ್ತು ಒಳ್ಳೆ ಕಮಾಯ್ ಎಂದು 10 ಕೆಜಿ ಚಿಕನ್ ಕಟ್ ಮಾಡಿ ಕೊಟ್ಟಿದ್ದಾನೆ. ಚಿಕನ್‌ ರಡಿ ಮಾಡಿ ಕೈಗೆ ಕೊಡುತ್ತಿದ್ದಂತೆ ಹಿಂಗ್ ಹೋಗಿ ಹಂಗ್ ಬರುತ್ತೀನಿ ಅಂತ ಹೇಳಿ ಮೂವರು ಹಣ ಕೊಡದೆ ಬೈಕ್ ನಲ್ಲಿ ಪರಾರಿಯಾಗಿದ್ದಾರೆ. ವಂಚಸಿರುವ ಮೂವರ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.

ಆಸ್ಪತ್ರೆ ಆವರಣದಲ್ಲಿ ಗಲಾಟೆ

ಬೆಂಗಳೂರಿನ ವಿಕ್ಟೋರಿಯಾ-ವಾಣಿವಿಲಾಸ ಆಸ್ಪತ್ರೆ ಆವರಣದಲ್ಲಿ ಕ್ಷುಲ್ಲಕ ವಿಚಾರಕ್ಕೆ ಗಲಾಟೆ ನಡೆದಿದೆ. ಸ್ವಚ್ಛತಾ ಸಿಬ್ಬಂದಿ ಹಾಗೂ ರೋಗಿಯ ಸಂಬಂಧಿಕರ ನಡುವೆ ಬಡಿದಾಟವಾಗಿದೆ.

ಇದನ್ನೂ ಓದಿ: ಬಿಬಿಎಂಪಿ ಬೆಂಕಿ ದುರಂತ ರಹಸ್ಯ ಬಯಲು ಆಯುಕ್ತ ತುಷಾರ್​ ಗಿರಿನಾಥ್​​ , ಕೇಂದ್ರ ವಿಭಾಗದ ಡಿಸಿಪಿ ಹೇಳಿದ್ದಿಷ್ಟು

ಕ್ಲೀನ್​​ ಮಾಡುತ್ತಿದ್ದಾಗ ರೋಗಿ ಸಂಬಂಧಿಕರು ಬಂದಿದ್ದಕ್ಕೆ ಜಗಳ ಶುರುವಾಗಿದೆ. ಜಗಳ ವಿಪರೀತವಾಗಿ ಕೊನೆಗೆ ನಾಲ್ಕು ಜನ ಕ್ಲೀನಿಂಗ್ ಸಿಬ್ಬಂದಿ ರೋಗಿ ಸಂಬಂಧಿಕರ ಮೇಲೆ ಹಲ್ಲೆಗೆ ಮುಂದಾಗಿದ್ದಾರೆ. ಈ ವೇಳೆ ಮಹಿಳೆ ಮೇಲೆ ಹಲ್ಲೆ ನಡೆದಿದೆ.

ಎಸ್​ಪಿ ರಸ್ತೆಯಲ್ಲಿ ಯುವಕರ ಫೈಟಿಂಗ್

ಇನ್ನು ಮತ್ತೊಂದೆಡೆ ಕ್ಷುಲ್ಲಕ ವಿಚಾರಕ್ಕೆ ಯುವಕರ ನಡುವೆ ಮಾರಾಮಾರಿಯಾಗಿದೆ. ನಗರದ ಎಸ್​ಪಿ ರಸ್ತೆಯಲ್ಲಿ ಹಾಡಹಗಲೇ ಯುವಕರು ಕೈ ಕೈ ಮಿಲಾಯಿಸಿ ಹೊಡೆದಾಡಿಕೊಂಡಿದ್ದಾರೆ. ಯುವಕರ ಹೊಡೆದಾಟ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಯುವಕರ ಗಲಾಟೆ ಬಗ್ಗೆ ಸ್ಥಳೀಯರು ಪೊಲೀಸರಿಗೆ ದೂರು ನೀಡಿದ್ದಾರೆ. ಎಸ್​ಪಿ ರಸ್ತೆಯಲ್ಲಿ ಇಂತಹ ಗಲಾಟೆ ಸಾಮಾನ್ಯವಾಗಿದೆ. ಇದರಿಂದ ವರ್ತಕರು ಮತ್ತು ವ್ಯಾಪಾರಿಗಳು ಭಯ ಬೀಳುವಂತಾಗಿದೆ. ಈ ಬಗ್ಗೆ ಕಠಿಣ ಕ್ರಮಕೈಗೊಳ್ಳುವಂತೆ ದೂರು ನೀಡಿದ್ದಾರೆ.

ಟೆನಿಸ್ ಕೋಚ್ ಮೇಲೆ ಸ್ನೇಹಿತರಿಂದಲೆ ಅಟ್ಯಾಕ್

ಸಿಲಿಕಾನ್ ಸಿಟಿಯಲ್ಲಿ ಪುಂಡರ ಹಾವಳಿ ಹೆಚ್ಚಾಗಿದೆ. ಟೆನಿಸ್ ಕೋಚ್ ಮೇಲೆ ಸ್ನೇಹಿತರಿಂದಲೆ ಅಟ್ಯಾಕ್ ಆಗಿದೆ. ಬಾಂಡಲಿ, ಸೌಟ್, ನೀರಿನ ಕ್ಯಾನ್ ಸೇರಿ ಕಿಚನ್ ಐಟಂ ನಿಂದ ಹಲ್ಲೆ ಮಾಡಿದ್ದಾರೆ. ಮೊಬೈಲ್ ನಲ್ಲಿ ಸೆರೆಯಾದ ಮಾರಾಮಾರಿಯ ದೃಶ್ಯ ಬೆಚ್ಚಿ‌ ಬೀಳುವಂತಿದೆ. ಬಾಂಡಲಿಯಿಂದ ತಲೆ‌ ಮೇಲೆ ಹೊಡೆದು ಅಟ್ಟಹಾಸ ಮೆರೆದಿದ್ದಾರೆ.

ಬೆಳ್ಳಂದೂರು ಸಮೀಪದ ಹರಳೂರು ರಸ್ತೆಯಲ್ಲಿ ಆಗಸ್ಟ್ 9 ರ ರಾತ್ರಿ‌ 9 ಗಂಟೆಗೆ ಘಟನೆ ನಡೆದಿದೆ. ರಮೇಶ್,ಯಶ್ವಂತ್,ಪವನ್ ,ಮತ್ತು ಸ್ನೇಹಿತರು ಜೀವನ್ ಜೋಯೆಲ್ ಮತ್ತು ಜೋಸೆಫ್ ಎಂಬ ಸಹೋದರರ ಮೇಲೆ ದಾಳಿ ನಡೆಸಿದ್ದಾರೆ. ಗಾಯಾಳು ಮತ್ತು ಆರೋಪಿಗಳು ಎಲ್ಲರು ಸ್ನೇಹಿತರೆ. ಕ್ರಿಕೆಟ್ ಆಡುವಾಗ ನಡೆದ ಕಿರಿಕ್ ನಿಂದಾಗಿ ಗಲಾಟೆ ಆಗಿದೆ. ಒಬ್ಬರ ಬಗ್ಗೆ ಒಬ್ಬರು ಕೆಟ್ಟದಾಗಿ ಮಾತನಾಡಿಕೊಳ್ತಿದ್ರು ಅನ್ನೊ ವೈಷಮ್ಯವಿತ್ತು. 9 ರಂದು ಮಾತನಾಡಬೇಕು ಅಂತಾ ಹೇಮಂತ್ ಎಂಬಾತ ಸಹೋದರರನ್ನ ಕರೆಸಿಕೊಂಡಿದ್ದ. ಹರಳೂರು ರಸ್ತೆ‌ಯಲ್ಲಿರುವ ಆಂಬೂರ್ ದಮ್ ಬಿರಿಯಾನಿ ಅಂಗಡಿ ಸಮೀಪ ಸಹೋದರರು ಬಂದಿದ್ದರು. ಈ ವೇಳೆ ಜೀವನ್ ಮತ್ತು ಜೋಸೆಫ್ ಮೇಲೆ ಮನ ಬಂದಂತೆ ಹಲ್ಲೆ ಮಾಡಿದ್ದಾರೆ. ರಸ್ತೆ ಮೇಲೆಲ್ಲ ಅಟ್ಟಾಡಿಸಿ ಹೊಡೆದಿದ್ದಾರೆ. ಹೋಟೆಲ್‌ ನಲ್ಲಿದ್ದ ಸಾಮಾಗ್ರಿಯನ್ನೆ ತೆಗೆದುಕೊಂಡು ಹಲ್ಲೆ ನಡೆಸಿದ್ದಾರೆ. ಘಟನೆ‌ ಸಂಬಂಧ ಬೆಳ್ಳಂದೂರು ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ. ಆರೋಪಿಗಳಾದ ರಮೇಶ್‌ ,ಯಶ್ವಂತ್ ಮತ್ತು ಪವನ್​ನನ್ನು ಪೊಲೀಸರು ಬಂಧಿಸಿದ್ದಾರೆ. ಬೆಂಗಳೂರಿಗೆ ಸಂಬಂಧಿಸಿದ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ 

Published On - 2:02 pm, Sun, 13 August 23

ಇದ್ದಕ್ಕಿದ್ದಂತೆ ಜನರು, ಹಸುಗಳ ಮೇಲೆ ಕಾಡು ಕರಡಿ ದಾಳಿ; ವಿಡಿಯೋ ವೈರಲ್
ಇದ್ದಕ್ಕಿದ್ದಂತೆ ಜನರು, ಹಸುಗಳ ಮೇಲೆ ಕಾಡು ಕರಡಿ ದಾಳಿ; ವಿಡಿಯೋ ವೈರಲ್
ಮೈಸೂರು ರಿಂಗ್ ರಸ್ತೆಯ ಪರಿಸ್ಥಿತಿ ಹೇಗಿದೆ? ವಿಡಿಯೋ ಮೂಲಕ ತಿಳಿಸಿದ ಅನಿರುದ್
ಮೈಸೂರು ರಿಂಗ್ ರಸ್ತೆಯ ಪರಿಸ್ಥಿತಿ ಹೇಗಿದೆ? ವಿಡಿಯೋ ಮೂಲಕ ತಿಳಿಸಿದ ಅನಿರುದ್
ನರಕ ಸದೃಶ್ಯವಾಗಿತ್ತು ಖಳನಟ ವಜ್ರಮುನಿ ಕೊನೆಯ ದಿನಗಳು
ನರಕ ಸದೃಶ್ಯವಾಗಿತ್ತು ಖಳನಟ ವಜ್ರಮುನಿ ಕೊನೆಯ ದಿನಗಳು
ಉತ್ತರಾಖಂಡದ ಜೋಶಿಮಠದಲ್ಲಿರುವ ಸೇನಾ ಶಿಬಿರದಲ್ಲಿ ಬೆಂಕಿ ಅವಘಡ
ಉತ್ತರಾಖಂಡದ ಜೋಶಿಮಠದಲ್ಲಿರುವ ಸೇನಾ ಶಿಬಿರದಲ್ಲಿ ಬೆಂಕಿ ಅವಘಡ
ಪತಿ ಮತ್ತು ಮಾವನಿಂದ ಚಿತ್ರಹಿಂಸೆ
ಪತಿ ಮತ್ತು ಮಾವನಿಂದ ಚಿತ್ರಹಿಂಸೆ
ಬಳ್ಳಾರಿ ಗಲಭೆ: ಶಾಸಕ ಜನಾರ್ದನರೆಡ್ಡಿ ನಿವಾಸದಲ್ಲಿ ಮತ್ತೊಂದು ಬುಲೆಟ್ ಪತ್ತೆ
ಬಳ್ಳಾರಿ ಗಲಭೆ: ಶಾಸಕ ಜನಾರ್ದನರೆಡ್ಡಿ ನಿವಾಸದಲ್ಲಿ ಮತ್ತೊಂದು ಬುಲೆಟ್ ಪತ್ತೆ
ಗಿಲ್ಲಿ-ಅಶ್ವಿನಿ ನಡುವೆ ಮತ್ತೆ ಜಗಳ, ಯೋಗ್ಯತೆ ಬಗ್ಗೆ ಮಾತು: ವಿಡಿಯೋ
ಗಿಲ್ಲಿ-ಅಶ್ವಿನಿ ನಡುವೆ ಮತ್ತೆ ಜಗಳ, ಯೋಗ್ಯತೆ ಬಗ್ಗೆ ಮಾತು: ವಿಡಿಯೋ
ರಿವರ್ಸ್ ವೇಳೆ ನಿಯಂತ್ರಣ ತಪ್ಪಿದ ಕಾರು: ವಿಡಿಯೋ ನೋಡಿದ್ರೆ ಹೌಹಾರ್ತೀರಿ
ರಿವರ್ಸ್ ವೇಳೆ ನಿಯಂತ್ರಣ ತಪ್ಪಿದ ಕಾರು: ವಿಡಿಯೋ ನೋಡಿದ್ರೆ ಹೌಹಾರ್ತೀರಿ
ಬಳ್ಳಾರಿ ಘರ್ಷಣೆಯಲ್ಲಿ ಕೈ ಕಾರ್ಯಕರ್ತ ಬಲಿ: ಗಲಾಟೆ ಶುರುವಾಗಿದ್ದು ಹೇಗೆ?
ಬಳ್ಳಾರಿ ಘರ್ಷಣೆಯಲ್ಲಿ ಕೈ ಕಾರ್ಯಕರ್ತ ಬಲಿ: ಗಲಾಟೆ ಶುರುವಾಗಿದ್ದು ಹೇಗೆ?
ಸರ್ಕಾರಿ ಶಾಲಾ ಮಕ್ಕಳಿಗೆ ಶಿಕ್ಷಕರಿಂದ ಔತಣಕೂಟ: ವಿಶೇಷವೇನು?
ಸರ್ಕಾರಿ ಶಾಲಾ ಮಕ್ಕಳಿಗೆ ಶಿಕ್ಷಕರಿಂದ ಔತಣಕೂಟ: ವಿಶೇಷವೇನು?